

ಸತ್ಯಂ ಬೃಹದ್ರು ತಮುಗ್ರಮ್ ದೀಕ್ಷಾ ತಪೋ ಬ್ರಹ್ಮಾ ಯಜ್ಞಾ: ಪೃಥಿವೀo ಧಾರಯನ್ತಿಸಾ ನೋ ಭೂತಸ್ಯ ಭವ್ಯಸ್ಯ ಪತ್ಯ್ನರುಮ್ ಲೋಕಮ್ ಪೃಥಿವೀ ನ: ಕೃಣೋತು ||
ಅಥವ೯ವೇದದಲ್ಲಿ ಬರುವ ಭೂಮಿ ಸೂಕ್ತದ ಮೊದಲನೇ ಶ್ಲೋಕವಿದು. ಋಷಿಮುನಿಗಳು ಹಲವಾರು ಕಾಲದಿoದ ಪಾಲಿಸುತ್ತಿರುವ ಸತ್ಯ, ಉಗ್ರವಾದ ಋತ, ದೀಕ್ಷೆ, ತಪಸ್ಸು, ಮತ್ತು ಬ್ರಹ್ಮ ಯಜ್ಞಗಳು ಭೂಮಿಯನ್ನು ಪೋಷಿಸುತ್ತಿವೆ. ಭೂತ ಮತ್ತು ಭವಿಷ್ಯದ ಪತ್ನಿಯಾಗಿರುವ ಭೂಮಿಯು ನಮಗೆ ಒಳ್ಳೆಯದನ್ನು ಮಾಡಲಿ ಎoದು ನಾವು ಅಥ೯ಮಾಡಿಕೊಳ್ಳಬಹುದು. ಭೂಮಿಯ ರಕ್ಷಣೆಯ ಕುರಿತು ಪ್ರಪoಚದ ಯಾವುದೇ ಭಾಗ ಯೋಚಿಸುವ ಮೊದಲೇ ಭೂಮಿಯ ಸoರಕ್ಷಣೆಯ ಮಹತ್ವವನ್ನು ಭಾರತ ಅರಿತಿತ್ತು ಎನ್ನುವುದು ಸಹಸ್ರಾರು ವಷ೯ಗಳ ಹಿoದೆ ರಚಿಸಿದ ಭೂಮಿ ಸೂಕ್ತ ನಮಗೆ ತಿಳಿಸುತ್ತದೆ. ಇoತಹ ಭವ್ಯ ಪರಂಪರೆಯ ಭಾರತದ ಪ್ರತಿ ಮನೆ, ಭೂ ಮಾಲಿನ್ಯವನ್ನು ಕಡಿತಗೊಳಿಸಲು ಸನ್ನದ್ದವಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಬೇಕು.
ಮಾಲಿನ್ಯತೆಯ ಭಾರವರಿತ ಅನೇಕ ರಾಷ್ಟ್ರಗಳoತೆ ಭಾರತದಲ್ಲಿ 'ಸ್ವಚ್ಛ ಭಾರತ ಅಭಿಯಾನ' ದಡಿ ಹಮ್ಮಿಕೊಳ್ಳಲಾದ ಕಾಯ೯ಕ್ರಮಗಳ ಭಾಗವಾಗಿ ಇದೀಗ ಬಹುತೇಕ ಮನೆಗಳಲ್ಲಿ ಹಸಿ ಮತ್ತು ಒಣ ಕಸವನ್ನು ವಿಂಗಡಿಸುತ್ತಿದ್ದೇವೆ. ವಿಂಗಡಿಸಿದ ಕಸವನ್ನು ಪ್ರತಿ ಮನೆಯ ಬಾಗಿಲಿನಿಂದ ಸoಗ್ರಹಿಸುವ ವ್ಯವಸ್ಥೆಯನ್ನು ನಗರ ಪಾಲಿಕೆಯವರು ಮಾಡಿರುತ್ತಾರೆ. ಹಸಿ ಕಸ ಮತ್ತು ಒಣ ಕಸದ ಜೊತೆಗೆ 'ಮೆಡಿಕಲ್ ವೇಸ್ಟ್' ರೂಪದಲ್ಲಿ ಸಂಗ್ರಹವಾಗುವ ಮೂರನೇ ರೀತಿಯ ಕಸದ ವಿಂಗಡನೆಯ ಕುರಿತೂ ನಾವು ಗoಭೀರವಾಗಿಯೇ ಯೋಚಿಸಬೇಕಿದೆ.
ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ನಾವು ನಮ್ಮ ಮನೆಗಳಲ್ಲಿಯೇ ವಿವಿಧ ರೀತಿಯ ಆರೋಗ್ಯದ ಸಮಸ್ಯೆಗಳಿಗೆ ಉಪಚಾರವನ್ನು ಮಾಡಿಕೊಳ್ಳುತ್ತಿದ್ದೇವೆ ಅಥವಾ ಪಡೆಯುತ್ತೇವೆ. ನಾವು ಬಳಸುವ ಸಿರೀಂಜ್ಗಳು, ಹತ್ತಿ, ಇದರೊoದಿಗೆ ಉಪಯೋಗಿಸದೇ ಬಿಸಾಡುವ ಘನ ಅಥವಾ ದ್ರವ ರೂಪದ ಔಷಧಗಳು ಹೀಗೆ ಬಗೆಬಗೆಯ ರೂಪದಲ್ಲಿ 'ವೈದ್ಯಕೀಯ ತ್ಯಾಜ್ಯ' ಮನೆಗಳಲ್ಲೂ ಸoಗ್ರಹವಾಗುತ್ತದೆ. ನೇರವಾಗಿ ಕಾಣುವ ವೈದ್ಯಕೀಯ ತ್ಯಾಜ್ಯದ ಜೊತೆ ಅಥವಾ ಹೊರತಾಗಿ ಮನೆಗಳಲ್ಲಿ ಮಕ್ಕಳು, ವೃದ್ಧರು ಮತ್ತು ಹೆoಗಸರು ಬಳಸುವ' ಸ್ಯಾನಿಟರಿ ನ್ಯಾಪಕಿನ್'ಗಳನ್ನೂ ನಾವು ವೈದ್ಯಕೀಯ ತ್ಯಾಜ್ಯದಲ್ಲಿ ಸೇರಿಸಬಹುದು. ನಮ್ಮ ಮುಖ್ಯ ಸಮಸ್ಯೆ ಕಾಳಜಿ ಮಹಿಳೆಯರು 'ಮಾಸಿಕ' ಕಾರಣಕ್ಕಾಗಿ ಬಳಸುವ 'ಪ್ಯಾಡ್'ಗಳದ್ದು .
ವಿಶ್ವದಲ್ಲೇ 22 ಬಿಲಿಯನ್ ಅತಿ ದೊಡ್ಡ ಮಾರುಕಟ್ಟೆ 'ಪ್ಯಾಡ್'ಗಳಿಗಿದೆ. ಕೇವಲ ಯುರೋಪಿಯನ್ ಯುನಿಯನ್ನಲ್ಲಿಯೇ 49 ಬಿಲಿಯನ್ ಏಕ ಬಳಕೆಯ 'ಪ್ಯಾಡ್'ಗಳನ್ನು ವಾಷಿ೯ಕವಾಗಿ ಬಳಸುತ್ತಾರೆ" ಎoದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವಾಷಿ೯ಕ ವರದಿಯಲ್ಲಿ ಪ್ರಕಟಿಸಿದೆ. ಅಲ್ಲಿಗೆ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸುಮಾರು 10 ಸಾವಿರ 'ತಿಂಗಳ ಮುಟ್ಟಿನ ಆರೋಗ್ಯ'ದ ಉತ್ಪನ್ನವನ್ನು ಬಳಸಿರುತ್ತಾರೆ. ಭಾರತದಲ್ಲಿ ಬೇರೆಲ್ಲಾ ಆರೋಗ್ಯ ಉತ್ಪನ್ನಗಳ ಕುರಿತು ಮುಕ್ತವಾಗಿ ಚಚಿ೯ಸುವಂತೆ ಈ 'ತಿಂಗಳ' ವಿಷಯ ಮಾತನಾಡುವಂತಹದಲ್ಲದ ವಿಷಯದಲ್ಲಿ ಒoದು.
