

ಅಸೂಯೆ ನಿಮ್ಮ ಸ್ವಭಾವವಲ್ಲ. ಯಾವಾಗಲಾದರೂ ಒಮ್ಮೊಮ್ಮೆ ನಿಮ್ಮಲ್ಲಿ ಅದು ಹುಟ್ಟಿಕೊಳ್ಳುತ್ತದೆ. ನೀವು ಅದನ್ನು ಇಚ್ಛೆಪಟ್ಟು ತಂದುಕೊಂಡರೆ, ಅದು ನಿಮ್ಮ ಸಂತೋಷ. ನೀವು ಕೋಪ, ಭಯ ಮತ್ತು ಅಸೂಯೆಯಲ್ಲಿ ಸಂತೋಷವಾಗಿ ಇರುತ್ತೀರಿ ಎಂದಾದರೆ ಅವುಗಳನ್ನು ತಂದುಕೊಳ್ಳಿ. ಆದರೆ ಅದು ಹಾಗಿಲ್ಲ, ಅವು ನಿಮಗೆ ಸಂತೋಷದಾಯಕ ಅನುಭವವನ್ನು ಕೊಡುವುದಿಲ್ಲ.
ಎಲ್ಲಿಯವರೆಗೆ ನೀವು ‘ಇನ್ನೊಬ್ಬರ ಹತ್ತಿರ ನಮಗಿಂತ ಹೆಚ್ಚು ಇದೆ, ನಾವು ಈಗ ಇರುವ ರೀತಿ ಏನೇನೂ ಅಲ್ಲ’ ಎಂದು ಭಾವಿಸುತ್ತೀರೋ ಅಲ್ಲಿಯವರೆಗೂ ನಿಮಗೆ ಅಸೂಯೆ ತಪ್ಪಿದ್ದಲ್ಲ. ನೀವು ತುಂಬಾ ಸಂತೋಷದಲ್ಲಿರುವಾಗ ನಿಮಲ್ಲಿ ಅಸೂಯೆ ಇರುತ್ತದೆಯೇ? ಇಲ್ಲ. ನೀವು ಅಸಂತುಷ್ಟರಾಗಿರುವಾಗ ಮಾತ್ರ ಅಸೂಯೆ ಉಂಟಾಗುತ್ತದೆ. ಅಸೂಯೆಯ ಬಗ್ಗೆ ಚಿಂತಿಸಬೇಡಿ. ನಿಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲೂ ನಿಮ್ಮ ‘ಶಕ್ತಿ’ ಪರಮಾನಂದದಿಂದ ಉಕ್ಕಿ ಹರಿದರೆ, ಅಸೂಯೆ ಹೇಗೆ ಉಂಟಾಗುತ್ತದೆ? ಅಸೂಯೆಯೊಂದಿಗೆ ಹೋರಾಡುವ ಬದಲು, ನಿಮ್ಮ ಜೀವನಾನುಭವವನ್ನು ಪರಿಪೂರ್ಣಗೊಳಿಸಲು ಪ್ರಯತ್ನ ಪಡುವುದು ಉತ್ತಮ.
