ಆರ್ಥಿಕತೆ ನಾಯಕತ್ವ ಭಾರತಕ್ಕೆ ಸುವರ್ಣಾವಕಾಶ

vbnvbnvbn
Published on
ಯೂಕ್ರೇನ್ ಮೇಲೆ ರಷ್ಯಾದಾಳಿಯು ಕೇವಲ ಆ ಎರಡು ದೇಶಗಳಿಗೆ ಸೀಮಿತವಾದದ್ದಲ್ಲ. ಈ ದೇಶಗಳ ನಡುವಿನ ಕದನದ ಪರಿಣಾಮವನ್ನು ವಿಶ್ವದ ಇನ್ನಿತರ ದೇಶಗಳು ಈಗಾಗಲೇ ಅನುಭವಿಸುತ್ತಿವೆ. ಇಡೀ ವಿಶ್ವವೇ ಒಂದು ಗ್ರಾಮ (ಗ್ಲೋಬಲ್ ವಿಲೇಜ್) ಎನ್ನುವ ಈ ಸಂದರ್ಭದಲ್ಲಿ ಭಾರತವೂ ಈ ಪರಿಣಾಮದಿಂದ ಹೊರಗೆ ಉಳಿಯಲು ಸಾಧ್ಯವಿಲ ವಿಶ್ವದ ಆರ್ಥಿಕತೆ ಮೇಲೆ ಅಮೆರಿಕನ್ ಡಾಲರ್ ಹಿಡಿತ ಹೊಂದಿರಬೇಕು ಎಂಬ ಅಮೆರಿಕದ ನಿರಂತರ ಪ್ರಯತ್ನ ಇಲ್ಲಿಯೂ ಕಾಣುತ್ತದೆ. ಡಾಲರ್ ಹೊರತುಪಡಿಸಿ ರಷ್ಯಾ ಜತೆಗೆ ನೇರ ವ್ಯವಹಾರಕ್ಕೆ ಇಳಿದ ಕಾರಣಕ್ಕೆ ಭಾರತವು ಅಮೆರಿಕದಿಂದ ತಣ ್ಣೆಯ ಬೆದರಿಕೆಯನ್ನೂ ಕೇಳಿಸಿಕೊಳ್ಳಬೇಕಾಯಿತು. ಅದಕ್ಕೆ ಭಾರತದಿಂದ ಅ ತೀಕ್ಷ್ಣ ಪ್ರತಿಕ್ರಿಯೆಯನ್ನೂ ನೀಡಿಯಾಯಿತು.

ಯೂಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಕೂಡಲೇ ಅಮೆರಿಕ ಹಾಗೂ ಯುರೋಪಿಯನ್ ದೇಶಗಳು ರಷ್ಯಾ ಮೇಲೆ ವಿವಿಧ ನಿರ್ಬಂಧಗಳನ್ನು ಹೇರಿದವು. ವಿವಿಧ ಒಪ್ಪಂದಗಳಿಗೆ ಅನುಗುಣವಾಗಿ ಆಮದು, ರಫ್ತು ವ್ಯವಹಾರವನ್ನು ರಷ್ಯಾ ಜತೆಗೆ ಮಾಡಬಾರದು ಎನ್ನುವುದು ಒಂದು ಭಾಗ. ಇನ್ನೊಂದು ಮುಖ್ಯ ಅಂಶವೆಂದರೆ, ರಷ್ಯಾದ ಆಯ್ದ ಬ್ಯಾಂಕ್​ಗಳು ಸ್ವಿಫ್ಟ್ ವ್ಯವಸ್ಥೆಯಿಂದ ಹೊರ ಗುಳಿಯಬೇಕಾಯಿತು. ರಷ್ಯಾದ ಬ್ಯಾಂಕುಗಳನ್ನು ಐರೋಪ್ಯ ರಾಷ್ಟ್ರಗಳು ಸ್ವಿಫ್ಟ್ ವ್ಯವಸ್ಥೆಯಿಂದ ಹೊರಗಟ್ಟಿದವು. ಸ್ವಿಫ್ಟ್ ಎಂದರೆ ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟರ್​ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ (ಖಗಐಊಖ). ಇದು 1976ರಿಂದಲೇ ಜಾರಿಯಲ್ಲಿರುವ, ದೇಶ-ದೇಶಗಳ ನಡುವಣ ಹಣಕಾಸು ವಹಿವಾಟಿಗಾಗಿ ಯುರೋಪಿಯನ್ ದೇಶಗಳ ಮುಂದಾಳತ್ವದಲ್ಲಿ ಸ್ಥಾಪನೆಯಾಗಿ ರುವ ಸಹಕಾರಿ ಸಂಸ್ಥೆ. ದೇಶ-ದೇಶಗಳ ನಡುವಿನ ಹಣಕಾಸು ವ್ಯವಹಾರವನ್ನು ಸರಳ ಹಾಗೂ ಕ್ಷಿಪ್ರಗೊಳಿಸಲು ಸ್ವಿಫ್ಟ್ ಸ್ಥಾಪನೆಯಾಯಿತು. 15 ದೇಶಗಳ 239 ಬ್ಯಾಂಕ್​ಗಳು ಸೇರಿ ಆರಂಭಿಸಿದ ಸ್ವಿಫ್ಟ್ ವ್ಯವಸ್ಥೆಯಲ್ಲಿ ಇದೀಗ 200 ದೇಶಗಳ 11 ಸಾವಿರಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳು ಸೇರಿಕೊಂಡಿವೆ. ಇಂದು ದೇಶ ದೇಶಗಳ ನಡುವ ಸ್ವಿಫ್ಟ್ ಇಲ್ಲದೆ ಹಣ ವರ್ಗಾವಣೆ ಮಾಡುವುದು ಅತ್ಯಂತ ಕಷ್ಟವಾಗಿದೆ.

ಯೂಕ್ರೇನ್ ಮೇಲೆ ರಷ್ಯಾ ದಾಳಿಗೆ ಪ್ರತ್ಯುತ್ತರವಾಗಿ ಸ್ವಿಫ್ಟ್​ನಿಂದ ರಷ್ಯಾದ ಅನೇಕ ಬ್ಯಾಂಕ್​ಗಳನ್ನು ಹೊರಹಾಕಲಾಯಿತು. ಇದರಿಂದ ರಷ್ಯಾವು ವಿವಿಧ ಆಮದು ಉತ್ಪನ್ನಗಳಿಗೆ ಬದಲಾಗಿ ಹಣ ಪಾವತಿಸಲು ವಿಳಂಬವಾಗುತ್ತದೆ. ಹಾಗೆಯೇ ಅನೇಕ ವಸ್ತುಗಳನ್ನು ರಫ್ತು ಮಾಡಿದ್ದಕ್ಕೆ ಹಣ ಪಡೆಯುವಲ್ಲೂ ವಿಳಂಬವಾಗುತ್ತದೆ. ಕೈಗಾರಿಕಾ ಚಟುವಟಿಕೆ ಮೇಲೆ ಗಾಢ ಪರಿಣಾಮ ಬೀರಿ ಒಟ್ಟಾರೆ ಆರ್ಥಿಕತೆಗೆ ಹೊಡೆತ ನೀಡುತ್ತದೆ. ಈಗಾಗಲೇ ರಷ್ಯಾ ಮೇಲೆ ಇದರ ಪ್ರಭಾವ ಆಗುತ್ತಿದೆ. ರಷ್ಯಾದ ಮೇಲಷ್ಟೇ ಅಲ ದೇಶಗಳ ಮೇಲೆಯೂ ಆಗುತ್ತಿದೆ. ಈಗ ಇಡೀ ವಿಶ್ವದ ಆರ್ಥಿಕತೆ ಒಂದಕ್ಕೊಂದು ಬೆಸೆದುಕೊಂಡಿವೆ. ಈ ಸರಪಳಿಯಲ್ಲಿ ಒಂದು ಕಡೆ ತೊಂದರೆ ಆದರೂ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಈ ಆರ್ಥಿಕ ನಿರ್ಬಂಧದ ಪರಿಣಾಮ ಐರೋಪ್ಯ ರಾಷ್ಟ್ರಗಳ ಮೇಲೆಯೂ ಆಗುತ್ತಿದೆ. ಆದರೆ ತಮ್ಮದು ಒಂದು ಕಣ್ಣು ಹೋದರೂ ಸರಿ ರಷ್ಯಾದ ಎರಡೂ ಕಣ್ಣು ಹೋಗಲಿ ಎಂಬ ಮನಸ್ಥಿತಿಯಲ್ಲಿ ಈ ದೇಶಗಳು ಸಹಿಸಿಕೊಳ್ಳುತ್ತಿವೆ.

