

ಬಿಬಿಎಂಪಿ 2019-20ನೇಸಾಲಿನಲ್ಲಿ 3,500 ಕೋಟಿ ರೂ. ಆಸ್ತಿ ತೆರಿಗೆ ಗುರಿಯಲ್ಲಿ, ಈವರೆಗೆ 2,534 ಕೋಟಿ ರೂ. ಸಂಗ್ರಹಿಸುವ ಮೂಲಕ ಶೇ. 72 ಗುರಿ ಸಾಧಿಸಿದೆ. ಜತೆಗೆ ಹಾಲಿ ವಿತ್ತೀಯ ವರ್ಷದ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ. 85 ಗುರಿ ತಲುಪುವ ಮೂಲಕ ಪಾಲಿಕೆ ಉತ್ತಮ ಸಾಧನೆ ಮಾಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 20 ಲಕ್ಷಕ್ಕೂ ಅಧಿಕ ಆಸ್ತಿಗಳಿರುವು ದಾಗಿ ಕಂದಾಯ ಇಲಾಖೆ ಮಾಹಿತಿ ನೀಡಿದೆ. ಈ ಆಸ್ತಿಗಳಿಂದ 3,500 ಕೋಟಿ ರೂ. ತೆರಿಗೆ ಸಂಗ್ರಹಣೆ ಮಾಡುವ ಗುರಿ ಹೊಂದಲಾಗಿತ್ತು. ಅದರಂತೆ ಫೆ.18 ರವರೆಗೆ 2,534 ಕೋಟಿ ರೂ. ಸಂಗ್ರಹಣೆಯಾಗಿದ್ದು, ಶೇ 72.4 ಗುರಿಯನ್ನು ಈಗಾಗಲೇ ಸಾಧಿಸಿದೆ. ತೆರಿಗೆ ಸಂಗ್ರಹಣೆ ಮಾಡಲು ಇನ್ನೂ 40 ದಿನಗಳು ಬಾಕಿಯಿದ್ದು, 966 ಕೋಟಿ ರೂ. ಅಂದರೆ ಶೇ 27.6 ಮಾತ್ರ ಬಾಕಿಯಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಆಸ್ತಿ ತೆರಿಗೆ ಪಾವತಿಯಲ್ಲಿ ಉತ್ತಮ ಗುರಿ ಸಾಧನೆಯಾಗಿದೆ.
ಆಫ್ಲೈನ್ ತೆರಿಗೆಯೇ ಹೆಚ್ಚು: ಆಸ್ತಿ ತೆರಿಗೆ ಪಾವತಿ ಮಾಡಲು ತೆರಿಗೆದಾರ ರಿಗೆ ಕಳೆದ ಎರಡು ವರ್ಷಗಳಿಂದ ಆನ್ಲೈನ್ ಮತ್ತು ಆಫ್ಲೈನ್ ಸೌಲಭ್ಯವನ್ನು ಪಾಲಿಕೆ ಒದಗಿಸಿದೆ. ಆದರೆ ಆನ್ಲೈನ್ ಪಾವತಿಯಲ್ಲಿ ಕೊಂಚ ಹಿಂದೆ ಬಿದ್ದಿರುವ ತೆರಿಗೆದಾರರು ಆಫ್ಲೈನ್ (ಬ್ಯಾಂಕ್ ಚಲನ್) ಮೂಲಕ ತೆರಿಗೆ ಹೆಚ್ಚು ಪಾವತಿಸಿದ್ದಾರೆ. ಆನ್ಲೈನ್ ಮೂಲಕ 1,021 ಕೋಟಿ ರೂ. ಸಂಗ್ರಹವಾದರೆ, ಆಫ್ಲೈನ್ ಮೂಲಕ 1,515 ಕೋಟಿ ರೂ. ಸಂಗ್ರಹಣೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಫೆ.18ರಲ್ಲಿ 150 ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಬಾಕಿ ಉಳಿಸಿಕೊಂಡವರಿಗೆ ಜಪ್ತಿ ವಾರೆಂಟ್ ನೀಡಿ ತೆರಿಗೆ ಸಂಗ್ರಹ ಮಾಡುತ್ತೇವೆ. ಈ ಸಾಲಿನಲ್ಲಿ ಪಾಲಿಕೆ ಗುರಿಯನ್ನು ಶೇ 100 ಸಾಧನೆ ಮಾಡುತ್ತೇವೆ. | ಬಿ.ಎಚ್. ಅನಿಲ್ಕುಮಾರ್ ಪಾಲಿಕೆ ಆಯುಕ್ತ
| ಸತೀಶ್