ಅಸೂಯೆ ನಿಮ್ಮ ಸ್ವಭಾವವಲ್ಲ: ಯಾವುದನ್ನಾದರೂ ತ್ಯಜಿಸುವುದರಿಂದ ಸ್ವಾತಂತ್ರ್ಯ ಸಿಗುವುದಿಲ್ಲ, ಏಕೆಂದರೆ ತ್ಯಜಿಸಲು ಏನಿದೆ? ಈಗ ನಿಮ್ಮಲ್ಲಿ ಯಾವುದೇ ಅಸೂಯೆ ಇಲ್ಲ. ಅಸೂಯೆ ನಿಮ್ಮ ಸ್ವಭಾವವಲ್ಲ. ಯಾವಾಗಲಾದರೂ ಒಮ್ಮೊಮ್ಮೆ ನಿಮಲ್ಲಿ ಅದು ಹುಟ್ಟಿಕೊಳ್ಳುತ್ತದೆ. ನೀವು ಅದನ್ನು ಇಚ್ಛೆಪಟ್ಟು ತಂದುಕೊಂಡರೆ, ಅದು ನಿಮ್ಮ ಸಂತೋಷ. ನೀವು ಕೋಪ, ಭಯ ಮತ್ತು ಅಸೂಯೆಯಲ್ಲಿ ಸಂತೋಷವಾಗಿ ಇರುತ್ತೀರಿ ಎಂದಾದರೆ ಅವುಗಳನ್ನು ತಂದುಕೊಳ್ಳಿ. ಆದರೆ ಅದು ಹಾಗಿಲ್ಲ, ಅವು ನಿಮಗೆ ಸಂತೋಷದಾಯಕ ಅನುಭವವನ್ನು ಕೊಡುವುದಿಲ್ಲ. ಹಾಗಾದರೆ, ನೀವು ಅವುಗಳನ್ನು ಏಕೆ ಸೃಷ್ಟಿಸಿಕೊಳ್ಳುತ್ತಿದ್ದೀರಿ? ನಿಮ್ಮೊಳಗೆ ಅಗತ್ಯವಾದ ಅರಿವಿಲ್ಲದ ಕಾರಣ ನೀವು ಅವುಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೀರಿ.
ನೀವು ನಿಜವಾಗಿಯೂ ಅವುಗಳಿಂದ ಮುಕ್ತರಾಗಬೇಕೆಂದರೆ, ಮೊದಲು ನಿಮ್ಮ ಬಂಧನ ಎಲ್ಲಿದೆ, ನೀವು ಯಾವುದರೊಂದಿಗೆ ಗುರುತಿಸಿಕೊಂಡಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಗುರುತಿಸಿಕೊಂಡ ಕ್ಷಣದಿಂದಲೇ, ನೀವು ಅಸ್ತಿತ್ವದೊಂದಿಗೆ ಸಂಘರ್ಷದಲ್ಲಿ ಇರುತ್ತೀರಿ. ಇಡೀ ಆಧ್ಯಾತ್ಮಿಕ ಪ್ರಕ್ರಿಯೆಯು ನಿಮ್ಮನ್ನು ಗುರುತಿಸಿಕೊಳ್ಳದಂತೆ ಮಾಡುವುದು, ಹೀಗಾದಾಗ ನೀವು ಅಸ್ತಿತ್ವದೊಂದಿಗೆ ಸಂಘರ್ಷದಲ್ಲಿ ಇರುವುದಿಲ್ಲ. ನೀವು ಕೇವಲ ಪ್ರತಿಯೊಂದನ್ನೂ ಇರುವ ರೀತಿಯಲ್ಲಿಯೇ ಅನುಭವಿಸುತ್ತಿರುತ್ತೀರಿ, ಅದನ್ನು ಈ ರೀತಿ ಅಥವಾ ಆ ರೀತಿ ಎಂದು ಹೆಸರಿಸಲು ಪ್ರಯತ್ನಿಸುವುದಿಲ್ಲ, ಅಥವಾ ಅದನ್ನು ದೈವ ಅಥವಾ ಪಿಶಾಚಿಯನ್ನಾಗಿ ಮಾಡಲು ಪ್ರಯತ್ನಿಸುವುದಿಲ್ಲ.
ಕೊಳಕನ್ನು ಸುವಾಸನೆಯಾಗಿ ಪರಿವರ್ತಿಸುವುದು: ನೀವು ಯಾರಾಗಿದ್ದೀರಿ ಎಂಬುದರ ಭಯಾನಕತೆಯನ್ನು ಗೊಬ್ಬರವಾಗಿ ಬಳಸಿದರೆ, ನೀವು ಯಾರಾಗಬಹುದು ಎಂಬುದರ ಸೌಂದರ್ಯವು ಅರಳಬಹುದು. ಈ ಭಯಾನಕತೆ ಏನು ಮತ್ತು ಅದರ ಅರ್ಥವೇನು? ನೀವು ಒಬ್ಬ ವ್ಯಕ್ತಿಯನ್ನು ಅತ್ಯಂತ ಪೂರ್ವಗ್ರಹಪೀಡಿತ ಮತ್ತು ಅಸೂಯೆ ಉಳ್ಳವನಾಗಿ, ಕೋಪಿಷ್ಠ, ದ್ವೇಷಪೂರಿತ ಮತ್ತು ಭಯಭೀತನನ್ನಾಗಿ ಕಂಡಾಗ, ಅದು ಒಬ್ಬ ಮನುಷ್ಯ ಏನಾಗಬಹುದು ಎಂಬುದರ ಭಯಾನಕ ರೂಪ.
