ರೈತರಾದರೆ ಸಾಲದು, ರೈತೋದ್ಯಮಿಗಳಾಗಬೇಕು!

Money Mathu
Published on
ರೈತ ಉದ್ಧಾರವಾಗಬೇಕಾದ್ರೆ ಬರೀ ಬೆಳೆ ಬೆಳೆದರೆ ಸಾಲದು, ತಾನು ಬೆಳೆದ ಬೆಳೆಗೆ ಬೆಲೆ ಕಟ್ಟುವ ಶಕ್ತಿ ಬೆಳೆಸಿಕೊಳ್ಳಬೇಕು. ಒಮ್ಮೆ ಯೋಚಿಸಿ ನೋಡಿ, ಮಾರ್ಕೆಟ್​ನಲ್ಲಿರುವ ಎಲ್ಲ ವಸ್ತುಗಳಿಗೂ ಎಂಆರ್​ಪಿ ಅಂದರೆ ಗರಿಷ್ಠ ಮಾರಾಟ ದರ ನಿಗದಿಯಾಗಿರುತ್ತದೆ. ಆದರೆ, ಅನ್ನದಾತ ಬೆಳೆಯುವ ಉತ್ಪನ್ನಗಳಿಗೆ ಮಾತ್ರ ಸರ್ಕಾರ ಎಂಎಸ್​ಪಿ - ಕನಿಷ್ಠ ಬೆಂಬಲಬೆಲೆ ಕೊಡುತ್ತಿದೆ. ದಲ್ಲಾಳಿಗಳು, ಶಾಪಿಂಗ್ ಮಾಲ್​ಗಳು ಮತ್ತು ದೈತ್ಯ ಕಾಪೋರೇಟ್ ಕಂಪನಿಗಳು ರೈತನ ಪರಿಶ್ರಮದ ಬೆಳೆಗೆ ಬೆಲೆ ಕಟ್ಟುತ್ತಿವೆ. ಯಾಕೆ ಹೀಗಾಗುತ್ತಿದೆ ಎಂದು ನೋಡಿದಾಗ ರೈತನಿಗೆ ತಾನು ಬೆಳೆದ ಬೆಳೆಗೆ ಉತ್ತಮ ಬೆಲೆ ಕಂಡುಕೊಳ್ಳುವುದು ಹೇಗೆ ಎನ್ನುವುದು ತಿಳಿದಿಲ್ಲ. ಉತ್ಪನ್ನಕ್ಕೆ ಯಾವುದೋ ಒಂದು ಬೆಲೆ ನಿಗದಿಯಾಗಿ ಒಂದಷ್ಟು ಹಣ ಸಿಕ್ಕರೆ ಸಾಕು ಎನ್ನುವ ಆಲೋಚನೆಯಲ್ಲಿ ರೈತನಿದ್ದಾನೆ. ಪರಿಣಾಮ ರೈತನೊಬ್ಬನನ್ನು ಬಿಟ್ಟು ಕೃಷಿಯಿಂದ ಮತ್ತೆಲ್ಲರೂ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತ ಶ್ರೀಮಂತನಾಗಬೇಕಾದರೆ ಇರುವ ಒಂದು ಉತ್ತಮ ಮಾರ್ಗ ರೈತೋದ್ಯಮಿಯಾಗುವುದು.

