'ವರುಣ್​ಗಾಂಧಿಗೆ ಬಿಜೆಪಿ ಟಿಕೆಟ್​ ಕೈತಪ್ಪಿದ್ದಕ್ಕೆ ಬೇಸರವಿಲ್ಲ': ಮಗನ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಮೇನಕಾ ಗಾಂಧಿ

menaka gandhi
Published on

ನವದೆಹಲಿ: ತಮ್ಮ ಮಗ ವರುಣ್ ಗಾಂಧಿ ಒಬ್ಬ ಸಮರ್ಥ ನಾಯಕ ಎಂದು ಅವರ ತಾಯಿ ಮೇನಕಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಕೆಲವರು ಸಂಸದರಾಗಿ ನಾಯಕರಾಗುತ್ತಾರೆ. ಇನ್ನು ಕೆಲವರು ಸಂಸದರಾಗದೆ ನಾಯಕರಾಗುತ್ತಾರೆ. ಇದಕ್ಕೆ ಮಾಜಿ ಪ್ರಧಾನಿ ಚಂದ್ರಶೇಖರ್ ಉತ್ತಮ ನಿದರ್ಶನ. ವರುಣ್ ಸಂಸದನಾಗದೆಯೂ ಜನರ ಸೇವೆ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಆತನ ಮೇಲೆ ನಂಬಿಕೆ ಇದೆ ಎಂದು ಹೇಳಿದರು.

ಬಿಜೆಪಿಯ ಉನ್ನತ ನಾಯಕತ್ವವು ಈ ಬಾರಿಯ ಚುನಾವಣೆಯಲ್ಲಿ ವರುಣ್ ಗಾಂಧಿಗೆ ಲೋಕಸಭೆ ಟಿಕೆಡ್​ ನೀಡಿಲ್ಲ, ಅವರ ಮುಂದಿನ ಭವಿಷ್ಯ ಏನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೇನಕಾ ಗಾಂಧಿ ಪಕ್ಷದ ನಿರ್ಧಾರವನ್ನು ವಿರೋಧಿಸುವುದಿಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಪಕ್ಷದ ತೀರ್ಮಾನ ಎಂದರು.

ಕಳೆದ ಚುನಾವಣೆಯಲ್ಲಿ ಪಿಲಿಭಿತ್ ಕ್ಷೇತ್ರದಿಂದ ವರುಣ್ ಗಾಂಧಿ ಗೆದ್ದಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಆ ಸ್ಥಾನವನ್ನು ಬೇರೆಯವರಿಗೆ ಹಂಚಿಕೆ ಮಾಡಿರುವುದಕ್ಕೆ ಮೇನಕಾ ಉತ್ತರಿಸಿದರು.

ಸುಲ್ತಾನ್‌ಪುರದಿಂದ ಮತ್ತೊಮ್ಮೆ ಕಣಕ್ಕಿಳಿಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಮೇನಕಾ ಗಾಂಧಿ, ಮತ್ತೊಮ್ಮೆ ಈ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದರು. ಆದರೆ ಸುಲ್ತಾನಪುರದ ನೆರೆಯ ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸಿರುವುದಕ್ಕೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ರಾಹುಲ್ ಗಾಂಧಿ ಅವರ ಆಪ್ತ ಸ್ನೇಹಿತ ಶ್ಯಾಮ್ ಪಿತ್ರೋಡಾ ಅವರು ಪಿತ್ರಾರ್ಜಿತ ತೆರಿಗೆ ಕುರಿತು ಇತ್ತೀಚಿನ ಕಾಮೆಂಟ್‌ಗಳಿಗೆ ಮೇನಕಾ ಗಾಂಧಿ ಪ್ರತಿಕ್ರಿಯಿಸಿದ್ದು, ಈ ನೀತಿಗೆ ವಿರೋಧವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net