

ಅಲ್ಪಸಂಖ್ಯಾತರು ತಮ್ಮ ಧರ್ಮಕೇಂದ್ರಗಳಲ್ಲಿ ಧಾರ್ವಿುಕ ಶಿಕ್ಷಣ ನೀಡುವಂತೆ ಹಿಂದು ದೇವಸ್ಥಾನಗಳಲ್ಲಿ ಕೂಡ ಧಾರ್ವಿುಕ ಶಿಕ್ಷಣ ನೀಡಬೇಕೆಂಬ ಕೂಗು ಹಲವು ವರ್ಷದಿಂದ ಕೇಳಿಬರುತ್ತಿದೆ. ಆದರೆ ಈವರೆಗೆ ಯಾರೂ ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿರಲಿಲ್ಲ. ಈಗ ರಾಜ್ಯದಲ್ಲೇ ಮೊದಲ ಬಾರಿಗೆ ಮುಜರಾಯಿ ಇಲಾಖೆಗೆ ಸೇರಿದ ಪುತ್ತೂರಿನ ದೇವಸ್ಥಾನದಲ್ಲಿ ಹಿಂದು ಧಾರ್ವಿುಕ ಶಿಕ್ಷಣ ನೀಡುವ ಮಹತ್ತರ ಯೋಜನೆ ಜಾರಿಯಾಗಿದೆ.
| ಶ್ರವಣ್ಕುಮಾರ್ ನಾಳ ಪುತ್ತೂರು
ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಸ್ಥಾನಗಳಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವೂ ಒಂದು. ಇಲ್ಲಿ ವಿನೂತನ ಪ್ರಯೋಗವಾಗಿ ಧಾರ್ವಿುಕ ಶಿಕ್ಷಣ ಮತ್ತು ಮಕ್ಕಳಲ್ಲಿ ಧಾರ್ವಿುಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ‘ಸುಜ್ಞಾನ ದೀಪಿಕೆ’ ಧಾರ್ವಿುಕ ಶಿಕ್ಷಣ ಯೋಜನೆ ಆರಂಭಗೊಂಡಿದ್ದು, ಮುಜರಾಯಿ ಇಲಾಖೆ ಸಹಯೋಗದಲ್ಲಿ ಪಠ್ಯ ಸಿದ್ಧಗೊಳಿಸಲಾಗಿದೆ. ಶಿಕ್ಷಣಾರ್ಥಿಗಳಿಗೆ 6 ತಿಂಗಳಲ್ಲಿ ಹಿಂದು ಧರ್ಮದ ಸಮಗ್ರ ಧಾರ್ವಿುಕ ವಿಚಾರಗಳ ತರಬೇತಿ ಸಹಿತ ಪ್ರಮಾಣಪತ್ರ ನೀಡುವ ಮಹತ್ತರ ಯೋಜನೆ ಇದು.
