ಇದು 1968ರ ಯುರೋ ಕಪ್ ುಟ್ಬಾಲ್ನ ರೋಚಕ ಕಥನ. ಅಂದು ಚಾಂಪಿಯನ್ ಪಟ್ಟಕ್ಕೇರಿದ ಇಟಲಿ ಮತ್ತೆಂದೂ ಈ ಟ್ರೋಫಿ ಗೆದ್ದಿಲ್ಲ. ಸೋವಿಯತ್ ಒಕ್ಕೂಟ 90ರ ದಶಕದಲ್ಲಿ ಛಿದ್ರವಾದ ಬಳಿಕ ಹಾಲಿ ರಷ್ಯಾವಾಗಿ ಆಡುತ್ತಿದೆ. ಯುಗೋಸ್ಲಾವಿಯ ಕೂಡ ಏಳು ಸಣ್ಣ ಸಣ್ಣ ರಾಷ್ಟ್ರಗಳಾಗಿ ಛಿದ್ರವಾಗಿದ್ದು, ಆ ತಂಡ ಅಸ್ತಿತ್ವದಲ್ಲಿಲ್ಲ. 1968ರಲ್ಲಿ ತವರು ರೋಮ್ನಲ್ಲಿ ಯುರೊ ಕಪ್ ಪ್ರಶಸ್ತಿ ಗೆದ್ದಿದ್ದ ಇಟಲಿ 53 ವರ್ಷ ಬಳಿಕ ಮತ್ತೆ ಅದೇ ರೋಮ್ನಲ್ಲಿ ಶುಕ್ರವಾರ ಯುರೋ ಕಪ್ 2020 ುಟ್ಬಾಲ್ ಅಭಿಯಾನ ಆರಂಭಿಸಿದೆ. ಅಂದು ತವರಿನಲ್ಲಿ ಇಟಲಿ ಕೈಹಿಡಿದಿದ್ದ ಅದೃಷ್ಟ ಈ ಬಾರಿಯೂ ಮರುಕಳಿಸುವುದೇ ಎನ್ನುವುದಕ್ಕೆ ಇನ್ನೊಂದು ತಿಂಗಳು ಕಾಯಬೇಕು. ಕಳೆದ ಒಂದೂವರೆ ವರ್ಷದಿಂದ ಕರೊನಾ ಮಹಾಮಾರಿಗೆ ಸಿಲುಕಿ ಒದ್ದಾಡುತ್ತಿರುವ ಜಗತ್ತಿನ ಪಾಲಿಗೆ ನವಚೈತನ್ಯ, ಜೀವನೋತ್ಸಾಹದ ರಸಗಂಗೆ ಹಂಚುವ ಮಹೋತ್ಸವವಾಗಿ ಈ ಟೂರ್ನಿ ಆಗಮಿಸಿದೆ. ಕೋವಿಡ್ &19ರ ಮೂರು ಅಲೆಗಳ ವಿಷಮಾರುತದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿರುವ ಯುರೋಪಿನ 11 ದೇಶಗಳ ಪ್ರಮುಖ ನಗರಗಳಲ್ಲಿ ಈ ತಿಂಗಳಾವಧಿ ಟೂರ್ನಿಯ ಪಂದ್ಯಗಳು ನಡೆಯುವುದು ವಿಶೇಷ. ಭಾರತದಲ್ಲೂ ಐಪಿಎಲ್ ಮೊಟಕಾಗಿದ್ದರಿಂದ ನಿರಾಸೆ ಪಟ್ಟುಕೊಂಡಿರುವ ಕ್ರೀಡಾಭಿಮಾನಿಗಳಿಗೆ ಯುರೊ ುಟ್ಬಾಲ್ ರೋಮಾಂಚನ ಹೊತ್ತು ತರಲಿದೆ. ಇನ್ನೇನು ಜೂನ್ 18ರಿಂದ ಭಾರತ&ನ್ಯೂಜಿಲೆಂಡ್ ವಿಶ್ವ ಚಾಂಪಿಯನ್ಷಿಪ್ ೈನಲ್ ಟೆಸ್ಟ್ ಪಂದ್ಯವೂ ಶುರುವಾಗಲಿದ್ದು, ಮುಂದಿನ ತಿಂಗಳು ಭಾರತ& ಶ್ರೀಲಂಕಾ ಟೆಸ್ಟ್ ಸರಣಿ, ಅದಾದ ಬಳಿಕ ಯುಎಇನಲ್ಲಿ ಐಪಿಎಲ್ನ ಮುಂದುವರಿದ ಭಾಗ, ತದನಂತರ ಟಿ20 ವಿಶ್ವಕಪ್, ಇಷ್ಟರ ನಡುವೆ ವಿಂಬಲ್ಡನ್, ಯುಎಸ್ ಓಪನ್ ಟೆನಿಸ್ ಗ್ರಾಂಡ್ಸ್ಲಾಂ, ಜಪಾನ್ ಒಲಿಂಪಿಕ್ಸ್ ಹೀಗೆ... ಕ್ರೀಡಾ ಜಗತ್ತು ಕೋವಿಡ್ ನಿರ್ವಾತದಿಂದ ಹೊರಬಂದು ಮೈಕೊಡವಿಕೊಳ್ಳುತ್ತಿದೆ.
ಕಳೆದ ವರ್ಷ ಜೂನ್ 11ಕ್ಕೇ ಶುರುವಾಗಬೇಕಿದ್ದ ಯುರೊ ಕಪ್ ಕೋವಿಡ್ ಕಾರಣಕ್ಕೆ ಒಂದು ವರ್ಷ ಬಳಿಕ ಜೂನ್ 11ರಂದೇ ಆರಂಭಗೊಂಡಿದೆ. ಹಾಗಾಗಿ ಟೂರ್ನಿ 2021ರಲ್ಲಿ ನಡೆಯುತ್ತಿದ್ದರೂ ಯುರೊ 2020 ಎಂದೇ ಗುರುತಿಸಲಾಗುತ್ತಿದೆ. ಆಟದ ಗುಣಮಟ್ಟ, ಸ್ಪರ್ಧಾತ್ಮಕತೆ ಹಾಗೂ ರೋಚಕತೆ ದೃಷ್ಟಿಯಿಂದ ಯುರೊ ಕಪ್ ಪಂದ್ಯಗಳು ಒಲಿಂಪಿಕ್ಸ್ ುಟ್ಬಾಲ್ಗಿಂತ ಮೇಲ್ಮಟ್ಟದಲ್ಲಿರುತ್ತವೆ. ಮಾಜಿ ವಿಶ್ವ ಚಾಂಪಿಯನ್ಗಳಾದ ಬ್ರೆಜಿಲ್ ಮತ್ತು ಅರ್ಜೆಂಟೀನಾ ಹೊರತು ಪಡಿಸಿದರೆ, ಬೇರೆಲ್ಲ ಬಲಾಢ್ಯ ತಂಡಗಳು ಯುರೋ ಕಣದಲ್ಲಿರುತ್ತವೆ. ಹಾಲಿ ವಿಶ್ವ ಚಾಂಪಿಯನ್ ್ರಾನ್ಸ್, ಹಾಲಿ ಯುರೊ ಚಾಂಪಿಯನ್ ಪೋರ್ಚುಗಲ್, ಸಾಂಪ್ರದಾಯಿಕ ಬಲಿಷ್ಠ ಜರ್ಮನಿ, ಫಿಾ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಬೆಲ್ಜಿಯಂ, ವಿಶ್ವ ನಂ.4 ಇಂಗ್ಲೆಂಡ್, ಸದಾ ಬಲಾಢ್ಯ ತಂಡಗಳಾದ ಸ್ಪೇನ್, ಹಾಲೆಂಡ್, ಇಟಲಿ... ಒಂದೇ ಎರಡೇ..ವಿಶ್ವ ಚಾಂಪಿಯನ್ ್ರಾನ್ಸ್ ಈ ಬಾರಿ ಟೂರ್ನಿಗೆ ಮುನ್ನ ಅತ್ಯುತ್ತಮ ತಂಡವಾಗಿ ಗೋಚರಿಸುತ್ತಿದೆ. 2016ರಲ್ಲಿ ತವರಿನಲ್ಲೇ ನಡೆದ ಟೂರ್ನಿಯ ೈನಲ್ನಲ್ಲಿ ಪೋರ್ಚುಗಲ್ ವಿರುದ್ಧ ಜಾರಿಬಿದ್ದಿದ್ದ ್ರಾನ್ಸ್ ಈ ಬಾರಿ ಇನ್ನೊಂದು ಹೆಜ್ಜೆ ಮುಂದಿಡುವ ತವಕದಲ್ಲಿದೆ. ಈ ವರ್ಷದ ಫಿಾ ಗೋಲ್ಡನ್ ಬಾಲ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಎನ್ಗೊಲೊ ಕಾಂಟೆ ಮತ್ತು ಕೈಲಿಯನ್ ಎಂಬಾಪ್ಪೆ ್ರಾನ್ಸ್ ಪಡೆಗೆ ಆನೆಬಲ. ಇವರೊಂದಿಗೆ ಐದು ವರ್ಷ ಬಳಿಕ ತಂಡಕ್ಕೆ ಮರಳಿರುವ ಕರೀಮ್ ಬೆಂಝೇಮಾ ಬಲ ಹೆಚ್ಚಿಸಿದ್ದಾರೆ.
