

ಅಬ್ಬಾ! ಎಷ್ಟೊಂದು ಕಲ್ಲುಗಳು ಬೀಸಲ್ಪಟ್ಟವು? ಎಲ್ಲಿಂದ ತಂದರು? ತಂದವರು ಯಾರು? ಎಲ್ಲಿ ಬಚ್ಚಿಟ್ಟರು? ಕರೆಕೊಟ್ಟು ‘ಸಿದ್ಧರಾಗಿರಿ’ ಎಂದು ಆಜ್ಞೆಯಿತ್ತ, ‘ಸಿದ್ಧ’ಪುರುಷರು ಯಾರು, ಯಾರು? ಏಕೆಂದರೆ ಪ್ರತಿಭಟನೆಯ ನೆಪದಲ್ಲಿ ನಡೆಯುತ್ತಿರುವ ಹಿಂಸಾಚಾರ, ದಾಂಧಲೆ, ಲೂಟಿ, ಆಸ್ತಿಪಾಸ್ತಿನಾಶ, ಬಸ್ಸು, ಕಾರು, ಸ್ಕೂಟರ್ ಸುಡುವುದು-ಎಲ್ಲ ಒಂದೇ ಪ್ಯಾಟರ್ನ್! ಕಾಶ್ಮೀರದ ಕೆಲಕಾಲದ ಮುಂಚಿನ ಸ್ಥಿತಿ ನೆನಪಾಗುತ್ತಿದೆ. ಇಷ್ಟು ವ್ಯಾಪಕ ನಾಶಕೃತ್ಯ ಒಂದೇ ದಿನಕ್ಕೆ ಸ್ಪಾಂಟೆನಿಯಸ್ ಆಗಿ, ಅಪ್ರಚೋದಿತವಾಗಿ, ಪೂರ್ವಸಿದ್ಧತೆ ಇಲ್ಲದೆ ನಡೆಯಲು ಸಾಧ್ಯವೇ ಇಲ್ಲ. ಕಲ್ಲು ಹೊಡೆಯುವುದು ಅರಬ್ಬಿ ಸಂಸ್ಕೃತಿ; ಸೈತಾನನಿಗೆ ಹಜ್ ಯಾತ್ರೆಯ ಅಂಗವಾಗಿ ನಡೆಸಲ್ಪಡುವ, ಅದೃಶ್ಯಶಕ್ತಿಯ ಮೇಲೆ ಬೀಸುವ, ಒಂದು ಆ ಮತದ ಅಂಶ. ಪೂರ್ವದಲ್ಲಿ ಅದನ್ನು ಇಲ್ಲಿ ಮಾಡುತ್ತಿದ್ದವಳು ಶ್ರೀರಾಮಾಯಣದ ತಾಟಕೆ, ಆಮೇಲೆ ಅದೃಶ್ಯವಾಗಿ ಪೀಡಿಸುವ ಮಾರೀಚಸೇನೆ, ಇಂದ್ರಜಿತನ ಮಾಯಾಪ್ರಯೋಗ, ನಿಕುಂಭಿಲಾ ಬ್ಲಾ್ಯಕ್ ಮ್ಯಾಜಿಕ್! ಆ ಸೇನೆಯಲ್ಲಿ ‘ಸೂರ್ಯಶತ್ರು’ ಎಂಬವನೂ ಇದ್ದ ಅಂತ ರಾಮಾಯಣದಲ್ಲಿ. ಅಂದರೆ ಇವನು ಚಂದ್ರಮಿತ್ರ! ಸೂರ್ಯನ ಬೆಳಕನ್ನೇ ದ್ವೇಷಿಸುವವರು, ಬಿಸಿಲು ತಾಪ ತಾಳಲಾರದವರು, ರಾತ್ರಿ ಸಂಸ್ಕೃತಿಯವರು. ‘ರಾತ್ರಿಂಚರರು, ನಿಶಾಚರರು’ ಎಂದು ಇವರನ್ನು ನಮ್ಮ ಸಂಸ್ಕೃತಿ ಮುದ್ರಿಸಿ, ಗುರುತಿಸುತ್ತದೆ.