ಪುಸ್ತಕಗಳ ತಯಾರಿ: 5ರಿಂದ 15ರ ವಯೋಮಾನದ ಹಿಂದು ಸಮಾಜದ ಮಕ್ಕಳು ಈ ಯೋಜನೆಗೆ ಸೇರಲು ಅರ್ಹರು. ಮುಜರಾಯಿ ಇಲಾಖೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿಯಲ್ಲಿ ಈಗಾಗಲೇ 80 ಮಂದಿ ಧಾರ್ವಿುಕ ಶಿಕ್ಷಣ ಪಡೆಯಲು ಹೆಸರು ನೋಂದಾಯಿಸಿದ್ದಾರೆ. ಕಣ್ಣೂರು ವಿವಿ ಕನ್ನಡ ವಿಭಾಗದ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಪಠ್ಯ ರಚನಾ ಸಮಿತಿ ಸಮಗ್ರವಾಗಿ ರ್ಚಚಿಸಿ ಸುಜ್ಞಾನ ದೀಪಿಕೆ ಎಂಬ ಧಾರ್ವಿುಕ ಶಿಕ್ಷಣ ಪಠ್ಯ ಪುಸ್ತಕಗಳನ್ನು ತಯಾರಿಸಿದೆ. ಮಕ್ಕಳಿಗೆ ಅರ್ಥ ಸಹಿತ ಶ್ಲೋಕ, ಪಂಚಾಂಗವಾಚನ, ಉಪನಿಷತ್ ವಿಚಾರಗಳು, ಪುರಾಣ ಕತೆಗಳು, ವಾಸ್ತುವಿನ ಪರಿಚಯ ಇತ್ಯಾದಿ ಈ ಪಠ್ಯದಲ್ಲಿ ಅಧ್ಯಯನ ನಡೆಸಲು ಅವಕಾಶ ನೀಡಲಾಗಿದೆ. ಪಠ್ಯಕ್ರಮದಂತೆ ದೈನಂದಿನ ಶ್ಲೋಕ, ಹಿಂದು ಧಾರ್ವಿುಕ ಆಚರಣೆ, ಹಿಂದು ಪಂಚಾಗಗಳ ಅಧ್ಯಯನ, ನಕ್ಷತ್ರ ಹಾಗೂ ರಾಶಿ ಪರಿಚಯ, ಹಿಂದು ಕಾಲಮಾನಗಳು, ಘಳಿಗೆಗಳ ಅಧ್ಯಯನ, ಸಂವತ್ಸರಗಳು, ರಾಶಿ, ವಾಸ್ತು ಪರಿಚಯವಾಗಲಿದೆ.
ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲೂ ಶಿಕ್ಷಣ
ಪುತ್ತೂರು ದೇವಸ್ಥಾನದ ವಠಾರದಲ್ಲಿ ನಡೆಯುವ ಸುಜ್ಞಾನ ದೀಪಿಕೆ ಧಾರ್ವಿುಕ ಶಿಕ್ಷಣ ತರಗತಿಗೆ ಹಾಜರಾಗಲು ಕಷ್ಟವಾಗಿರುವ ಹಿಂದುಗಳಿಗೆ ಪುತ್ತೂರಿ ನಾದ್ಯಂತ ಇರುವ ಶ್ರೀ ಮಹಾಲಿಂಗೇಶ್ವರ ದೇವರ ಸಾರ್ವಜನಿಕ ಕಟ್ಟೆಯ ಪರಿಸರದಲ್ಲೂ ತಲಾ ಒಂದೊಂದು ದಿನದ ತರಗತಿಗಳು ನಡೆಯು ತ್ತವೆ. 6 ತಿಂಗಳ ಕಾಲ ತರಬೇತಿ ನೀಡಲು ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಯಾರಿ ನಡೆಸಿದ್ದಾರೆ.
31 ದೇವಸ್ಥಾನಗಳಲ್ಲಿ ಧಾರ್ವಿುಕ ಶಿಕ್ಷಣ ಶುರು
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡ ಆಂದೋಲನಕ್ಕೆ ಅಭೂತಪೂರ್ವ ಬೆಂಬಲ ದೊರಕಿದೆ. ಧಾರ್ವಿುಕ ಶಿಕ್ಷಣ ನೀಡಲು ಈಗಾಗಲೇ 31 ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವನ್ನು ಸಂರ್ಪಸಿ ‘ಸುಜ್ಞಾನ ದೀಪಿಕೆ’ ಎಂಬ ಧಾರ್ವಿುಕ ಶಿಕ್ಷಣ ಪಠ್ಯ ಪುಸ್ತಕವನ್ನು