ಈ ಘಟನೆಯಿಂದ ಒಂದಂತೂ ಸತ್ಯ. ಐರೋಪ್ಯ ದೇಶಗಳು ಇಂದಿನ ಮಾರುಕಟ್ಟೆ ಆರ್ಥಿಕತೆಯಲ್ಲಿ, ಕೈಗಾರಿಕೋದ್ಯಮದಲ್ಲಿ ಚೀನಾ, ಭಾರತ ಮುಂತಾದ ರಾಷ್ಟ್ರಗಳ ಹೋಲಿಕೆಯಲ್ಲಿ ಹಿಂದೆ ಇರಬಹುದು. ಆದರೆ ವಿಶ್ವದ ಆರ್ಥಿಕ ವಹಿವಾಟಿನ ಮೇಲೆ ಅವರ ಪ್ರಭಾವ ಅತಿ ಹೆಚ್ಚು. ಸ್ವಿಫ್ಟ್​ನಂತಹ ವೇದಿಕೆಗಳ ಮೂಲಕ ಇಡೀ ವಿಶ್ವವನ್ನು ಬಗ್ಗಿಸುವ ಕೆಲಸ ಮಾಡುವಷ್ಟು ಶಕ್ತವಾಗಿವೆ ಎನ್ನುವುದು ಇದರಿಂದ ತಿಳಿಯಿತು. ಈ ಬಾರಿ ರಷ್ಯಾ ಮೇಲಿನ ಕೋಪಕ್ಕೆ ಸ್ವಿಫ್ಟ್ ವ್ಯವಸ್ಥೆಯನ್ನು ನಿರ್ಬಂಧಿಸಿದ ಐರೋಪ್ಯ ದೇಶಗಳು ನಾಳೆ ಬೇರಾವುದೋ ಸ ್ವತಾಸಕ್ತಿಗೆ ಭಾರತಕ್ಕೆ ಈ ನಿರ್ಬಂಧ ಹೇರುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಭಾರತವಲ್ಲದಿದ್ದರೂ ಬೇರೆ ಯಾವುದೇ ದೇಶದ ಮೇಲೆ ಹೇರಬಹುದು. ಹಾಗಾಗಿ ಇಂತಹ ಅಂತರ ದೇಶೀಯ ಹಣಕಾಸು ವರ್ಗಾವಣೆಗೆ ಸಮಾನಾಂತರ ವ್ಯವಸ್ಥೆಯೊಂದನ್ನು ಭಾರತ, ಚೀನಾದಂಥ ಪೂರ್ವಾತ್ಯ ರಾಷ್ಟ್ರಗಳು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಭಾರತ ಮುಂಚೂಣಿ ವಹಿಸಲು ಎಲ ್ಲ ಅವಕಾಶಗಳೂ ಇವೆ. ಖಿಕಐ ನಂತಹ ಈಐಎಐಖಅಔ ಕಅMಉಘಖ ಕಔಅಖಊಣ್ಕM