ಅಡ್ಡಿಗಳು ಬಂದರೂ ಗುರಿಸಾಧನೆ ದಾರಿಯಲ್ಲಿ ಮುನ್ನುಗ್ಗಿ

Akshay
Published on

ಮನೋಜ್ಞ ನಟನೆಯ ಮೂಲಕ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಅಕ್ಷಯ್​ ಕುಮಾರ್​ ಉತ್ತಮ ಮಾತುಗಾರ ಕೂಡ ಹೌದು. ಜೀವನದ ಹಲವು ಆಯಾಮಗಳ ಬಗ್ಗೆ, ವಿಶೇಷವಾಗಿ ಸವಾಲುಗಳನ್ನು ಗೆಲ್ಲುವ, ಯಶಸ್ಸನ್ನು ಸಾಧಿಸುವ ವಿಷಯದ ಕುರಿತಾಗಿ ಹಲವು ಸಂದರ್ಭಗಳಲ್ಲಿ ಪ್ರೇರಣಾದಾಯಕವಾಗಿ ಮಾತನಾಡಿದ್ದಾರೆ. ಆ ಸ್ಫೂರ್ತಿನುಡಿಗಳ ಸಂಕಲನ ಇಲ್ಲಿದೆ.ಮೊದಲಿಗೇ ಹೇಳಿಬಿಡುತ್ತೇನೆ. ಯಶಸ್ಸಿಗೆ ಶಾರ್ಟ್​ಕಟ್​ಗಳಿಲ್ಲ! ಇಂದಿನ ಯುವಕರದ್ದು ಅದೇ ಸಮಸ್ಯೆ; ಇದ್ದಕ್ಕಿದ್ದಹಾಗೇ ಅಥವಾ ವೃತ್ತಿ ಆರಂಭಿಸುತ್ತಿದ್ದ ಹಾಗೆಯೇ ಯಶಸ್ಸು ಸಿಗಬೇಕು ಅಂದುಕೊಳ್ಳುತ್ತಾರೆ. ಇದು ವಾಸ್ತವದಲ್ಲಿ ಸಾಧ್ಯವಾಗದಿದ್ದಾಗ ನಿರಾಶರಾಗುತ್ತಾರೆ, ಕುಸಿದುಬಿಡುತ್ತಾರೆ. ಕೆಲವೊಬ್ಬರು ಗುರಿ ಬದಲಾಯಿಸಿಕೊಂಡರೆ, ಮತ್ತೆ ಹಲವರು ದಾರಿಯನ್ನೇ ಬದಲಿಸಿಕೊಂಡು ತಮ್ಮದಲ್ಲದ ಗಮ್ಯದೆಡೆಗೆ ಸಾಗುತ್ತಾರೆ. ಬದುಕು ಎಂಬುದು ಅಚ್ಚರಿಗಳ ಆಗರ. ಜೀವನದ ದಾರಿಯಲ್ಲಿ ಕ್ರಮಿಸುವಾಗ ಖಂಡಿತವಾಗಿಯೂ ಸೋಲುಗಳು ಎದುರಾಗುತ್ತವೆ, ಅವಮಾನಗಳನ್ನು ಸಹಿಸಬೇಕಾಗುತ್ತದೆ. ಕಠಿಣ ದುಡಿಮೆಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಎಡವಿ ಬಿದ್ದರೂ, ಮತ್ತೆ ಎದ್ದು ಮುಂದೆ ಸಾಗಿದವರಷ್ಟೇ ಗುರಿ ತಲುಪುತ್ತಾರೆ.