ಚಂದ್ರನೊಡನೆ ನಕ್ಷತ್ರವೇ ಸೇರಿದರೂ ಅದು ಸೂರ್ಯ ಆಗುವುದಿಲ್ಲ. ಭಾರತಕ್ಕೆ ಬೇಕು ಬೆಳಕು, ಸ್ವಯಂಪ್ರಕಾಶದ ಭಾನುವಿನ ಬೆಳಕು. ಪ್ರತಿಫಲನವೆಂಬ ಜಿಞಜಿಠಿಚಠಿಜಿಡಛಿ, ್ಟfಛ್ಚಿಠಿಜಿಡಛಿ, ಅಂದರೆ ಸೆಕೆಂಡ್ಹ್ಯಾಂಡ್ ಬೆಳಕು ಇಲ್ಲಿ ನಡೆಯುವುದಿಲ್ಲ. ನಾನು ಹೆಚ್ಚು ವಿವರಿಸುವಂತಿಲ್ಲ, ನೀವೇ ಅರ್ಥ ಮಾಡಿಕೊಳ್ಳಬೇಕು.
ಈಗ ಈ ಚಂದ್ರಸಂಸ್ಕೃತಿಯ ಅಂದರೆ ನೆರಳಲ್ಲಿ ಹುಟ್ಟಿದ ರಾಹು, ಯಮ, ಶನಿ, ಗುಳಿಕ ಇಂಥವರ ಈಗಿನ ಸಂತತಿಯ ಪ್ರತಿಭಟನೆಯ ಮುಖವಾಡದ ‘ಆಜಾದೀ’ ಫಲಕ ಹಿಡಿದವರ ಕೆಲವು ಆಣಿಮುತ್ತುಗಳನ್ನೂ, ಅವುಗಳ ಒಳಧ್ವನಿಗಳನ್ನೂ, ಉಬ್ಬಸವನ್ನೂ ಹೀಗೆ ಚಿತ್ರಿಸುತ್ತೇನೆ. ತಿಳಿಯಿತೋ ಹೇಗೆಂದು ನೋಡಿಕೊಳ್ಳಿ.
ಇಲ್ಲಿ ಒಬ್ಬ ಮಾಜಿ! ಅಸಂಬದ್ಧ, ಒರಟು ಮಾತುಗಳ ಬಾಯಿಬಡುಕ. ಅವರ ಭಾಷಣದ ಒಳಚಿತ್ರ: ‘ನಮ್ಮದು ಪ್ರಜಾಪ್ರಭುತ್ವ. ನಡುಬೀದಿಗಿಳಿಯುವುದು ನಮ್ಮ ಹಕ್ಕು. ಸಂಸತ್ತಿನ ನಿರ್ಣಯವನ್ನು ಧಿಕ್ಕರಿಸುವುದು ಪ್ರಜಾಪ್ರಭುತ್ವ. ನಾವು ಚಳವಳಿ ಮಾಡುವಾಗ ಏನೂ ಆಗುತ್ತದೆ. ಪೊಲೀಸ್ ಠಾಣೆ ಸುಡುತ್ತದೆ. ಪೊಲೀಸರಿಗೇ ಕಲ್ಲು ಏಟು ಬೀಳುತ್ತದೆ. ರಸ್ತೆ, ಸುಟ್ಟ ಕಾರು, ಬಸ್ಸು, ಸ್ಕೂಟರುಗಳಿಂದ ತುಂಬಿರುತ್ತದೆ. ಇದೆಲ್ಲ ಸ್ವಾತಂತ್ರ್ಯ ಲಕ್ಷಣ.
