

ದೇಶದ ರಿಯಾಲಿಟಿ ಉದ್ಯಮದಲ್ಲಿ ಅತಿ ಹೆಚ್ಚು ಮನೆಗಳು ಮಾರಾಟವಾಗುವ ಬೃಹತ್ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೆಯ ಸ್ಥಾನ ಸಿಕ್ಕಿದೆ. ಈ ಬಗ್ಗೆ ಟ್ರೆಸ್ಪೆಕ್ಟ್ ಸಂಸ್ಥೆ ವರದಿ ನೀಡಿದೆ.
ಕಳೆದ 4 ವರ್ಷಗಳಿಂದ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ರಿಯಾಲ್ಟಿ ಮಾರುಕಟ್ಟೆ ಕುಸಿತವಾಗಿತ್ತು. ಆದರೆ ಕಳೆದ 3 ತಿಂಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸೂತ್ರಗಳಿಂದ ಚೇತರಿಕೆ ಕಂಡುಬಂದಿದ್ದು, ಸಕಾರಾತ್ಮಕ ಹಾದಿಯಲ್ಲಿ ಸಾಗುತ್ತಿದೆ.
ಇದು ಉದ್ಯಮಕ್ಕೆ ಉತ್ತಮ ಕೊಡುಗೆಯಾಗಿದೆ. ದೇಶದ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆಯಲ್ಲಿ ವಾರ್ಷಿಕ ಶೇ. 6 ರಷ್ಟು ಹೆಚ್ಚಳವಾಗುತ್ತಿದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಾರ್ಷಿಕ ಶೇ. 3.6ರಷ್ಟು ಹೆಚ್ಚಳವಾಗುತ್ತಿದ್ದು, ಗ್ರಾಹಕ ಸ್ನೇಹಿ ವಾತಾವರಣ ನಿರ್ವಣವಾಗಿದೆ.
ಉದ್ಯಮಕ್ಕೆ ಪೂರಕ ನಗರ
ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬೆಂಗಳೂರಿನಲ್ಲಿ ಪೂರಕ ವಾತಾವರಣವಿದೆ. ನಗರದಲ್ಲಿ ಸಾಕಷ್ಟು ಕೆರೆಗಳು ಮತ್ತು ಉದ್ಯಾನಗಳಿರುವುದು ಇಲ್ಲಿ ನೆಲೆಯೂರಲು ಪೂರಕವಾಗಿದೆ. ಇನ್ನು ಸಿಲಿಕಾನ್ ಸಿಟಿ, ತಂತ್ರಜ್ಞಾನ ಸಿಟಿಯಾಗಿ ಬೆಳವಣಿಗೆಯಾಗಿದ್ದು ವಿಶ್ವದ ಅನೇಕರು ಬಂದು ಇಲ್ಲಿ ನೆಲೆಸುತ್ತಿದ್ದಾರೆ.
ಹಾಗಾಗಿ ನಗರದ ಐಟಿ ಉದ್ಯಮಗಳು ಹೆಚ್ಚಾಗಿ ನೆಲೆಗೊಂಡಿರುವ ಸ್ಥಳಗಳಲ್ಲಿಯೇ ಹೆಚ್ಚು ಮನೆಗಳು ನಿರ್ವಣವಾಗುತ್ತಿವೆ. ಜತೆಗೆ ಮೆಟ್ರೋ, ಬಿಎಂಟಿಸಿ ಸೇರಿ ಸಾರಿಗೆ ಮತ್ತು ಸಂಪರ್ಕಕ್ಕೆ ಹೆಚ್ಚು ಅನುಕೂಲ ಒದಗಿಸಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಮಧ್ಯಮ ವರ್ಗದ ಮನೆಗಳು ಹೆಚ್ಚು ಮಾರಾಟ
2019ರಲ್ಲಿ -ಠಿ; 40 ಲಕ್ಷಕ್ಕಿಂತ ಕಡಿಮೆ ಮೊತ್ತದ ಮನೆಗಳು ಶೇ.30 ರಷ್ಟು ಮಾರಾಟವಾಗಿವೆ. ಮಧ್ಯಭಾಗದ -ಠಿ; 40 ಲಕ್ಷದಿಂದ -ಠಿ; 80ರವರೆಗಿನ ಮನೆಗಳು ಶೇ. 42ರಷ್ಟು ಹಾಗೂ ಹೆಚ್ಚು ಬಂಡವಾಳದ (ಐಷಾರಾಮಿ ಸೌಲಭ್ಯ ಹೊಂದಿರುವ) -ಠಿ;80 ಲಕ್ಷ ದಿಂದ -ಠಿ;1.5 ಕೋಟಿ ಬೆಲೆಯ ಮನೆಗಳು ಶೇ.25ರಷ್ಟು ಮಾರಾಟವಾಗಿವೆ. ಇದಕ್ಕೆ ತಕ್ಕಂತೆ ಬೆಂಗಳೂರಿನಲ್ಲಿ ಉದ್ಯಮಿಗಳು ಕೂಡ ಗ್ರಾಹಕರ ನಿರೀಕ್ಷೆಯಂತೆ ಮನೆಗಳನ್ನು ನಿರ್ವಿುಸುತ್ತಿರುವ ಕಾರಣ, ರಿಯಾಲ್ಟಿ ಕ್ಷೇತ್ರ ಇನ್ನಷ್ಟು ವಿಸ್ತಾರಗೊಳ್ಳುತ್ತಿದೆ.
