

ಕರ್ನಾಟಕ ಸಂಸ್ಕೃ ಶೋಧದ ಬಹುದೊಡ್ಡ ಹೆಸರು ಶಂ.ಬಾ. ಜೋಶಿ. ಕಳೆದ ನೂರು ವರ್ಷಗಳ ಕನ್ನಡ ಸಂಶೋಧನೆಯ ಚರಿತ್ರೆಯಲ್ಲಿ ಶಂ.ಬಾ. ಒಂದು ದೀಪಸ್ತಂಭ. ಅವರನ್ನು ಗೋವಿಂದ ಪೈ ‘ಕನ್ನಡದ ಕೊಲಂಬಸ್’ ಎಂದೇ ಪ್ರಶಂಸಿಸಿದ್ದಾರೆ. ನಿನ್ನೆಯಷ್ಟೇ ಅವರ 125ನೇ ಜನ್ಮದಿನ. ಆ ಹಿನ್ನೆಲೆಯಲ್ಲಿ ಅವರ ಬದುಕು-ಕೊಡುಗೆ ಕುರಿತು ಒಂದು ಮೆಲುಕು.
ವಿಸ್ಮ ೃಯ ಕತ್ತಲೆಯಲ್ಲಿ ಕಳೆದುಹೋಗಿದ್ದ ಕನ್ನಡ ಸಂಸ್ಕೃಯ ಚಲನೆಗಳನ್ನು ತಮ್ಮ ಅಗಾಧ ಅಧ್ಯಯನ ಮತ್ತು ಬಹುಶ್ರುತ ಪಾಂಡಿತ್ಯದ ಬೆಳಕಿನಲ್ಲಿ ಉತ್ತರ ಮತ್ತು ಪೂರ್ವಭಾರತದ ಗಂಗೆ, ಯಮುನೆಯ ಪರಿಸರದಲ್ಲಿ ಶೋಧಿಸಿದವರು ಡಾ. ಶಂಕರ ಬಾಳದೀಕ್ಷಿತ ಜೋಶಿ. ಕರ್ನಾಟಕದ ಸಂಸ್ಕೃಯನ್ನು ಕುರಿತು ನೂರಾರು ಪ್ರಮೇಯಗಳನ್ನು ಕಟ್ಟುತ್ತ, ಸರ್ತಾಕವಾಗಿ, ಸೈದ್ಧಾಂತಿಕವಾಗಿ ವ್ಯಾಖ್ಯಾನಿಸುತ್ತ, ಸಮರ್ಥನೀಯ ಆಕರಗಳ ಮೂಲಕ ನಿರೂಪಿಸಿದ ಅವರು ಸಂಸ್ಕ ೃ ಶೋಧಕರಾಗಿ ಪ್ರಸಿದ್ಧರು.
ಆರೂವರೆ ದಶಕಗಳ ಸಂಸ್ಕೃ ಅಧ್ಯಯನದಲ್ಲಿ ಅವರು ಕಂಡ ಸಂಗತಿಗಳು ಇಂದಿಗೂ ಸಂಸ್ಕೃ ಶೋಧದ ಮಹತ್ವದ ಚರ್ಚೆಗಳಾಗಿವೆ. ಹಲ್ಮಿಡಿ ಶಾಸನ (ಕ್ರಿ.ಶ. 450) ಪೂರ್ವದ ಕನ್ನಡಿಗರ ಅಸ್ತಿತ್ವವನ್ನು ಅಧಿಕೃತಗೊಳಿಸುವ ಪ್ರಬಲ ಪುರಾವೆಗಳು ಅಲಭ್ಯವಾಗಿದ್ದ ಸಂದರ್ಭದಲ್ಲಿ (1930) ಶಂಬಾ ಕನ್ನಡಿಗರ ಅಸ್ತಿತ್ವವನ್ನು ಕಂದಮಿಳ ಸಂಸ್ಕ ೃಯ (ಕನ್ನಡ-ತಮಿಳು ಏಕೀಕೃತ ಅವಸ್ಥೆ) ಕುರುಹುಗಳನ್ನು ವೇದಪೂರ್ವದಲ್ಲಿ ಗುರುತಿಸುವ ಸಾಹಸ ಮಾಡಿದರು.