ಈ ದಿನಗಳಲ್ಲಿ ಜನರು ಜೈವಿಕ ತರಕಾರಿಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಅದರ ಅರ್ಥವೇನೆಂದರೆ ನೀವು ರಾಸಾಯನಿಕ ಗೊಬ್ಬರಗಳಿಂದಲ್ಲದೇ, ಹೊಲಸಿನಿಂದ ಪೋಷಿತವಾದ ತರಕಾರಿಗಳನ್ನು ಇಷ್ಟಪಡುತ್ತೀರಿ! ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಇದು ಅತ್ಯುತ್ತಮವಾದ ಹೂವು, ಹಣ್ಣು ಮತ್ತು ತರಕಾರಿಗಳನ್ನು ಉತ್ಪಾದಿಸುವ ವಿಧಾನ ಮತ್ತು ಇದು ಅತ್ಯುತ್ತಮ ಗೊಬ್ಬರ ಎಂದು ನಿಮಗೆ ಅರ್ಥವಾಗಿದೆ. ಇದು ಜೀವನದ ತರ್ಕ. ಇದನ್ನು ನೀವು ಒಂದು ಸಂಕೇತವಾಗಿ ಮತ್ತು ಮನೋವೈಜ್ಞಾನಿಕ ಸಾಧನವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಅರ್ಥ ಮಾಡಿಕೊಳ್ಳಬೇಕಾದ ವಿಷಯ. ನಿಮ್ಮ ಮನಸ್ಸಿನ ಸರಳ ತರ್ಕವು ಹೇಳುವುದೇನೆಂದರೆ, ನೀವು ತೋಟದಲ್ಲಿ ಉತ್ತಮ ಹೂವುಗಳನ್ನು ಉತ್ಪಾದಿಸಲು ಬಯಸಿದರೆ, ಮಣ್ಣಿನಲ್ಲಿ ಹೆಚ್ಚು ಹೂವುಗಳನ್ನು ಹಾಕಿ, ಮತ್ತಷ್ಟು ಸುಂದರವಾದ ಹೂವುಗಳು ಬರುತ್ತವೆ. ಆದರೆ ಅಸ್ತಿತ್ವ ಕಾರ್ಯನಿರ್ವಹಿಸುವ ರೀತಿ ಇದಲ್ಲ. ಅದು ರ್ತಾಕವಾಗಿದೆ, ಆದರೆ ಅಸ್ತಿತ್ವವು ರ್ತಾಕವಲ್ಲ.
ಮಣ್ಣು ದುರ್ವಾಸನೆಯುಳ್ಳ ತ್ಯಾಜ್ಯವನ್ನು ಬೇಡುತ್ತದೆ, ಸುವಾಸನೆಯುಳ್ಳ ಹೂವುಗಳನ್ನಲ್ಲ. ದುರ್ವಾಸನೆಯುಳ್ಳ ಕೊಳಕು ಕೇವಲ ಸರಿಯಷ್ಟೇ ಅಲ್ಲ, ಅದೇ ಮಣ್ಣು ಬೇಡುವಂಥದ್ದು. ನೀವು ಅದನ್ನು ಬೇರಿಗೆ ಹಾಕಿದರೆ, ಅದ್ಭುತವಾಗಿ ಸುವಾಸನೆಯುಳ್ಳ ಹೂವುಗಳು ಅದರಿಂದ ಬರುತ್ತವೆ. ಅಸ್ತಿತ್ವ ಕಾರ್ಯನಿರ್ವಹಿಸುವ ರೀತಿ ಇದು.