ಅನ್ನು ಜಗತ್ತಿನ ಯಾವುದೇ ರಾಷ್ಟ್ರಕ್ಕೂ ಸಾಧ್ಯವಾಗದ ಗಾತ್ರದಲ್ಲಿ ಈಗಾಗಲೇ ನಿರ್ಮಾಣ ಮಾಡಿರುವ ಭಾರತಕ್ಕೆ ಖಗಐಊಖ ನಂತಹ ವ್ಯವಸ್ಥೆಯನ್ನು ತಡೆಹಿಡಿಯುವುದಕ್ಕೆ ಜಾಗತಿಕ ಮಟ್ಟದಲ್ಲಿ ಒಂದು ಪರ್ಯಾಯ ವ್ಯವಸ್ಥೆ ರೂಪಿಸುವುದು ಅಸಾಧ್ಯವೇನಲ್ಲ. ಪ್ರಾರಂಭಿಕ ಹಂತದಲ್ಲಿ ಖಗಐಊಖ ನಷ್ಟು ಅಗಾಧವಾಗಿ ಜಾಗತಿಕ ಮಟ್ಟದಲ್ಲಿ ಸಾಧ್ಯವಾಗದಿದರೂ ದ್ವಿಪಕ್ಷೀಯ ಮಟ್ಟದಲ್ಲಿ ಯುಪಿಐ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಷ್ಟು ಶಕ್ತಿ ಭಾರತಕ್ಕಿದೆ. ಯುಪಿಐ ತಂತ್ರಜ್ಞಾನವು ಖಗಐಊಖಗೆ ಬದಲಿ ತಂತ್ರಜ್ಞಾನವಲ್ಲದಿದ್ದರೂ ಒಂದು ಪರ್ಯಾಯ ವ್ಯವಸ್ಥೆಯಾಗಿ ಬಳಕೆ ಮಾಡಬಹುದು. ಭಾರತದ ಖಿಕಐ ಮತ್ತು ಸಿಂಗಾಪುರದ ಕಅಘಣಗ ನಡುವೆ ನಡೆದ ಒಪ್ಪಂದವೇ ಇದಕ್ಕೆ ಉತ್ತಮ ನಿದರ್ಶನ. ಜಗತ್ತಿನ ಯಾವ ದೇಶಗಳಲ್ಲಿ ಸಮರ್ಪಕವಾದ ಡಿಜಿಟಲ್ ಪೇಮೆಂಟ್ ಸೌಕರ್ಯಗಳಿಲ್ಲವೋ ಅಂತಹ ದೇಶಗಳೊಂದಿಗೆ ಯುಪಿಐ ಮೂಲಕ ಪರಿಣಾಮಕಾರಿಯಾದ ಒಪ್ಪಂದಗಳೊಂದಿಗೆ ಸೇವೆಯನ್ನು ವಿಸ್ತರಿಸಬಹುದು, ಇದರಿಂದ ಜಾಗತಿಕ ಮಟ್ಟದಲ್ಲಿ ಯುಪಿಐ ಸೇವೆಗಳನ್ನು ಇತರ ಮಾರುಕಟ್ಟೆಗಳಿಗೆ ವಿಸ್ತರಿಸಲು ಸಹಕಾರಿಯಾಗುತ್ತದೆ.