ಅನೇಕ ಯುವಕರು ತಾವು ಸಾಗಬೇಕಾದ ದಾರಿ ಯಾವುದು ಎಂಬುದನ್ನು ಕಂಡುಕೊಳ್ಳುವಲ್ಲೇ ವಿಲರಾಗುತ್ತಿದ್ದಾರೆ. ಯಾರದ್ದೋ ಅನುಕರಣೆ, ಆಕರ್ಷಣೆಗೆ ಒಳಗಾಗಿ ತಾವೂ ಹಾಗೇ ಆಗಬೇಕು ಅಂದುಕೊಳ್ಳುತ್ತಾರೆ. ಹೀಗೆ ಅನುಕರಣೆಯ ಮಾರ್ಗದಲ್ಲಿ ತುಂಬ ದಿನ ಸಾಗಲಾಗದು. ಆಗ ಮತ್ತೆ ಅಸಮಾಧಾನ, ತಳಮಳ. ನಿಜವಾಗಲೂ ನಮ್ಮ ಆಸಕ್ತಿಯ ಕ್ಷೇತ್ರ ಯಾವುದು ಅಂದರೆ ನಮ್ಮ ಮನಸ್ಸು ಏನನ್ನು ಮಾಡಲು ತುಡಿಯುತ್ತದೆ ಎಂದು ಮೊದಲು ಗಮನಿಸಿ, ಆ ಮಾರ್ಗದಲ್ಲೇ ಸಾಗಲು ನಿಶ್ಚಯಿಸಬೇಕು. ಎಷ್ಟೋ ಮನೆಗಳಲ್ಲಿ ಮಕ್ಕಳು ಪಾಲಕರ ಒತ್ತಡಕ್ಕೆ ಮಣಿಯಬೇಕಾಗುತ್ತದೆ. ಆದರೆ, ನಿಮ್ಮ ಕನಸನ್ನು, ಗುರಿಯನ್ನು ಪಾಲಕರಿಗೆ ಮನದಟ್ಟು ಮಾಡಿಕೊಟ್ಟು, ಅದನ್ನು ಸಾಕಾರಗೊಳಿಸುವ ಬದ್ಧತೆಯನ್ನು ತೋರಿದರೆ ಖಂಡಿತವಾಗಿಯೂ ಪಾಲಕರು ಸಹಕರಿಸುತ್ತಾರೆ. ಆದರೆ, ಮೊದಲು ಯುವಕರೇ ಅವರ ಕನಸು, ದಾರಿಯನ್ನು ನಿಶ್ಚಯ ಮಾಡಿಕೊಳ್ಳಬೇಕು. ಮನಸ್ಸಿನ ತುಡಿತವನ್ನು ಗ್ರಹಿಸಬೇಕು.

ನನ್ನದೇ ಬದುಕು ಹೇಗೆಲ್ಲ ಚಿತ್ರ&ವಿಚಿತ್ರ ತಿರುವುಗಳನ್ನು ಕಂಡಿತು ಎಂದರೆ ಹಿಂತಿರುಗಿ ನೋಡಿದರೆ ಆಶ್ಚರ್ಯವಾಗುತ್ತದೆ. ನಾನು ಹುಟ್ಟಿದ್ದು ಹಳೆಯ ದೆಹಲಿಯಲ್ಲಿ. ನನ್ನ ಮನೆ ಚಾಂದನಿ ಚೌಕ್​ನ ಗಲ್ಲಿಯಲ್ಲಿದೆ. ನನ್ನ ತಂದೆ ಪಂಜಾಬಿನ ಅಮೃತಸರದವರು, ತಾಯಿ ಜಮ್ಮು&ಕಾಶ್ಮೀರದವರು. ಆರಂಭಿಕ ಶಿಕ್ಷಣ ಪಡೆದಿದ್ದು ಮಾತುಂಗಾದ ಡಾನ್​ ಬಾಸ್ಕೋ ಶಾಲೆಯಲ್ಲಿ. ಆದರೆ, ನನಗೆ ಓದಿನಲ್ಲಿ ಹೆಚ್ಚೇನೂ ಆಸಕ್ತಿ ಇರಲಿಲ್ಲ. ಆಟಗಳೆಂದರೆ ಪಂಚಪ್ರಾಣ. ಎಲ್ಲ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದೆ. ಕ್ರಿಕೆಟ್​, ವಾಲಿಬಾಲ್​, ುಟ್ಬಾಲ್​, ಹಾಕಿ ಆಡುತ್ತಿದ್ದೆ. ಹಲವು ಕ್ರೀಡೆಗಳಲ್ಲಿ ಪಾಲ್ಗೊಂಡ ನಂತರ ಮಾರ್ಷಲ್​ ಆರ್ಟ್​ ಕಡೆಗೆ ಆಸಕ್ತಿ ಹೊರಳಿತು. ಅದರ ಹೆಚ್ಚಿನ ಕಲಿಕೆಯಲ್ಲಿ ತೊಡಗಬೇಕು ಎಂದೆನಿಸತೊಡಗಿತು, ಹಾಗೂಹೀಗೂ ಹತ್ತನೇ ತರಗತಿ ಪಾಸು ಮಾಡಿದ ಬಳಿಕ ತಂದೆಯ ಬಳಿ ಹೇಳಿದೆ, "ನಾನು ಮಾರ್ಷಲ್​ ಆರ್ಟ್​ ಕಲಿಯಲೇಬೇಕು' ಎಂದು. ಅಪ್ಪ ಸ್ಥಿತಿವಂತರೇನಲ್ಲ. ಆದರೂ, ನನಗೆ ನಿರಾಸೆ ಆಗಬಾರದು ಅಂದುಕೊಂಡು ಹಲವು ಮೂಲಗಳಿಂದ ಹಣ ಹೊಂದಿಸಿ, ನನ್ನನ್ನು ಬ್ಯಾಂಕಾಕ್​ಗೆ ಕಳುಹಿಸಿದರು. ಇದು ಜೀವನದ ಮಹತ್ವದ ತಿರುವು. ಅಲ್ಲಿ ಐದು ವರ್ಷ ಇದ್ದು ಕರಾಟೆ ಕಲಿತೆ. ಆ ಬಳಿಕ ಖಜಚಜಿ ಚಿಟ್ಡಜ್ಞಿಜ ಕಲಿತೆ. ಐದು ವರ್ಷದ ನಂತರ ಭಾರತಕ್ಕೆ ಮರಳಿ ಕೊಲ್ಕತ್ತ ತಲುಪಿದೆ. ಅಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದೆ. ಸ್ವಲ್ಪ ದಿನ ಟ್ರಾವೆಲ್​ ಏಜೆನ್ಸಿಯಲ್ಲಿ ಕೆಲಸ ಮಾಡಿದೆ. ನಂತರ ಢಾಕಾಕ್ಕೆ ಹೋದೆ. ಅಲ್ಲಿನ ದಿನಗಳು ಕಷ್ಟದಿಂದ ಕೂಡಿದ್ದವು. ಹೋಟೆಲಿನಲ್ಲಿ ಹಲವು ಕೆಲಸ ನಿರ್ವಹಿಸಿದೆ. ಮತ್ತೆ ಭಾರತಕ್ಕೆ ಮರಳಿದೆ. ಆಗ ಸ್ನೇಹಿತನೊಬ್ಬ ಆಭರಣ ಮಾರಾಟದ ವ್ಯಾಪಾರದಲ್ಲಿ ಒಳ್ಳೆಯ ಲಾಭ ಇದೆ ಎಂದು ಸಲಹೆ ಇತ್ತ. ಅದರಲ್ಲಿ ನನಗೇನೂ ಅನುಭವ ಇರಲಿಲ್ಲ. ಆದರೆ, ದುಡ್ಡು ಸಂಪಾದನೆ ಮಾಡಬೇಕಿತ್ತು. ವ್ಯಾಪಾರ ಕೈಹಿಡಿದರೆ, ಬದುಕು ಬದಲಾಗಬಹುದು ಅಂತ ತೀರ್ಮಾನಿಸಿದೆ. ದೆಹಲಿಯಲ್ಲಿ ಆಭರಣ ಮಾರುಕಟ್ಟೆಯ ಪರಿಚಯವಿತ್ತು. ಅಲ್ಲಿ ಕುಂದಣದ ಆಭರಣಗಳನ್ನು (ರತ್ನವನ್ನು ಚಿನ್ನದಲ್ಲಿ ಕೂಡಿಸಿ ತಯಾರಿಸುವ ಆಭರಣ) ಖರೀದಿಸಿ, ಮುಂಬೈಗೆ ಹೋಗಿ ಮಾರಾಟ ಮಾಡುತ್ತಿದೆ. ಆ ಸಮಯದಲ್ಲಿ ಇಂಥ ಆಭರಣಗಳ ತೊಡುಗೆ ್ಯಾಶನ್​ ಆಗಿತ್ತು. ಉದಾಹರಣೆಗೆ, ದೆಹಲಿಯಲ್ಲಿ 20 ಸಾವಿರ ರೂ. ಮೌಲ್ಯದ ಆಭರಣ ಖರೀದಿ ಮಾಡಿದರೆ, ಅದನ್ನು ಮುಂಬೈಯಲ್ಲಿ 30 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದೆ. ನನ್ನ ಪ್ರಯಾಣ ರ್ಖಚೆಲ್ಲ ಕಳೆದು ಏಳೆಂಟು ಸಾವಿರವಾದರೂ ಮಿಕ್ಕುತ್ತಿತ್ತು.