ಕನ್ನಡ ಸಂಶೋಧನೆ ಬಹುಮಟ್ಟಿಗೆ ಆಕರ ಸಾಮಗ್ರಿ ಶೋಧದ ಏಕಶಿಸ್ತೀಯ ಮಾರ್ಗದಲ್ಲಿದ್ದಾಗ (1930-40) ಶಂಬಾ ಬಹುಶಿಸ್ತೀಯ ಸಂಶೋಧನಾ ಮಾದರಿಯನ್ನು ಅನುಸರಿಸಿ ಆಕರ ಸಂಗ್ರಹ, ಆಕರ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ಒಟ್ಟಾಗಿ ನಿರ್ವಹಿಸುವ ಸಂಕೀರ್ಣ ಮಾರ್ಗದಲ್ಲಿ ಮುನ್ನಡೆದರು. ಕನ್ನಡಿಗರ ಆಳತ್ವವನ್ನು ವೇದಪೂರ್ವದ ಉತ್ತರ ಭಾರತದಲ್ಲಿ ಗುರುತಿಸಿದ ಮೊದಲಿಗರು.
ಬಾಲ್ಯ ಮತ್ತು ಶಿಕ್ಷಣ: ಶಂಬಾ ಹುಟ್ಟಿದ್ದು 1896ರ ಜ. 4ರಂದು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಅವರ ಜನ್ಮಸ್ಥಳ. ತಂದೆ ಬಾಳದೀಕ್ಷಿತ; ತಾಯಿ ಉಮಾಬಾಯಿ. ಶಂಬಾ ಮುಲ್ಕಿ ಪರೀಕ್ಷೆ ಪಾಸು ಮಾಡಿದ ನಂತರ 1904ರಲ್ಲಿ ಆ ಊರಿಗೆ ಪ್ರವಾಹ ಬಂತು. ಅವರ ಮನೆ ಮುಳುಗಿತು. ಆಗ ಅಜ್ಜಿಯ ಊರಾದ ಪುಣೆಗೆ ಹೋದರು. 1919ರಲ್ಲಿ ಧಾರವಾಡಕ್ಕೆ ಬಂದು ಶಿಕ್ಷಕರ ಸರಕಾರಿ ಟ್ರೇನಿಂಗ್ ಕಾಲೇಜಿನಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಲೋಕಮಾನ್ಯ ಟಿಳಕ ಮತ್ತು ಗಾಂಧೀಜಿ ಅವರಿಂದ ಪ್ರಭಾವಿತರಾಗಿ ದೇಶಸೇವೆಗಾಗಿ ಶಿಕ್ಷಕ ವೃತ್ತಿಯನ್ನು ಬಿಟ್ಟು ಧಾರವಾಡಕ್ಕೆ ಬಂದರು. ಇದೇ ಸಂದರ್ಭದಲ್ಲಿ ಜಮಖಂಡಿಯ ಪಾರ್ವತಿಬಾಯಿ ಅವರೊಂದಿಗೆ 1931ರಲ್ಲಿ ವಿವಾಹವಾದರು.
ಸಾಹಿತ್ಯ ಕೃಷಿ: ಜ್ಞಾನದ ಮತ್ತು ದೇಶಸೇವೆಯ ಆದರ್ಶದಿಂದ ಪ್ರೇರಿತರಾಗಿ ಶಿಕ್ಷಕ ವೃತ್ತಿ ತ್ಯಜಿಸಿ ಧಾರವಾಡಕ್ಕೆ ಬಂದ ಶಂಬಾ ಉಪಜೀವನಕ್ಕಾಗಿ ಮುದವೀಡು ಕೃಷ್ಣರಾಯರ ‘ಕರ್ನಾಟಕ ವೃತ್ತ’, ‘ಧನಂಜಯ’ ಪತ್ರಿಕೆಗಳಲ್ಲಿ ಕೆಲಕಾಲ ಬರೆದರು. ಆಲೂರು ವೆಂಕಟರಾಯರು ಮತ್ತು ರಂಗನಾಥ ದಿವಾಕರರೊಂದಿಗೆ ಪತ್ರಿಕೋದ್ಯಮದಲ್ಲಿ ದುಡಿದದ್ದು ಅವರ ಸಾರಸ್ವತ ಬದುಕಿನ ಮಹತ್ವದ ತಿರುವಿಗೆ ಕಾರಣವಾಯಿತು. 1936ರಲ್ಲಿ ಧಾರವಾಡದ ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿ ಕೈಗೊಂಡು 1946ರವರೆಗೆ ಸೇವೆ ಸಲ್ಲಿಸಿದರು. 1930ರಿಂದ ಮುಂದಿನ 6 ದಶಕಗಳಲ್ಲಿ ಶಂಬಾ ರಚಿಸಿದ ಗ್ರಂಥಗಳು ಕನ್ನಡ-ಸಂಸ್ಕ ೃ ಚಿಂತನೆ ಮಾತ್ರವಲ್ಲ ಭಾರತದ ಸಂಸ್ಕ ೃಯ ಅನೇಕ ಅಜ್ಞಾತ ತಿರುವುಗಳನ್ನು ಬಹಿರಂಗಪಡಿಸಿದವು.
