ಆಯುರ್ವೇದ ಡೈಜೆಸ್ಟಿವ್ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ನಟ ಕಿಕು ಶಾರದಾ

Published on

ಮುಂಬೈ:
ಕಾಯಂ ಚೂರ್ಣ, ಟ್ಯಾಬ್ಲೆಟ್, ಗ್ರಾೃನ್ಯುಲ್ಸ್ ಆಯುರ್ವೇದ ಡೈಜೆಸ್ಟಿವ್ ಉತ್ಪನ್ನಗಳ ಪ್ರಮುಖ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ಕಿಕು ಶಾರದಾ ಅವರು ನೇಮಕಗೊಂಡಿರುವುದನ್ನು ಶೇತ್ ಬ್ರದರ್ಸ್ ೋಷಿಸಿದ್ದಾರೆ.
ಭಾರತ ಸೇರಿ ಜಾಗತಿಕ ಮಾರುಕಟ್ಟೆಯಾದ್ಯಂತ ಗ್ರಾಹಕರೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸಂಪರ್ಕ ಸಾಧಿಸಲು ಶೇತ್ ಬ್ರದರ್ಸ್ ಈ ೋಷಣೆ ಮಾಡಿದ್ದಾರೆ. ಭಾರತದಲ್ಲಿ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳು ಸಾಮಾನ್ಯವಾಗಿದ್ದು, ಇದು ಎಲ್ಲಾ ವಯಸ್ಸಿನವರ ಮೇಲೂ ಪರಿಣಾಮ ಬೀರುತ್ತಿದೆ. ಬಿಡುವಿಲ್ಲದ ಜೀವನಶೈಲಿ, ಅನಿಯಮಿತ ಆಹಾರ ಪದ್ಧತಿ ಮತ್ತು ಒತ್ತಡ ಜೀರ್ಣಕಾರಿ ಅಸ್ವಸ್ಥತೆಗೆ ಕಾರಣವಾಗಿದೆ. ಇದು ವ್ಯಕ್ತಿದ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಗೆ ಕಾಯಂ ಚೂರ್ಣವು ತಲೆಮಾರುಗಳಿಂದ ವಿಶ್ವಾಸಾರ್ಹ ಆಯುರ್ವೇದ ಔಷಧವಾಗಿದ್ದು, ಪರಿಹಾರ ನೀಡುತ್ತಾ ಬಂದಿದೆ.
ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗಿರುವ ಈ ಕಾಯಂ ಚೂರ್ಣವು ಅರ್ಜಿಣ ಸಮಸ್ಯೆ ಹೊಂದಿರುವವರಿಗೆ ವರದಾನವಾಗಿದ್ದು, ಲಕ್ಷಾಂತರ ಜನರು ಇದನ್ನು ಸೇವಿಸುವ ಮೂಲಕ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಪಡೆದುಕೊಂಡಿದ್ದಾರೆ.
ಶೇತ್ ಬ್ರದರ್ಸ್ ತನ್ನ ಉತ್ಪನ್ನಗಳ ಕುರಿತು ಜಾಹಿರಾತು ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದು, ನಟ ಹಾಗೂ ಹಾಸ್ಯಗಾರ ಕಿಕು ಶಾರದಾ ಕ್ರಿಯಾತ್ಮಕ ಹಾಗೂ ಹಾಸ್ಯಭರಿತವಾಗಿ ಜಾಹಿರಾತಿನಲ್ಲಿ ಅಭಿನಯಿಸಿದ್ದಾರೆ. ಕಾಯಂ ಚೂರ್ಣ ಎಂಬುದು ಮನೆಯ ಪರಂಪರೆಯ ಬ್ರಾಂಡ್ ಆಗಿ ಹೆಸರಾಗಿದ್ದು, ಲಕ್ಷಾಂತರ ಕುಟುಂಬಗಳು ಬಳಕೆ ಮಾಡುತ್ತಿವೆ.
ಈ ಕುರಿತು ನಟ ಕಿಕು ಶಾರದಾ ಅವರು, ನಂಬಿಕೆ ಮತ್ತು ಗುಣಮಟ್ಟಕ್ಕೆ ಸಮರ್ಥವಾಗಿರುವ ಉತ್ಪನ್ನಕ್ಕೆ ಬ್ರಾಂಡ್ ಅಂಬಾರಿಡರ್ ಆಗಿರುವುದಕ್ಕೆ ಸಂತಸವಾಗಿದೆ. ಬಹಳ ಉತ್ಸಾಹದಿಂದ ಈ ಜಾಹಿರಾತಿನಲ್ಲಿ ಅಭಿನಯಿಸಿದ್ದೇನೆ. ಪರಿಣಾಮಕಾರಿ ಆಯುರ್ವೇದ ಪರಿಹಾರ ಒದಗಿಸುವ ದೃಷ್ಟಿಯೊಂದಿಗೆ ಸ್ಥಾಪಿತವಾದ ಶೇತ್ ಬ್ರದರ್ಸ್ ಅವರ ಈ ಉತ್ಪನ್ನ ಬಹಳ ಹಿಂದಿನಿಂದಲೂ
ಜೀರ್ಣಕಾರಿ ಸ್ವಾಸ್ಥ್ಯವನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ.
ಮೋಹಿತ್ ಶೇತ್ ಹಾಗೂ ಾಲಕ್ ಶೇತ್ ಸಹೋದರರು ಈ ಬ್ರಾಂಡ್‌ನ ಮೌಲ್ಯಗಳನ್ನು ಸಾಕಾರಗೊಳಿಸಿದ್ದಾರೆ. ವಿಶ್ವಾಸಾರ್ಹ ಮತ್ತು ಸಮರ್ಪಿತ ಉತ್ಪನ್ನದಿಂದ ಜನರ ಆರೋಗ್ಯ ಸುಧಾರಿಸಲು. ಕಾಯಂ ಚೂರ್ನಾ ಬ್ರಾಂಡ್‌ನೊಂದಿಗಿನ ಅವರ ಒಡನಾಟವು ಮುಂದೆ ಇನ್ನೂ ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net