

| ನವೀನ್ ಬಿಲ್ಗುಣಿ ಶಿವಮೊಗ್ಗ
ಕರೊನಾ 3ನೇ ಅಲೆ ತಗ್ಗಿದ ಬಳಿಕ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತಿದೆ. ರಾಜ್ಯದ 14 ಒಕ್ಕೂಟಗಳಲ್ಲೂ ಕನಿಷ್ಠ 50ರಿಂದ 1 ಲಕ್ಷ ಲೀಟರ್ವರೆಗೂ ಹಾಲಿನ ಮಾರುಕಟ್ಟೆ ವೃದ್ಧಿಯಾಗಿದೆ. ಹೈನುಗಾರರ ಪ್ರಕಾರ ಪ್ರತಿ ಲೀಟರ್ಗೆ ಹಾಲಿನ ಉತ್ಪಾದನೆ ವೆಚ್ಚ 35ರಿಂದ 40 ರೂ. ಆಗá-ತ್ತಿದೆ. ಆದರೆ, ಸರ್ಕಾರದ ಸಹಾಯಧನವೂ ಸೇರಿ 30 ರಿಂದ 32 ರೂ.ವರೆಗೂ ಮಾತ್ರ ಕೈ ಸೇರುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲೇ 50 ಕೆಜಿ ಹಿಂಡಿ ಚೀಲದ ಬೆಲೆ 1,800ರಿಂದ 2,050 ರೂ.ಗೆ ಏರಿಕೆಯಾಗಿದೆ. ಬೂಸಾ ದರ 900 ರೂ.ನಿಂದ 1,200 ರೂ.ಗೆ ಜಿಗಿದಿದೆ. ರಾಗಿ ಹುಲ್ಲಿನ ದರ ಪಿಂಡಿಗೆ 200 ರೂ.ನಿಂದ 300 ರೂ. ವರೆಗೆ ಇದೆ. ಭತ್ತದ ಹುಲ್ಲಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕಳೆದ ವರ್ಷ 30ರಿಂದ 32 ರೂ. ಇದ್ದ ಪ್ರತಿ ಪೆಂಡಿಗೆ 38ರಿಂದ 40 ರೂ. ಹಾಗೂ 120-130 ರೂ. ಇದ್ದ ರೋಲ್ ಹುಲ್ಲು 150ರಿಂದ 160 ರೂ.ವರೆಗೂ ಮಾರಾಟವಾಗುತ್ತಿದ್ದು ಹಾಲು ಉತ್ಪಾದಕರಿಗೂ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.
ಡಿಗ್ರಿ, ಫ್ಯಾಟ್ ಬಾರದಿದ್ದರೆ ವಾಪಸ್: ಬೇಸಿಗೆ ಆರಂಭಗೊಳ್ಳುತ್ತಿದ್ದು ಹಾಲಿನ ಡಿಗ್ರಿ (ಗುಣಮಟ್ಟ) ಹಾಗೂ ಫ್ಯಾಟ್(ಕೊಬ್ಬಿನಾಂಶ) ಬರುತ್ತಿಲ್ಲ. ಡಿಗ್ರಿ ಅಥವಾ ಫ್ಯಾಟ್ ಇಲ್ಲದಿದ್ದರೆ ಒಕ್ಕೂಟಗಳು ಹಾಲನ್ನು ಖರೀದಿ ಮಾಡುವುದಿಲ್ಲ. ಸಾಮಾನ್ಯವಾಗಿ ಡಿಗ್ರಿ 29 ಹಾಗೂ ಫ್ಯಾಟ್ 3.8 ಇದ್ದರೆ ಮಾತ್ರ ಹಾಲು ಉತ್ಪಾದಕ ಸಂಘ ಹಾಗೂ ಬಲ್ಕ್ ಮಿಲ್ಕ್ ಕೂಲರ್ (ಬಿಎಂಸಿ)ಗಳಲ್ಲಿ ಹಾಲು ಖರೀದಿ ಮಾಡಲಾಗುತ್ತದೆ. ಡಿಗ್ರಿ 22ರಿಂದ 25ರವರೆಗೆ ಹಾಗೂ ಫ್ಯಾಟ್ 2.5ದಿಂದ 3.0ವರೆಗೆ ಬರುತ್ತದೆ. ಇನ್ನೂ ಕೆಲವೊಮ್ಮೆ ಡಿಗ್ರಿ ಬಂದರೆ ಫ್ಯಾಟ್ ಬರಲ್ಲ. ಮತ್ತೆ ಕೆಲವೊಮ್ಮೆ ಫ್ಯಾಟ್ ಬಂದರೆ ಡಿಗ್ರಿ ಬರಲ್ಲ. ಇಂತಹ ಸಂದರ್ಭದಲ್ಲಿ ಪ್ರತಿ ಲೀ.ಗೆ 22ರಿಂದ 23 ರೂ. ನೀಡಲಾಗುತ್ತದೆ ಎನ್ನುತ್ತಾರೆ ಹಾಲು ಉತ್ಪಾದಕರು.
