

ಭಾರತ ಸ್ವಲ್ಪ ಅನೈಕ್ಯತೆಯ ದೆಸೆಯಿಂದ ಸ್ವಂತಿಕೆ ಕಳಕೊಂಡಾಗ, ಬ್ರಿಟಿಷರು, ಪೋರ್ತುಗೀಸರು, ಫ್ರೆಂಚ್, ಡಚ್ ಮೊದಲಾದವರು ಇಲ್ಲಿ ಬಂದು ಲೂಟಿ ಮಾಡಿದರು. ಈ 200 ವರ್ಷ ಕರಾಳ ಕಾಲದಲ್ಲಿ ಆಗ ರಷ್ಯಾ ಆಕ್ರಮಿಸಲಿಲ್ಲ. ಅದು ಆಕ್ರಮಿಸಿದ್ದು ಪರೋಕ್ಷವಾಗಿ ನೆಹ್ರೂ, ಇಂದಿರಾ ಕಾಲದಲ್ಲಿ! ಕಾಮ್ರೇಡರು ಸಶಕ್ತರಾದದ್ದು ಆಗ.
ಇದೆಲ್ಲ ಪುರಾಣದಲ್ಲಿದ್ದೂ ನಾವು ಈಗಲೂ ಓದುವುದಿಲ್ಲ! ‘ಅಯೋನಿಯರು’ ಎಂಬುದು ಉತ್ಪ್ರೇಕ್ಷೆ. ‘ಮಾತೃಗರ್ಭ ಸಂಭೂತರಲ್ಲದ’ ದೇವಾಂಶರು ಎಂದು. ಆಗಿನ ಇಟಲಿ, ಗ್ರೀಸ್, ರೋಮ್ ಪ್ರಾಂತಕ್ಕೆ, ಈ ಯೋಧರಿಗೆ ಇದು ಬಿರುದು. ಒಬ್ಬ ಬ್ರಾಹ್ಮಣನಿಗೂ ಈ ಭಾರತದಾಚೆಗಿನ ಪ್ರಾಂತಗಳ ನಾಯಕರಿಗೂ ಸೇನೆಗೂ ಎಂಥ ಸಂಬಂಧ ಇತ್ತು? ಎಂಬುದನ್ನು ಇಂದಿನ ಮೋದಿಯವರ ವಿಶ್ವವಿಖ್ಯಾತಿಯ ಸಂದರ್ಭದಲ್ಲಿ ಅರಿಯಲು ಸಾಧ್ಯ. ನಾನೊಂದು ಉಪನ್ಯಾಸದಲ್ಲಿ ಹೇಳಿದೆ- ‘ಭಾರತ ದಲ್ಲಿನ ದೇಶದ್ರೋಹಿಗಳು ಕೈಕೊಟ್ಟರೂ ಭಾರತದಾಚೆಗಿನ ಎನ್ಆರ್ಐ ಖ್ಯಾತಿಯ ಭಾರತೀಯರೂ, ಇಸ್ರೇಲ್, ರಷ್ಯಾ, ಹಿಂದೂ ಚೀನಾ, ಜಪಾನ್, ಯುರೋಪ್ ಕೊನೆಗೆ ಅರಬ್ಬ ರಾಷ್ಟ್ರಗಳು ನಮ್ಮ ಸಹಾಯಕ್ಕೆ ನಿಲ್ಲುತ್ತವೆ’ ಅಂತ. ಮೋದಿ, ಭಾರತ ಬಲವರ್ಧನೆ ಮಾಡುತ್ತಿರುವ ರೀತಿ ಇದು. ಮೋದಿಯವರಲ್ಲಿ ಬ್ರಾಹ್ಮ + ಕ್ಷಾತ್ರ ಎರಡೂ ಇರುತ್ತ ವಸಿಷ್ಠರನ್ನು ಹೋಲುತ್ತಾರೆ. ‘ಏಷ ಬ್ರಹ್ಮವಿದಾಂ ಶ್ರೇಷ್ಠ ತಥಾ ಕ್ಷತ್ರ ವಿದಾಂ ಅಪಿ’ ಎಂದು ಶ್ರೀರಾಮಾಯಣದ ವಸಿಷ್ಠವರ್ಣನೆ(ಬಾಲಕಾಂಡ) ನೋಡಿ.
