ಇದು ಎಂಥಾ ಲೋಕವಯ್ಯಾ...!; ಸಿನಿಮಾಕ್ಕೆ ಹೋಗಲಿವೆ ನಾಯಿಗಳು

FILM
Published on

ನಾಯಿಯ ಮೇಲೆ ತುಂಬಾ ಪ್ರೀತಿ ಇರಿಸಿಕೊಳ್ಳುವ ಮಾಲೀಕರು ಅದನ್ನು ತಮ್ಮ ಸಂಗಡ ಎಲ್ಲಾ ಕಡೆಗಳಲ್ಲಿಯೂ ಕರೆದುಕೊಂಡು ಹೋಗುವುದು ಸಾಮಾನ್ಯವೇ. ಆದರೆ ಸಿನಿಮಾಕ್ಕೆ ಹೋಗುವುದಿದ್ದರೆ ಮಾತ್ರ ಮಾಲೀಕರು ನಾಯಿಯನ್ನು ಮನೆಯಲ್ಲಿಯೋ ಅಥವಾ ಇನ್ನೆಲ್ಲೋ ಬಿಟ್ಟು ಹೋಗಬೇಕು. ನಾಯಿ ಮಾಲೀಕರ ಈ ‘ದುಃಖ’ವನ್ನು ಅರಿತು ಇಸ್ರೇಲ್​ನ ಕೆಲವು ಸಿನಿಮಾ ಮಂದಿರಗಳಲ್ಲಿ ನಾಯಿಯನ್ನು ಕರೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆಯಂತೆ. ಅಲ್ಲಿಯ ಟೆಲ್​ಆವೀವ್ ಚಿತ್ರಮಂದಿರದಲ್ಲಿ ‘ದಿ ಸಿಕ್ರೇಟ್ ಲೈಫ್ ಆಫ್ ಪೆಟ್ಸ್’ ಚಿತ್ರವನ್ನು ನಾಯಿಗೆ ತೋರಿಸುವ ಮೂಲಕ ‘ಚಿತ್ರಮಂದಿರಗಳಲ್ಲಿ ನಾಯಿ’ ಯೋಜನೆಗೆ ಚಾಲನೆಯನ್ನೂ ನೀಡಲಾಗಿದೆ.

| ಸುಚೇತನಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net