

| ರವೀಂದ್ರ ಎಸ್. ದೇಶಮುಖ್
ಕರೊನಾ ರೋಗಿಗಳಿಗೆ ಬಹುತೇಕರು ದೂರದಿಂದಲೇ ಚಿಕಿತ್ಸೆ ನೀಡುತ್ತಾರೆ. ಆದರೆ, ಸುರಕ್ಷತಾ ಕ್ರಮ ಅನುಸರಿಸಿ ನಾನು ರೋಗಿಗಳ ಬಳಿ ಹೋದಾಗ ಅವರಿಗೆ ಆದ ಆನಂದ ಅಷ್ಟಿಷ್ಟಲ್ಲ. ಗುಣಮುಖರಾಗಿ ಮನೆಗೆ ತೆರಳುವ ವೇಳೆ ಬಂದು ಕಾಲಿಗೆ ನಮಸ್ಕರಿಸುತ್ತಾರೆ. ಹಾಗಂತ, ನಾವು ದೊಡ್ಡದೇನು ಮಾಡಿಲ್ಲ. ವೈದ್ಯಕೀಯ ಶಾಸ್ತ್ರ ಓದಿದ ಮೇಲೆ ಆ ಜ್ಞಾನವನ್ನು ರೋಗಿಗಳ ಪ್ರಾಣರಕ್ಷಣೆಗೆ ಪ್ರಾಮಾಣಿಕವಾಗಿ ವಿನಿಯೋಗಿಸಬೇಕು. ಅಷ್ಟನ್ನೇ ಮಾಡಿದೆ. ವೃತ್ತಿಧರ್ಮ ಪಾಲಿಸಿದ ಸಂತೃಪ್ತಿಗಿಂತ ಯಾವುದೂ ಮಿಗಿಲಲ್ಲ. ಇನ್ನು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಉಚಿತ ಚಿಕಿತ್ಸೆಯ ಅಗತ್ಯವಿತ್ತು, ಅದನ್ನೂ ಮಾಡುತ್ತಿದ್ದೇನೆ. ಏಕೆಂದರೆ, ಇದು ದುಡ್ಡು ಮಾಡುವ ಸಮಯವಲ್ಲ, ಮಾನವೀಯ ಸೇವೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಕರೊನಾ ಬಂದಿದ್ದಕ್ಕೆ ಮನೆಯ ಸದಸ್ಯರನ್ನೇ ಆಚೆ ಹಾಕುವ ಇಲ್ಲವೆ ಒಬ್ಬಂಟಿಯಾಗಿಸುವ ಘಟನೆಗಳು ಹೆಚ್ಚುತ್ತಿದ್ದವು. ಇದನ್ನು ನೋಡಿ ತುಂಬ ದುಃಖವಾಗುತ್ತಿತ್ತು. ಜನರಲ್ಲಿ ಈ ಬಗ್ಗೆ ಸೂಕ್ತ ಅರಿವು ಮೂಡಿಸಿದ ಮೇಲೆ ಪರಿಸ್ಥಿತಿ ಕ್ರಮೇಣ ಬದಲಾಗುತ್ತಿದೆ. ಕರೊನಾ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ; ಹಾಗಾಗಿ ವೈದ್ಯರ ಮೇಲೆ ತುಂಬ ದೊಡ್ಡ ಜವಾಬ್ದಾರಿ ಇದೆ, ಅಮೂಲ್ಯ ಜೀವಗಳನ್ನು ಉಳಿಸಬೇಕಿದೆ ಎಂಬ ಅರಿವಿನೊಂದಿಗೆ ಮುಂದೆ ಸಾಗಬೇಕಿದೆ.
| ಡಾ. ಶ್ರೀಧರ್ ಕುಮಾರ್ ಹಾಸ್ಪಿಟಲ್ ಸಂಸ್ಥಾಪಕರು, ತಿಪಟೂರು
(ಡಾ.ಶ್ರೀಧರ್ ಅವರು ತಿಪಟೂರು ತಾಲೂಕಿನ ಕರೊನಾ ರೋಗಿಗಳಿಗೆ ಆಂಬುಲೆನ್ಸ್, ಬೆಡ್ ಮತ್ತು ಚಿಕಿತ್ಸೆಗೆ ಶುಲ್ಕ ಪಡೆಯುತ್ತಿಲ್ಲ. ಆಹಾರವನ್ನೂ ಉಚಿತವಾಗಿ ನೀಡುತ್ತಿದ್ದಾರೆ.)
