

ಆರೋಗ್ಯದ ದೃಷ್ಟಿಯಿಂದ ನುಗ್ಗೆಯು ಬಹಳ ಒಳ್ಳೆಯದು.ಇದರಲ್ಲಿ ಕಬ್ಬಿಣಾಂಶ ಮತ್ತು ಕ್ಯಾಲ್ಷಿಯಂ ಅಧಿಕ ವಿರುವುದರಿಂದ ಮೂಳೆಗೆ ಹಾಗೂ ಅನೀಮಿಯ ಇರುವವರಿಗೆ ಇದು ಒಳ್ಳೆಯದು. ಇದು ಬ್ಲಡ್ ಶುಗರ್ ಹಾಗೂ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿರಿಸುತ್ತದೆ. ಇಮ್ಯುನಿಟಿ ಜಾಸ್ತಿ ಮಾಡಲು ಇದು ಸಹಾಯಕ. ನುಗ್ಗೆಕಾಯಿ, ಹೂವು ಹಾಗೂ ಸೊಪ್ಪುಗಳನ್ನು ಬಳಸಿ ರುಚಿಯಾದ ಅಡುಗೆ ಮಾಡಬಹುದು.
ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು ಎರಡು ಕಪ್, ಹೆಚ್ಚಿದ ನುಗ್ಗೆ ಸೊಪ್ಪು ಒಂದು ಕಪ್, ಜೀರಿಗೆ ಒಂದು ಚಮಚ, ಗರಂ ಮಸಾಲೆ ಪುಡಿ ಒಂದು ಚಮಚ, ಅರಿಶಿಣ ಪುಡಿ ಕಾಲು ಚಮಚ, ಸಿಮೆಣಸಿನಕಾಯಿ ಎರಡು, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು ಮಾಡುವ ವಿಧಾನ: ಅರ್ಧ ಕಪ್ ನೀರಿಗೆ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿರಿ. ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಚಪಾತಿಯ ಹಾಗೆ ಲಟ್ಟಿಸಿ. ಸ್ವಲ್ಪ ತುಪ್ಪ ಹಾಕಿ ಕಾವಲಿಯಲ್ಲಿ ಬೇಯಿಸಿ.
| ಹರ್ಷಾ ಕಾಮತ್, ಕಾರ್ಕಳ