ಮುಂಬೈಯಲ್ಲಿ ಹೆಚ್ಚಿನ ಅವಕಾಶಗಳು ಇವೆ ಅಂತ ಹಲವರು ಹೇಳಿದ್ದರಿಂದ ಮುಂಬೈಗೆ ಬಂದು ನೆಲೆಸಿದೆ. ಅಲ್ಲಿ ಮಕ್ಕಳಿಗೆ ಮಾರ್ಷಲ್​ ಆರ್ಟ್​ ಹೇಳಿಕೊಡಲು ಆರಂಭಿಸಿದೆ. ತಿಂಗಳಿಗೆ ಐದಾರು ಸಾವಿರ ರೂಪಾಯಿ ಬಂದು, ಹೇಗೋ ಜೀವನವಂತೂ ಸಾಗುತ್ತಿತ್ತು. ಮಕ್ಕಳ ಪ್ರಗತಿ ಪರೀಸಲು ಅವರ ಪಾಲಕರು ಆಗಾಗ ನಾನು ತೆಗೆದುಕೊಳ್ಳುತ್ತಿದ್ದ ತರಗತಿಗೆ ಭೇಟಿ ನೀಡುತ್ತಿದ್ದರು. ಅದೊಂದು ದಿನ ವಿದ್ಯಾರ್ಥಿಯೊಬ್ಬನ ತಂದೆ ಬಂದು, ಗಂಭೀರ ದನಿಯಲ್ಲಿ ಮಾತು ಆರಂಭಿಸಿದರು. ಅವರು ಏನೋ ದೂರು ಹೇಳಲು ಬಂದಿದ್ದಾರೆ ಅಂದುಕೊಂಡೆ. ಅವರು, "ನೋಡಲು ಗಟ್ಟಿಮುಟ್ಟು ಮತ್ತು ಹ್ಯಾಂಡ್​ಸಮ್​ ಆಗಿದ್ದಿಯ. ನೀನೇಕೆ ಮಾಡೆಲಿಂಗ್​ಗೆ ಬರಬಾರದು?' ಅಂತ ಪ್ರಶ್ನಿಸಿದರು. ಸತ್ಯ ಹೇಳುತ್ತೇನೆ, ಮಾಡೆಲಿಂಗ್​ ಅಂದರೆ ಏನಿರುತ್ತೆ ಅಂತ ಆಗ ಖಂಡಿತವಾಗಿಯೂ ಗೊತ್ತಿರ ಲಿಲ್ಲ. ಗಲಿಬಿಲಿಗೊಳಗಾದೆ. "ಹಾಗಂದರೆ
ಏನು?' ಅಂತ ಕೇಳಿದೆ. "ನಾನು ಮಾಡೆಲಿಂಗ್​ ಕೋಆರ್ಡಿನೇಟರ್​ ಇದ್ದೇನೆ. ಚಿಂತೆ ಮಾಡಬೇಡ. ಸಂಬಂಧಪಟ್ಟವರನ್ನು ಭೇಟಿ ಮಾಡಿಸುತ್ತೇನೆ' ಎಂದರು. ಅವರು ಹೇಳಿದ ಸ್ಥಳಕ್ಕೆ ತಲುಪಿದೆ. ಒಳ್ಳೆಯ ಜಾಗ. ಎಸಿ ಕೋಣೆಯಿತ್ತು, ರುಚಿಯಾದ ಊಟ ನೀಡಿದರು. ಎರಡು&ಎರಡೂವರೆ ಗಂಟೆ ಕಾಲ ಅವರು ಸೂಚನೆ ನೀಡಿದಂತೆ ನಡೆದುಕೊಂಡೆ. ಬಳಿಕ, ಕೈಗೆ 21
ಸಾವಿರದ ಚೆಕ್​ ಇಟ್ಟು, "ನೀವು ಈಗ ಹೊರಡಬಹುದು' ಎಂದರು.