ಡಿಜಿಟಲ್ ಇಂಡಿಯಾ ಸಫಲತೆ: ಭಾರತ ಇದೀಗ ವೇಗವಾಗಿ ಬೆಳೆಯುತಿ ್ತುವ ಡಿಜಿಟಲ್ ಗ್ರಾಹಕರ ದೇಶ. 2018ರಲ್ಲಿ 56 ಕೋಟಿ ಇಂಟರ್​ನೆಟ್ ಬಳಕೆದಾರರನ್ನು ಹೊಂದಿದ್ದ ದೇಶ, ಚೀನಾ ನಂತರದ ಸ್ಥಾನದಲ್ಲಿದೆ. 2018ರಲ್ಲಿಯೇ ಭಾರತ 120 ಕೋಟಿ ಮೊಬೈಲ್ ಬಳಕೆದಾರರನ್ನು ಹೊಂದಿತ್ತು ಹಾಗೂ 1,200 ಕೋಟಿ ಮೊಬೈಲ್ ಆಪ್​ಗಳನ್ನು ಡೌನ್ಲೋಡ್ ಮಾಡಿತ್ತು. 2018ರಲ್ಲಿ ತಜ್ಞರು ಅಂದಾಜಿಸಿದಂತೆ 2023ರ ವೇಳೆಗೆ ಭಾರತದ ಇಂಟರ್​ನೆಟ್ ಬಳಕೆದಾರರ ಸಂಖ್ಯೆ 65-70 ಕೋಟಿಗೆ ಏರಿಕೆ ಆಗಬಹುದು ಎಂದಿದ್ದರು. ಆದರೆ 2020ರಲ್ಲೇ ದೇಶದಲ್ಲಿ ಇಂಟರ್​ನೆಟ್ ಬಳಕೆದಾರರರ ಸಂಖ್ಯೆ 74.9 ಕೋಟಿಯಷಿ ್ಟ್ತು. 2021ರಲ್ಲಿ ಇದು 82.5 ಕೋಟಿಯಷ್ಟಾಗಿದೆ. ಅಂದರೆ ತಜ್ಞರ ಲೆಕ್ಕಾಚಾರಗಳನ್ನೂ ಮೀರಿ ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ಬೆಳೆಯುತ್ತಿದೆ. ಜನರು ಡಿಜಿಟಲ್ ವ್ಯವಸ್ಥೆಯನ್ನು ವೇಗವಾಗಿ ಅಪ್ಪಿಕೊಳ್ಳುತ್ತಿದ್ದಾರೆ. ನಿತ್ಯವೂ ದೇಶದಲ್ಲಿ 20 ಸಾವಿರ ಕೋಟಿ ರೂಪಾಯಿ ಮೌಲ್ಯದಷ್ಟು ಆನಲೈನ್ ಪಾವತಿ ನಡೆಯುತ್ತಿದೆ. ಸಣ್ಣಸಣ್ಣ ಆನಲೈನ್ ಪಾವತಿಯೂ ದೊಡ್ಡ ಡಿಜಿಟಲ್ ಆರ್ಥಿಕತೆ ಕಟ್ಟಲು ನೆರವಾಗುತ್ತಿದೆ. ಈ ಸಂಬಂಧ ಹಲವಾರು ಫಿನ್​ಟೆಕ್ ಸ್ಟಾರ್ಟಪ್ ಕಂಪನಿಗಳು ಸ್ಥಾಪನೆಯಾಗುತ್ತಿರುವುದು ಕೂಡ ಆಶಾದಾಯಕ ಬೆಳವಣಿಗೆ.