ಅನಾದಿ ಕಾಲದಿಂದ ಫಿಾ ರ್ಯಾಂಕಿಂಗ್ನಲ್ಲಿ ಅಗ್ರಮಾನ್ಯ ತಂಡವಾಗಿದಿದ್ದರೂ, ಪ್ರಮುಖ ಚಾಂಪಿಯನ್ಷಿಪ್ಗಳಲ್ಲಿ ಮಗುಚಿಬೀಳುವ ಹಾಲಿ ವಿಶ್ವ ನಂ.1 ಬೆಲ್ಜಿಯಂಗೆ ಈ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಸುವರ್ಣಾವಕಾಶ ಎನ್ನಲಾಗುತ್ತಿದೆ. ಕಾರಣ ರೊಮೇಲು ಲುಕಾಕು ಮತ್ತು ಕೆವಿನ್ ಡಿ ಬ್ರೂಯ್ನ್ ಎಂಬಿಬ್ಬರು ಟಾನುಟಿ ಆಟಗಾರರು. ಇವರೊಂದಿಗೆ ರಿಯಲ್ ಮ್ಯಾಡ್ರಿಡ್ ಕ್ಲಬ್ನಲ್ಲಿ 112 ಮಿಲಿಯನ್ ಡಾಲರ್ ಬೆಲೆಬಾಳುವ ಆಟಗಾರನೆನಿಸಿರುವ ಈಡನ್ ಹರರ್ಡ್ ತಮ್ಮ ಖ್ಯಾತಿಗೆ ತಕ್ಕ ಆಟ ಆಡಿದರೆ, ಬೆಲ್ಜಿಯಂ ತುಪ್ಪದ ಪಾತ್ರೆಗೆ ಟ್ರೋಫಿ ಜಾರಿ ಬೀಳುವುದು ಕಷ್ಟವಲ್ಲ.
2016ರಲ್ಲಿ ಕ್ರಿಶ್ಚಿಯಾನೊ ರೊನಾಲ್ಡೊ ಸಾಹಸದ ಬೆನ್ನೇರಿ ಚಾಂಪಿಯನ್ ಪಟ್ಟಕ್ಕೇರಿದ ಪೋರ್ಚುಗಲ್ ಈ ಬಾರಿಯೂ ೇವರಿಟ್ ತಂಡಗಳಲ್ಲೊಂದು. ಹಾಗೆ ನೋಡಿದರೆ 2004ರಲ್ಲೇ ಚಾಂಪಿಯನ್ ಪಟ್ಟಕ್ಕೇರಬೇಕಿದ್ದ ಪೋರ್ಚುಗಲ್, ಗ್ರೀಸ್ನ ನ ಭೂತೋ ನ ಭವಿಷ್ಯತಿ ಪ್ರದರ್ಶನಕ್ಕೆ ತಲೆಬಾಗಿ ನಿರಾಸೆ ಅನುಭವಿಸಿತ್ತು. ಅಂದಿನಿಂದ ನಿರಂತರವಾಗಿ ಯುರೊ ಕಪ್, ವಿಶ್ವಕಪ್, ಒಲಿಂಪಿಕ್ಸ್ಗಳಲ್ಲಿ ಪೋರ್ಚುಗಲ್ ಯಶಸ್ಸಿನ ಗಾಥೆ ಬರೆಯಲು ತವಕಿಸುತ್ತಿದ್ದ ರೊನಾಲ್ಡೊ ಕೊನೆಗೂ 2016ರಲ್ಲಿ ತಮ್ಮ ಕನಸು ನನಸಾಗಿಸಿಕೊಂಡಿದ್ದರು. ಈ ಬಾರಿಯೂ ಅವರ ನೇತೃತ್ವದ ತಂಡ ಬ್ರೂನೊ ರ್ನಾಂಡೆಸ್, ರ್ಬನಾರ್ಡೊ ಸಿಲ್ವ, ಜೋವ ೆಲಿಕ್ಸ್, ರೂಬೆನ್ ಡಯಾಸ್ರಂಥ ಸಮರ್ಥರ ಉಪಸ್ಥಿತಿಯಲ್ಲಿ ಬಲಾಢ್ಯವೆನಿಸಿದೆ.