ಕೆಲ ಒಕ್ಕೂಟಗಳು ಹಾಲು ಖರೀದಿ ದರವನ್ನು ಪ್ರತಿ ಲೀ.ಗೆ 2.50 ರೂ. ಏರಿಕೆ ಮಾಡಿವೆ. ಇದು ಉತ್ಪಾದಕರಿಗೆ ಸಾಲುತ್ತಿಲ್ಲ. ಕರೊನಾ ನೆಪ ಹೇಳಿಕೊಂಡು ಹಾಲು ಖರೀದಿ ದರ ಕಡಿಮೆ ಮಾಡಲಾಗಿತ್ತು. ಈಗ ಹಾಲಿಗೆ ಬೇಡಿಕೆ ಹೆಚ್ಚಿದೆ. ಹಾಲಿನ ಉಪ ಉತ್ಪನ್ನಗಳಿಗೂ ಬೇಡಿಕೆ ಇದೆ. ಅದರೆ ಅದನ್ನು ಪರಿಗಣಿಸದೆ ರೈತರಿಗೆ ಕಡಿಮೆ ಬೆಲೆ ನೀಡಲಾಗುತ್ತಿದೆ. | ನಾರಾಯಣ ಗೌಡ ಕರ್ನಾಟಕ ಹಾಲು ಉತ್ಪಾದಕರ ವೇದಿಕೆ ಅಧ್ಯಕ್ಷ ವಿಶ್ವದ ಹಾಲಿನ ಪ್ರಮಾಣದಲ್ಲಿ ಭಾರತದ ಕೊಡುಗೆ ಶೇ.22 ಇದೆ. ಪ್ರತಿದಿನ 200 ಮಿಲಿಯನ್ ಲೀ. ಹಾಲಿನ ಉತ್ಪನ್ನವಿದ್ದು ಪ್ರತಿ ಒಬ್ಬರಿಗೆ 280 ಗ್ರಾಂ ಹಾಲಿನ ಅವಶ್ಯಕತೆ ಇದೆ. ಜಾನುವಾರುಗಳ ಸಂಖ್ಯೆಯಲ್ಲಿ ದೇಶ ಮೊದಲ ಸ್ಥಾನದಲ್ಲಿದ್ದು, ವೆಚ್ಚ ಹೆಚ್ಚಳದ ನಡುವೆಯೂ ಶೇ.5 ಹಾಲಿನ ಉತ್ಪಾದನೆ ಹೆಚ್ಚಳವಾಗಿದೆ. | ಡಾ. ಎಂ.ಕೆ.ನಾಯ್ಕ್ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ
ದರ ಹೆಚ್ಚಳದ ಸಂಕಟ: ಕರೊನಾ ಬಳಿಕ ರಾಜ್ಯದ 14 ಹಾಲು ಒಕ್ಕೂಟಗಳು ಚೇತರಿಸಿಕೊಳ್ಳುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಲಾಭದ ನಿರೀಕ್ಷೆ ಹೊಂದಿವೆ. ಇದೀಗ ಪ್ರತಿ ಲೀ.ಗೆ ಕನಿಷ್ಠ 30 ರೂ.ವರೆಗೆ ನೀಡಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ಸರ್ಕಾರ ನೀಡುವ 5 ರೂ. ಸೇರಿ ಪ್ರತಿ ಲೀ.ಗೆ 35 ರೂ.ವರೆಗೂ ನೀಡಬೇಕಿದೆ. ಈಗಾಗಲೆ ಶಿಮುಲ್ ಸೇರಿ ಕೆಲ ಒಕ್ಕೂಟಗಳು ಪ್ರತಿ ಲೀ.