ಆದರೆ ಪೊಲೀಸರು ನಿಯಂತ್ರಿಸುವುದೇ ತಪ್ಪು ಏಕೆ? ನಾವು ಈಗ ಅಧಿಕಾರದಲ್ಲಿಲ್ಲ. ಇದ್ದಿದ್ದರೆ ಪೊಲೀಸ್ಪ್ರಯೋಗ ಆಗ ಪ್ರಜಾಪ್ರಭುತ್ವದ ಲಕ್ಷಣ. ಆಗೊಂದು ನಿಯಮ ಈಗೊಂದು ಎಂಬುದು ಚಲನಾತ್ಮಕ ಪ್ರಜಾಪ್ರಭುತ್ವದಲ್ಲಿ ಸಲ್ಲುತ್ತದೆ. ಪೊಲೀಸರು ಗುಂಡು ಹಾರಿಸಿದ್ದು ತಪು್ಪ, ಸತ್ತವರು ಮೈನಾರಿಟಿಯವರು. ಅದು ಇಲ್ಲಿ ಪಾಯಿಂಟು. ಹಿಂದೂಗಳು ಸತ್ತಿದ್ದರೆ ಬೇರೆ ಮಾತು. ಸತ್ತವರು ಅಲ್ಪಸಂಖ್ಯಾತರು, ನಮ್ಮ ವೋಟುಬ್ಯಾಂಕು. ಮುಖ್ಯಮಂತ್ರಿ ಕೆಳಗಿಳಿಯಬೇಕು, ಅದೇ ನಮ್ಮ ಇರಾದೆ. ಈ ‘ಧಿಮಾಕ್ಕ್ರೆಸಿ’ ‘ಢಮಾಕ್ರಸಿ’ ಎಲ್ಲ ಹಿಂದುಳಿದವರ ಶ್ರೇಯಸ್ಸಿಗಾಗಿಯೇ ಬಂದದ್ದು.
ಚಳವಳಿ ಬೇರೆ, ಅದು ನಮ್ಮದು. ಹಿಂಸಾಚಾರ ನಮ್ಮದಲ್ಲ. ಅದನ್ನು ಭಾಜಪದವರೇ ಮಾಡಿಸಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಈಗ ಪೌರತ್ವ ಹಕ್ಕು ಎಂಬುದನ್ನು ನಿಯಂತ್ರಿಸಲು ಈ ಮೋದಿ ಯಾರು? ಷಾ ಯಾರು? ಇಷ್ಟು ದಿವಸ ಇಲ್ಲದ್ದು ಈಗ ಏಕೆ? ಭಾರತ ಎಂದೆಂದೂ ನಿರಾಶ್ರಿತರ ದೇಶ! ಆರ್ಯರು ಯಾರು? ಅವರು ಹೊರಗಿಂದ ಬಂದು ನೆಲೆಸಬಹುದಾದರೆ ಈ ರೋಹಿಂಗ್ಯಾ ಏಕೆ ಬೇಡ? ಅವರು ನಮ್ಮ ವೋಟುಬ್ಯಾಂಕು! ಅದನ್ನು ಕಸಿಯಲು ನೀವಾರು? ಇದು ಪ್ರಜಾಪ್ರಭುತ್ವವಿರೋಧಿ ಕೃತ್ಯ. ಮೋದಿ ಸರ್ಕಾರ ಆರ್ಥಿಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಈ ಅನ್ಯತ್ರದೃಷ್ಟಿ ಹೊರಳಿಸುವ, ಡೈವರಷನರಿ ತಂತ್ರ ಬಳಸುತ್ತಿದೆ’. ಇತ್ಯಾದಿ ಅಪದ್ಧಗಳು.
ಚಳವಳಿಗೆ ಕರೆಕೊಟ್ಟವರು ಸೋನಿಯಾ! ಟಿ.ವಿ. ತೋರಿಸಿತ್ತು. ಮೂವರು ಕಾಂಗ್ರೆಸ್ಸಿಗರು ಹಿಂಸಾಚಾರಕ್ಕೆ ಪ್ರಚೋದಿಸಿದರು. ಒಬ್ಬರಂತೂ ನಮ್ಮ ಕರ್ನಾಟಕದವರೇ! ಇತರರು, ‘ಪೊಲೀಸರು 15,000 ಇದ್ದರೂ, ನಾವು ಐದು ಲಕ್ಷ ಇದ್ದೇವೆ’ ಎಂದೇ ಬೆದರಿಸಿದರು ಮತ್ತೊಬ್ಬರು. ರಾಹುಲರ ಬಾಯಿಗೆ ಬೀಗವೇ ಇಲ್ಲ.