ಎಲ್ಲ ಟೂರ್ನಿಗಳಿಗೆ ೇವರಿಟ್ ರೂಪದಲ್ಲಿ ಆಗಮಿಸಿ, ಕೊನೆಗೆ ಅಭಿಮಾನಿಗಳನ್ನು ನಿರಾಸೆ ಪಡಿಸುವ ತಂಡಗಳಲ್ಲಿ ಇಂಗ್ಲೆಂಡ್ ಸಹ ಒಂದು. ಡೇವಿಡ್ ಬೆಕ್ಹ್ಯಾಂ, ವೇಯ್ನ್ ರೂನಿ, ್ರಾಂಕ್ ಲ್ಯಾಂಪರ್ಡ್, ಗ್ಯಾರಿ ನೆವಿಲ್, ರಿಯೊ ರ್ಡಿನಾಂಡ್ರಂಥ ತಾರಾ ಆಟಗಾರರಿದ್ದೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಇಂಗ್ಲೆಂಡ್ ಅನುಭವಿಸಿದು ನಿರಾಸೆಯೇ. ತಂಡ 1968ರಲ್ಲಿ 3ನೇ ಸ್ಥಾನ ಪಡೆದಿದ್ದೇ ಇಲ್ಲಿವರೆಗಿನ ಶ್ರೇಷ್ಠ ಸಾಧನೆ. ಹಾಗಿದ್ದೂ, ಜೇಡನ್ ಸ್ಯಾಂಚೊ, ಹ್ಯಾರಿ ಕೇನ್, ಜೋರ್ಡನ್ ಹೆಂಡರ್ಸನ್ರಂಥ ಆಟಗಾರರು ಈ ಬಾರಿ ಅದೃಷ್ಟ ಬದಲಿಸುವರೇ ಗಮನಿಸಬೇಕು. 2018ರ ವಿಶ್ವಕಪ್ಗೆ ಅರ್ಹತೆ ಪಡೆಯಲೇ ವಿಲವಾಗಿದ್ದ ಇಟಲಿ ಇತ್ತೀಚಿನ 27 ಪಂದ್ಯಗಳಲ್ಲಿ ಅಜೇಯ ದಾಖಲೆಯೊಂದಿಗೆ ಈ ಟೂರ್ನಿಗೆ ಆಗಮಿಸಿದೆ. ಕೇವಲ ರಕ್ಷಣಾತ್ಮಕ ಆಟಕ್ಕೆ ಜೋತು ಬಿದ್ದು ಎದುರಾಳಿಗಳನ್ನು ಸುಸ್ತು ಹೊಡೆಸುವುದನ್ನೇ ತಂತ್ರವಾಗಿಸಿಕೊಂಡಿದ್ದ ಇಟಲಿ ರಾಬರ್ಟೊ ಮಾನ್ಸಿನಿ ತರಬೇತಿಯಲ್ಲಿ ಇತ್ತೀಚೆಗೆ ಆಕ್ರಮಣಕಾರಿ ತಂಡವಾಗಿ ಹೊರಹೊಮ್ಮಿದೆ.
