

ಚಪಾತಿ ಪೂರಿ ಹಾಗೂ ದೋಸೆ ರೊಟ್ಟಿ ಇತ್ಯಾದಿ ತಿನಿಸು ಮಾಡಿದಾಗ ಅವುಗಳನ್ನು ಸವಿಯುವುದಕ್ಕಾಗಿ ಕೆಲವೊಂದು ಸೈಡ್ಡಿಷ್ಗಳನ್ನು ಹೇಗೆ ತಯಾರಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ 1 ಕಪ್ ಈರುಳ್ಳಿ 2 ಟೋಮ್ಯಾಟೊ 1 ಹಸಿಮೆಣಸು 4-5 ಕೊತ್ತಂಬರಿ ಸೊಪ್ಪು ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಮೆಣಸಿನಪುಡಿ 1 ಚಮಚ ಗರಂ ಮಸಾಲ ಪುಡಿ 1 ಚಮಚ ಜೀರಿಗೆ 1 ಚಮಚ ನಿಂಬೆ ರಸ ಸ್ವಲ್ಪ ತುಪ್ಪ 4 ಚಮಚ.
ಮಾಡುವ ವಿಧಾನ: ಮೊದಲಿಗೆ ತೊಗರಿಬೇಳೆಯನ್ನು ತೊಳೆದು ಕುಕ್ಕರ್ನಲ್ಲಿ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ತುಪ್ಪ ಹಾಕಿ, ಜೀರಿಗೆ ಫ್ರೖೆ ಮಾಡಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಫ್ರೖೆ ಮಾಡಿ. ಟೊಮ್ಯಾಟೊ ಹಾಕಿ ಸ್ವಲ್ಪ ಹೊತ್ತು ಬಾಡಿಸಿ ಬೇಳೆಯನ್ನು ಹಾಕಿ ಉಪ್ಪು, ಮೆಣಸಿನಪುಡಿ, ಗರಂಮಸಾಲ ಪುಡಿ ಹಾಕಿ ಕುದಿಸಿ. ಕೊತ್ತಂಬರಿ ಸೊಪ್ಪು, ನಿಂಬೆರಸ ಹಾಕಿ. ಬೇಕಿದ್ದರೆ ಮೇಲೆ ಇನ್ನೊಮ್ಮೆ ತುಪ್ಪದ ಒಗ್ಗರಣೆ ಕೊಡಬಹುದು.
| ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