ಇಲ್ಲಿನ ಕಾರಣವೇ ಬೇರೆ! ಕಳ್ಳಹಣ ಕಳಕೊಂಡವರು, ವೋಟುಬ್ಯಾಂಕು ಕ್ಷೀಣಿಸುತ್ತಿರುವವರು, ಪಟ್ಟಭದ್ರರು, ಇಲ್ಲಿನ ನೈಸರ್ಗಿಕ ಸಂಪತ್ತನ್ನೆಲ್ಲ ಕೊಳ್ಳೆ ಹೊಡೆದು, ಲಾಭವನ್ನು ವಿದೇಶಗಳಿಗೆ ಸಾಗಿಸಿದ ದ್ರೋಹಿಗಳು, ಮತಾಂತರ ಇನ್ನೂ ನಡೆಯಲಾರದೆಂದು ಹತಾಶೆಯ ಗ್ರಹಣದಲ್ಲಿರುವವರು, ಇನ್ನೂ ಜೈಲು ಬಾಗಿಲಲ್ಲಿ ಕ್ಯೂ ನಿಂತಿರುವವರು, ಎಂದೆಂದಿನ ಕೋಮುದಳ್ಳುರಿಯಿಂದ ಲಾಭ ಪಡೆದು ಆ ಚಾಳಿ ಬಿಡದವರು ಎಲ್ಲರೂ ಒಗ್ಗೂಡಿದ್ದಾರೆ.
ಅವರಿಗೆ ಮೋದಿ ಸರ್ಕಾರವನ್ನು ಕೆಳಗಿಳಿಸಬೇಕಾಗಿದೆ, ತುರ್ತ. ಬಂಗಾಳೀ ಬೊಂಬೆಗೆ ಶಾರದಾ ಚಿಟ್ಫಂಡ್, ಇತರ ಉರುಲುಗಳಿವೆ. ಇತರರಿಗೆ ಸಹ. ಇ.ಡಿ. ಕುಣಿಕೆ, ಎಸ್ಐಟಿ, ಐಟಿ ಇನ್ನಿತರ ಖಟ್ಲೆಗಳನ್ನು ಎದುರಿಸುತ್ತಿರುವವರು ತಪ್ಪಿಸಿಕೊಳ್ಳಲು ಒಂದೇ ದಾರಿ. ಮೋದಿ ಕೆಳಗಿಳಿಯಬೇಕು. ಅಥವಾ... ಬೇಡ ಬಿಡಿ. ಅವರನ್ನು ಕೊಲ್ಲುವ ತಂತ್ರವೂ ಬಯಲಾಯ್ತು.
ತೋಳ-ಕುರಿಮರಿ ಕಥೆಯಂತೆ ಇದು ಇದೆ. ಒಂದು ತೋಳಕ್ಕೆ ಕುರಿಮರಿ ಕಾಣಿಸಿ ತಿನ್ನಬೇಕೆಂಬ ಆಸೆಯಾಯ್ತು. ಸರಕ್ಕನೆ ತಿನ್ನುವ ಬದಲು ವಾಗ್ವಾದಕ್ಕೆ ಇಳಿಯಿತು. ‘ಎಲಾ ಕುರಿಮರಿ! ನೀನು ಕುಡಿದ ಎಂಜಲು ನೀರನ್ನ ನಾನು ಕುಡಿಯಬೇಕೇ?’ ಎಂದು ಗದರಿತು. ಕುರಿಮರಿ ಹೇಳಿತು-‘ಅಯ್ಯಾ, ನೀರು ನಿನ್ನ ಕಡೆಯಿಂದಲೇ ನನ್ನ ಕಡೆ ಬರುತ್ತಿದೆ. ನಿನ್ನ ಎಂಜಲನ್ನಲ್ಲವೇ ನಾನು ಕುಡಿಯುತ್ತಿರುವುದು?’ ಅಂತ. ತೋಳಕ್ಕೆ, ವಾದಕ್ಕೆ ಅಂಶ ಉಳಿಯಲಿಲ್ಲ. ‘ನಿನ್ನ ಅಜ್ಜ ನನ್ನನ್ನು ಹಿಂದೆ ಹೀಯಾಳಿಸಿದನಲ್ಲ? ಹೋದ ವರ್ಷ’ ಎಂದಾಗ ಕುರಿಮರಿ ಹೇಳಿತು-‘ನನ್ನ ಅಜ್ಜ ಸತ್ತು ಹತ್ತು ವರ್ಷ ಆಯ್ತು. ಯಾರನ್ನು ಬೈಯ್ಯುತ್ತಿರುವೆ?’ ಅಂತ.