ರೈತೋದ್ಯಮಿ ಎಂದರೆ? ಕೃಷಿಯನ್ನು ಉದ್ಯಮ ಎಂದು ಪರಿಗಣಿಸಿ ಅದಕ್ಕೆ ಪೂರಕವಾಗಿ ಕೃಷಿ ಚಟುವಟಿಕೆಗಳನ್ನು ಮಾಡುವವನೇ ರೈತೋದ್ಯಮಿ. ಮಾರುಕಟ್ಟೆಗೆ ಬೇಕಾದ ಉತ್ಪನ್ನ ಬೆಳೆದು ಅದಕ್ಕೆ ಬೆಲೆ ಕಟ್ಟುವ ಸಾಮರ್ಥ್ಯ ಬೆಳೆಸುಕೊಳ್ಳುವವನೇ ರೈತೋದ್ಯಮಿ. ‘ಅಪ್ಪ ಹಾಕಿದ ಆಲದ ಮರ’ ಎಂದು ಜೋತು ಬೀಳದೆ ನಿರ್ದಿಷ್ಟ ಬೆಳೆಗೆ ಬೇಡಿಕೆ ಇದೆಯಾ? ಬೇಡಿಕೆ ಇಲ್ಲದಿದ್ರೆ ಯಾವ ಪರ್ಯಾಯ ಬೆಳೆ ಬೆಳೆಯಬೇಕು? ಬೇಡಿಕೆ ಇರುವ ಬೆಳೆಗಳನ್ನು ಬೆಳೆಯೋದು ಹೇಗೆ? ಕೃಷಿ ಕ್ಷೇತ್ರದಲ್ಲಿ ಆಗಿರುವ ಹೊಸ ಆವಿಷ್ಕಾರಗಳೇನು? ಉತ್ಪನ್ನಕ್ಕೆ ಮಾರುಕಟ್ಟೆ ಎಲ್ಲಿದೆ? ಬೆಳೆಯುವ ಉತ್ಪನ್ನದಿಂದ ಮೌಲ್ಯವರ್ಧನೆ ಮಾಡಿ ಹೆಚ್ಚು ಸಂಪಾದಿಸಬಹುದಾ? ಯಾವ ಸೀಸನ್​ನಲ್ಲಿ ಯಾವ ಬೆಳೆಗೆ ಡಿಮಾಂಡ್ ಇದೆ? ಹೀಗೆ ಕೃಷಿಯನ್ನು ಲಾಭದಾಯಕವಾಗಿಸಲು ಯೋಜನೆ ರೂಪಿಸಿ ಕಾರ್ಯಪ್ರವೃತ್ತನಾಗುವವನೇ ರೈತೋದ್ಯಮಿ.

ಮೇಕೆ ಹಾಲು ಮಾರಾಟ ಮಾಡಿ ತಿಂಗಳಿಗೆ 10 ಲಕ್ಷ ರೂ. ಸಂಪಾದಿಸುತ್ತಿರುವ ರೈತ: ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಯುವ ರೈತರೊಬ್ಬರು 400 ಮೇಕೆಗಳ ಫಾರಂ ಆರಂಭಿಸಿ ತಿಂಗಳಿಗೆ ಸುಮಾರು 10 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ. ಮೇಕೆ ಹಾಲಿಗೆ ಭರ್ಜರಿ ಬೇಡಿಕೆ ಇರುವುದರಿಂದ ಪ್ರತಿನಿತ್ಯ 130 ಲೀಟರ್ ಹಾಲು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಲೀಟರ್ ಮೇಕೆ ಹಾಲು 250 ರೂ.ಗೆ ಮಾರಾಟವಾಗುತ್ತಿದೆ. ಮೇಕೆ ಹಾಲಿನ ಜತೆಗೆ ಚೀಸ್, ತುಪ್ಪಕ್ಕೂ ಬೇಡಿಕೆ ಇದೆ. ಮೇಕೆಗಳ ತಳಿ ಸಂವರ್ಧನೆಯಿಂದಲೂ ಆದಾಯ ಗಳಿಸುತ್ತಿದ್ದಾರೆ. ಆ ಯಶಸ್ವಿ ರೈತ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ‘ರೈತೋದ್ಯಮಿ ಆಗುವುದು ಹೇಗೆ?’ ಎನ್ನುವ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ.

