ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಲಕ್ಷಾಂತರ ಪ್ರವಾಸಿ ತಾಣಗಳಿವೆ. ಅದರಲ್ಲೂ ಮನಸಿಗೆ ನೆಮ್ಮದಿ ನೀಡುವ ಸಾವಿರಾರು ಆಧ್ಯಾತ್ಮಿಕ ತಾಣಗಳಿವೆ. ಆ ತಾಣ, ದೇವಸ್ಥಾನಗಳಿಗೆ ತೆರಳಿ ಸುಲಭವಾಗಿ ಭಗವಂತನ ದರ್ಶನ ಪಡೆಯಲು ಇದೀಗ ಆನ್ಲೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಹಿಮದಲ್ಲಿ ಉದ್ಭವವಾಗುವ ಅಮರನಾಥ, ನಿತ್ಯ ಅರವತ್ತು ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡುವ ತಿರುಪತಿ ತಿಮ್ಮಪ್ಪ ದೇವಸ್ಥಾನ, ಪುರಿಯ ಜಗನ್ನಾಥ, ಕಾಶಿ ವಿಶ್ವೇಶ್ವರ ಹೀಗೆ ಸಾವಿರಾರು ದೇವಾಲಯಗಳಿವೆ. ಆದರೆ, ಆ ಎಲ್ಲ ದೇವಸ್ಥಾನಗಳಿಗೂ ತೆರಳಿ ಭಗವಂತನ ದರ್ಶನ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಅದರಲ್ಲೂ ಹಿರಿಯರಿಗೆ, ಮಕ್ಕಳಿಗೆ ದೇವಸ್ಥಾನಗಳಲ್ಲಿನ ಭಕ್ತರ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆಯುವುದು ಕಷ್ಟಸಾಧ್ಯ. ಅದಕ್ಕಾಗಿಯೇ ‘ಮೈ ತೀರ್ಥ್ ಇಂಡಿಯಾ’ ಸಂಸ್ಥೆ ವಿಶೇಷ ದರ್ಶನ, ಧಾರ್ವಿುಕ ಪ್ರವಾಸದ ವ್ಯವಸ್ಥೆ ಮಾಡುತ್ತಿದೆ. ಜತೆಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆಯೂ ತಿಳಿಸಿಕೊಡುತ್ತಿದೆ.
ಶೇ. 60 ಧಾರ್ವಿುಕ ಪ್ರವಾಸೋದ್ಯಮ: ಭಾರತದಲ್ಲಿ ಧಾರ್ವಿುಕ, ಆಧ್ಯಾತ್ಮಿಕ, ಕ್ರೀಡೆ, ಸಾಹಸ, ಸಾಂಸ್ಕೃತಿಕ ಹೀಗೆ ಹಲವು ಬಗೆಯ ಪ್ರವಾಸೋದ್ಯಮಗಳಿವೆ. 30 ವಿಶ್ವ ಪಾರಂಪರಿಕ ತಾಣಗಳು, 25 ಜೀವವೈವಿಧ್ಯ ವಲಯಗಳಿವೆ. ಭಾರತ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದಲ್ಲೇ 8ನೇ ಸ್ಥಾನದಲ್ಲಿದೆ. 2018ರಲ್ಲಿ ಭಾರತಕ್ಕೆ 10.56 ಮಿಲಿಯನ್ ವಿದೇಶಿ ಪ್ರವಾಸಿಗರು ಬಂದಿದ್ದರು. ಅಲ್ಲದೆ, ಪ್ರವಾಸೋದ್ಯಮ ಕ್ಷೇತ್ರವು 81.1 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿದೆ. ಪ್ರವಾಸಿಗರ ಭೇಟಿ, ಉದ್ಯೋಗ ಸೃಷ್ಟಿ ಸೇರಿ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಧಾರ್ವಿುಕ ಪ್ರವಾಸೋದ್ಯಮ ಶೇ. 60 ಪಾಲನ್ನು ಹೊಂದಿದೆ. ಅದಕ್ಕೆ ಅಲ್ಲಿನ ಧಾರ್ವಿುಕ ಸ್ಥಳಗಳು, ವ್ಯವಸ್ಥೆಗಳೇ ಕಾರಣವಾಗಿವೆ.
