ಎರಡೂವರೆ ಕೋಟಿ ಬಾಳಿದ ಪಾನಿಪುರಿ ಹುಡುಗ

KOTI
Published on
ಕೆಲ ವರ್ಷಗಳ ಹಿಂದೆ ಹಾದಿಬದಿಯಲ್ಲಿ ಪಾನಿಪುರಿ ಮಾರಿ ಜೀವನ ನಡೆಸುತ್ತಿದ್ದ ಉತ್ತರ ಪ್ರದೇಶದ ಬಾಲಕನೊಬ್ಬ ಈಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಮೂಲಕ ಮನೆಮಾತಾಗಿದ್ದಾನೆ. 17 ವರ್ಷದ ಈ ಯುವಕನ ಹೆಸರು ಯಶಸ್ವಿ ಜೈಸ್ವಾಲ್. ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಈ ಯುವಕನನ್ನು 2.4 ಕೋಟಿ ರೂಪಾಯಿಗೆ ತಮ್ಮ ತಂಡದ ಪರವಾಗಿ ಆಡಲು ಕೊಂಡುಕೊಂಡಿದೆ.

ಬಾಲ್ಯದಿಂದಲೂ ಕ್ರಿಕೆಟ್ ಹುಚ್ಚು ಹಿಡಿಸಿಕೊಂಡಿದ್ದ ಯಶಸ್ವಿ ಹಾಗೂ ಹೀಗೂ ಮಾಡಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಟವಾಡಲು ಸ್ಥಾನ ಗಿಟ್ಟಿಸಿಕೊಂಡರು. ಈ ಲೀಗ್​ನಲ್ಲಿ 564 ರನ್ ಗಳಿಸಿದ್ದು ಮಾತ್ರವಲ್ಲದೇ 154 ಎಸೆತಗಳಲ್ಲಿ 203 ಗಳಿಸಿ ಅಜೇಯನಾದರು. 12 ಸಿಕ್ಸರ್ ಮತ್ತು 17 ಬೌಂಡರಿ ಹೊಡೆಯುವ ಮೂಲಕ ಜೀವನದಲ್ಲಿಯೂ ಈಗ ಜಯಭೇರಿ ಸಾಧಿಸಿದ್ದಾರೆ. ಜೀವನದಲ್ಲಿ ಏನಾದರೊಂದು ಸಾಧಿಸುವ ಸಲುವಾಗಿ ಉತ್ತರ ಪ್ರದೇಶದಿಂದ ಮುಂಬೈಗೆ ಬಂದು ಆಟದ ಮೈದಾನದ ಪಕ್ಕ ಟೆಂಟ್​ನಲ್ಲಿ ವಾಸಿಸುತ್ತಲೇ ಅತ್ಯಂತ ಶ್ರಮದಿಂದ ಕ್ರಿಕೆಟ್ ಆಟದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ‘ಅಂಡರ್ 19’ ವಿಶ್ವಕಪ್​ನಲಿ ಭಾರತ ಪರ ಆಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net