

ಮೀನಿನಿಂದಲೇ ಲಕ್ಷ ರೂ. ಆದಾಯ: ಈ ಪ್ರಗತಿಪರ ಕೃಷಿಕ 1 ಗುಂಟೆ ಜಾಗದಲ್ಲಿ ತಿಲಾಪಿಯಾ ಮೀನು ಸಾಕಣೆ ಮಾಡಿದ್ದಾರೆ. ಆರ್ಎಎಫ್ ತಂತ್ರಜ್ಞಾನ ಬಳಸಿರೋದ್ರಿಂದ ನೀರಿನ ಅವಶ್ಯಕತೆ ಹೆಚ್ಚಿಲ್ಲ. ಒಮ್ಮೆ ಬಳಕೆ ಮಾಡಿದ ನೀರಲ್ಲೇ ಒಂದು ಬೆಳೆ ತೆಗೆಯತ್ತಾರೆ. ನಾಲ್ಕೂವರೆ ತಿಂಗಳಿಗೆ ತಿಲಾಪಿಯಾದ ಒಂದು ಬೆಳೆ ಸಿಗುತ್ತದೆ. ಪ್ರತಿ ಕೆಜಿಗೆ 150 ರೂಪಾಯಿ ಎಂದು ಪರಿಗಣಿಸಿದರೂ, ಒಂದು ಟನ್ ಸಾಮರ್ಥ್ಯದ ಘಟಕ ನಿರ್ವಿುಸಿರೋದ್ರಿಂದ ಪ್ರತಿ ನಾಲ್ಕೂವರೆ ತಿಂಗಳಿಗೊಮ್ಮೆ ಈ ರೈತನಿಗೆ ಮೀನಿನಿಂದಲೇ 3 ಲಕ್ಷ ರೂ. ಆದಾಯ ಸಿಗುತ್ತದೆ. ವರ್ಷಕ್ಕೆ ಎರಡು ಬೆಳೆ ಅಂತ ಲೆಕ್ಕ ಮಾಡಿದ್ರೂ ಮೀನಿನಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಗಳಿಕೆ ಇದೆ.
ಜೇನು ತುಪ್ಪ ಮಾರಾಟದಿಂದ 3.70 ಲಕ್ಷ ರೂ. ಆದಾಯ: ಈ ರೈತ ಜೇನು ಸಾಕಣೆ ಮಾಡುವವರಿಗೆ ತಿಂಗಳಿಗೆ ಕನಿಷ್ಠ 5 ಜೇನು ಕುಟುಂಬಗಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಜೇನು ಕುಂಟುಂಬದ ಮಾರುಕಟ್ಟೆ ಬೆಲೆ ಸುಮಾರು 4,500 ರೂ. ವರ್ಷಕ್ಕೆ 60 ಜೇನು ಕುಟುಂಬಗಳನ್ನು ಮಾರಾಟ ಮಾಡಿದರೆ ಇದರಿಂದ ಸಿಗುವ ಆದಾಯ 2.70 ಲಕ್ಷ ರೂ. ಇನ್ನು ಜೇನು ತುಪ್ಪ ಮಾರಾಟದಿಂದ ಸುಮಾರು 1.5 ಲಕ್ಷ ರೂ. ಸಂಪಾದಿಸುತ್ತಾರೆ. ಅಂದರೆ ಸಣ್ಣ ಪ್ರಮಾಣದ ಜೇನು ಸಾಕಣೆಯಿಂದಲೇ ಇವರಿಗೆ ವರ್ಷಕ್ಕೆ 3.70 ಲಕ್ಷ ರೂ. ಆದಾಯವಿದೆ.