ಸುಲಭ ದರ್ಶನ, ಧಾರ್ವಿುಕ ಪ್ರವಾಸ: ಈ ಎಲ್ಲದನ್ನು ಮನಗಂಡು ಧಾರ್ವಿುಕ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮದ ಪಾಲನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ಸುಲಭ ಮತ್ತು ಉತ್ತಮ ರೀತಿಯಲ್ಲಿ ಭಗವಂತನ ದರ್ಶನ ಪಡೆಯಲು ‘ಮೈ ತೀರ್ಥ್ ಇಂಡಿಯಾ’ ಸಂಸ್ಥೆ ಭಕ್ತರಿಗೆ ದರ್ಶನ ವ್ಯವಸ್ಥೆಯನ್ನು ಮಾಡಿಕೊಡುತ್ತಿದೆ. ಅದು ಕೂಡ ಆನ್ಲೈನ್ ಮೂಲಕ. ಇದೇ ಮೊದಲ ಬಾರಿಗೆ ಆನ್ಲೈನ್ ಮೂಲಕ ದೇಶದ ಇಪ್ಪತ್ತಕ್ಕೂ ಹೆಚ್ಚಿನ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನ ವ್ಯವಸ್ಥೆ ಮಾಡಿಕೊಡಲಿದೆ. ಉತ್ತರದಲ್ಲಿ ವೈಷ್ಣೋದೇವಿ, ಅಮರನಾಥ ಯಾತ್ರೆಯಿಂದ, ಪೂರ್ವದ ಕಾಮಾಕ್ಯ, ಜಗನ್ನಾಥ ದೇವಸ್ಥಾನ, ದೇಶದ ಮಧ್ಯಭಾಗದಲ್ಲಿನ ಕಾಶಿ ವಿಶ್ವನಾಥ, ಮಹಾಕಾಳೇಶ್ವರ, ಪಶ್ಚಿಮದ ಶಿರಡಿ, ಅಜ್ಮೇರ್, ದಕ್ಷಿಣದ ತಿರುಪತಿ ತಿಮ್ಮಪ್ಪ, ಮಧುರೈ ಮೀನಾಕ್ಷಿ ದೇವಸ್ಥಾನಗಳಿಗೆ ಪ್ರತಿಯೊಬ್ಬರೂ ಸುಲಭವಾಗಿ ತೆರಳಿ, ದರ್ಶನ ಪಡೆಯಬಹದಾದಂತಹ ವ್ಯವಸ್ಥೆ ಮಾಡಿಕೊಡುತ್ತಿದೆ. ಅದರ ಜತೆಗೆ ಶಿರಡಿ, ತಿರುಪತಿ, ಗೋಲ್ಡನ್ ಟೆಂಪಲ್, ಬದರಿನಾಥ್ ಹೀಗೆ ಹಲವು ದೇವಸ್ಥಾನಗಳ ಪ್ರವಾಸಿ ಪ್ಯಾಕೇಜ್ ಕೂಡ ಆಯೋಜಿಸುತ್ತಿದೆ. ದರ್ಶನ ಮತ್ತು ಪ್ರವಾಸಿ ಪ್ಯಾಕೇಜ್ನಲ್ಲಿ ವಸತಿ, ಊಟದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಪ್ರವಾಸಿಗರು ಅದಕ್ಕೆ ತಗಲುವ ವೆಚ್ಚವನ್ನು ನೀಡಬೇಕಿದೆ.
