ನುಗ್ಗೆಯ ಸವಿದು ಹಿಗ್ಗಿರಿ: ನುಗ್ಗೆಕಾಯಿ ಸೂಪ್

Nugge soup
Published on

ಆರೋಗ್ಯದ ದೃಷ್ಟಿಯಿಂದ ನುಗ್ಗೆಯು ಬಹಳ ಒಳ್ಳೆಯದು.ಇದರಲ್ಲಿ ಕಬ್ಬಿಣಾಂಶ ಮತ್ತು ಕ್ಯಾಲ್ಷಿಯಂ ಅಧಿಕ ವಿರುವುದರಿಂದ ಮೂಳೆಗೆ ಹಾಗೂ ಅನೀಮಿಯ ಇರುವವರಿಗೆ ಇದು ಒಳ್ಳೆಯದು. ಇದು ಬ್ಲಡ್ ಶುಗರ್ ಹಾಗೂ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿರಿಸುತ್ತದೆ. ಇಮ್ಯುನಿಟಿ ಜಾಸ್ತಿ ಮಾಡಲು ಇದು ಸಹಾಯಕ. ನುಗ್ಗೆಕಾಯಿ, ಹೂವು ಹಾಗೂ ಸೊಪ್ಪುಗಳನ್ನು ಬಳಸಿ ರುಚಿಯಾದ ಅಡುಗೆ ಮಾಡಬಹುದು.

ಬೇಕಾಗುವ ಸಾಮಗ್ರಿಗಳು: ಎರಡು ಕಪ್ ಹೆಚ್ಚಿದ ನುಗ್ಗೆ ಕಾಯಿ, ಎರಡು ಕಪ್ ಸೋರೆಕಾಯಿ, ಪೆಪ್ಪರ್ ಪೌಡರ್ ಒಂದು ಚಮಚ, ಒಂದು ಚಮಚ ಬೆಣ್ಣೆ, ಒಂದು ಚಮಚ ಸಣ್ಣಗೆ ಹೆಚ್ಚಿದ ಶುಂಠಿ, ಉಪ್ಪು ರುಚಿಗೆ ಮಾಡುವ ವಿಧಾನ: ಮೊದಲಿಗೆ ಬಾಣಲೆಯಲ್ಲಿ ಬೆಣ್ಣೆ ಕರಗಿಸಿ ಅದಕ್ಕೆ ಶುಂಠಿ ಹಾಕಿ ಪರಿಮಳ ಬರುವ ತನಕ ಹುರಿಯಿರಿ. ನುಗ್ಗೆಕಾಯಿ ಹಾಗೂ ಸೋರೆಕಾಯಿ ತುಂಡನ್ನು ಹಾಕಿ ಅದಕ್ಕೆ ನಾಲ್ಕು ಕಪ್ ನೀರು ಹಾಕಿ ಬೇಯಿಸಿರಿ. ಬೆಂದ ನಂತರ ನುಗ್ಗೆಕಾಯಿಯ ತಿರುಳನ್ನು ಚಮಚದಿಂದ ತೆಗೆಯಿರಿ. ಅದನ್ನು ಸೋರೆಕಾಯಿ ಜತೆಗೆ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿರಿ. ಅದಕ್ಕೆ ಉಪ್ಪು, ಪೆಪ್ಪರ್ ಪೌಡರ್ ಬೆಣ್ಣೆ ಹಾಕಿ ಕುದಿಸಿರಿ.

| ಹರ್ಷಾ ಕಾಮತ್, ಕಾರ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net