ಗ್ರಾಮಪಂಚಾಯಿತಿಗಳಿಗೆ ಲೆಕ್ಕಪರಿಶೋಧನೆ ಕಡ್ಡಾಯವಾಗಲಿ: ಜನಮತ

Janamatha1
Published on

ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಖಾತ್ರಿ ನೀಡಿ ಆ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡಲು ಪಂಚಾಯಿತಿಗಳಿಗೆ ಸಾಕಷ್ಟು ಅನುದಾನ ನೀಡುವ ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆ ನರೇಗಾ. ಈ ಯೋಜನೆಗೆ ಈ ವರ್ಷದ ಬಜೆಟಿನಲ್ಲಿ -ಠಿ;70 ಸಾವಿರ ಕೋಟಿಗೂ ಅಧಿಕ ಹಣ ಮೀಸಲಿಡಲಾಗಿದೆ. ಅದರಲ್ಲಿ ಕರ್ನಾಟಕಕ್ಕೆ -ಠಿ; 4 ಸಾವಿರ ಕೋಟಿಗೂ ಅಧಿಕ ಹಣ ಅನುದಾನವಾಗಿ ಬರಲಿದೆ. ಇಷ್ಟೊಂದು ಹಣದ ವ್ಯವಹಾರ ಇರುವ ಈ ಯೋಜನೆಗೆ ಲೆಕ್ಕ ಪರಿಶೋಧನೆ ಅತಿ ಅಗತ್ಯ. ಹಿಂದೊಮ್ಮೆ 2013ರಲ್ಲಿ ಲೆಕ್ಕ ಪರಿಶೋಧನೆ ನಡೆಸಿದಾಗ ಈ ಯೋಜನೆಯಲ್ಲಿ ಹಣದ ದುರುಪಯೋಗ ಹಾಗೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಅದೇ ಕಾರಣಕ್ಕೆ ಮತ್ತೆ ಈಗ ನರೇಗಾ ಯೋಜನೆ ಬಗ್ಗೆ ವರದಿ ಪಡೆಯಲು ಲೋಕಾಯುಕ್ತ ಪೊಲೀಸರು ನೋಟಿಸ್ ಹೊರಡಿಸಿದ್ದು ಸ್ವಾಗತಾರ್ಹ.

ಅಧಿಕಾರ ವಿಕೇಂದ್ರಿಕರಣದ ಉದ್ದೇಶದಿಂದ ರಚಿತವಾದ ಗ್ರಾಮ ಪಂಚಾಯಿತಿಗಳು ಈಗ ಸರ್ಕಾರದ ಪ್ರಥಮ ಹಂತದ ಭ್ರಷ್ಟಾಚಾರ ಹಾಗೂ ಹಣದ ಅವ್ಯವಹಾರಗಳ ತಾಣವಾಗಿ ಮಾರ್ಪಾಡಾಗುತ್ತಿವೆ. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಗ್ರಾಮೀಣ ಭಾಗದ ಜನರಿಗೆ ತಲುಪಿಸಲು ಸರ್ಕಾರ ಎಲ್ಲ ಗ್ರಾಮ ಪಂಚಾಯಿತಿಗಳ ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ಕಡ್ದಾಯಗೊಳಿಸಬೇಕು. ಗ್ರಾಮಗಳಲ್ಲಿ ನಡೆಯುವ ಪ್ರತಿ ಅಭಿವೃದ್ಧಿ ಕಾರ್ಯಕ್ಕೆ ಪಂಚಾಯಿತಿ ಎಷ್ಟೊಂದು ಹಣ ಖರ್ಚು ಮಾಡಿದೆ ಎಂಬ ಮಾಹಿತಿ ಹಳ್ಳಿಯ ಜನರಿಗೆ ಸಿಗಬೇಕು. ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ನರೇಗಾ ಯೋಜನೆಯ ಉದ್ದೇಶ ಈಡೇರಲು ರಾಜ್ಯದಲ್ಲಿ ಆಯ್ಕೆಯಾದ ಹೊಸ ಪಂಚಾಯಿತಿ ಸದಸ್ಯರು ನರೇಗಾ ಯೋಜನೆಯನ್ನು ಗ್ರಾಮದ ಅಭಿವೃದ್ಧಿಗಾಗಿ ಬಳಸಬೇಕೆ ಹೊರತು ಆ ಹಣವನ್ನು ಜೇಬಿಗೆ ಇಳಿಸಿಕೊಳ್ಳಬಾರದು.

| ಲಕ್ಷ್ಮೀಕಾಂತಗೌಡ ಪಾಟೀಲ್ ಚೋರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net