ಇದು ಎಂಥಾ ಲೋಕವಯ್ಯಾ...!; ಕಚೇರಿಗೆ ಬರುತ್ತವೆ ನಾಯಿಗಳು!

NAYI
Published on

ಮನೆಯಲ್ಲಿ ಪ್ರಾಣಿಗಳನ್ನು ಸಾಕಿದರೆ ಮನಸ್ಸು ರಿಲ್ಯಾಕ್ಸ್ ಆಗಿರುತ್ತದೆ ಎಂದು ಕೆಲವು ಅಧ್ಯಯನಗಳು ಈಗಾಗಲೇ ಹೇಳಿವೆ. ಹಾಗಂತ ಆಫೀಸ್ ಕೆಲಸದ ಒತ್ತಡದ ನಡುವೆಯೂ ಮನಸ್ಸು ಒಂದಿಷ್ಟು ರಿಲ್ಯಾಕ್ಸ್ ಆಗಿರಲಿ ಎಂದು ಬೆಕ್ಕು, ನಾಯಿಯನ್ನು ಅಲ್ಲಿಗೆ ಕರೆದುಕೊಂಡರೆ ಹೇಗೆ? ‘ಎಲ್ಲಾದರೂ ಉಂಟೆ?’ ಎಂದು ನೀವು ಕೇಳಬಹುದು. ಆದರೆ ಇಂಥದ್ದೊಂದು ಯೋಚನೆ ಬಂದದ್ದು ಥಾಯ್ಲೆಂಡ್​ನ ರಾಜಧಾನಿ ಬ್ಯಾಂಕಾಕ್​ನ ಕೆಲವು ಕಂಪನಿ ಮಾಲೀಕರಿಗೆ.

ನೌಕರರ ಮನಸ್ಸು ಖುಷಿಯಾಗಿ ಇಡಲು ಇದು ಸಹಕಾರಿ ಆಗುತ್ತದೆ ಎಂದು ಮಾಲೀಕರು ಈಗ ತಮ್ಮ ಮುದ್ದಿನ ನಾಯಿಯನ್ನು ಕಚೇರಿಗೆ ಕರೆತರಲು ಉದ್ಯೋಗಿಗಳಿಗೆ ಅವಕಾಶ ನೀಡುತ್ತಿದ್ದಾರಂತೆ. ವೈಡಿಎಂ ಎಂಬ ಡಿಜಿಟಲ್ ಅಡ್ವರ್ಟೆಸಿಂಗ್ ಏಜೆನ್ಸಿಯಲ್ಲಿ ಶುರು ಮಾಡಿದ ಈ ಹೊಸ ಪದ್ಧತಿಯ ಯಶಸ್ಸನ್ನು ಕಂಡು ಇತರ ಕೆಲ ಕಂಪನಿಗಳೂ ನಾಯಿಗೆ ಅದರ ಮಾಲೀಕರ ಜತೆ ಬರಲು ಅವಕಾಶ ಕಲ್ಪಿಸಿವೆ. ‘ಅಚ್ಚುಮೆಚ್ಚಿನ ಸಾಕು ಪ್ರಾಣಿಗಳ ಒಡನಾಟದಲ್ಲಿ ಉದ್ಯೋಗಿಗಳ ಒತ್ತಡ ಕಡಿಮೆಯಾಗುತ್ತಿದೆ. ಇದರಿಂದ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಕಂಪನಿಯ ಮಾಲೀಕರು ಹೇಳುತ್ತಿದ್ದಾರೆ.

| ಸುಚೇತನಾ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net