ಗೆ 2.50 ರೂ. ಹೆಚ್ಚಳ ಮಾಡಿವೆ. ಈ ಮಾಸಾಂತ್ಯದೊಳಗೆ ಲಾಭ ಹೆಚ್ಚಳವಾದರೆ ಮತ್ತಷ್ಟು ದರ ಹೆಚ್ಚಿಸುವ ಚಿಂತನೆ ನಡೆಸಿವೆ. ಆದರೆ ಇನ್ನೂ ಕೆಲ ಒಕ್ಕೂಟಗಳು ಹಾಲು ಉತ್ಪಾದಕರಿಗೆ ದರ ಹೆಚ್ಚಳ ಮಾಡಬೇಕಾದ ಸಂದಿಗ್ಧತೆ ಎದುರಿಸುತ್ತಿವೆ.
30 ರೂ.ಗೆ ಏರಿಸಲು ಆಗ್ರಹ: ಕರೊನಾ ತಗ್ಗಿದ ಬಳಿಕ ಹಾಲು ಉತ್ಪಾದನೆಯಲ್ಲಿ ಏರಿಕೆಯಾಗುತ್ತಿದೆ. ಆದರೆ ರೈತರಿಗೆ ಲಾಭ ಸಿಗá-ತ್ತಿಲ್ಲ ಎಂಬ ಮಾತá-ಗಳು ಕೇಳಿಬರá-ತ್ತಿವೆ. ಹಾಲು ಒಕ್ಕೂಟಗಳು ಖರೀದಿ ದರವನ್ನು ಪ್ರತಿ ಲೀಟರ್ಗೆ 30 ರೂ. ನಿಗದಿಪಡಿಸಬೇಕು. ಸರ್ಕಾರದ ಲೀಟರ್ಗೆ ಲೀ.ಗೆ 5 ರೂ. ಸಹಾಯಧನ ನೀಡá-ತ್ತಿದ್ದು, ಪ್ರತಿ ಲೀಟರ್ಗೆ ರೈತರಿಗೆ 35 ರೂ. ಸಿಕ್ಕರೆ ಹೈನá-ಗಾರಿಕೆಯಲ್ಲಿ ಲಾಭ ಕಾಣಲು ಸಾಧ್ಯ ಎಂಬುದು ಹಾಲು ಉತ್ಪಾದಕ ಪ್ರಮುಖ ಬೇಡಿಕೆ. ಈಗಾಗಲೆ 14 ಹಾಲು ಒಕ್ಕೂಟಗಳಲ್ಲಿ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಹಾಲು ಒಕ್ಕೂಟಗಳು ಮಾತ್ರ ಹೆಚ್ಚಿನ ದರ ನೀಡುತ್ತಿವೆ. ರಾಜ್ಯ ಸರ್ಕಾರದ 5 ರೂ. ಸಹಾಯಧನ ಹೊರತುಪಡಿಸಿ ದಕ್ಷಿಣಕನ್ನಡ ಒಕ್ಕೂಟ ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ 28ರಿಂದ 29 ರೂ. ನೀಡುತ್ತಿದ್ದರೆ, ಶಿವಮೊಗ್ಗ ಒಕ್ಕೂಟದಲ್ಲಿ 27.86 ರೂ. ಇದೆ. ಇನ್ನುಳಿದಂತೆ 12 ಒಕ್ಕೂಟಗಳಲ್ಲಿ ಪ್ರತಿ ಲೀ. ಗೆ 23ರಿಂದ 25 ರೂ. ಆಸುಪಾಸಿನಲ್ಲಿ ದರ ನೀಡುತ್ತಿವೆ.