ತೋಳ: ‘ನೀನೋ ನಿಮ್ಮಪ್ಪನೋ, ಅಜ್ಜನೋ, ಯಾರಾದರಾಗಲಿ, ನನ್ನನ್ನು ಬೈದರೋ, ಇಲ್ಲವೋ?’ ಎನ್ನುತ್ತ ಆ ಮರಿಯನ್ನು ತಿಂದು ಬಿಟ್ಟಿತು. ಆಗೆಲ್ಲ, ಕುರಿಗಳು ಸಾತ್ವಿಕವಾಗಿದ್ದವು. ಬಾಯಿಬಡುಕವಾಗಿಯೋ, ಅಧಿಕಾರ ಲಾಲಸೆಯಲ್ಲೋ, ದಬಾವಣೆಯ ಚಾಳಿಯಲ್ಲೋ ಇರದ ಕಾಲ! ತೋಳ ಹಾಗಲ್ಲ? ಈಗಿನ, ಕುರಿಗಳೇ ತೋಳಗಳಾಗಿವೆ! ಕಲಿಗಾಲ! ಆದರೂ ತತ್ತ್ವ ನಿಮಗೆ ತಿಳಿಯಬೇಕು.
ಯಾವುದೇ ಸಮರ್ಥ, ಸಮಗ್ರ, ಸ್ವಾಭಿಮಾನೀ ರಾಷ್ಟ್ರದಲ್ಲಿ ಆ ದೇಶ ಜನಿತ, ಸ್ವದೇಶೀ ಜನರಿಗೇ ಎಲ್ಲಾ ಹಕ್ಕೂ, ಸವಲತ್ತುಗಳೂ ಇರಬೇಕು. ಅನಧಿಕೃವಾಗಿ ಹೊರಗಿಂದ ಬಂದವರು, ಆಕ್ರಮಣಕಾರರೋ, ನುಸುಳುಕೋರರೋ, ವಿಧ್ವಂಸನ ಏಜೆಂಟರಾಗಿ ಒಳ ತೂರಿಸಲ್ಪಟ್ಟವರೋ-ಯಾರಾದರೂ, ಇಲ್ಲಿ ಸಲ್ಲುವವರಲ್ಲ. ಅವರೂ ಒಂದೇ, ದೇಶಿಯರೂ ಒಂದೇ ಎಂದು ನೆಹ್ರೂಕಾಲದಿಂದ ಕಾಂಗ್ರೆಸ್ಸು ವೋಟ್ಬ್ಯಾಂಕ್ ಬೆಳೆಸಿ, ಭದ್ರ ಮಾಡಿಕೊಳ್ಳಲು ಹವಣಿಸಿಯೇ ಇಲ್ಲಿ ಪರಿಸ್ಥಿತಿ ಹದಗೆಟ್ಟು, ದೇಶೀಯರಿಗೆ ಹಿಂಸೆ, ದಮನ, ದಬ್ಬಾಳಿಕೆಗಳಲ್ಲಿ, ಸವಲತ್ತುಗಳೆಲ್ಲ ಅನ್ಯರ ಪಾಲಾಗಿ, ವಿದೇಶಿ ಶಕ್ತಿಗಳು ಇಲ್ಲಿ ‘ತುಕ್ಡೇ ತುಕ್ಡೇ’ ಗ್ಯಾಂಗ್ ಆಗಿ ರಾಷ್ಟ್ರೀಯತೆಗೆ ಸವಾಲಾಗಿರುವುದು ಅನುಭವದಲ್ಲಿದೆ.
ಸರಿ ಮಾಡುವುದು ತಪ್ಪೆ? ರಾಷ್ಟ್ರೀಯ ಪೌರರ ರಿಜಿಸ್ಟರ್ ಜಾರಿಗೆ ಬಂದರೆ, ವಿದೇಶಿಯರನ್ನು ಗುರುತಿಸಲು ಸಾಧ್ಯ. ಎಲ್ಲಿಂದ ಬಂದರೋ ಅಲ್ಲಿಗೆ ಹೋಗಬೇಕು. ಹೋಗಲಾರರಾದರೆ ಅವರಿಗೆ ಪೌರತ್ವ ಹಕ್ಕು, ವೋಟಿಂಗ್ ಪವರ್ ಕಳೆಯುತ್ತದೆ. ಅದು ರಾಷ್ಟ್ರವಿರೋಧಿ ಪಕ್ಷಗಳಿಗೆ ಬೇಡ. ಅಲ್ಲಿ ಕಾಂಗ್ರೆಸ್ಸು ಅಗ್ರಸ್ಥಾನದಲ್ಲಿರುತ್ತ ಈಗ ಹಿಂಸಾಚಾರಕ್ಕೂ ಪ್ರಚೋದನೆ ಇತ್ತಿದೆ.
