ಹಾನಿಗೀಡಾದ ಶಾಲೆ ಕೊಠಡಿ ಪರಿಶೀಲನೆ

12 GJD 1
Published on

ಗಜೇಂದ್ರಗಡ: ನಿರಂತರ ಮಳೆಯಿಂದಾಗಿ ತಾಲೂಕಿನ ಸರ್ಕಾರಿ ಕೆಲ ಶಾಲೆಗಳ ಕಟ್ಟಡಗಳು ಹಾನಿಗೊಳಗಾಗಿವೆ. ಹಾನಿಗೊಳಗಾದ ಕೊಠಡಿಗಳನ್ನು ತಾಪಂ ಇಒ ಚಂದ್ರಶೇಖರ ಕಂದಕೂರ ಅವರು ಮಂಗಳವಾರ ಪರಿಶೀಲಿಸಿದರು.

ತಾಲೂಕಿನ ಪುರ್ತಗೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಕೊಠಡಿಗಳು ಜಂಪಲು ಹಿಡಿದಿರುವುದನ್ನು ಪರಿಶೀಲಿಸಿದರು. ಹಾನಿಗೊಳಗಾದ ಗೋಡೆಗಳನ್ನು ತಾಪಂ ಅನುದಾನದಡಿ ಮುಂದಿನ ದಿನಗಳಲ್ಲಿ ದುರಸ್ತಿಗೊಳಿಸುವುದಾಗಿ ಶಾಲಾ ಆಡಳಿತ ಮಂಡಳಿ ಸದಸ್ಯರಿಗೆ ಭರವಸೆ ನೀಡಿದರು.

ಮಳೆಯಿಂದಾಗಿ ಕೊಠಡಿಯೊಳಗೆ ನೀರು ಬರುತ್ತಿದೆ. ಇದರಿಂದ ಪಾಠ ಮಾಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಕಟ್ಟಡ ದುರಸ್ತಿಗೊಳಿಸುವಂತೆ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರು ಮನವಿ ಸಲ್ಲಿಸಿದ್ದರು.

ಗ್ರಾಪಂ ಮಾಜಿ ಅಧ್ಯಕ್ಷ ಬಾಲಾಜಿ ಬೋಸ್ಲೆ ಅವರು ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ತಾಪಂ ಎಡಿ ಬಸವರಾಜ ಬಡಿಗೇರ, ಕಳಕಪ್ಪ ಮುಶೀಗೇರಿ, ಮಂಜುನಾಥ ನಲವಡೆ, ಯಮನೂರಪ್ಪ ವಾರಿಕಲ್ಲ, ಜಗದೀಶ ಹಂಚಾಟೆ, ಅಶೋಕ ಮಾದರ, ಮಲ್ಲಪ್ಪ ಗೂಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net