ಅಂದಿನ ಬ್ರಾಹ್ಮಣರು ಹಾಗಿದ್ದರು. ಈಗಿನ ಮಠಪತಿಗಳಂತೆ Men of Property ಇರಲಿಲ್ಲ (ಈ ಪದ ಸಮುಚ್ಚಯ John Galsworthy ಮಹಾಶಯನ ಒಂದು ಕಾದಂಬರಿಯ ಹೆಸರು). ಹೊಟ್ಟೆ ಬೆಳೆಸುತ್ತ ಆಸ್ತಿ ಕೂಡಿಡುತ್ತ ‘ರಾಮಾಯ ಸ್ವಸ್ತಿ ರಾವಣಾಯ ಸ್ವಸ್ತಿ’ ಎನ್ನುತ್ತ ಮಾರೀಚ ನ್ಯಾಯದಲ್ಲಿರದೆ, ನಿಜ, ಸತ್ಯಪರ, ನ್ಯಾಯಪರ, ದೇಶಭಕ್ತರ ಆ ಸಾಲಿನಲ್ಲಿ ಅಗಸ್ಱ, ಕಣ್ವ, ಜಮದಗ್ನಿ, ಪರಶುರಾಮ, ದಧೀಚಿ, ಆಂಗೀರಸ, ಭಾರದ್ವಾಜ, ಗೌತಮ, ಆ ಮೇಲಣ ವಿಶ್ವಾ ಮಿತ್ರ, ಮೊದಲಾದವವರು ಇದ್ದೇ, ಆಗಿನ ದುಷ್ಟ ಕ್ಷತ್ರಿಯರು ನಾಶವಾಗಿ, ರಾಷ್ಟ್ರ ಉದ್ಧಾರ ವಾಯ್ತು. ಇದೆಲ್ಲ ನೀವು ಓದದ, ಓದಬಾರದೆಂದು ಜೆಎನ್ಯುು ಪ್ರಚುರಿಸಿ ಹಣೆಪಟ್ಟಿ ಹಚ್ಚಿದ ಋಗ್ವೇದದಲ್ಲಿದೆ. ವಿದ್ಯಾರಣ್ಯ, ಸಮರ್ಥ ರಾಮದಾಸರು ಇಲ್ಲದೆ ಹರಿಹರ ಬುಕ್ಕರು, ಶಿವಾಜಿಯಂಥವರು ಸಾಧ್ಯವಾಗುತ್ತಿದ್ದರೆ? ನಾವು ಚಿಂತಿಸುವುದಿಲ್ಲ.
ಕೆಲವು ವರ್ಷಗಳ ಹಿಂದೆ ನಾನೊಮ್ಮೆ ಶ್ರೀಕ್ಷೇತ್ರ ಗೋಕರ್ಣದಲ್ಲಿ ದೇವಾಲಯದ ವಿಶಾಲ ಚಂದ್ರಶಾಲೆಯಲ್ಲಿ ಶ್ರೀರಾಮಾಯಣ ಪ್ರವಚನ ಮಾಡುತ್ತಿದ್ದೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಅಲ್ಲಿಗೆ ವಿದೇಶಿಯರು ವಿಹಾರಕ್ಕಾಗಿ ಬರುತ್ತಿದ್ದು, ದೇವಾಲಯ ಪ್ರದಕ್ಷಿಣೆ ಮಾಡುತ್ತ ನನ್ನತ್ತ ನೋಡುತ್ತ, ಅಲ್ಲಿ ನಿಲ್ಲುತ್ತ ಹೋಗುತ್ತಿದ್ದರು. ಒಂದು ದಿನ ಇಟಲಿಯ ಒಬ್ಬ ಎತ್ತರದಾಳು, ಮಧ್ಯವಯಸ್ಸು ಸಮೀಪದ ದೃಢಕಾಯ ಸುಂದರಾಂಗ ವ್ಯಕ್ತಿ, ಬಲು ಹೊತ್ತು ಆಲಿಸುತ್ತ ನಿಂತ. ಆಮೇಲೆ ಸಭೆಯಲ್ಲಿ ಇತರರೊಡನೆ ಕುಳಿತ. ನೀಲಿ ಚಡ್ಡಿ ಧರಿಸಿ, ತೆಳು ಬನಿಯನ್ ಹಾಕಿಕೊಂಡಿದ್ದ ಅವನನ್ನು ಸಭೆಯಲ್ಲಿ ಎಲ್ಲರೂ ನೋಡಿದರು. ‘ಇವನಿಗೇನು ತಿಳಿಯುತ್ತದೆ?’ ಎಂದು ನಾನು ಉದಾಸೀನನಾಗಿಯೂ, ಆಗ ಸ್ವಲ್ಪ ವಿಚಲಿತನಾದೆ. ಪ್ರವಚನ ಮುಗಿದ ಮೇಲೆ ಅವನು ವೇದಿಕೆಗೆ ಬಂದು ಕಾಲು ಮುಟ್ಟಿ ನನಗೆ ನಮಸ್ಕಾರ ಮಾಡಿದ. ನಾನು ಕೇಳಿದೆ-‘ನಿನಗೇನು ತಿಳಿಯಿತು?’ ಅಂತ. ಅವನೆಂದ-‘ನೀವು ಓದುತ್ತಿದ್ದ ಮೂಲ ಶ್ಲೋಕಗಳು, ರಾಗ, ಸಂಸ್ಕೃತದ ಸಿಹಿ, ಅದರ ಓಟ ನನ್ನನ್ನು ಸೆಳೆದವು! ನಾನೂ ನಿಮ್ಮವನಲ್ಲವೇ? ಅಂತ’. ನನಗೆ ಅಚ್ಚರಿ! ‘ನೀನು ಹೇಗೆ ನನ್ನವ’ ಅಂತ ಬಾಯಿಬಿಟ್ಟು ಕೇಳಿ ಅಪಮಾನಿಸಲು ಮನಸ್ಸು ಬರಲಿಲ್ಲ! ಇದು ಅವನಿಗೆ ತಿಳಿಯಿತೆಂದು ಕಾಣುತ್ತೆ-ಅವನೆಂದ, ‘ಯಯಾತಿಯ ಮಕ್ಕಳಲ್ಲಿ ಒಬ್ಬ ಬಂದು ನಮ್ಮ ಸಂಸ್ಕೃತಿಯನ್ನು ರೂಪಿಸಲಿಲ್ಲವೆ?’ ನಾನು ಚಕಿತನಾಗಿ, ಅವನನ್ನು ದಿಟ್ಟಿಸಿ ನೋಡಿದೆ. ಇವನು ಓದಿಕೊಂಡವನು, ಬರೀ ಟೂರಿಸ್ಟನಲ್ಲ ಅಂತ ತಿಳಿದಾಗ, ಮನಸ್ಸು ಎಲ್ಲೋ ಹೋಯ್ತು.
ಯಯಾತಿಗೆ ಅನು, ಪುರು, ದ್ರುಹ್ಯ, ಯದು, ತುರು (ತುರ್ವಸು) ಎಂಬವರಲ್ಲಿ, ಪುರುವಂಶ ಇಲ್ಲುಳಿಯಿತು, ‘ಅನು’ ಕಡೆಯವರು ಪಶ್ಚಿಮಕ್ಕೆ ಹೋಗಿ ‘ಅಯೋನಿಯ’ರಾದರು. ‘ತುರು’ ಕಡೆಯವರು ತುರುಷ್ಯರಾಗಿ, ಟರ್ಕಿ ಕಡೆ ನೆಲೆಸಿದರು. ದ್ರುಹ್ಯ ಕಡೆಯವರು ಭೂಮಧ್ಯ ಸಮುದ್ರದಂಚಿನ druids ಆದರು. ಯದುವಂಶದ ಯಾದವರು- ಗಂಗಾತೀರ, ಗುರ್ಜರ, ಆಂಧ್ರ, ಕರ್ನಾಟಕದ ಕಡೆ ಬಂದರು. ಇದು ಮಹಾಭಾರತ, ಪುರಾಣಗಳ ವಿವರಣೆ!