ಇದೆಲ್ಲದರ ಪರಿಣಾಮವಾಗಿ ಭಾರತದ ಆರ್ಥಿಕತೆ ನಿರೀಕ್ಷೆ ಮೀರಿ ಬೆಳೆಯುತ್ತಿದೆ. ಡಿಜಿಟಲ್ ಇಂಡಿಯಾ ಮೂಲಕ ಭಾರತವು ಅನೇಕ ಅವಕಾಶಗಳ ಬಾಗಿಲುಗಳನ್ನು ತೆರೆದಿದೆ. ಮುಂದಿನ ನಾಲ್ಕೆ ೖದು ವರ್ಷದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ 1 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಆಗುವಲ್ಲಿ ಯಾವುದೇ ಅನುಮಾನವೂ ಇಲ ್ಲ ಕೇವಲ 1 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಷ್ಟೇ ಅಲ ್ಲ ವಿಶ್ವದ ಅತಿ ದೊಡ್ಡ ಆರ್ಥಿಕತೆಯ ಎರಡು ರಾಷ್ಟ್ರಗಳಲ್ಲಿ ಭಾರತ ಇರುವಂತೆ ಗುರಿ ಹೊಂದಿದ್ದೇವೆ. ಇದಕ್ಕಾಗಿ ಸರ್ಕಾರಿ ಸೇವೆಗಳನ್ನು ಮತ್ತಷ್ಟು ಡಿಜಿಟಲ್ ಮಾಡುವುದು ಹಾಗೂ ಜಾಗತಿಕ ಪರಿಸ್ಥಿತಿಗೆ ತಕ್ಕಂತೆ ಕಾನೂನುಗಳನ್ನು ರೂಪಿಸುವ ಅವಶ್ಯಕತೆ ಇದೆ.

ಯುಪಿಐ ಪಾವತಿಯೇ ಮಾದರಿ: 2021ರಲ್ಲಿ ಭಾರತದಲ್ಲಿ 2.2 ಸಾವಿರ ಕೋಟಿ ಸಂಖ್ಯೆ ಯುಪಿಐ ಆಧಾರಿತ ವಹಿವಾಟು ನಡೆದು 41.03 ಲಕ್ಷ ಕೋಟಿ ರೂ. ವರ್ಗಾವಣೆ ಆಗಿತ್ತು. ಆದರೆ 2022ರಲ್ಲಿ 4.5 ಸಾವಿರ ಕೋಟಿ ವಹಿವಾಟಿನಲ್ಲಿ 83 ಲಕ್ಷ ಕೋಟಿ ರೂ. ವರ್ಗಾವಣೆ ಆಗಿದೆ. ಅಂದರೆ ಜನರು ಹೆಚ್ಚೆಚ್ಚು ಯುಪಿಐ ವ್ಯವಸ್ಥೆಗೆ ತೆರೆದುಕೊಳ್ಳುತ್ತಿದ್ದಾರೆ. ಈಗ ಯುಪಿಐ ವ್ಯವಸ್ಥೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಯುಪಿಐ ಈಗ ವಿಶ್ವದ ಗಮನ ಸೆಳೆದಿದೆ. ಭಾರತದ ಈ ವ್ಯವಸ್ಥೆಯನ್ನು ತಾನೂ ಅಳವಡಿಸಿಕೊಳ್ಳುವುದಾಗಿ ನೆರೆಯ ಶ್ರೀಲಂಕಾ ಮುಂದೆ ಬಂದಿದೆ. ಯುಪಿಐನಿಂದ ದೊರೆತ ಉತ್ತಮ ಅಂಶಗಳನ್ನು ಆಧಾರವಾಗಿಸಿಕೊಂಡು ಜಾಗತಿಕ ಆರ್ಥಿಕತೆಯತ್ತ ಭಾರತ ಗಮನಹರಿಸಲು ಇದು ಸಕಾಲ.