4 ಗುಂಟೆಯಲ್ಲಿ ವರ್ಷಕ್ಕೆ 15 ಲಕ್ಷ ರೂ. ದುಡಿ ಯುತ್ತಿರುವ ರೈತ: ತುಮಕೂರು ಜಿಲ್ಲೆಯ ಹಳ್ಳಿಯೊಂದರ ರೈತ 4 ಗುಂಟೆ ಜಾಗದಲ್ಲಿ ಮೀನು, ಜೇನು, ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಣೆ ಮಾಡಿ ವರ್ಷಕ್ಕೆ 15 ಲಕ್ಷ ರೂ. ದುಡಿಯುತ್ತಿದ್ದಾರೆ. ಸಣ್ಣ ಭೂಮಿಯಲ್ಲಿ ಯಾವ ಕೃಷಿ ಮಾಡಲು ಸಾಧ್ಯ ಎನ್ನುವವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು, ಕೃಷಿಯ ಉಪ ಕಸುಬುಗಳನ್ನು ಮಾಡಿದರೆ ರೈತರು ದಾಯ ಹೆಚ್ಚಿಸಿಕೊಳ್ಳಬಹುದು ಎನ್ನುವುದಕ್ಕೆ ಇವರೇ ನಿದರ್ಶನ. ಈ ಯುವ ಪ್ರತಿಭಾವಂತ ರೈತ ‘ಫೈನಾನ್ಸಿಯಲ್ ಫ್ರೀಡಂ ಆಪ್’ನಲ್ಲಿ ತಮ್ಮ ಯಶೋಗಾಥೆ ತೆರೆದಿಟ್ಟಿದ್ದಾರೆ.

ನುಗ್ಗೆ ಸೊಪ್ಪಿನ ಪೌಡರ್ ಮಾಡಿ ಲಕ್ಷ ಲಕ್ಷ ದುಡಿಯುತ್ತಿರುವ ರೈತ: ನುಗ್ಗೇ ಸೊಪ್ಪಿನಲ್ಲಿ ಸಂಬಾರ್ ಮಾಡಬಹುದು, ಅದಕ್ಕಿಂತ ಹೆಚ್ಚಿಗೆ ಏನು ಸಾಧ್ಯ? ಎಂದು ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ ಕೊಪ್ಪಳದ ರೈತರೊಬ್ಬರು ನುಗ್ಗೆ ಸೊಪ್ಪು ಬೆಳೆದು ಅದರ ಪುಡಿ ಮಾಡಿ ವಿದೇಶಕ್ಕೆ ರಫ್ತು ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. 85 ಎಕರೆ ಪ್ರದೇಶದಲ್ಲಿ ನುಗ್ಗೆ ಸೊಪ್ಪು ಬೆಳೆದಿರುವ ಅವರು ಒಂದು ಕೆಜಿ ನುಗ್ಗೆ ಸೊಪ್ಪಿನ ಪೌಡರ್ ಅನ್ನು 3,500 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ವಿದೇಶದಲ್ಲಿ ನುಗ್ಗೆ ಸೊಪ್ಪಿನ ಪುಡಿಗೆ ಭಾರಿ ಬೇಡಿಕೆ ಇರುವುದನ್ನು ಮನಗಂಡು ಈ ರೀತಿಯ ವಿಭಿನ್ನ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಬರೀ ನುಗ್ಗೆ ಸೊಪ್ಪು ಮಾತ್ರವಲ್ಲ, ನುಗ್ಗೆ ಟೀ ಪೌಡರ್, ಎಣ್ಣೆ, ಕ್ಯಾಪ್ಸೂಲ್, ಮಾತ್ರೆಗಳನ್ನು ಅವರು ತಯಾರಿಸುತ್ತಿದ್ದಾರೆ. ‘ಫೈನಾನ್ಸಿಯಲ್ ಫ್ರೀಡಂ ಆಪ್’ನಲ್ಲಿ ಕೊಪ್ಪಳದ ರೈತ, ಇತರ ರೈತರೂ ಹೇಗೆ ಆದಾಯ ಹೆಚ್ಚಿಸಿಕೊಳ್ಳಬಹುದು ಎನ್ನುವ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.