ಈ ಇಟಲಿಯ ವ್ಯಕ್ತಿ ಇದನ್ನೆಲ್ಲ ತಿಳಿದಿದ್ದ! ನಾನು ಅವನಿಗೆ ‘ಹೌದು, ನೀನೂ ನಿನ್ನವರೂ ಮೂಲ ಭಾರತೀಯರೇ’ ಎಂದಾಗ ಅವನ ಕಣ್ಣಂಚಲ್ಲಿ ನೀರು. ನನ್ನ ಕಾಲು ಮುಟ್ಟಿ ನಮಸ್ಕರಿಸಿದ. ‘ಏಕೆ’ ಎಂದೆ. ಅವನೆಂದ-‘ನೀವು ನನ್ನನ್ನು ನಿಮ್ಮವರೆಂದು ಒಪ್ಪಿದ್ದಕ್ಕೆ’ ಅಂತ. ಗೋಕರ್ಣಕ್ಕೆ ಬರುವ ಇಸ್ರೇಲಿಯರು, ಜರ್ಮನರು, ಸ್ಪಾನಿಯನ್ನರು, ನಾರ್ವೆ, ಸ್ವೀಡನ್, ಫ್ರಾನ್ಸ್ ಮೊದಲಾದ ಅನೇಕರನ್ನು ನಾನು ಕಂಡಿದ್ದೇನೆ. ಒಬ್ಬ ಜರ್ಮನನಂತೂ, (ದಿ) ಯೋಗಿರಾಜ ಬಿಕೆಎಸ್ ಐಯ್ಯಂಗಾರರ ಶಿಷ್ಯ. ನನ್ನಲ್ಲಿ ಯೋಗ ಕಲಿಯಲು ಬಯಸಿದ. ನಾನೆಂದೆ-‘ಇದು ವೇದೋಕ್ತ ಯೋಗ, ಜೈನ, ಬೌದ್ಧಾದಿಗಳದ್ದಲ್ಲ. ಪಂಚಕೋಶವಿದ್ಯೆ, ಸಪ್ತವ್ಯಾಹುತಿ ಇತ್ಯಾದಿಗಳನ್ನು ಒಳಗೊಂಡ ಪಾಸಿಟಿವ್ ಯೋಗ’ ಎಂದಾಗ, ಅವನು ಸಂಗಡಿಗ 25 ಜನರನ್ನು ಕರೆತರುತ್ತೇವೆ, ಉಪದೇಶ ಕೊಡಿ, ಎಂದು ಕೇಳಿದಾಗ ನಾನು ಹಿಂಜರಿದೆ. ಇರಲಿ. ಇದನ್ನು ಹೇಳುತ್ತಿರುವುದು ಏಕೆಂದರೆ, ಇಂದಿನ ಇಟಲಿಯ ಶೋಚನೀಯ ಸ್ಥಿತಿಯ ಅಂತರ ತಿಳಿಸಲು. ಯೇಸುವಿನ ಜೇರುಸಲೆಂಗೂ, ಇಟಲಿಯ ರೋಂಗೂ, ಕ್ಯಾಥೋಲಿಕರ ಜಗದಾಕ್ರಮಣ, ಮತಾಂತರ ಹಾವಳಿಯ ಹಿಂಸಾವಿಹಾರಕ್ಕೂ ಏನು ಸಂಬಂಧ? ಚಿಂತಿಸಿ. ರೋಂನಲ್ಲಿದ್ದುದು ಸೂರ್ಯ ದೇವಾಲಯ, ‘ಮಿತ್ರ’ ಪೂಜಾಸ್ಥಾನ, ಒಂದು ಗುಡ್ಡದ ಮೇಲೆ. ಅಲ್ಲಿ ಏಸು ಬಂದುದು ಹೇಗೆ? Edward Carpenter ಮಹಾಶಯ ಈ ಬಗ್ಗೆ ನೀಡಿರುವ ವಿವರಣೆ ಹೀಗಿದೆ-‘ ‘ಏಸು’ ಎಂಬವನೇ ಮಿತ್ರ, ಸೂರ್ಯ. ಅವನ ಹನ್ನೆರಡು ರಾಶಿಗಳೇ ಹನ್ನೆರಡು ಶಿಷ್ಯರು. Judan ಎಂಬ ಹನ್ನೆರಡನೆಯವನೇ ಏಸುವನ್ನು ಶತ್ರುಗಳಿಗೆ ತೋರಿಸಿ ಕೊಟ್ಟ ಒಳಶತ್ರು. ಡಿಸೆಂಬರ್ನಲ್ಲಿ ತಣ್ಣಗಾಗುವ ಸೂರ್ಯನಿಗೆ ಮರುಜನ್ಮ ಉಂಟಾಗಿ, ವಸಂತದಲ್ಲಿ ಚಿಮ್ಮುವುದೇ Revolution. ಏಸು ಜನನ ಕನ್ಯಾರಾಶಿಯಲ್ಲಿ, "Born of virgen' ಎಂಬುದು ಇದು- ಇತ್ಯಾದಿ. ನನ್ನ ರೀಸರ್ಚ್ ಕಾಲದಲ್ಲಿ ಓದಿದ ಪುಸ್ತಕ (ಮೈಸೂರು ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ). ಇದು ಸೂರ್ಯಾಪಹಾರ ಚರಿತ್ರೆ! ರಾಹು ಹಿಡಿದ ಕಾಲ.