ಜರ್ಮನಿ ತಂಡದ ಇತ್ತೀಚಿನ ನಿರ್ವಹಣೆ ಚೇತೋಹಾರಿಯಾಗೇನೂ ಇಲ್ಲ. ಸ್ಪೇನ್ ವಿರುದ್ಧ 0&6 ಅಂತರದ ಹೀನಾಯ ಸೋಲು ಹಾಗೂ ತವರಿನಲ್ಲಿ ಅನನುಭವಿ ನಾರ್ತ್ ಮೆಸಿಡೋನಿಯಾ ವಿರುದ್ಧ ಸೋತು ಆ ತಂಡಕ್ಕೆ ಚೊಚ್ಚಲ ಯುರೊ ಕಪ್ ಪ್ರವೇಶದ ಬಳುವಳಿ ನೀಡಿದ್ದು ಜರ್ಮನಿಯನ್ನು ಕಂಗೆಡಿಸಿದೆ. ಹಾಗಿದ್ದೂ, ಥಾಮಸ್ ಮುಲ್ಲರ್, ಮ್ಯಾಟ್ಸ್ ಹಮ್ಮೆಲ್ಸ್ರಂಥ ಪ್ರತಿಭಾವಂತರನ್ನೊಳಗೊಂಡ ಜರ್ಮನಿ ಜಾಗತಿಕ ಟೂರ್ನಿಗಳಲ್ಲಿ ಬಲಾಢ್ಯ ಪ್ರದರ್ಶನ ನೀಡುವ ಛಾತಿ ಹೊಂದಿದೆ. ಇನ್ನು ಸ್ಪೇನ್, ಡೆನ್ಮಾರ್ಕ್, ಹಾಲೆಂಡ್ ನಿರಂತರವಾಗಿ ಸರಾಸರಿಗಿಂತ ಮೇಲ್ಮಟ್ಟದ ಆಟ ಆಡುವ ತಂಡಗಳು. ಹಾಗಾಗಿ ೈನಲ್ ಹಾದಿಯಲ್ಲಿ ಯಾವುದೇ ಪ್ರಬಲರಿಗೆ ತೊಡರುಗಾಲಾಗುವ ಸಾಮರ್ಥ್ಯ ಅವಕ್ಕಿದೆ. 2008 ಮತ್ತು 2012ರಲ್ಲಿ ಸತತ 2 ಬಾರಿ ಪ್ರಶಸ್ತಿ ಗೆದ್ದಿರುವ 3 ಬಾರಿಯ ಚಾಂಪಿಯನ್ ಸ್ಪೇನ್ ಕೆಲವು ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಟ್ರೋಫಿಗೆ ಪೈಪೋಟಿ ಒಡ್ಡಬಹುದು.
ಪ್ರತಿ ಯುರೊ ಕಪ್, ವಿಶ್ವಕಪ್, ಒಲಿಂಪಿಕ್ಸ್ಗಳಲ್ಲಿ ಒಂದು ಗ್ರೂಪ್ ಆ್ ಡೆತ್ ಅಥವಾ ಮೃತ್ಯುಕೂಪ ಇರಲೇಬೇಕು. ಈ ಬಾರಿ ಎ್ ಗುಂಪು ಅಂಥ ಕುಖ್ಯಾತಿ ಪಡೆದಿದೆ. ಕಾರಣ ೇವರಿಟ್ಗಳಾದ ್ರಾನ್ಸ್, ಜರ್ಮನಿ, ಪೋರ್ಚುಗಲ್ ತಂಡಗಳು ಹಂಗೆರಿಯೊಂದಿಗೆ ಈ ಗುಂಪಿನಲ್ಲಿ ಸಿಲುಕಿಕೊಂಡಿರುವುದು. 6 ಗುಂಪುಗಳ 24 ತಂಡಗಳ ಲೀಗ್ ಹಂತದಲ್ಲಿ ಪ್ರತಿ ಗುಂಪಿನಿಂದ ಎರಡು ಅಗ್ರ ತಂಡಗಳು ಮಾತ್ರ ಪ್ರಿ ಕ್ವಾರ್ಟರ್ೈನಲ್ಗೆ ಅರ್ಹತೆ ಗಳಿಸಬಹುದು. ಹಾಗಾಗಿ ಈ ಗುಂಪಿನಲ್ಲಿ ಮೂರು ೇವರಿಟ್ ತಂಡಗಳ ಪೈಕಿ ಎರಡು ಮಾತ್ರ ಅರ್ಹತೆ ಗಳಿಸಿದರೆ, ಇನ್ನೊಂದು ತಂಡ 6 ಗುಂಪುಗಳಲ್ಲಿ 3ನೇ ಸ್ಥಾನ ಪಡೆಯುವ ತಂಡಗಳ ಪೈಕಿ ಅತ್ಯುತ್ತಮ 4ರಲ್ಲಿ ಒಂದಾಗಿ ಹೊರಹೊಮ್ಮುವ ಅನಿವಾರ್ಯತೆ. ಇಷ್ಟರ ನಡುವೆ ಹಂಗೆರಿ ಸುಲಭದ ಪಟ್ಟಿಗೆ ಮಣಿಯುವ ತಂಡವೇನಲ್ಲ. ಒಟ್ಟಿನಲ್ಲಿ ಈ ಗುಂಪಿನಲ್ಲಿ ಕನಿಷ್ಠ ಒಂದು ಶ್ರೇಷ್ಠ ತಂಡ ಲೀಗ್ ಹಂತದಲ್ಲೇ ನಿರ್ಗಮಿಸುವ ಅಪಾಯವಿದೆ.