ಇ ರುಪೀ ಉಪಯೋಗಗಳು: ಯುಪಿಐ ಮಾದರಿಯಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಂದರೆ ಇ-ರುಪಿ ಆಧಾರಿತ ಜಾಗತಿಕ ಪಾವತಿ ವ್ಯವಸ್ಥೆ ರೂಪುಗೊಳ್ಳ ಬೇಕಿದೆ. ಈ ವ್ಯವಸ್ಥೆಯಿಂದ ಅನೇಕ ಅನುಕೂಲಗಳಿವೆ. ಈ ವ್ಯವಸ್ಥೆಯು ಹಣಕಾಸು ವಹಿವಾಟಿನ ಪ್ರಮಾಣ, ವೇಗವನ್ನು ಹೆಚ್ಚಿಸುತ್ತದೆ. ವಿದೇಶಿ ವಿನಿಮಯದ ವೆಚ್ಚವನ್ನು ತಗ್ಗಿಸುತ್ತದೆ. ಸಣ್ಣ ಪ್ರಮಾಣದ ಲಾಭದೊಂದಿಗೆ ಹೆಚ್ಚು ಉತ್ಪನ್ನಗಳನ್ನು ರಫ್ತು ಮಾಡುವವರಿಗೆ ಅನುಕೂಲವಾಗುತ್ತದೆ. ಈ ಕಾರ್ಯಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಇನ್ನಿತರ ದೇಶಗಳ ಕೇಂದ್ರೀಯ ಬ್ಯಾಂಕ್ ನಡುವೆ ಒಪ್ಪಂದಗಳು ನಡೆಯಬೇಕು. ಪೆಟ್ರೋಲ್, ಡೀಸೆಲ್ ಜತೆಗೆ ಇನ್ನೂ ಅನೇಕ ಉತ್ಪನ್ನಗಳ ಖರೀದಿಯಲ್ಲಿ ಸಮಾನತೆಯನ್ನು ಇದರಿಂದ ತರಬಹುದು. ತಮ್ಮ ಕರೆನ್ಸಿಯನ್ನೇ ಮುಂದಾಗಿಸಿಕೊಂಡು ಅನೇಕ ದೇಶಗಳು ಆಡುತ್ತಿರುವ ಆಟಕ್ಕೆ ಇದು ಕೊನೆ ಹಾಡುತ್ತದೆ. ವಿಶೇಷವಾಗಿ ಭಾರತದಂತಹ, ಬೆಳೆಯುತ್ತಿರುವ ಆರ್ಥಿಕತೆಗಳಿಗೆ ಇದರ ಅನುಕೂಲ ಹೆಚ್ಚು.

ಇತ್ತೀಚೆಗೆ ರಷ್ಯಾ ಸೆಂಟ್ರಲ್ ಬ್ಯಾಂಕ್ ಗವರ್ನರ್ ಹೇಳಿರುವಂತೆ ಅವರ ದೇಶವು ‘ನ್ಯಾಟೋ ದೇಶದ ಮೇಲಿನ ಮಾರುಕಟ್ಟೆ ಮತ್ತು ಆರ್ಥಿಕ ಅವಲಂಬನೆಯನ್ನು ಬೃಹತ್ ಮಟ್ಟದಲ್ಲಿ ಕಡಿತಗೊಳಿಸಿಕೊಂಡು ಏಷ್ಯಾದ ರಾಷ್ಟ್ರಗಳ ಮಾರುಕಟ್ಟೆಗಳ ಮೇಲಿನ ಅವಲಂಬನೆ ಹೆಚ್ಚಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ’ ಎಂಬ ಹಿನ್ನೆಲೆಯಲ್ಲಿ ಭಾರತದಂಥ ದೇಶಕ್ಕೆ ಖಗಐಊಖಗೆ ಪರ್ಯಾಯ ವ್ಯವಸ್ಥೆ ರೂಪಿಸಲು ಇದಕ್ಕಿಂತ ಉತ್ತಮ ಸುವರ್ಣಾವಕಾಶ ದೊರೆಯುವುದಿಲ್ಲ. ಈ ಮೂಲಕ, ವಿಶ್ವದ ಆರ್ಥಿಕತೆಗೆ ಅತ್ಯಂತ ಸರಳ, ಕಡಿಮೆ ವೆಚ್ಚದ ಹಾಗೂ ಸುರಕ್ಷಿತ ಪಾವತಿ ವ್ಯವಸ್ಥೆಯೊಂದನ್ನು ನೀಡಬಹುದಾಗಿದೆ.

(ಲೇಖಕರು ಬಿಎಂಟಿಸಿ ಉಪಾಧ್ಯಕ್ಷರು, ಬಿಜೆಪಿ ಮುಖಂಡರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net