ನನಗೆ ಅಚ್ಚರಿ ಜತೆಗೆ ಖುಷಿ. ತಿಂಗಳಿಡಿ ದುಡಿದರೆ 5&6 ಸಾವಿರ ಸಿಗುತ್ತಿತ್ತು. ಅಂಥದ್ದರಲ್ಲಿ ಕೇವಲ ಎರಡೂವರೆ ಗಂಟೆಯ ಕೆಲಸಕ್ಕೆ 21 ಸಾವಿರ ರೂ.! ನನಗೇ ನಂಬಲು ಕಷ್ಟವಾಗಿತ್ತು. ಆಮೇಲೆ ಮಾಡೆಲಿಂಗ್​ ಕ್ಷೇತ್ರದಲ್ಲಿ ಸಾಗಲು ಹಲವರನ್ನು ಭೇಟಿ ಮಾಡಿದೆ. ನನ್ನ ೋಟೋ ತೋರಿಸಿ, ಅವಕಾಶಕ್ಕಾಗಿ ಕೋರಿದೆ. ಅವಕಾಶಗಳು ಸಿಕ್ಕವು. ರ್ಯಾಂಪ್​ ವಾಕ್​, ಮಾಡೆಲಿಂಗ್​ ಮಾಡಿದೆ. ಹೀಗೆ ಕೆಲಸ ಮಾಡುತ್ತಲೇ ಸಾಗಿದ್ದಾಗ ಒಬ್ಬರು ಫಿಲ್ಮ್​ನ ಆರ್​ ತಂದರು. ಅದೊಂದು ಸಂಜೆ ಪ್ರಮೋದ್​ ಚಕ್ರವರ್ತಿ ಭೇಟಿಯಾಗಿ "ನಿನ್ನ ಜತೆ ಒಂದು ಚಿತ್ರ ಮಾಡುತ್ತೇನೆ, ತಯಾರಾಗು' ಎಂದು ಹೇಳಿ 5001 ರೂ.ಗಳ ಚೆಕ್​ ಕೈಗಿತ್ತು ಹೋದರು. ಕೆಲವೇ ಸಮಯದಲ್ಲಿ ಮೂರು ಚಿತ್ರಗಳಿಗೆ ಸಹಿ ಹಾಕಿದೆ. ಬಾಲಿವುಡ್​ನಲ್ಲಿ ಯಾವುದೇ ಗಾಡ್​ಾದರ್​ಗಳು ಇರಲಿಲ್ಲ. ಪ್ರತಿಭೆ, ಶ್ರಮಕ್ಕೆ ಬೆಲೆ ಸಿಕ್ಕಿತು. 1991ರಲ್ಲಿ "ಸೌಗಂಧ್​' ಚಿತ್ರದಿಂದ ಆರಂಭವಾದ ಸಿನಿಪಯಣ ಈಗಲೂ ಮುಂದುವರಿದಿದೆ.

ಇನ್ನೊಂದು ಸ್ವಾರಸ್ಯ ಹೇಳಬೇಕು. ಮಾಡಲಿಂಗ್​ ೋಟೋಶೂಟ್​ ನಡೆಸಲು ಬಂಗ್ಲೆಯೊಂದು ತುಂಬ ಪೂರಕವಾಗಿತ್ತು. ಅಲ್ಲಿನ ಸೆಕ್ಯೂರಿಟಿ ಗಾರ್ಡ್​ನನ್ನು ವಿನಂತಿಸಿದಾಗ, ಆತ ನಿರಾಕರಿಸಿಬಿಟ್ಟ. ಇನ್ನೇನು ಮಾಡುವುದು ಅಂತ ಯೋಚಿಸಿ, ಆ ಬಂಗ್ಲೆಯ ಹೊರಾಂಗಣದಲ್ಲಿ ೋಟೋಶೂಟ್​ ಮಾಡಿ, ಮುಗಿಸಿದೆವು. ಮುಂದೆ, ಕೆಲ ವರ್ಷಗಳ ನಂತರ ಅದೇ ಬಂಗ್ಲೆಯನ್ನು ಖರೀದಿಸಿದೆ. ಮೊದಲಿಗೆ, ನನಗೆ ಇದು ಅದೇ ಕಟ್ಟಡ ಅಂತ ಗೊತ್ತಿರಲಿಲ್ಲ. ೋಟೋಶೂಟ್​ಗಾಗಿ ಹಿಂದೆ ಆಯ್ಕೆ ಮಾಡಿಕೊಂಡಿದ್ದ ಗೋಡೆಯನ್ನು ಒಂದು ದಿನ ಗಮನಿಸಿದಾಗ, ಅದು ಅರಿವಿಗೆ ಬಂತು. ಹೀಗೆ ಬದುಕು ಎಲ್ಲಿಂದ ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂದು ಹೇಳಲಾಗದು. ನಮ್ಮಲ್ಲಿ ಬದ್ಧತೆ, ಅಂದುಕೊಂಡಿದ್ದನ್ನು ಮಾಡಿಯೇ ಮಾಡುತ್ತೇನೆ ಎಂಬ ಅದಮ್ಯ ಛಲ, ಕನಸುಗಳ ದಾರಿಯಲ್ಲಿ ನಡೆಯುವ ಇಚ್ಛಾಶಕ್ತಿ ಇದ್ದಲ್ಲಿ ಯಶಸ್ವಿಯಾಗುವುದನ್ನು ಯಾರೂ ತಡೆಯಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net