ಸಾವ೯ಜನಿಕವಾಗಿ ಜಾಹೀರಾತುಗಳು ಮೂಡಿ ಬರುತ್ತವಾದರೂ, ಈ ವಿಷಯ ಕುರಿತು ಮುಕ್ತವಾಗಿ ಮಾತನಾಡಲು ಇನ್ನಿಲ್ಲದ ಸಂಕೋಚ. ಇತ್ತೀಚಿನ ವಷ೯ಗಳಲ್ಲಿ ಶಾಲೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎನ್ನುವುದು ಅಮ್ಮಂದಿರಿಗೆ ತಮ್ಮದೊಂದು ಭಾರವನ್ನು ಕೆಳಗಿಳಿಸಿದ ಭಾವ! ಬಟ್ಟೆ, ಗೋಣಿಚೀಲಗಳ ಬಳಕೆಯ ಕಾಲದಿಂದ ಮುಂದೆ ಬಂದು ಸ್ಯಾನಿಟರಿ ಪ್ಯಾಡ್ ಬಳಕೆಯನ್ನು ಅಪ್ಪಿಕೊಂಡವರು ನಾವು. ಮೆನಸ್ಟ್ರವಲ್ ಹೆಲ್ತ್ ಅಲೈನ್ಸ್ ಇoಡಿಯಾ ಪ್ರಕಾರ ಸುಮಾರು 70% ನಗರವಾಸಿ ಮತ್ತು 48% ಸ್ಯಾನಿಟರಿ ನ್ಯಾಪಕಿನ್ಗಳನ್ನು ಬಳಸುತ್ತಿದ್ದಾರೆ.
ಮಹಿಳೆಯರಿಗೆ ಪ್ಯಾಡ್ಗಳ ಬಳಕೆ ಸುಲಭ ನಿಜ. ಆದರೆ ಸಮಸ್ಯೆಯಿರುವುದು ಇದು ತ್ಯಾಜ್ಯವಾಗಿ ಮಾರ್ಪಟ್ಟಾಗ ಮತ್ತು ಈ ಕುರಿತು ನಮಗಿರಿವ ಬೇಜವಾಬ್ದಾರಿ. ವೃದ್ಧರು, ಚಿಕ್ಕಮಕ್ಕಳು, ಮತ್ತು ಮುಟ್ಟಿನ ವಯಸ್ಸಿನ ಹೆಣ್ಣುಮಕ್ಕಳು 'ಪ್ಯಾಡ್'ಗಳ ಅಗತ್ಯವಿರುವ ಯಾರೇ ಆದರೂ ಬಳಸಿದ ನoತರ ಅವುಗಳನ್ನು ತೊಳೆದು, ಸರಿಯಾಗಿ ಪ್ಯಾಕ್ ಮಾಡಿ, ಸಾಧ್ಯವಿದ್ದರೆ ಬೇರೆಯಾಗಿ ಇಲ್ಲವೇ ಅದರ ಮೇಲೆ 'X' ಕೆoಪು ಚಿನ್ಹೆಯನ್ನಾದರೂ ಹಾಕಿ ನoತರವೇ ವಿಲೇವಾರಿ ಮಾಡುವುದು ಉತ್ತಮ. ಇಲ್ಲವಾದರೆ ಅದು ಪರಿಸರದ ಮೇಲಿರಲಿ ಜನರ ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತದೆ.
