ಆಪ್ತ ಸ್ನೇಹಿತ; ಮಕ್ಕಳ ಕಥೆ

Putani 2
Published on

ಒಂದಾನೊಂದು ಕಾಲದಲ್ಲಿ ನಾನು ತಂದೆ-ತಾಯಿಯ ಜತೆ ಪುಟ್ಟ ಗುಡಿಸಿಲಿನಲ್ಲಿ ವಾಸಿಸುತ್ತಿದ್ದೆ. ಸ್ವಲ್ಪ ದೂರದಲ್ಲಿ ಶ್ರೀಮಂತ ಕುಟುಂಬವೊಂದಿತ್ತು. ಅವರ ಮನೆಯ ಒಬ್ಬ ಹುಡುಗ ನನಗೆ ಆಪ್ತ ಸ್ನೇಹಿತನಾಗಿದ್ದ. ಅವನೂ ನನ್ನನ್ನು ತುಂಬಾ ಇಷ್ಟಪಡುತ್ತಿದ್ದ. ಒಂದು ದಿನ ನಾನು ಮತ್ತು ಆತ ಸಮೀಪದಲ್ಲಿದ್ದ ಈಜುಕೊಳದಲ್ಲಿ ಈಜಾಡುತ್ತಿದ್ದೆವು. ಆಗ ಸ್ನೇಹಿತನ ಐದಾರು ಜೊತೆಗಾರರು ಅದೇ ಈಜುಕೊಳದಲ್ಲಿ ಈಜಾಡಲು ಬಂದರು, ಆದರೆ ಅವರು ನನ್ನನ್ನು ತುಂಬಾ ಕೀಳಾಗಿ ಕಂಡು ಅಪಹಾಸ್ಯ ಮಾಡಿದರು. ಅದಕ್ಕಾಗಿ ನನಗೆ ತುಂಬಾ ಬೇಜಾರಾಗಿ ಮನೆಗೆ ಬಂದೆ.

ಈ ಮಧ್ಯದಲ್ಲಿ ನಮ್ಮ ಊರಿನಲ್ಲಿ ಒಬ್ಬ ಕೆಟ್ಟ ಮನುಷ್ಯ ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದ. ಇವನ ಕಾಟ ನಿಯಂತ್ರಿಸುವ ಬಗ್ಗೆ ನಾನು ಮತ್ತು ಸ್ನೇಹಿತ ರ್ಚಚಿಸಿದೆವು. ಸ್ನೇಹಿತ ನನಗೆ ಸ್ವಲ್ಪ ಹಣ ಮತ್ತು ‘ಪವರ್ ಸ್ಟೋನ್’ ನೀಡಿದ, ಈ ಪವರ್ ಸ್ಟೋನ್​ನಿಂದ ನಾನು ಆ ಕೆಟ್ಟ ವ್ಯಕ್ತಿಯನ್ನು ಸೋಲಿಸಿದೆ. ಮತ್ತು ಸ್ನೇಹಿತ ನೀಡಿದ ಹಣದಿಂದ ನಾನು ಸುಂದರವಾದ ಮನೆಯನ್ನು ಕಟ್ಟಿಸಿದೆ. ಗೃಹಪ್ರವೇಶದಲ್ಲಿ ನನ್ನ ಆತ್ಮೀಯ ಸ್ನೇಹಿತ ಸಡಗರದಿಂದ ಓಡಾಡಿದ. ಹಿಂದೆ ನನ್ನನ್ನು ಅಪಹಾಸ್ಯ ಮಾಡಿದ ಗೆಳೆಯರನ್ನು ಕೂಡ ಕರೆದು ಒಳ್ಳೆಯ ಊಟ ಮತ್ತು ಉಡುಗೊರೆಗಳನ್ನು ನೀಡಿದೆ. ಆಗ ಅವರು ಸಹ ನನಗೆ ತುಂಬಾ ಹತ್ತಿರದ ಗೆಳೆಯರಾದರು.

ನೀತಿ: ಯಾರನ್ನೂ ಅಪಹಾಸ್ಯ ಮಾಡಬಾರದು.

| ಎಸ್. ಹರ್ಷಚಂದ್ರ 6ನೇ ತರಗತಿ, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಕ್ಯಾತ್ಸಂದ್ರ, ತುಮಕೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net