1931ರಲ್ಲಿ ಮೊದಲ ಕೃತಿ ‘ಮಹರ್ಷಿ ಅರವಿಂದ ಘೊಷ’ ಜೀವನಚರಿತ್ರೆ ಪ್ರಕಟಿಸಿದ ಶಂಬಾ ಸಂಸ್ಕ ೃ ಅಧ್ಯಯನಕ್ಕೆ ಸಂಬಂಧಿಸಿದ 40ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡ ನಾಡಿನ ಭೌಗೋಳಿಕತೆ, ಕನ್ನಡಿಗರ ಜನಾಂಗೀಯ ಇತಿಹಾಸ, ದ್ರಾವಿಡ ಮತ್ತು ಕಂದಮಿಳದ ಭೌಗೋಳಿಕ ಮತ್ತು ಸಾಂಸ್ಕ ೃಕ ಸಂಚಲನಗಳು, ಭಾಷೆ, ಸಂಪ್ರದಾಯ ಆಚರಣೆ ಮತ್ತು ನೆಲೆಗಳ ಮೂಲಕ ಕಾಲಗರ್ಭದಲ್ಲಿ ಅಗೋಚರವಾಗಿರುವ ಕನ್ನಡ ಸಂಸ್ಕ ೃಯ ಪ್ರಾಚೀನ ಚಹರೆಗಳು ಅವರ ಸಂಶೋಧನೆಗಳ ಕೇಂದ್ರವಾಗಿದ್ದವು. ಭಾರತೀಯ ಮತ್ತು ಜಾಗತಿಕ ಸಂಸ್ಕತಿ ಸಂಶೋಧನೆಯವರೆಗೆ ಅವರ ಅಧ್ಯಯನಗಳು ವಿಸ್ತಾರವಾಗುತ್ತ ಅವರನ್ನು ರಾಷ್ಟ್ರ ಮಟ್ಟದ ಚಿಂತಕರನ್ನಾಗಿ ರೂಪಿಸಿದವು.
ನಾಡು-ನುಡಿಗಾಗಿ ಬರಹ: ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿ ತೀವ್ರವಾಗಿದ್ದ ಆಗಿನ ಕಾಲದಲ್ಲಿ ಬರವಣಿಗೆ ಆರಂಭಿಸಿದ ಶಂಬಾ ತಮ್ಮ ಶೋಧಗಳನ್ನು ಕೃತಿ ರೂಪದಲ್ಲಿ ಪ್ರಕಟಿಸಿ ಕನ್ನಡ ನಾಡು-ನುಡಿ ಸಂಸ್ಕ ೃ ತಿಯ ಜಿಜ್ಞಾಸೆಗೆ ರಾಷ್ಟ್ರಮಟ್ಟದಲ್ಲಿ ಚಾಲನೆ ನೀಡಿದರು. ಕನ್ನಡಿಗರಲ್ಲಿ ಪರಂಪರೆಯ ಪ್ರಜ್ಞೆಯನ್ನು, ಆತ್ಮಸ್ಥೆ ೖರ್ಯವನ್ನು ಸಂಶೋಧನ ಬರಹಗಳ ಮೂಡಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳದಿದ್ದರೂ ದೇಶಸೇವೆಯ ಸಂಕಲ್ಪ, ನಾಡು-ನುಡಿ ಪ್ರೀತಿಯಿಂದ ಬರಹವನ್ನು ವ್ರತವಾಗಿ ಸ್ವೀಕರಿಸಿದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯರಾಗಿದ್ದರು. ರಾಷ್ಟಿ ›ೕಯ ಆದರ್ಶಗಳಿಗೆ ಶಕ್ತಿ ತುಂಬುವ ಲೇಖನಗಳನ್ನು ಬರೆದರು. ಜಯಕರ್ನಾಟಕ, ಕರ್ಮವೀರ, ಕರ್ನಾಟಕ ವೃತ್ತ, ಧನಂಜಯ ಪತ್ರಿಕೆಗಳಲ್ಲಿ ಚಿಂತನಪರ ಲೇಖನಗಳನ್ನು ಬರೆದು ವೈಚಾರಿಕ ಜಾಗೃತಿ ಮೂಡಿಸಿದರು.