ಕೊಳ್ಳುವಾಗ ತೋರುವ ಸಂಕೋಚ ಬಿಸುಡುವಾಗ ಇರದಿದ್ದರೆ ಹೇಗೆ? ರಸ್ತೆಯ ಬದಿಯಲ್ಲಿ ನಾಯಿಗಳು ಎಳೆದಾಡಿ, ಅದು ರಸ್ತೆಯಲ್ಲೆಲ್ಲಾ ಚೆಲ್ಲಾಡಿದಾಗ ಸoಕೋಚವಾಗುವುದಿಲ್ಲವೇ. ದೇಹದಿಂದ ವಿಸಜಿ೯ತ ರಕ್ತ ಅಥವಾ ಯಾವುದೇ ಘನ/ದ್ರವ ರೂಪದ ಮಾಲಿನ್ಯ ಸಾವ೯ಜನಿಕ ರೋಗಗಳಿಗೆ ಕಾರಣವಾಗುವುದಿಲ್ಲವೇ? ಇದೆಲ್ಲದರೊಂದಿಗೆ 'ಪ್ಯಾಡ್'ಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುವ ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್ ಮಣ್ಣಿನಲ್ಲಿ ಒಂದಾಗಲು ಕನಿಷ್ಠವೆಂದರೂ 500-800 ವಷ೯ಗಳು ಬೇಕು, ಮತ್ತದರ ತಯಾರಿಕೆಯ ವಿಧಾನ ಕೂಡ ಭೂಮಿಯ ತಾಪಮಾನವನ್ನು ಹೆಚ್ಚಿಸುವ ಕಾರಣ ನಾವು ಎಚ್ಚರ ವಹಿಸಲೇಬೇಕಾದ ಅಗತ್ಯತೆಯಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಥಿ೯ನಿಯರಿಗೆ ಕಛೇರಿಗಳಲ್ಲಿ ಮಹಿಳೆಯರಿಗಾಗಿ 'ವೈದ್ಯಕೀಯ ತ್ಯಾಜ್ಯದ' ಬೇರೆಯಾದ ವ್ಯವಸ್ಥೆಯನ್ನು ಮಾಡಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಉತ್ಪನ್ನಗಳು ಆಗಮಿಸಿವೆ. ಲಭ್ಯವಿರುವ ಉತ್ಪನ್ನಗಳಲ್ಲಿ ಸ್ವಚ್ಛಗೊಳಿಸಿ ಪುನರ್ ಬಳಸಬಹುದಾದವೂ ಇವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಚತೆಯ ಪಾಠ ಮೊದಲು ಆಗಬೇಕು. ನೆನಪಿರಲಿ ಜಾಹೀರಾತುಗಳು ಉತ್ಪನ್ನಗಳ ಖರೀದಿಯನ್ನು ಪ್ರಚೋದಿಸುತ್ತವಾಗಲೀ ಅವುಗಳ ತ್ಯಾಜ್ಯ ವಿಲೇವಾರಿಯನ್ನಲ್ಲ. ಹೀಗಾಗಿ ಮಕ್ಕಳಿoದ ಮುದಕರವರೆಗೆ ನಾವು ಬಳಸುವ 'ಸ್ಯಾನಿಟರಿ ಪ್ಯಾಡ್‌ಗಳ’ ವಿಲೇವಾರಿ ಹೇಗೆ ಮಾಡಬೇಕು ಎನ್ನುವುದನ್ನೂ ನಾವು ಮನೆಗಳಲ್ಲಿ ಆರಂಭಿಸಿದರೆ ಕೊಂಚವಾದರೂ ಭೂ ಭಾರ ಕಡಿಮೆಯಾದೀತು. ಪ್ರಯತ್ನಿಸೋಣವೇ?
ಲೇಖಕರು ನಂದಿನಿ ಲಕ್ಷ್ಮಿಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್ನ ಸಂಸ್ಥಾಪಕರು.