ಇಟಲಿಯ ರೋಮಿನ ಈ ರ್ಚಚಿನ ಪಾದ್ರಿಗಳಿಗೆ ಜಗತ್ತನ್ನೇ ಗೆದ್ದು ಆಳುವ ಆಕ್ರಮಣ ಬುದ್ಧಿ ಬಂದದ್ದು ಭಾರತದಿಂದ ಅಥವಾ ಪುರಾಣದಿಂದ, ಸೂರ್ಯನಿಂದ ಖಂಡಿತ ಅಲ್ಲ! ಅದು ರೋಮ್ ದೊರೆಗಳ ಮೂಲದ್ದು! ರೋಮನ್ನರು ಇಟಲಿಯ, ಭಾರತಮೂಲ ಸಂಸ್ಕೃತಿಯ ನಾಶಕರಾಗಿ ಅಲ್ಲಿ, ಜಗತ್ತಿನಲ್ಲಿ ಅಶಾಂತಿ, ಹಿಂಸೆ, ಆಕ್ರಮಣಗಳಿಗೆ ಕಾರಣರಾದರು. ಇದರ ಇನ್ನೊಂದು ಮುಖ ನೋಡಿ. ಭಾರತ ಸ್ವಲ್ಪ ಅನೈಕ್ಯತೆಯ ದೆಸೆಯಿಂದ ಸ್ವಂತಿಕೆ ಕಳಕೊಂಡಾಗ, ಬ್ರಿಟಿಷರು, ಪೋರ್ತಗೀಸರು, ಫ್ರೆಂಚ್, ಡಚ್ ಮೊದಲಾದವರು ಇಲ್ಲಿ ಬಂದು ಲೂಟಿ ಮಾಡಿದರು. ಈ 200 ವರ್ಷ ಕರಾಳ ಕಾಲದಲ್ಲಿ ಆಗ ರಷ್ಯಾ ಆಕ್ರಮಿಸಲಿಲ್ಲ. ಅದು ಆಕ್ರಮಿಸಿದ್ದು ಪರೋಕ್ಷವಾಗಿ ನೆಹ್ರೂ, ಇಂದಿರಾ ಕಾಲದಲ್ಲಿ! ಕಾಮ್ರೇಡರು ಸಶಕ್ತರಾದದ್ದು ಆಗ. ಇತ್ತ ಚೀನಾ ಆಕ್ರಮಿಸಿ, ಮಾವೋವಾದ, ನಕ್ಸಲ್ವಾದಗಳಲ್ಲಿ ನಮ್ಮನ್ನು ನಲುಗಿಸಿತು, ಇನ್ನೂ ಬಾಧಿಸುತ್ತಿದೆ. ಈ ನಡುವೆ ಇಟಲಿಯ ಆಕ್ರಮಣ! ತಿಳಿಯಿತಲ್ಲ! ರಾಜೀವರ ಮೂಲಕ, ವ್ಯಾಟಿಕನ್, ಇಲ್ಲೊಬ್ಬರನ್ನು ನೆಟ್ಟು, ಪ್ಲಾಂಟ್ ಮಾಡಿ, ಇನ್ನೂವರೆಗೆ ಭಾರತವನ್ನು ಹಿಡಿದು ಹಿಂಸಿಸುತ್ತಿದೆ. ನತದೃಷ್ಟ ಕಾಂಗ್ರೆಸ್ಸಿಗರು ಇದರ ಹಸ್ತಕರು! ಎಲ್ಲಿಯವರೆಗೆ? ಹಾರೋಬೆಲೆ ಎಂಬ ಹಳ್ಳಿಯಲ್ಲಿ ಏಸು ವಿಗ್ರಹ ಸ್ಥಾಪನೆಗೆ ನಾಯಕರು ಯತ್ನಿಸುವ ತನಕ!