ಮನೆಗಳ ನಿರ್ಮಾಣ ಏರಿಕೆ
ಕಳೆದ ನಾಲ್ಕು ವರ್ಷಗಳ ಹೋಲಿಕೆಯಲ್ಲಿ 2019ನೇ ಸಾಲಿನಲ್ಲಿ ಹೆಚ್ಚು ಮನೆಗಳು ನಿರ್ವಣವಾಗಿವೆ. 2018ನೇ ಸಾಲಿಗೆ ಹೋಲಿಕೆ ಮಾಡಿದ್ದಲ್ಲಿ ಶೇ.30ರಷ್ಟು ಹೆಚ್ಚಿಗೆ ಮನೆಗಳನ್ನು ನಿರ್ವಿುಸಲಾಗಿದೆ. ಇದರಲ್ಲಿ ಉತ್ತರ ಭಾಗದಲ್ಲಿ ಶೇ.34, ಪೂರ್ವ ಭಾಗದಲ್ಲಿ ಶೇ.32 ಹಾಗೂ ದಕ್ಷಿಣ ಬೆಂಗಳೂರು ಭಾಗದಲ್ಲಿ ಶೇ.27ರಷ್ಟು ಮನೆಗಳು ನಿರ್ವಣವಾಗಿವೆ. ಅದಕ್ಕೆ ತಕ್ಕಂತೆ ನಗರದಲ್ಲಿ ವ್ಯಾಪಾರೋದ್ಯಮ ಹೆಚ್ಚಾಗುತ್ತಿದ್ದು, ಇಲ್ಲಿ ನೆಲೆಗೊಂಡವರಿಗೆ ಪರ್ಯಾಯ ಉದ್ಯೋಗಗಳೂ ಲಭ್ಯವಾಗುತ್ತಿವೆ.
ರಿಯಾಲ್ಟಿಗೆ ಆರೋಗ್ಯಕರ ನಗರ
ಟ್ರೆಸ್ಪೆಕ್ಟ್ ಸಂಸ್ಥೆಯು 2019 ರಲ್ಲಿ ಮುಂಬೈ, ಬೆಂಗಳೂರು, ದೆಹಲಿ, ಪುಣೆ, ಹೈದರಾಬಾದ್, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ 2.61 ಲಕ್ಷ ಮನೆಗಳ ಮಾರಾಟ ಮಾಡಿದೆ. ಇದರಲ್ಲಿ ಮುಂಬೈನಲ್ಲಿ 80 ಸಾವಿರ ಮನೆ ಮಾರಾಟವಾದರೆ, ಬೆಂಗಳೂರಿನಲ್ಲಿ 50,447 ಮನೆಗಳು (ಶೇ. 19.3) ಮಾರಾಟವಾಗುವ ಮೂಲಕ ದೇಶದಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ ಒಟ್ಟಾರೆ ಮಾರಾಟದಲ್ಲಿಯೂ ದ್ವಿತೀಯ ಸ್ಥಾನ ಪಡೆದಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬೆಂಗಳೂರು ಸ್ಥಿತಿಸ್ಥಾಪಕತ್ವ ಹೊಂದಿದೆ. ಇಲ್ಲಿ ಉದ್ಯಮಕ್ಕೆ ಆರೋಗ್ಯಯುತ ವಾತಾವರಣವಿದೆ ಎಂದು ಟ್ರೆಸ್ಪೆಕ್ಟ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುನೀಲ್ ಶರ್ಮಾ ತಿಳಿದಿದ್ದಾರೆ.
ಉತ್ತರ ವಲಯ ಅಗ್ರ
ನಗರದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬೆಂಗಳೂರನ್ನು ಸೆಂಟ್ರಲ್, ಪೂರ್ವ, ಉತ್ತರ, ದಕ್ಷಿಣ ಹಾಗೂ ಪಶ್ಚಿಮ ಎಂದು ಐದು ವಲಯಗಳನ್ನಾಗಿ ವಿಭಾಗ ಮಾಡಲಾಗಿದೆ. ಇಲ್ಲಿ ಉತ್ತರ ವಲಯದ ಹೆಬ್ಬಾಳ, ಯಲಹಂಕ, ಜಾಲಹಳ್ಳಿ, ಥಣಿಸಂದ್ರ ಮುಖ್ಯ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಶೇ. 34ರಷ್ಟು ಮನೆಗಳು ಮಾರಾಟವಾಗಿವೆ. ಪೂರ್ವ ಭಾಗದಲ್ಲಿ ಶೇ. 32ರಷ್ಟು, ದಕ್ಷಿಣ ಭಾಗದಲ್ಲಿ ಶೇ.27ರಷ್ಟು ಮತ್ತು ಪಶ್ಚಿಮ ವಲಯದಲ್ಲಿ ಶೇ. 7ರಷ್ಟು ಮನೆಗಳು ಮಾರಾಟವಾಗಿವೆ.
ಕಳೆದ 2017ರಲ್ಲಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಬಂದಾಗಿನಿಂದ ರಿಯಾಲ್ಟಿ ಉದ್ಯಮ ಹೆಚ್ಚಾಗಿ ಬೆಳೆದಿದೆ. ಅಂತಾರಾಷ್ಟ್ರೀಯ ಮಟ್ಟದ ಉದ್ಯಮ ಸಂಸ್ಥೆಗಳು ಭಾಗಿಯಾಗಿ ಗುಣಮಟ್ಟದ ಮನೆಗಳನ್ನು ನಿರ್ವಿುಸಿಕೊಡುತ್ತಿವೆ. ಇದರಲ್ಲಿ ಟ್ರೆಸ್ಪೆಕ್ಟ್ ಸಂಸ್ಥೆಯ 60ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. | ಸುನಿಲ್ ಶರ್ಮಾ ಸಿಇಒ ಟ್ರೆಸ್ಪೆಕ್ಟ್
| ಸತೀಶ್ ಕೆ.ಬಳ್ಳಾರಿ