

ಮಾಗಿ ಉಳುಮೆಯನ್ನು ತಡವಾಗಿಯೂ ಮಾಡಬಹುದಾ? ಇದರಿಂದಾಗುವ ಉಪಯೋಗಗಳೇನು?
| ಪೃಥ್ವಿ ಕೆರಗೋಡು, ಮಂಡ್ಯ ತಾಲೂಕು
ಮಾಗಿ ಉಳುಮೆ ಮಾಡಲು ಸಾಧ್ಯವಾಗದಿದ್ದರೆ ತಕ್ಷಣ ಬಿಳುವ ಪೂರ್ವ ಮುಂಗಾರಿಗೆ ಉಳುಮೆ ಮಾಡಬಹುದು. ಮುಂಗಾರು ಕೃಷಿಗೂ ಮುನ್ನ ಮಾಗಿ ಉಳುಮೆಯನ್ನು ಬೇಸಿಗೆಯಲ್ಲಿ ಪೂರ್ವ ಮುಂಗಾರಿನ ಮೊದಲ ಮಳೆಯಾದ ನಂತರ ಭೂಮಿಯನ್ನು ಆಳವಾಗಿ ಉಳುಮೆ ಮಾಡಿದಾಗ ಒಳಪದರದ ಮಣ್ಣನ್ನು ಸೂರ್ಯನ ಕಿರಣಗಳಿಗೆ ಒಡ್ಡುವುದರಿಂದ ಕಳೆ ಬೀಜಗಳು, ಸುಪ್ತಾವಸ್ತೆಯಲ್ಲಿರುವ ಕೀಟಗಳ ಮೊಟ್ಟೆ/ಜೀವಕೋಶಗಳು ಹಾಗೂ ರೋಗಕಾರಕ ಕ್ರಿಮಿಗಳು/ಜಂತುಗಳನ್ನು ಬಿಸಿಲಿಗೆ ಒಡ್ಡಿ ನಾಶಮಾಡಬಹುದಲ್ಲದೆ, ಪೂರ್ವ ಮುಂಗಾರಿನ ಮಳೆಯ ನೀರನ್ನು ಮಣ್ಣಿಗೆ ಇಂಗಿಸುವುದರಿಂದ ಮಳೆ ನೀರಿನಿಂದ ಮಣ್ಣಿನ ಕೊಚ್ಚಣೆ ಕಡಿಮೆಯಾಗಿ ಮಣ್ಣಿನ ನೀರಿನಾಂಶ ಹೆಚ್ಚುತ್ತದೆ. ಅಲ್ಲದೆ, ಮುಂಗಾರಿನಲ್ಲಿ ಮಳೆಯಾದ ತಕ್ಷಣ ಬೆಳೆಗಳ ಬಿತ್ತನೆ ಮಾಡಲು ಸಹಕಾರಿಯಾಗುವುದರ ಜತೆಗೆ ಕಳೆ ಮತ್ತು ಪೀಡೆಗಳ ಹಾವಳಿ ತಗ್ಗಿಸಬಹುದು.
| ಹರ್ಷಕುಮಾರ್ ಎಸ್.ಎಸ್. ಬೇಸಾಯ ತಜ್ಞರು