ಒಬ್ಬರಿಗಾದರೂ ಸುಭಾಷ್, ಸಾವರ್ಕರ್, ಶಿವಾಜಿ, ಹನುಮಾನ್, ಗಣಪತಿ ವಿಗ್ರಹ ಇಡಲು ಏಕೆ ಮನಸ್ಸು ಬರಲಿಲ್ಲ? ಉತ್ತರ: ಆ ಭಾರತ ಮನಸ್ಸನ್ನು ಇಟಲಿ ಹಿಡಿದಾಗಿತ್ತಲ್ಲ? ಮುಸ್ಸೋಲಿನಿ ಇಟಲಿಯವನಾಗಿ, ಹಿಟ್ಲರನೊಡನೆ ಸೇರಿ ವಿಶ್ವಯುದ್ಧ ಆದದ್ದಲ್ಲವೇ? ಅಲ್ಲಲ್ಲವೆ Double headed ಗೂಢಚರರು ಹುಟ್ಟಿ ರಷ್ಯಾಕ್ಕೂ, ಜರ್ಮನಿಗೂ, ಸಮಾಚಾರ ಕೊಡುತ್ತಿದ್ದುದು? ಆ ಪರಂಪರೆಗೆ ನಾವು ಬಲಿಯಾಗಬೇಕೆ? ಹಾಯ್! ಯಯಾತಿಯ ಸಂಬಂಧದ ‘ಅಯೋನಿ’ಯರೆಲ್ಲಿ? ಇಂದಿನವರೆಲ್ಲಿ? ವಸಿಷ್ಠರ ಸೇನೆಗೆ ನಿಂತ ಅಂದಿನ ಇಟಲಿಯರೆಲ್ಲಿ? ಇಂದು ಕರೊನಾಗೆ ತುತ್ತಾದ ಭೀಕರ ದೇಶಗಳಲ್ಲಿ ಎರಡನೇ ಸ್ಥಾನ ಪಡೆದ ಇಟಲಿಯೆಲ್ಲಿ? ಕಾಂಗ್ರೆಸ್ಸು ಇಟಲಿಯ ತೊತ್ತಾಗಬೇಕೇನಿರಯ್ಯ? ಅಪ್ಪಗಳಿರಾ? ಬುದ್ಧಿ, ತಲೆಯಲ್ಲಿರಬೇಕು! ಹಣದಲ್ಲಲ್ಲ, ಗುಲಾಮಿ ಚಪಲದಲ್ಲಲ್ಲ, ಒಬ್ಬ ವ್ಯಂಗ್ಯಚಿತ್ರಕಾರ ಬರೆದ-‘ಇಂದಿನ ಶೋಚನೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸಿನಲ್ಲಿ ಉಳಿದವರು ಇಬ್ಬರೇ-ತಾಯಿ+ಮಗ; ‘ಆಕಳ+ಕರು’ ಅಂತ! ಅದಕ್ಕೆ ಭಾಷ್ಯ ಈಗ ನಡೆದಿರುವ ಮಧ್ಯಪ್ರದೇಶದ ವರ್ತಮಾನ, ನಾಳೆ ನಡೆಯಲಿರುವ ಚೈನ್ ರಿಯಾಕ್ಷನ್ ಮಹಾರಾಷ್ಟ್ರ, ರಾಜಸ್ಥಾನ ಇತ್ಯಾದಿಗಳಲ್ಲಿ. ಇಲ್ಲಿ ಯಾರು ಅಧ್ಯಕ್ಷರಾದರೇನು? ವಿಪಕ್ಷ ನಾಯಕರಾದರೇನು? ಮೂಲಬಲ ಹೋದ ರಾವಣನ ಸ್ಥಿತಿ. ನನಗೆ ಕಾಣುತ್ತಿದೆ. ಕಾರಣ? ಕಣ್ಣಿದೆ. ನಿಮಗೆ? ಹರಹರ ಮಹಾದೇವ!