| ಡಾ. ನಾಗರಾಜ ಪಾಲನಕರ್ ಮಣಿಪಾಲ ಆಸ್ಪತ್ರೆ ಬೆಂಗಳೂರು
| ಡಾ. ಬಿ.ಎಸ್. ಶ್ರೀನಾಥ್ ತಜ್ಞ ವೈದ್ಯರು, ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ, ಬೆಂಗಳೂರು
| ಡಾ. ಜಯಪ್ರಕಾಶ್ ಖ್ಯಾತ ವೈದ್ಯರು, ಮಂಗಳೂರು
| ಡಾ. ಪದ್ಮಕುಮಾರ್ ಎ.ವಿ. ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವರದಿ ಪ್ರಕಾರ ದೇಶಾದ್ಯಂತ 15 ತಿಂಗಳಲ್ಲಿ 1,300ಕ್ಕೂ ಹೆಚ್ಚು ವೈದ್ಯರು ಕರೊನಾಗೆ ಬಲಿಯಾಗಿದ್ದಾರೆ. ಸೋಂಕಿನ ಮೊದಲ ಅಲೆಯಲ್ಲಿ 748, ಎರಡನೇ ಅಲೆಯಲ್ಲಿ ಈವರೆಗೆ 646 ವೈದ್ಯರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಮೊದಲ ಅಲೆಯಲ್ಲಿ 61, ಎರಡನೇ ಅಲೆಯಲ್ಲಿ 9 ವೈದ್ಯರು ಸೇರಿ 70 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಎಷ್ಟೋ ವೈದ್ಯರು ಹಲವು ಶಿಫ್ಟ್ಗಳಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ವಾರದ ರಜೆ ಇಲ್ಲ. ಕೋವಿಡ್ ವಾರ್ಡ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕುಟುಂಬ ಸದಸ್ಯರೊಡನೆ ಬೆರೆಯುವಂತಿಲ್ಲ. ಇದರಿಂದ ಸಾಕಷ್ಟು ವೈದ್ಯರು ತಂದೆ-ತಾಯಿ, ಹೆಂಡತಿ-ಮಕ್ಕಳ ಮುಖ ನೋಡದೆ ತಿಂಗಳುಗಟ್ಟಲೇ ಆಗಿವೆ. ಆಸ್ಪತ್ರೆಗಳಲ್ಲಿ ರೋಗಿಗಳ ನರಳಾಟ, ಆಕ್ರಂದನವನ್ನು ಪ್ರತಿದಿನ ನೋಡುತ್ತಿದ್ದರೂ, ಕುಗ್ಗದೆ ಮತ್ತೆ ಹೊಸ ಹುಮ್ಮಸ್ಸಿನಿಂದ ರೋಗಿಗಳ ಸೇವೆಗೆ ಅಣಿಯಾಗುತ್ತಿದ್ದಾರೆ. ರೋಗಿಯ ಪ್ರಾಣ ಉಳಿಸುವ ಏಕೈಕ ಗುರಿಯೊಂದಿಗೆ ಸಮಯದ ಚೌಕಟ್ಟು ಇಲ್ಲದೆ, ಕುಟುಂಬದವರಿಂದ ದೂರ ಉಳಿದು ಕೆಲಸ ಮಾಡುತ್ತಿದ್ದಾರೆ. ಪರಿಣಾಮ, ಕೆಲ ವೈದ್ಯರು ತೀವ್ರ ಒತ್ತಡವನ್ನೂ, ಖಿನ್ನತೆಯನ್ನೂ ಅನುಭವಿಸುತ್ತಿದ್ದಾರೆ.
ರೋಗಿಗಳ ಸ್ಥಿತಿ ಗಂಭೀರವಾದಾಗ ಕುಟುಂಬದವರು ಅಥವಾ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸುವುದುಂಟು. ಅಂಥ ಕೊನೆಯ ಕ್ಷಣದಲ್ಲಿ ಏನೂ ಮಾಡಲಾಗದಂಥ ಅಸಹಾಯಕತೆ ವೈದ್ಯರದ್ದು. ಆದರೂ, ತಮ್ಮ ಪ್ರಯತ್ನ ಮಾಡಿ, ಪರಿಸ್ಥಿತಿ ಬದಲಿಸಲು ಪ್ರಯತ್ನಿಸುತ್ತಾರೆ. ರೋಗಿಯ ಸಾವು ಸಂಭವಿಸಿದಾಗ ಕುಟುಂಬ ಸದಸ್ಯರು ನೈಜ ಪರಿಸ್ಥಿತಿ ಅರಿಯುವ ಬದಲು ಭಾವಾವೇಶದಲ್ಲಿ ವೈದ್ಯರ ಮೇಲೆ, ಇತರ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಾರೆ. ಇಂಥ ಘಟನೆಗಳು ವೈದ್ಯರ ಮನೋಬಲ, ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ. ಯುವವೈದ್ಯರ ಪೈಕಿ ಬಹುತೇಕರು ‘ಕರೊನಾ ಡ್ಯೂಟಿ ಬೇಡ’ ಎಂದು ಹೇಳುತ್ತಿರುವುದು ಇದೇ ಕಾರಣಕ್ಕಾಗಿ. ಮಂಗಳೂರು, ಆನೆಗುಂದಿ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ನಡೆದಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಆದರೆ, ವೈದ್ಯರ ಶ್ರಮ, ಸಮರ್ಪಣೆಯನ್ನು ಅರ್ಥ ಮಾಡಿಕೊಳ್ಳದೆ ದುಡುಕಿದರೆ, ಅದರಿಂದ ಕರೊನಾ ವಿರುದ್ಧದ ಹೋರಾ ಟಕ್ಕೆ ಭಾರಿ ಹಿನ್ನಡೆಯಾಗಬಹುದು ಎಂಬುದನ್ನು ಮರೆಯುವಂತಿಲ್ಲ.