

ಯಾಕೆ ಈ ಹೂಡಿಕೆ?: ದೇಶದಲ್ಲಿ 2022ರ ವೇಳೆಗೆ ನವೀಕರಿಸಬಹು ದಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 175 ಎಗ ಗೆ ಏರಿಸಬೇಕೆಂಬ ಮಹತ್ವಕಾಂಕ್ಷೆಯ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಇದರಲ್ಲಿ 100ಎಗ ಸೌರ ವಿದ್ಯುತ್ ಪಾಲು.
ಎನ್ಟಿಪಿಸಿ ಎಂದರೆ..: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೆರೇಶನ್ (ಎನ್ಟಿಪಿಸಿ) 1975ರಲ್ಲಿ ಸ್ಥಾಪಿಸಲ್ಪಟ್ಟಿದೆ. ಭಾರತದ ಅತಿದೊಡ್ಡ ಇಂಧನ ಉತ್ಪಾದನಾ ಕಂಪನಿ ಇದಾಗಿದ್ದು, ನವದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿದೆ. 2010ರ ಮೇ ತಿಂಗಳಲ್ಲಿ ಇದನ್ನು ಮಹಾರತ್ನ ಕಂಪನಿ ಎಂದು ಕೇಂದ್ರ ಸರ್ಕಾರ ಮಾನ್ಯ ಮಾಡಿದೆ. ಕಾರ್ಬನ್ ಉತ್ಪಾದನೆಯನ್ನು ಶೇಕಡ 30 ಇಳಿಸಬೇಕೆಂಬ ಉದ್ದೇಶದಿಂದ ಹಸಿರು ಇಂಧನ ಉತ್ಪಾದನೆ ಯೋಜನೆಯನ್ನು, ಉಪಕ್ರಮವನ್ನು ಕಂಪನಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.