ನಿಮ್ಮ ಮೂಲ ಸ್ವಭಾವದೊಂದಿಗೆ ಸಾಮರಸ್ಯದಲ್ಲಿರುವುದು: ನಿಮ್ಮನ್ನು ಭಯಾನಕರನ್ನಾಗಿ ಮಾಡುವ ಎಲ್ಲಾ ಭಯಾನಕತೆಗಳಾದ, ನಿಮ್ಮ ಕೋಪ, ದ್ವೇಷ, ಅಸೂಯೆ, ಪೂರ್ವಗ್ರಹಗಳು, ಎಷ್ಟು ತೀವ್ರತೆಯಿಂದ ನಿಮ್ಮೊಳಗೆ ಸಂಭವಿಸುತ್ತವೆ ಎಂಬುದನ್ನು ದಯವಿಟ್ಟು ನೋಡಿ. ಧ್ಯಾನವು ಅಷ್ಟೇ ತೀವ್ರತೆಯಿಂದ ಸಂಭವಿಸಿದರೆ, ಅದು ಅದ್ಭುತವಾಗಿರುವುದಿಲ್ಲವೇ? ಹಾಗೆಯೇ ಸಂಭವಿಸಿದ್ದರೆ ನಿಮಗಿಷ್ಟ ಬಂದ ರೀತಿಯಲ್ಲಿ ನೀವು ಇರುತ್ತಿರಲಿಲ್ಲವೇ? ಖಂಡಿತವಾಗಿ ಇರುತ್ತಿದ್ದಿರಿ. ಮಾನವರನ್ನು ಭಯಾನಕರನ್ನಾಗಿ ಮಾಡುವ ಎಲ್ಲಾ ವಿಷಯಗಳು ತೀವ್ರತೆಯೆಂಬ ವಾಹನದಲ್ಲಿ ಪಯಣಿಸುತ್ತವೆ. ನಿಮ್ಮ ಕೋಪ, ಭಯ ಅಥವಾ ಅಸೂಯೆ ದುರ್ಬಲವಾಗಿದ್ದರೆ, ಅದರಿಂದ ಏನೂ ಹಾನಿ ಇರುವುದಿಲ್ಲ. ಆದರೆ ಅವು ನಿಮ್ಮೊಳಗೆ ಉರಿಯುವಾಗ, ಆಗ ಅವು ಏನೋ ಆಗಿರುತ್ತವೆ. ಮತ್ತು ಅವು ಯಾವಾಗಲೂ ನಿಮ್ಮೊಳಗೆ ಅತ್ಯಂತ ತೀವ್ರತೆಯಿಂದ ಉರಿಯುತ್ತವೆ.
ಆಧ್ಯಾತ್ಮಿಕತೆಯ ಒಂದು ಅಂಶ ನಿಮ್ಮೊಂದಿಗೆ ಇದೆ, ಏಕೈಕ ಪ್ರಶ್ನೆಯೆಂದರೆ ಅದನ್ನು ಹೇಗೆ ಬಳಸಿಕೊಳ್ಳುವುದು ಎಂಬುದನ್ನು ಕಲಿಯುವುದು. ನೀವು ಕೊಳಕನ್ನು ಬೇರಿಗೆ ಹಾಕಿದರೆ, ಅದು ಒಳ್ಳೆಯದು. ಆದರೆ ನೀವು ಅದನ್ನು ಮುಖಕ್ಕೆ ಬಳಿದುಕೊಂಡರೆ, ಅದು ಒಳ್ಳೆಯದಲ್ಲ. ನಿಮಗೆ ಈ ಅರಿವು ಇಲ್ಲದಿದ್ದರೆ, ನೀವು ಸುವಾಸನೆಯನ್ನು ಬೇರುಗಳಿಗೆ ಹಾಕಲು ಪ್ರಯತ್ನಿಸಿ ಸಸ್ಯವನ್ನು ಕೊಲ್ಲಬಹುದು. ನೀವು ಹಾಕಬೇಕಾಗಿರುವುದು ಸುವಾಸನೆಯನ್ನಲ್ಲ, ಕೊಳಕನ್ನು. ಇಡೀ ಜಗತ್ತು ಕಾರ್ಯ ನಿರ್ವಹಿಸುವುದು ಹೀಗೆಯೇ. ನೀವೂ ಹಾಗೆಯೇ ಕಾರ್ಯನಿರ್ವಹಿಸಬೇಕು.
