

ರಾಜ್ಯ ಸೇರಿ ಇಡೀ ದೇಶ ಕರೊನಾ ನಿಯಂತ್ರಣದಲ್ಲಿ ತೊಡಗಿದೆ. ಮತ್ತೊಂದೆಡೆ, ಮಳೆಗಾಲ ಆರಂಭಕ್ಕೂ ಮುನ್ನ ರೈತರು ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ, ಬೀಜ ನಿಗಮಗಳಿಂದ ಕೊಡಮಾಡುವ ಬಿತ್ತನೆಬೀಜ, ರಸಗೊಬ್ಬರವನ್ನು ಆಯಾ ಜಿಲ್ಲೆ, ತಾಲೂಕು, ಹೋಬಳಿ ಸೇರಿ ಎಲ್ಲೆಡೆ ಸಂಗ್ರಹಿಸಿ, ಅವುಗಳನ್ನು ರೆತರಿಗೆ ವ್ಯವಸ್ಥಿತವಾಗಿ ತಲುಪಿಸುವಲ್ಲಿ ಗಮನ ವಹಿಸಬೇಕಿದೆ. ಕಾಣದ ಕೆಗಳಿಂದ ಕಳಪೆ ಬೀಜ ವಿತರಣೆ, ಕಾಳಸಂತೆಯಲ್ಲಿ ಮಾರಾಟ, ಅನಧಿಕತ ಸಂಗ್ರಹ ಮುಂತಾದವುಗಳು ಆಗದಂತೆ ಮುಂಜಾಗರೂಕತೆ ವಹಿಸುವುದರ ಜೊತೆಗೆ ಪ್ರತಿ ಸಲದಂತೆ ರೆತನಿಗೆ ಕೆಗೆಟಕುವ ಸಬ್ಸಿಡಿ ದರದಲ್ಲಿ ವಿತರಣೆ ಮಾಡಬೇಕು. ಈ ಮೂಲಕ ರೆತಾಪಿ ಸಮುದಾಯಕ್ಕೆ ಒದಗಿ ಬರಬಹುದಾದ ಸಂಭಾವ್ಯ ತೊಂದರೆಗಳು ಆಗದಂತೆ ಸರ್ಕಾರ ಸೇರಿದಂತೆ ಆಡಳಿತ ವರ್ಗ ಸೂಕ್ತ ಕ್ರಮ ಕೆಗೊಳ್ಳಲಿ. ಮುಖ್ಯವಾಗಿ, ಬಿತ್ತನೆ ಬೀಜಕ್ಕಾಗಿ ರೈತರು ಪರದಾಡುವಂಥ ಸನ್ನಿವೇಶ ಸೃಷ್ಟಿಯಾಗದಿರಲಿ.
| ಶಿವಾನಂದ ಬಿ. ತಲ್ಲೂರ ಶಿಕರು, ಬೆಳಗಾವಿ