ಕೋಳಿಗಳಿಂದ ವರ್ಷಕ್ಕೆ 2.5 ಲಕ್ಷ ರೂ. ಗಳಿಕೆ: ಬ್ಯಾಚ್ ಲೆಕ್ಕದಲ್ಲಿ ಒಮ್ಮೆ 300 ಕೋಳಿಗಳನ್ನು ಕೊಂಡಿರುವ ರೈತ ಅವುಗಳನ್ನು ಪೋಷಣೆ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ದಿನಕ್ಕೊಂದು ಕೋಳಿ ಮಾರಾಟ ಮತ್ತು ಮೊಟ್ಟೆಯಿಂದಲೂ ಆದಾಯ ಗಳಿಸುತ್ತಿರುವ ರೈತ ವರ್ಷಕ್ಕೆ ಕೋಳಿ ಸಾಕಣೆಯಿಂದಲೇ ಸುಮಾರು 2.5 ಲಕ್ಷ ರೂ. ಸಂಪಾದಿಸುತ್ತಿದ್ದಾರೆ.
ಹಸು-ಕುರಿಗಳಿಂದ ವರ್ಷಕ್ಕೆ 3 ಲಕ್ಷ ರೂ. ಗಳಿಕೆ: ನಾಟಿ ಹಸುಗಳು ಮತ್ತು ಕುರಿಗಳನ್ನು ಸಾಕಿರುವ ರೈತ, ಈ ಎರಡು ಉಪಕಸುಬುಗಳಿಂದ ವರ್ಷಕ್ಕೆ 3 ಲಕ್ಷ ರೂ. ಸಂಪಾದಿಸುತ್ತಿದ್ದಾರೆ. ನಾಟಿ ಹಸುವಿನ ಹಾಲು ಮತ್ತು ತುಪ್ಪಕ್ಕೆ ಇರುವ ಬೇಡಿಕೆ ಅರಿತಿರುವ ರೈತ, ಅದನ್ನು ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಿಂದ ಸಬ್ಸಿಡಿ: ಪ್ರಧಾನಮಂತ್ರಿ ಮತ್ಸ್ಯಯೋಜನೆಯಿಂದ ಒಳನಾಡು ಮೀನು ಸಾಕಣೆಗೆ ಸಬ್ಸಿಡಿ ಕೂಡ ಇದೆ. ಈ ಬಗ್ಗೆಯೂ ಕೋರ್ಸ್ನಲ್ಲಿ ಮಾಹಿತಿ ಇದೆ. ಯಾರಿಗೆ ಸಬ್ಸಿಡಿ ಸಿಗುತ್ತೆ, ಎಲ್ಲಿ ಅರ್ಜಿ ಸಲ್ಲಿಸಬೇಕು, ಎಷ್ಟು ಹಣ ದೊರೆಯುತ್ತದೆ, ಈ ಎಲ್ಲ ಮಾಹಿತಿ 4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ರೂ. ಗಳಿಸಿ ಕೋರ್ಸ್ ನಲ್ಲಿ ಅಡಕವಾಗಿದೆ.
ಫೈನಾನ್ಸಿಯಲ್ ಫ್ರೀಡಂ ಆ್ಯಪ್: ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ 4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ರೂ. ಗಳಿಸುವುದು ಹೇಗೆ ಎನ್ನುವ ಕೋರ್ಸ್ ರೂಪಿಸಲಾಗಿದೆ. ಅತ್ಯಂತ ಕಡಿಮೆ ಕೃಷಿ ಭೂಮಿಯಲ್ಲಿ ಮೀನು, ಜೇನು, ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಣೆ ಮಾಡಿ ವರ್ಷಕ್ಕೆ 15 ಲಕ್ಷ ರೂ. ದುಡಿಯುತ್ತಿರುವ ರೈತರೇ ಇಲ್ಲಿ ಮಾರ್ಗದರ್ಶಕರಾಗಿದ್ದಾರೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ 4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ರೂ. ಗಳಿಸುವುದು ಹೇಗೆ ಎನ್ನುವ ಕೋರ್ಸ್ನಿಂದ ಕಲಿಯಿರಿ, ನೀವೂ ಯಶಸ್ವಿ ರೈತರಾಗಿರಿ.