

ಆರೋಗ್ಯದ ದೃಷ್ಟಿಯಿಂದ ನುಗ್ಗೆಯು ಬಹಳ ಒಳ್ಳೆಯದು.ಇದರಲ್ಲಿ ಕಬ್ಬಿಣಾಂಶ ಮತ್ತು ಕ್ಯಾಲ್ಷಿಯಂ ಅಧಿಕ ವಿರುವುದರಿಂದ ಮೂಳೆಗೆ ಹಾಗೂ ಅನೀಮಿಯ ಇರುವವರಿಗೆ ಇದು ಒಳ್ಳೆಯದು. ಇದು ಬ್ಲಡ್ ಶುಗರ್ ಹಾಗೂ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿರಿಸುತ್ತದೆ. ಇಮ್ಯುನಿಟಿ ಜಾಸ್ತಿ ಮಾಡಲು ಇದು ಸಹಾಯಕ. ನುಗ್ಗೆಕಾಯಿ, ಹೂವು ಹಾಗೂ ಸೊಪ್ಪುಗಳನ್ನು ಬಳಸಿ ರುಚಿಯಾದ ಅಡುಗೆ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:ನುಗ್ಗೆ ಹೂ ಒಂದು ಕಪ್, ಎರಡು ಕಪ್ ಕಡ್ಲೆ ಬೇಳೆ, ಎರಡು ಹಸಿಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಮೂರು ಬೆಳ್ಳುಳ್ಳಿಯ ಎಸಳು, ಸಣ್ಣ ತುಂಡು ಶುಂಠಿ, ಕರಿಬೇವು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು ಮಾಡುವ ವಿಧಾನ: ನುಗ್ಗೆ ಹೂವನ್ನು ಶುಚಿಗೊಳಿಸಿ. ಕಡಲೆ ಬೇಳೆಯನ್ನು ನಾಲ್ಕು ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ತೊಳೆದು ತರಿತರಿಯಾಗಿ ರುಬ್ಬಿರಿ. ಇದಕ್ಕೆ ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ, ಶುಂಠಿ , ಬೆಳ್ಳುಳ್ಳಿ ಹಾಕಿ ಕಲಸಿರಿ. ಚಿಕ್ಕಚಿಕ್ಕ ಉಂಡೆಗಳನ್ನು ಮಾಡಿ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಕರಿಯಿರಿ.
| ಹರ್ಷಾ ಕಾಮತ್, ಕಾರ್ಕಳ