ಒಟ್ಟಿನಲ್ಲೇ ಯಾರೇ ಗೆದ್ದರೂ, ಸೋತರೂ ಶ್ರೇಷ್ಠ ುಟ್ಬಾಲ್ ಆಟಕ್ಕೆ ಸಾಯಾಗುವಂಥ ಸುವರ್ಣಾವಕಾಶವಂತೂ ಕರೊನಾ ಕಾಲಟ್ಟದಲ್ಲಿ ಅಭಿಮಾನಿಗಳ ಪಾಲಿಗೆ ಗ್ಯಾರಂಟಿ. ಪ್ರಾಯಶ@ ಕೊನೆಯ ಯುರೊ ಕಪ್ ಆಡುತ್ತಿರುವ ಕ್ರಿಶ್ಚಿಯಾನೊ ರೊನಾಲ್ಡೊ, ಬೆಲ್ಜಿಯಂನ ರೊಮೆಲು ಲುಕಾಕು, ಇಟಲಿಯ ಮ್ಯಾನ್ಯುಯೆಲ್ ಲೊಕಟೆಲ್ಲಿ, ಹಾಲೆಂಡ್ನ ್ರೆಂಕಿ ಡಿ ಜಾಂಗ್, ಇಂಗ್ಲೆಂಡ್ನ ಜೇಡನ್ ಸ್ಯಾಂಚೊ, ್ರಾನ್ಸ್ನ ಕೈಲಿಯನ್ ಎಂಬೆಪೆ, ಪೋಲೆಂಡ್ನ ರಾರ್ಬಟ್ ಲೆವಾಂಡೊವ್ಸ್ಕಿ, ಸ್ವಿರ್ಜಲೆಂಡ್ನ ನಿಕೊ ಎಲ್ವೆಡಿ, ಸ್ಪೇನ್ನ ಸರ್ಗಿಯೊ ಬುಸ್ಕೆಟ್ಸ್, ಫಿನ್ಲೆಂಡ್ನ ಗ್ಲೆನ್ ಕಮಾರ, ವೇಲ್ಸ್ನ ಗರೆತ್ ಬೇಲ್, ಡೆನ್ಮಾರ್ಕ್ನ ಕ್ರಿಶ್ಚಿಯನ್ ಎರಿಕ್ಸನ್, ರಷ್ಯಾದ ಅಲೆಕ್ಸಾಂಡರ್ ಗೊಲೊವಿನ್, ಕ್ರೋಷಿಯಾದ ಲೂಕ ಮಾಡ್ರಿಚ್ ಮೊದಲಾದ ಸೂಪರ್ಸ್ಟಾರ್ಗಳು ಮುಂದಿನ ಒಂದು ತಿಂಗಳ ಎಲ್ಲರ ಮನೆಯ ಟಿವಿ ಪರದೆಯನ್ನು ಆಕ್ರಮಿಸಿಕೊಳ್ಳಲಿದ್ದಾರೆ. ಗೋ..........ಲ್! ಇದು ುಟ್ಬಾಲ್ ಹುಚ್ಚಿನ ಕೆಚ್ಚಿನ ಸಮಯ..
(ಲೇಖಕರು "ವಿಜಯವಾಣಿ' ಡೆಪ್ಯೂಟಿ ಎಡಿಟರ್)