1,200 ರೂ. ಗೆ ಕೆ.ಜಿ. ಜೇನು ಮಾರಾಟ ಮಾಡುತ್ತಿರುವ ರೈತ: ಸೂಪರ್ ಮಾರ್ಕೆಟ್​ನಲ್ಲಿ ಸುಮಾರು 300 ರೂ.ಗೆ ಒಂದು ಕೆ.ಜಿ. ಜೇನುತುಪ್ಪ ಸಿಗುತ್ತದೆ. ಆದರೆ ದಾಂಡೇಲಿಯ ರೈತರೊಬ್ಬರು 1,200 ರೂ.ಗೆ ಒಂದು ಕೆ.ಜಿ. ಜೇನುತುಪ್ಪ ಮಾರಾಟ ಮಾಡುತ್ತಿದ್ದಾರೆ. ಅಯ್ಯೋ ಜನರೇಕೆ ಇಷ್ಟು ದುಬಾರಿ ಹಣ ಕೊಡುತ್ತಿದ್ದಾರೆ ಅಂತ ನಿಮಗೆ ಅನಿಸಬಹುದು. ಆದರೆ, ಆ ರೈತ ಹನಿ ಪಾರ್ಕ್​ವೊಂದನ್ನು ನಿರ್ವಿುಸಿದ್ದಾರೆ. ಹನಿ ಪಾರ್ಕ್​ನಲ್ಲಿ ಜೇನು ತುಪ್ಪ ಹೇಗೆ ಉತ್ಪತ್ತಿಯಾಗುತ್ತದೆ, ಯಾವ ಜೇನು ಯಾವ ಆರೋಗ್ಯಕ್ಕೆ ಸೂಕ್ತ, ಜೇನು ಬಳಸುವುದರಿಂದ ಆಗುವ ಪರಿಣಾಮವೇನು? ಹೀಗೆ ಜೇನು ತುಪ್ಪದ ಎಲ್ಲ ಆಯಾಮಗಳನ್ನು ಜನರಿಗೆ ತಿಳಿಸುತ್ತಾರೆ. ಇಷ್ಟೆಲ್ಲ ತಿಳಿಸಿದ ಮೇಲೆ, ನಿರ್ದಿಷ್ಟ ಜೇನನ್ನು ಎಲ್ಲಿಂದ ಸಂಗ್ರಹಿಸಲಾಗಿದೆ, ಅದು ಕಾಡು ಜೇನೋ ಇಲ್ಲ, ಸಾಕಿದ ಜೇನೋ? ಎನ್ನುವ ಬಗ್ಗೆಯೂ ಮಾಹಿತಿ ಒದಗಿಸುತ್ತಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ತಾವು ಮಾರಾಟ ಮಾಡುತ್ತಿರುವುದು ಉತ್ಕೃಷ್ಟ ಗುಣಮಟ್ಟದ ಜೇನು ಎನ್ನುವುದನ್ನು ಅವರು ನಿರೂಪಿಸುತ್ತಾರೆ. ಹಾಗಾಗಿ ಹೆಚ್ಚು ಹಣ ಕೊಟ್ಟು ಆ ರೈತನ ಬಳಿ ಜನ ಜೇನು ಖರೀದಿಸುತ್ತಾರೆ. ನಾವು ಬೆಳೆದ ಉತ್ಪನ್ನಕ್ಕೆ ಮಾರುಕಟ್ಟೆ ಇಲ್ಲ ಎಂದು ಕೊರಗುವ ಬದಲು, ಮಾರುಕಟ್ಟೆಯನ್ನು ಹೇಗೆ ಸೃಷ್ಟಿಸಬಹುದು ಎನ್ನುವುದಕ್ಕೆ ಆ ರೈತೋದ್ಯಮಿಯೇ ನಿದರ್ಶನ.

ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ: ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕೃಷಿ, ಬಿಸಿನೆಸ್ ಮತ್ತು ಹಣಕಾಸು ನಿರ್ವಹಣೆ ಬಗ್ಗೆ ಕನ್ನಡದಲ್ಲೇ ನೂರಾರು ಕೋರ್ಸ್​ಗಳಿವೆ. ಈ ಕೋರ್ಸ್​ಗಳಲ್ಲಿ ನಿರ್ದಿಷ್ಟ ಕ್ಷೇತ್ರಗಳ ದೊಡ್ಡ ಸಾಧಕರೇ ಮಾರ್ಗದರ್ಶನ ಮಾಡಿದ್ದಾರೆ. ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ಆದಾಯ ಹೆಚ್ಚಳದ ಮಾರ್ಗ ಕಂಡುಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net