ನೀಡುವಂತೆ ಬೇಡಿಕೆ ಸಲ್ಲಿಸಿವೆ. ಮುಂದಿನ 3 ತಿಂಗಳೊಳಗೆ ಈ 31 ದೇವಾಲಯಗಳಲ್ಲಿ ಅಲ್ಲಿನ ಪುರೋಹಿತರು ಹಾಗೂ ತಂತ್ರಿ ವರ್ಗದವರ ನೇತೃತ್ವದಲ್ಲಿ ಧಾರ್ವಿುಕ ಶಿಕ್ಷಣ ನೀಡುವ ಯೋಜನೆ ಆರಂಭಗೊಳ್ಳಲಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದುಗಳಿಗೆ ಧಾರ್ವಿುಕ ಶಿಕ್ಷಣ ಮತ್ತು ಮಕ್ಕಳಲ್ಲಿ ಧಾರ್ವಿುಕ ಪ್ರಜ್ಞೆಯನ್ನು ಮೂಡಿಸಲು ಹಿಂದು ಧಾರ್ವಿುಕ ಶಿಕ್ಷಣ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ಹಿಂದು ಧಾರ್ವಿುಕ ಶಿಕ್ಷಣ ದೇವಸ್ಥಾನಗಳಿಂದಲೇ ಆರಂಭವಾಗಬೇಕು ಎಂಬ ದಿಸೆಯಲ್ಲಿ ಸುಜ್ಞಾನ ದೀಪಿಕೆ ಧಾರ್ವಿುಕ ಶಿಕ್ಷಣ ಯೋಜನೆ ಹಮ್ಮಿಕೊಳ್ಳಲಾಗಿದೆ. | ಡಾ.ರಾಜೇಶ್ ಬೆಜ್ಜಂಗಳ ಅಧ್ಯಕ್ಷ, ಸುಜ್ಞಾನ ದೀಪಿಕೆ ಪಠ್ಯ ರಚನಾ ಸಮಿತಿ
ರಾಜ್ಯದಲ್ಲೇ ಮೊದಲ ಧಾರ್ವಿುಕ ಗ್ರಂಥಾಲಯ ಧಾರ್ವಿುಕ ಶಿಕ್ಷಣ ನೀಡಲು ಹಾಗೂ ಪಡೆಯಲು ಹಿಂದು ಧರ್ಮಕ್ಕೆ ಸಂಬಂಧಿಸಿದ ಪುಸ್ತಕ, ಗ್ರಂಥಗಳ ಭಂಡಾರ ಅಗತ್ಯವಿದ್ದು, ರಾಜ್ಯದಲ್ಲಿಯೇ ಪ್ರಥಮವಾದ ವಿಶಾಲವಾದ ಧಾರ್ವಿುಕ ಗ್ರಂಥಾಲಯವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ತೆರೆಯಲಾಗಿದೆ. ಈ ಧಾರ್ವಿುಕ ಗ್ರಂಥಾಲಯದಲ್ಲಿ ಹಿಂದು ಧರ್ಮಕ್ಕೆ ಸಂಬಂಧಿಸಿದ ಸಮಗ್ರ ಸಾಹಿತ್ಯ ಗ್ರಂಥ, ವೇದ, ಪುರಾಣ ಕೃತಿಗಳನ್ನೊಳಗೊಂಡ ಜ್ಞಾನ ಭಂಡಾರವೇ ಇರಲಿದೆ. ಹಿಂದು ಧರ್ಮಕ್ಕೆ ಸಂಬಂಧಿಸಿದ ಪುರಾತನ ತಾಳೆಗರಿ, ಪುರಾತನ ಕೃತಿ, ಗ್ರಂಥಗಳು ಇಲ್ಲಿ ಲಭ್ಯವಾಗಲಿದ್ದು, ಹಿಂದು ಧಾರ್ವಿುಕತೆ ಬಗ್ಗೆ ಅಧ್ಯಯನ ನಡೆಸುವವರಿಗೆ ಧಾರ್ವಿುಕ ಗ್ರಂಥಾಲಯ ಉಪಯೋಗವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ವಿನೂತನ ಪ್ರಯೋಗ ವಾಗಿ ಹಿಂದು ಧಾರ್ವಿುಕ ಶಿಕ್ಷಣ ಆಂದೋಲನ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಹಾಗೂ ಜನರಲ್ಲಿ ಧಾರ್ವಿುಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಯೋಜನೆ ರಾಜ್ಯದಲ್ಲೇ ಪ್ರಥಮ. | ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