ಇಂದು ಎಂಥಾ ಲೋಕವಯ್ಯ: ಮದುವೆಗೆ ಪ್ರಕಟಣೆ ಕಡ್ಡಾಯ

Enta 5
Published on
ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗುವುದಾದರೆ ಮದುವೆಗೂ ಒಂದು ತಿಂಗಳು ಮುಂಚೆ ಆಯಾ ಭಾಗದ ಕಚೇರಿಯ ನೋಟಿಸ್ ಬೋರ್ಡ್​ನಲ್ಲಿ ಫೋಟೋ ಅಂಟಿಸುವುದು ಕಡ್ಡಾಯ ಎಂಬ ನಿಯಮ ಇಲ್ಲಿ ಇದೆ.

ಆ ಮದುವೆಗೆ ಯಾರದ್ದಾದರೂ ತಕರಾರು ಇದ್ದರೆ ಅವರು ದೂರು ಕೊಡಲು ಸಾಧ್ಯವಾಗಲಿ ಎಂಬ ಕಾರಣಕ್ಕೆ ಈ ನಿಯಮ. ಆದರೆ ಗ್ರೀಸ್​ನಲ್ಲಿ ಮದುವೆಗೂ ಮುನ್ನ ಪತ್ರಿಕೆಗಳಲ್ಲಿ ಫೋಟೋ ಸಹಿತ ಪ್ರಕಟಣೆ ಕಡ್ಡಾಯ. ನಾನು ಇಂಥವರನ್ನು, ಇಂಥ ದಿನ ಮದುವೆಯಾಗುತ್ತಿದ್ದೇನೆ ಎಂದು ಪ್ರಕಟಣೆ ನೀಡಿದ ನಂತರವಷ್ಟೇ ಮದುವೆಯಾಗಬೇಕು. ಇಲ್ಲದಿದ್ದರೆ ಆ ಮದುವೆ ಅಸಿಂಧುವಾಗುತ್ತದೆಯಂತೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net