ಇಲ್ಲಿನ ಕರ್ನಾಟಕ ಮಾಜಿಗೆ ಹೇಳುತ್ತೇನೆ- ‘ಮಂಗಳೂರಲ್ಲಿ ಹಿಂಸೆಯ ನಿಯಂತ್ರಣಕ್ಕೆ ಪೊಲೀಸರು ಹೆಣಗಿದರು. ಅವರನ್ನೂ ಕಲ್ಲು ಬೀಸಿ ಗಾಯಗೊಳಿಸಿದವರು ನಿಮ್ಮವರೇ! ಅಲ್ಲಿ ಗುಂಡು ತಾಗಿ ಸತ್ತವರೂ ನಿಮ್ಮವರೇ ಇದ್ದಾರು. ಅವರಿಗೆ ಸರ್ಕಾರ ಏಕೆ ಪರಿಹಾರ ಕೊಡಬೇಕು? ಸಾಯಿಸುವವರು ನೀವು, ಪರಿಹಾರ ಸರ್ಕಾರದ್ದೇ? ಇದೇ ತೋಳ ಕುರಿಮರಿ ನ್ಯಾಯ! ಹೇಳುತ್ತೀರಿ-ನನ್ನ ಆಡಳಿತದಲ್ಲಿ ಗೋಲಿಬಾರ್ ಆಗಿಲ್ಲ ಅಂತ. ನಿಮ್ಮ ಆಡಳಿತದಲ್ಲೇ ರಾಜಕೀಯ ಕೊಲೆಗಳು ಎಷ್ಟಾದವು? ಗೋಲಿ ಇಲ್ಲದೆಯೇ ಸತ್ತರೆ ಲೆಕ್ಕಕ್ಕೆ ಬರುವುದಿಲ್ಲವೋ? ರಾಜ್ಯ ಸಂಪತ್ತು ಎಷ್ಟು ಲೂಟಿಯಾಯ್ತು? ಲೆಕ್ಕ ಕೇಂದ್ರಕ್ಕೆ ಗೊತ್ತು. ನಿಮಗೆ ಕಾಲ ಬರುತ್ತಿದೆ, ತಡೆಯಿರಿ’ಎಂತ.
ನಮ್ಮವರು ಹೊರದೇಶಗಳಲ್ಲಿ ದಮನ, ಶೋಷಣೆಗೊಳಗಾಗಿರುವವರನ್ನು ಮರಳಿ ಇಲ್ಲಿ ಸ್ಥಾಪಿಸುವುದು ತಪ್ಪೆ? ಇದೇನು ಫಾರೂಕ್, ಓಮರ್ರಂತೆ ಮಾತನಾಡುತ್ತಿದ್ದೀರಿ? ನಮ್ಮವರು ನಮ್ಮವರೇ! ಹೇಗೆ ಗುರುತಿಸುತ್ತೀರಿ? ಅಂತ ಕೇಳಿದರೆ ಅದಕ್ಕಾಗಿ ಎನ್ಆರ್ಸಿ ತರುತ್ತಿರುವುದು. ಅಡ್ಡಬರುವುದು ರಾಷ್ಟ್ರವಿರೋಧಿ ಕೃತ್ಯ. ಭಾರತಕ್ಕೇ ಬೆಂಕಿ ಹಚ್ಚುವುದು ಡೆಮಾಕ್ರಸಿ ಅಲ್ಲ. ನೀವು ಮುಟ್ಟಿದ್ದೆಲ್ಲ ಮಣ್ಣು ಅಂತ ನಿಮ್ಮ ಆಡಳಿತ ತೋರಿಸಿಯಾಗಿದೆ. ಜನ ಇನ್ನೂ ಯಾಮಾರುವುದಿಲ್ಲ. ಅದು ನಿಮಗೂ ಗೊತ್ತು. ಅದಕ್ಕೆ ಈ ಬೆಂಕಿ ಹುಚ್ಚಾಟ!