ಅಸ್ಥಿ ವಿಸರ್ಜನೆ, ಪಿಂಡ ದಾನ: ತಮ್ಮ ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ನಡೆಸಲಾಗುವ ಅಸ್ಥಿ ವಿಸರ್ಜನೆ, ಪಿಂಡ ದಾನಕ್ಕೂ ಕೂಡ ಮೈ ತೀರ್ಥ್ ಇಂಡಿಯಾ ವ್ಯವಸ್ಥೆ ಮಾಡಿಕೊಡಲಿದೆ. ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ ಮತ್ತು ಗಯಾದಲ್ಲಿ ಪಿಂಡ ದಾನ, ತ್ರಯಂಬಕೇಶ್ವರದಲ್ಲಿ ಕಾಲಳಸರ್ಪ ಶಾಂತಿಗೆ ಬೇಕಾಗುವ ಸಕಲ ವ್ಯವಸ್ಥೆಯನ್ನು ಸಂಸ್ಥೆ ಮಾಡಲಿದೆ. ಅದರ ಜತೆಗೆ ದೇಶದ ಯಾವುದೇ ಭಾಗದಲ್ಲಾದರೂ ಮದುವೆ, ಗೃಹ ಪ್ರವೇಶ ಸೇರಿ ಇನ್ನಿತರ ಶುಭ ಕಾರ್ಯಗಳಿಗೆ ಬೇಕಾಗುವ ಪುರೋಹಿತರನ್ನು ಕೂಡ ಕಳುಹಿಸಿಕೊಡಲಿದೆ.
ಸಂಸ್ಥಾಪಕರು: ಮೈ ತೀರ್ಥ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಇಂದ್ರನೀಲ್ ದಾಸ್ಗುಪ್ತಾ, ನಿರ್ದೇಶಕ ಅಂಕನ್ ಗಂಗೂಲಿ ದೇಶದ ಜನರ ಧಾರ್ವಿುಕ ಭಾವನೆಗೆ ಗೌರವ ಸಲ್ಲಿಸುವ ಸಲುವಾಗಿ ಮೈ ತೀರ್ಥ್ ಇಂಡಿಯಾ ಸಂಸ್ಥೆ ಹುಟ್ಟು ಹಾಕಿದ್ದಾರೆ. ಅವರಿಗೆ ದುಬೈನ ಸ್ವಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ್ ಶ್ರೀಧರನ್ ಹೂಡಿಕೆದಾರ ಮತ್ತು ಸಾಗರೋತ್ತರ ನಿರ್ದೇಶಕರಾಗಿ ನೆರವಾಗುತ್ತಿದ್ದಾರೆ. ಪದ್ಮಶ್ರೀ ಅನುಪ್ ಜಲೋಟಾ ಮತ್ತು ಪದ್ಮಶ್ರೀ ಅನುರಾಧಾ ಪೌಡ್ವಾಲ್ ರಾಯಭಾರಿಗಳಾಗಿದ್ದಾರೆ. ಈವರೆಗೆ 35 ಲಕ್ಷ ರೂ. ವಹಿವಾಟು ನಡೆಸಲಾಗಿದೆ. ಅದರ ಜತೆಗೆ ದೆಹಲಿ, ಅಹಮದಾಬಾದ್, ಛತ್ತೀಸ್ಗಢ, ಉಜ್ಜಯಿನಿ, ವಾರಣಾಸಿ, ಮುಂಬೈ, ಕೋಲ್ಕತದಲ್ಲಿ ಫ್ರಾಂಚೈಸಿಗಳನ್ನು ಹೊಂದಿದೆ.
ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆ: ಧಾರ್ವಿುಕ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ಪ್ರಸಾದ್ ಯೋಜನೆ ಜಾರಿಗೆ ತಂದಿದೆ. ಅದರಂತೆ ಧಾರ್ವಿುಕ ಸ್ಥಳಗಳಿಗೆ ಸುಗಮ ಸಾರಿಗೆ ವ್ಯವಸ್ಥೆ, ಪ್ರವಾಸಿ ಮಾಹಿತಿ ಕೇಂದ್ರಗಳ ಸ್ಥಾಪನೆ, ವಾಹನ ನಿಲುಗಡೆ, ಎಟಿಎಂ ಸೇರಿ ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಅದಕ್ಕಾಗಿ ದೇಶದ 25 ಧಾರ್ವಿುಕ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. 2018-19ನೇ ಸಾಲಿನ ಬಜೆಟ್ನಲ್ಲಿ 2,250 ಕೋಟಿ ರೂ. ಮೀಸಲಿಡಲಾಗಿದ್ದು, 687.92 ಕೋಟಿ ರೂ.ಗಳ 23 ಯೋಜನೆಗಳ ಅನುಷ್ಠಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.
ಐದು ಪ್ರಮುಖ ದೇವಸ್ಥಾನಗಳು: ಭಾರತದಲ್ಲಿ ಭಕ್ತರು ಬಂದುಹೋಗುವುದನ್ನು ಲೆಕ್ಕಹಾಕಿದರೆ ಮೊದಲ ಸ್ಥಾನದಲ್ಲಿ ತಿರುಪತಿ ತಿಮ್ಮಪ್ಪ ದೇವಸ್ಥಾನವಿದೆ. ಪ್ರತಿನಿತ್ಯ ಅಲ್ಲಿಗೆ 65ರಿಂದ 70 ಸಾವಿರ ಭಕ್ತರು ಬರುತ್ತಾರೆ. ಅದಾದ ನಂತರ ವೈಷ್ಣೋದೇವಿ, ಪದ್ಮನಾಭಸ್ವಾಮಿ, ಗೋಲ್ಡನ್ ಟೆಂಪಲ್ ಮತ್ತು ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ.
ಹಲವಾರು ಪಾಲುದಾರರು: ಮೈ ತೀರ್ಥ್ ಇಂಡಿಯಾ ಸಂಸ್ಥೆ ತಮ್ಮಲ್ಲಿಗೆ ಬರುವ ಭಕ್ತರು, ಪ್ರವಾಸಿಗರಿಗೆ ಉತ್ತಮ ಸೇವೆ ನೀಡಲು ಹಲವು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಹೋಟೆಲ್ ವ್ಯವಸ್ಥೆಗಾಗಿ ಓಯೋ, ಪ್ರವಾಸಿಗರ ಪ್ರಯಾಣಕ್ಕಾಗಿ ಗೊಜೊ ಕ್ಯಾಬ್ಸ್, ಜೂಮ್ ಕಾರ್ ಸಂಸ್ಥೆಗಳು ನೆರವು ನೀಡುತ್ತಿವೆ. ಜತೆಗೆ ಶೋಭಾ ಬಿಲ್ಡರ್, ಐಸಿಐಸಿಐ ಬ್ಯಾಂಕ್ಗಳು ಕೂಡ ಸಹಯೋಗ ನೀಡುತ್ತಿವೆ.
ಮೈ ತೀರ್ಥ್ ಇಂಡಿಯಾ ಬಗ್ಗೆ ಮತ್ತು ದರ್ಶನ, ಪ್ರವಾಸದ ಬಗೆಗಿನ ಮಾಹಿತಿಗಾಗಿ ಸಂಪರ್ಕ ವಿಳಾಸ: ನಂ. 807, ಪಿ.ಎಸ್.ಕ್ಯೂಬ್, 8ನೇ ಮಹಡಿ, ನ್ಯೂಟೌನ್ ರಸ್ತೆ, ಫ್ಲಾಟ್ ನಂ. ಐಐಡಿ/31/1, ಸ್ಟ್ರೀಟ್ ಸಂ. 111 (ಮೇಜರ್ ಆರ್ಟಿರಿಯಲ್ ರಸ್ತೆ), ಎಎ-ಐಐಡಿ, ನ್ಯೂಟೌನ್, ಕೋಲ್ಕತ - 700 135 ದೂ: 90076 55554 / 90078 28853, ವೆಬ್ಸೈಟ್: https://www.mytirthindia.com/