1924ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಿ ಗಾಂಧೀಜಿಯವರನ್ನು ಭೇಟಿಯಾದ ಶಂಬಾ ಅದೇ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣ ಪರಿಷತ್ತಿನ ಮೊದಲ ಸಮ್ಮೇಳನಕ್ಕೆ ಕಾರ್ಯದರ್ಶಿಯಾದರು. 1942ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಕಾರ್ಯದರ್ಶಿಯಾಗಿದ್ದರು. 1982ರ ಗೋಕಾಕ ಚಳವಳಿಯಲ್ಲಿ 87 ವಯಸ್ಸಿನ ಶಂಬಾ ಸಕ್ರಿಯವಾಗಿ ಭಾಗವಹಿಸಿ ಉಪವಾಸ ಮಾಡಿದರು. ಈ ಸಂದರ್ಭದಲ್ಲಿ ರೂಪುಗೊಂಡ ಅಖಿಲ ಕರ್ನಾಟಕ ಕ್ರಿಯಾ ಸಮಿತಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದ ಶಂಬಾ ನಾಡು-ನುಡಿಯ ಅಭಿವೃದ್ಧಿಗಾಗಿ ಕೊನೆಯವರೆಗೆ ಕ್ರಿಯಾಶೀಲರಾಗಿದ್ದರು. ತಮ್ಮ ಬದುಕು-ಬರಹಗಳ ಮೂಲಕ ಕನ್ನಡ ಪ್ರಜ್ಞೆಯ ಪ್ರಖರ ಸತ್ವವಾಗಿದ್ದ ಶಂಬಾ 1991ರ ಅ. 28ರಂದು ಇಹಲೋಕ ತ್ಯಜಿಸಿದರು. ಆದರೆ ಅವರ ಬರಹಗಳು, ಸಂಶೋಧನೆ ಅವರ ನಡೆ ನುಡಿ ಇಂದಿಗೂ ಅನುಕರಣೀಯ.
ಶಂಬಾ ರಚಿಸಿದ ಸಂಸ್ಕೃತಿ ಸಂಶೋಧನಾ ಗ್ರಂಥಗಳು
ಕಣ್ಮರೆಯಾದ ಕನ್ನಡ, ಮಹಾರಾಷ್ಟ್ರದ ಮೂಲ, ಮರಾಠಿ ಸಂಸ್ಕೃಯ ಕೆಲವು ಸಮಸ್ಯೆಗಳು, ಕನ್ನಡದ ಕಥೆ, ಕನ್ನಡದ ನೆಲೆ, ಕನ್ನಡ ನುಡಿಯ ಹುಟ್ಟು, ಹಾಲುಮತ ದರ್ಶನ, ಕರ್ನಾಟಕ ಸಂಸ್ಕೃಯ ಪೂರ್ವ ಪೀಠಿಕೆ, ಎಡೆಗಳು ಹೇಳುವ ಕಂನಾಡಕತೆ, ಋಗ್ವೇದಸಾರ, ನಾಗಪ್ರತಿಮಾವಿಚಾರ.
ಮೌಲ್ಯಜಿಜ್ಞಾಸೆಯ ವೈಚಾರಿಕ ವ್ಯಾಖ್ಯಾನಗಳು
ಟಿಳಕ ಕಥಾಮೃತಸಾರ, ರೂಢಿ ಹಾಗೂ ಭಾವಿಕ ಕಲ್ಪನೆಗಳು, ಅಸಂತೋಷವೇ ಏಳ್ಗೆಯ ಮೂಲ, ಯಕ್ಷಪ್ರಶ್ನೆ ಅಥವಾ ಬರಲಿರುವ ಸಮಾಜ, ಸಮಾಜ ದರ್ಶನ, ಸೌಂದರ್ಯ ವಿಚಾರ, ದಾರಿಯ ಬುತ್ತಿ, ಜೀವನ ಅರ್ಥಗ್ರಹಣ ಪದ್ಧತಿ, ಬಿತ್ತಿದ್ದನ್ನು ಬೆಳೆದುಕೋ.
| ಡಾ. ಸಂತೋಷ ಹಾನಗಲ್ಲ