

ಲಾಕ್ಡೌನ್ನಲ್ಲಿ ಸಿನಿಮಾ ತಾರೆಯರು ಸಿನಿಮಾ ನೋಡುವುದರಲ್ಲಿ ಬ್ಯುಸಿಯಾಗಿದ್ದಾರೆ. ದಿಗಂತ್ ಸಹ ಹಲವು ಸಿನಿಮಾ ನೋಡಿದ್ದಾರೆ. ಆ ಪೈಕಿ ಯಾವ ಸಿನಿಮಾ ಇಷ್ಟ ಆಯಿತು, ಯಾಕೆ ಹಿಡಿಸಿತು ಎಂದು ತಾವು ನೋಡಿದ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ. ಓವರ್ ಟು ದಿಗಂತ್...
ಸದ್ಯ ಕರೊನಾ ಹಾವಳಿ ಎಲ್ಲೆಡೆ ಜೋರಾಗಿದೆ. ಕೋವಿಡ್ ಕಾಯಿಲೆಯನ್ನೇ ಹೋಲುವ ಸಿನಿಮಾವೊಂದು ಒಂಬತ್ತು ವರ್ಷಗಳ ಹಿಂದೆಯೇ ಬಿಡುಗಡೆಯಾಗಿತ್ತು. ಅದರ ಹೆಸರು ‘ಕಂಟೇಜಿಯನ್’. ಆ ಚಿತ್ರದಲ್ಲಿ ಕರೊನಾ ರೀತಿಯ ವೈರಸ್ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಪ್ರಸ್ತುತ ನಡೆಯತ್ತಿರುವ ರೀತಿಯಲ್ಲಿಯೇ ಸಾಂಕ್ರಾಮಿಕವಾಗಿ ಆ ಕಾಯಿಲೆ ಸಿನಿಮಾದಲ್ಲಿಯೂ ಹಬ್ಬಿತ್ತು. ಅದರಿಂದ ಏನೆಲ್ಲ ಆಗಿತ್ತು ಮತ್ತು ಎಷ್ಟೆಲ್ಲ ಜನ ಸತ್ತರು ಎಂಬುದನ್ನು ಹೇಳಲಾಗಿದೆ. ಸ್ಟೇವಿನ್ ಸೋಬರ್ಗ್ ನಿರ್ದೇಶನದಲ್ಲಿ ಸಿನಿಮಾ ತಯಾರಾಗಿದೆ. ಈ ಸಿನಿಮಾ ನೋಡಿದ ಬಳಿಕ ನನ್ನ ಸ್ನೇಹಿತರಿಗೆ ಸಂಬಂಧಿಕರಿಗೆ ಈ ಚಿತ್ರ ನೋಡುವಂತೆ ಹೇಳಿದ್ದೇನೆ. ಅದೇ ರೀತಿ ಕನ್ನಡದಲ್ಲಿ ‘ದಿಯಾ’ ಇಷ್ಟವಾಯಿತು. ವಿದೇಶಿ ಸಿನಿಮಾಗಳಲ್ಲಿ ಮಾರ್ವಲ್ ಕಾಮಿಕ್ಸ್ನ ‘ಎವೆಂಜರ್ಸ್’ ಸಹ ನೋಡಿದ್ದೇನೆ. ನೋಡ ಬೇಕಾದ ಸಿನಿಮಾಗಳ ಪಟ್ಟಿ ದೊಡ್ಡದಿದೆ.