ಬಂಗಾಳ ಒಂದು ಕಾಲದಲ್ಲಿ ರಾಷ್ಟ್ರಾಭಿಮಾನದ ವರ್ಧಕ, ಮಹಾಪುರುಷರ ನಾಡು. ಬಂಕಿಂ ಚಂದ್ರ, ಅರವಿಂದ, ವಿವೇಕಾನಂದ, ಸುಭಾಷರಂತಹ ದೇಶಾಭಿಮಾನಿಗಳ ಪ್ರಾಂತ್ಯ, ಒಡೆದು ವಂಗ-ಭಂಗ ಆದ ಮೇಲೂ, ಇನ್ನೂ ಇತ್ತ ಉಳಿದ ಪಶ್ಚಿಮ ಬಂಗಾಳಕ್ಕೆ ಈಗ ಬುದ್ಧಿ ಹಿಡಿತದಲ್ಲಿರದ ಒಬ್ಬರು ಮುಖ್ಯಮಂತ್ರಿಯಾಗಬೇಕೆ? ವಿದೇಶೀ ವೋಟುಗಳಿಂದ? ಎಂಥ ವಿಪರ್ಯಾಸ? ‘ಭಾರತ ಭಾರತೀಯರಿಗಾಗಿಯೇ ಇರಬೇಕೋ, ಬೇಡವೋ?’ ಎಂಬ ಪ್ರಶ್ನೆಗೆ ‘ಇಲ್ಲ. ಎಲ್ಡಬ್ಲುಒ ಆಶ್ರಯದಲ್ಲಿ ಜನಾಭಿಪ್ರಾಯ ಗಣತಿ, ರೆಫರೆಂಡಂ, ಬೇಕು’ ಅಂತ ಅವರು ಹೇಳುತ್ತಾರೆ. ಅಪ್ಪಟ ಹುಚ್ಚು!
ಗಂಡ-ಹೆಂಡತಿ ಹೇಗೆ ಬಾಳಬೇಕೆಂದು ಪರಪುರುಷರು, ಗ್ರಾಮ ಪಂಚಾಯ್ತಿ ಅಧ್ಯಕ್ಷ, ರಾಷ್ಟ್ರಾಧ್ಯಕ್ಷ ಹೇಳಬೇಕೆ? ನಾಚಿಕೆಯಯ್ಯ! ನನ್ನ ಮನೆ ಹೇಗಿಟ್ಟು ಕೊಳ್ಳಬೇಕೆಂದು ನಾನು ನಿರ್ಧರಿಸಬೇಕು-ಪಾಕಿಸ್ತಾನವಲ್ಲ, ಬಾಂಗ್ಲಾದೇಶವಲ್ಲ, ರಷ್ಯಾ, ಚೀನಾವೂ ಅಲ್ಲ; ರಾಣಿ ಮೊದಲ ಎಲಿಜಬೆತ್ ಕಾಲದ ಒಂದು ಆಂಗ್ಲ ನಾಟಕ ಇಲ್ಲಿ ನೆನಪಾಗುತ್ತದೆ. ವಿವರಣೆ ಬೇಡ.
ಭಾರತವನ್ನು ಸಹಸ್ರವರ್ಷಕಾಲ ಪರಕೀಯರು ಆಳಿದರು. ಆ ಪರಂಪರೆಯೇ ನೆಹ್ರೂ ಆಡಳಿತದಲ್ಲೂ ಮುಂದುವರಿಯಿತು. ಸೋನಿಯಾ ಪ್ರಕಟವಾಗಿಯೇ ಹೊರಗಿನವರು. ಆದರೆ ಇಲ್ಲಿನ ‘ಧಿಮ್ಮಿ’ಗಳ ಒತ್ತಾಸೆಯಿಂದ-ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿದ್ದಾರೆ. ರಾಹುಲ್ ಹೇಳುತ್ತಾರೆ- ‘ಭಾರತವು ರೇಪ್ ನಾಡಾಗಿದೆ’ ಅಂತ. ಇದರಲ್ಲಿ ಇವರ ಕಾಂಟ್ರಿಬ್ಯುಶನ್ ಎಷ್ಟು? ಎಂದು ಕೇಳಿದರೆ ಕೋಪ ಬರುತ್ತದೆ. ಕಾಂಗ್ರೆಸ್ಸಿಗರಿಗೆ ಒಂದು ನಿಖರ ಸಲಹೆ- ‘ನಿಮಗೇನಾದರೂ ಇನ್ನೂ ಲಜ್ಜೆಯಿದ್ದರೆ ಆಕೆಯ ನೊಗವನ್ನು ಕಿತ್ತೆಸೆದು ನೀವೇ ಒಂದು ರಾಷ್ಟ್ರೀಯ ಪಕ್ಷ ಮಾಡಿಕೊಳ್ಳಿ. ಗೌರವಾನ್ವಿತ ಪರ್ಯಾಯ ಡೆಮಾಕ್ರಸಿಯಲ್ಲಿ ಸ್ವಾಗತಾರ್ಹ! ಅದು ಬಿಟ್ಟು ಹಿಂಸಾಚಾರ, ವಾಮಮಾರ್ಗ ಇದನ್ನು ರಾಷ್ಟ್ರದ್ರೋಹ ಎಂದು ಘೋಷಿಸಬೇಕಾಗಿದೆ.
