ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹೆಜ್ಜೆ

Indhana
Published on

| ಕಿರಣ್ ಮಾದರಹಳ್ಳಿ ಭೀಮಾವರಂ(ಆಂಧ್ರಪ್ರದೇಶ)

ರಷ್ಯಾ-ಯೂಕ್ರೇನ್ ಸಮರ ಕಚ್ಚಾ ತೈಲ ಬೆಲೆಯಲ್ಲಿ ಅಸ್ಥಿರತೆ ಉಂಟು ಮಾಡಿದೆ. ಆಮದು ಅವಲಂಬನೆ ಇಂಧನ ಕ್ಷೇತ್ರವನ್ನು ಹಿಂದಿನಿಂದಲೂ ಬಿಗಿಹಿಡಿದಿದೆ. ಇಂತಹ ಸಂದರ್ಭದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ, ದೇಶೀಯ ನಿರ್ವಿುತ ಯಂತ್ರವೊಂದು ತೈಲೋತ್ಪಾದನೆಯಲ್ಲಿ ಸ್ವಾವಂಬನೆ ಸಾಧಿಸುವ ಹೊಸ ಆಶಾಭಾವ ಮೂಡಿಸಿದೆ. ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ಕಚ್ಚಾ ತೈಲ ತೆಗೆಯುವ ಸಲುವಾಗಿ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾಪೋರೇಷನ್ ಲಿಮಿಟೆಡ್​ನ(ಒಎನ್​ಜಿಸಿ) ಭೂಮಿಯಲ್ಲಿ ಮೆಘಾ ಇಂಜಿನಿಯರಿಂಗ್ ಆ್ಯಂಡ್ ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆ (ಎಂಇಐಎಲ್) ವಿಶ್ವದ ದೊಡ್ಡದಾದ ‘ಭೂಮಿ ಕೊರೆಯುವ ಯಂತ್ರ’(ರಿಗ್)ವನ್ನು ಅಳವಡಿಸಿ ಅದನ್ನು ಒಎನ್​ಜಿಸಿಗೆ ಹಸ್ತಾಂತರಿಸಲು ಸಿದ್ಧತೆ ಮಾಡಿಕೊಂಡಿದೆ.

ಇಟಲಿಯ ಡ್ರಿಲ್​ವೆುಕ್ ಸಂಸ್ಥೆಯನ್ನು ಎಂಇಐಎಲ್ ತನ್ನ ತೆಕ್ಕೆಗೆ ಸೆಳೆದುಕೊಂಡು ರಿಗ್ ತಯಾರಿಸಿದೆ. 47 ರಿಗ್​ಗಳ ನಿರ್ವಣಕ್ಕೆ ಒಎನ್​ಜಿಸಿಯಿಂದ ಟೆಂಡರ್ ಪಡೆದುಕೊಂಡಿದೆ. ಹೈದರಾಬಾದ್ ಉತ್ಪಾದನಾ ಘಟಕದಲ್ಲಿ ಸಿದ್ಧಪಡಿಸಿ ನಂತರ ಒಎನ್​ಜಿಸಿ ಸೂಚಿಸಿದ ನಿರ್ಧಾರಿತ ಪ್ರದೇಶಗಳಲ್ಲಿ ಅಳವಡಿಸಲಾಗುತ್ತದೆ. ಈ ರಿಗ್​ಗಳು 2000 ಎಚ್​ಪಿ ಸಾಮರ್ಥ್ಯ ಹೊಂದಿದೆ. ಹೈಡ್ರಾಲಿಕ್ ತಂತ್ರಜ್ಞಾನ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭದಲ್ಲಿ ವರ್ಗಾಯಿಸುವಂತೆ ತಯಾರಿಸಲಾಗಿದೆ. ಸಂಪೂರ್ಣ ಸ್ವಯಂಚಾಲಿತ ನಿರ್ವಹಣೆ ಮೂಲಕ ಕಾರ್ಯಚರಿಸಲಿರುವ ಈ ಬೃಹತ್ ರಿಗ್ ಅನ್ನು ಕೇವಲ 10 ಜನ ನೌಕರರು ಚಲಾಯಿಸಬಹುದಾಗಿದೆ. 3000 ಎಚ್​ಪಿ ಸಾಮರ್ಥ್ಯ ರಿಗ್​ಗಳಿಗೆ ಇದು ಸರಿಸಮನಾಗಿ ಕೆಲಸ ಮಾಡುತ್ತದೆ. 6,000 ಮೀಟರ್ (6 ಕಿಮೀ)ವರೆಗೆ ಭೂತಳ ತಲುಪಿ ಕಚ್ಚಾ ತೈಲವನ್ನು ಹೊರ ತೆಗೆಯುತ್ತದೆ. ಬೇರೆ ರಿಗ್​ಗಳಿಗಿಂತ ಶೇ.30 ಇಂಧನ ಉಳಿತಾಯ ಮಾಡುತ್ತದೆ. ಇದರ ಬಳಕೆಯಿಂದ ದೇಶೀಯ ಇಂಧನ ಉತ್ಪಾದನೆ ಹೆಚ್ಚಲಿದೆ ಎಂದೇ ಹೇಳಲಾಗುತ್ತಿದೆ.

ಕಾರ್ಯವಿಧಾನ ವಿವರಣೆ: ಭೀಮಾವರಂನಲ್ಲಿ ರಿಗ್ ಕಾರ್ಯ ನಿರ್ವಹಣೆಯ ಪ್ರಾತ್ಯಕ್ಷಿಕೆಯ ಮಾಹಿತಿಯನ್ನು ಮಾ.8ರಂದು ನೀಡಲಾಯಿತು. ಎಂಇಐಎಲ್ ಮುಖ್ಯ ಇಂಜಿನಿಯರ್ ಸತ್ಯನಾರಾಯಣ ಕೋಟಿಪಲ್ಲಿ, ಡ್ರಿಲ್ ಮೇಕ್​ನ ಟೀಂ ಹೆಡ್ ಅರಮಿನ್ ಹಾಜರಿದ್ದರು.

ದೇಶೀಯ ನಿರ್ವಿುತ ರಿಗ್​ಗಳು ಇಂಧನ ಕ್ಷೇತ್ರದಲ್ಲಿ ಸಂಸ್ಥೆಯು ಮಹತ್ವದ ಪಾತ್ರ ವಹಿಸುತ್ತವೆ. ಜಾಗತಿಕ ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ರಿಗ್​ಗಳ ಕಾರ್ಯಕ್ಷಮತೆ ದೇಶದ ಇಂಧನ ಕ್ಷೇತ್ರದ ಮೇಲೆ ಪೂರಕ ಪರಿಣಾಮ ಬೀರಲಿದ್ದು, ದೇಶೀಯ ಇಂಧನ ಬೇಡಿಕೆಗಳನ್ನು ಪೂರೈಸಲಿದೆ.

| ಸತ್ಯನಾರಾಯಣ ಕೋಟಿಪಲ್ಲಿ ಮುಖ್ಯ ಇಂಜಿನಿಯರ್, ಎಂಇಐಎಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net