ಹೊಗೆಯಲ್ಲ, ಬೆಂಕಿ: ಉಪ-ಉತ್ಪನ್ನಗಳ ಮೇಲೆ ಕೆಲಸ ಮಾಡಲು ಪ್ರಯತ್ನಿಸಬೇಡಿ. ನೀವು ನಿಮ್ಮೊಳಗೆ ಚೆನ್ನಾಗಿಲ್ಲದ ಕಾರಣ ನೀವು ಅಪೂರ್ಣ ಎಂದು ಭಾವಿಸುತ್ತೀರಿ. ಆನಂದಮಯವಾಗಿ ಅನುಭವಿಸದ ಯಾರೇ ಆಗಲಿ ವಾಸ್ತವವಾಗಿ ಅನಾರೋಗ್ಯದಲ್ಲಿರುತ್ತಾರೆ. ಬಹುಶಃ ನೀವು ಸಾಮಾಜಿಕವಾಗಿ ಸ್ವೀಕೃತವಾದ ಒಳಿತಿನ ಸ್ಥಿತಿಯಲ್ಲಿರಬಹುದು- ಏಕೆಂದರೆ ಅಧಿಕ ಸಂಖ್ಯೆಯ ಜನರು ನಿಮ್ಮೊಂದಿಗಿದ್ದಾರೆ, ಮತ್ತು ಇದು ಪ್ರಜಾಪ್ರಭುತ್ವ- ಆದರೆ ನೀವು ಜೀವನದ ದೃಷ್ಟಿಯಿಂದ ಅನಾರೋಗ್ಯದಲ್ಲಿದ್ದೀರಿ. ನಿಮ್ಮನ್ನು ಎಚ್ಚರಿಕೆಯಿಂದ ನೋಡಿಕೊಂಡು ನಿಮ್ಮ ಅನುಭವದ ಮೂಲವು ನಿಮ್ಮೊಳಗೇ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯಾವುದೇ ಪ್ರಯತ್ನ ಮಾಡಿಲ್ಲ. ನಿಮ್ಮ ಅನುಭವದ ಮೂಲವು ನಿಮ್ಮೊಳಗಿದ್ದರೆ ಮತ್ತು ನೀವು ಇಲ್ಲಿ ಹೇಗೆ ಚೆನ್ನಾಗಿ ಜೀವಿಸುತ್ತೀರಿ ಎಂಬುದನ್ನು ನಿರ್ಧರಿಸಿ ನಿರ್ವಹಿಸಬೇಕಾದರೆ, ಮೊದಲ ವಿಷಯವೆಂದರೆ ನಿಮ್ಮ ಒಳಹೊಕ್ಕು ನೀವು ಯಾರು ಎಂಬುದರ ಸ್ವಭಾವವನ್ನು ನೋಡಿಕೊಳ್ಳಬೇಕು.
ಅದು ಸಂಭವಿಸದಿದ್ದರೆ, ನಿಮ್ಮ ಒಳಿತು ಆಕಸ್ಮಿಕವಷ್ಟೇ. ನಿಮ್ಮ ಒಳಿತು ಆಕಸ್ಮಿಕವಾಗಿರುವಾಗ, ಅಸೂಯೆ, ದ್ವೇಷ ಮತ್ತು ಅಸುರಕ್ಷಿತತೆಯು ನಿಮ್ಮ ಬದುಕಿನ ಸಹಜ ಭಾಗವಾಗಿರುತ್ತದೆ. ಇದು ಹೇಗೆಂದರೆ ನಾವು ಏನನ್ನಾದರೂ ಉರಿಸುತ್ತಿದ್ದರೆ ಹೊಗೆ ಏಳುತ್ತದೆ. ಹೊಗೆಯೊಂದಿಗೆ ಹೋರಾಡಬೇಡಿ. ಬೆಂಕಿಯೊಂದಿಗೆ ಹೋರಾಡಿ.