ಇಲ್ಲೊಬ್ಬ ಅಲ್ಪಸಂಖ್ಯಾತ ನಾಯಕ. ಪಕ್ಕಾ ಸಮಯ ಸಾಧಕ. ಅವನ ಮಾತು ಈಗ ವೈರಲ್ ಆಗಿ ಯೂ-ಟ್ಯೂಬ್ನಲ್ಲಿ ಹರಿದಾಡುತ್ತಿದೆ- ‘1987ರಿಂದ ಈಚೆಗೆ ಹುಟ್ಟಿದವರು, ಜನನ ದಾಖಲೆ, ಸ್ಥಳ, ಕಾಲ, ದಿನಾಂಕ ದಾಖಲೆ ಕೊಡಿ ಎಂದರೆ ಹೇಗೆ ಕೊಡುವುದು? ನನಗೆ ಎಷ್ಟು ಮಕ್ಕಳೆಂದು ನನಗೇ ಗೊತ್ತಿಲ್ಲ. ಈ ಬಗೆಯ ದಾಖಲೆ ಎಲ್ಲಿಂದ ತರಲಿ?’ ಅಂತ.
ಶೇಮ್ ಶೇಮ್ ಇದನ್ನೇ ಎನ್ಆರ್ಸಿ ಪ್ರಶ್ನಿಸುತ್ತ ಇಂಥ ಅತಿಕ್ರಮಣಗಳನ್ನು ತಡೆಯಲು ಯತ್ನಿಸುತ್ತಿರುವುದು. ಷಿಯಾ ಪಂಗಡದ ಮುಸ್ಲಿಂ ನಾಯಕರು ಎನ್ಆರ್ಸಿ ಹಾಗೂ ಸಿಎಎಯನ್ನು ಸಮರ್ಥಿಸುತ್ತಿದ್ದಾರೆ. ರಾಷ್ಟ್ರ ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿದೆ. ಇಷ್ಟೆಲ್ಲ ಹಿಂಸಾಚಾರ, ನ್ಯಾಯವಾಗಿ ತುರ್ತು ಪರಿಸ್ಥಿತಿಗೆ ಎಡೆ ಮಾಡಿಕೊಡಬೇಕಿತ್ತು. ಮೋದಿ ದುಡುಕಲಿಲ್ಲ. ಏನೂ ಇಲ್ಲದೆಯೇ ಇಂದಿರಾ ತುರ್ತು ಪರಿಸ್ಥಿತಿ ಜಾರಿ ಮಾಡಿದರಲ್ಲ? ಅದು ಒಂದು ಹುಚ್ಚು!
ಹಿಂಸಾವಿಹಾರಿಗಳು ನಿಜವಾಗಿ ಜೈಲು ಸೇರಬೇಕು. ಆ ಆಟ ಆಡಿಸುತ್ತಿರುವ ಕಳ್ಳಹಣ, ಅಧಿಕಾರ ಹಪಹಪಿ, ಪಟ್ಟಭದ್ರರ ಹಿಡಿತ, ಹಿಂದಣ ವಿದೇಶಿ ಶಕ್ತಿಗಳ ಬಯಲಾಗಿ, ಜನ ನೆಮ್ಮದಿಯಿಂದ ಇರಲು, ಈಗ ತುರ್ತಾಗಿ ವೈಶಂಪಾಯನ ಕೊಳದ ಬಳಿ ಮಹಾಭಾರತಯುದ್ಧ ಮುಕ್ತಾಯ ಆಗಬೇಕು.