

| ಶಶಿಧರ ಗರ್ಗೇಶ್ವರಿ
ಯೂಟ್ಯೂಬ್ ಮೂಲಕ ವಿಡಿಯೋಗಳನ್ನು ಹರಿಬಿಟ್ಟು ಆದಾಯ ಗಳಿಸುತ್ತಿರುವವರು ಅದರಲ್ಲಿ ತನಗೊಂದಿಷ್ಟು ರಾಜಸ್ವ ನೀಡಲಿ ಎಂಬುದು ಗೂಗಲ್ ಧೋರಣೆ. ಹೀಗಾಗಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಲಾಭ ಮಾಡಿಕೊಳ್ಳುತ್ತಿರುವವರು ಅದಕ್ಕೆ ತೆರಿಗೆ ತೆರಬೇಕು ಎಂಬ ನೀತಿಯನ್ನು ಈ ವರ್ಷ ಜೂನ್ನಿಂದ ಜಾರಿ ಮಾಡಲು ಗೂಗಲ್ ಮುಂದಾಗಿದೆ. ಅಮೆರಿಕದ ವೀಕ್ಷಕರಿಂದ ಲಾಭ ಗಳಿಸುತ್ತಿರುವ ಯೂಟ್ಯೂಬ್ಚಾನೆಲ್ಗಳಿಗೆ ಶೇ. 24ರಷ್ಟು ತೆರಿಗೆ ವಿಧಿಸುವುದಾಗಿ ತಿಳಿಸಿದೆ. ಯೂಟ್ಯೂಬ್ಗೆ ಜಾಹೀರಾತು ಮತ್ತು ಪ್ರಾಯೋಜಿತ ವಿಡಿಯೋಗಳೇ ಆದಾಯದ ಮೂಲ. ಆದರೆ, ಅದು ಇತರ ಮೂಲಗಳನ್ನು ಆದಾಯಕ್ಕೆ ಆಶ್ರಯಿಸುತ್ತಿದೆ. ಚಾನೆಲ್ ಸದಸ್ಯತ್ವ, ಸೂಪರ್ ಚಾಟ್, ಚಾಟ್ ಡೋನೇಷನ್ಸ್, ಯೂಟ್ಯೂಬ್ ಪ್ರೀಮಿಯಮ್ ಸೂಪರ್ ಸ್ಟಿಕರ್ಸ್ ಇತ್ಯಾದಿ. ಈಗ ಕಂಟೆಂಟ್ ಅಪ್ಲೋಡ್ ಮಾಡುವವರ ಮೇಲೆ ಕರ ಹೇರುವ ಮೂಲಕ ತನ್ನ ಆರ್ಥಿಕ ಸಂಪನ್ಮೂಲವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಿದೆ. ಅಮೆರಿಕದ ಕಂಟೆಂಟ್ ಕ್ರಿಯೇಟರ್ಗಳಿಗೆ ಕಳೆದ ನವೆಂಬರ್ನಿಂದಲೇ ಯೂಟ್ಯೂಬ್ ತೆರಿಗೆ ವಿಧಿಸುತ್ತಿದೆ.
ಬಳಕೆದಾರರ ಸಂಖ್ಯೆ ಏರಿಕೆ: 2005ರಿಂದ ಆರಂಭವಾದ ಯೂಟ್ಯೂಬ್ಗೆ ಭಾರತದಲ್ಲಿ 2017ರಲ್ಲಿ 16.8 ಕೋಟಿ ಬಳಕೆದಾರರು ಇದ್ದರು. ಅದು 2018ರಲ್ಲಿ 22.9 ಕೋಟಿ, 2019ರಲ್ಲಿ 27.1 ಕೋಟಿ, 2020ರಲ್ಲಿ 30.87 ಕೋಟಿಗೆ ಏರಿತು. ಈ ವರ್ಷ ನಮ್ಮ ದೇಶದ 34.2 ಕೋಟಿ ಜನರು ಯೂಟ್ಯೂಬ್ ಬಳಸುತ್ತಿದ್ದಾರೆ.
ಬೇರೆ ದೇಶಗಳಿಗೆ ಹೋಲಿಸಿ ದರೆ ಏಷ್ಯಾದಲ್ಲಿನ ಕಂಟೆಂಟ್ ಕ್ರಿಯೇಟರ್ಗಳಿಗೆ ಯೂಟ್ಯೂಬ್ ಕಡಿಮೆ ಆದಾಯ ಕೊಡುತ್ತಿದೆ. ಪ್ರತಿ ಚಾನೆಲ್ನ ಸದಸ್ಯತ್ವ, ವೀಕ್ಷಣಾ ಸಮಯವನ್ನು ಪರಿಗಣಿಸಿ ತೆರಿಗೆ ವಿಧಿಸಿದರೆ ಅದು ಸ್ವಾಗತಾರ್ಹ. ಆದರೆ ಅದನ್ನು ನೋಡದೆಯೇ ಶೇ. 15 ತೆರಿಗೆ ನೀಡಲೇಬೇಕೆಂದರೆ ಅದು ನಮ್ಮಂಥವರಿಗೆ ಕಷ್ಟವಾಗುತ್ತದೆ. ಕರೊನಾ ಸಂಕಷ್ಟದ ಸಮಯದಲ್ಲಿ ಜನರು ಹೆಚ್ಚಾಗಿ ಯೂಟ್ಯೂಬ್ ಬಳಸಿದ್ದಾರೆ. ಕಂಟೆಂಟ್ ಕ್ರಿಯೇಟರ್ಗಳ ಸಂಖ್ಯೆ ಹೆಚ್ಚಾಗಿದೆ. ಅದನ್ನೇ ಲಾಭವಾಗಿಸಿಕೊಳ್ಳಲು ಹೊರಟ ಯೂಟ್ಯೂಬ್ ಈ ಮಾರ್ಗ ಹುಡುಕಿಕೊಂಡಿದೆ.| ಆಕರ್ಷ್ ಕಮಲ ಕಂಟೆಂಟ್ ಕ್ರಿಯೇಟರ್