ಕರ್ನಾಟಕದಲ್ಲಿ ಆ್ಯಪಲ್​ ಕೃಷಿ ಕ್ರಾಂತಿ

Money Math
Published on

ಕರ್ನಾಟಕದ ಕೃಷಿ ಕ್ಷೇತ್ರ ದಿನೇದಿನೆ ಶ್ರೀಮಂತಿಕೆ ಪಥದಲ್ಲಿ ಸಾಗುತ್ತಿದೆ. ಈ ನೆಲದಲ್ಲಿ ಮರಳುಗಾಡಿನ ರ್ಖಜೂರ, ಮೆಕ್ಸಿಕೋದ ಬಟರ್​ ಫೂಟ್​ ಈಗಾಗಲೆ ಸದ್ದು ಮಾಡಿವೆ. ಅದರ ಬೆನ್ನಲ್ಲೆ ಜನತೆಯ ಮನದಲ್ಲಿ ಮೋಡ ಮುಸುಕಿರುವ ತಾಣದ ಬೆಳೆ ಎಂದೇ ಅಚ್ಚೊತ್ತಿದಂತಿರುವ ಸೇಬು ಹೊಸ ಸಾಧ್ಯತೆ ತೆರೆದಿಟ್ಟಿದೆ. ಇದೀಗ ಕರ್ನಾಟಕದ ಹೇರಳ ಬಿಸಿಲಿರುವ ತಾಣದಲ್ಲೆ ಭರವಸೆಯ ಬೆಳೆಯಾಗಿದೆ. ಆ್ಯಪಲ್​, ರೈನ್​ ಶ್ಯಾಡೋದಂಥ ಏರಿಯಾಗಳಲ್ಲಿ ಯಶೋಗಾಥೆ ಬರೆದದ್ದಷ್ಟೇ ಅಲ್ಲ, ಬದಲಿಗೆ ಎಕರೆಗೆ ಕನಿಷ್ಠ ಅಂದ್ರು 9 ಲ ರೂ. ಆದಾಯ ತಂದುಕೊಡುತ್ತಿದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಜ್ಯೋತಿ ಪ್ರಕಾಶ್​ ಎಂಬ ರೈತರು ಇದಕ್ಕೆ ಅತ್ಯುತ್ತಮ ಉದಾಹರಣೆ. ಅವರ 1 ಎಕರೆಯಲ್ಲಿ 320 ಗಿಡವಿದ್ದು ಎಲ್ಲವೂ ಫಲ ನೀಡುತ್ತಿದೆ. ಒಂದೊಂದು ಗಿಡವೂ ಕನಿಷ್ಠ 60 ಕೆ.ಜಿ. ಇಳುವರಿ ನೀಡುತ್ತಿದೆ.

1 ಗಿಡ 60 ಕೆ.ಜಿ ಅಂದ್ರೆ 320 ಗಿಡಕ್ಕೆ 19 ಟನ್​ 2 ಕ್ವಿಂಟಾಲ್​ ಹಣ್ಣಿನ ಇಳುವರಿ ಸಿಕ್ಕಂತಾಯಿತು. 1 ಕೆ.ಜಿ. ಆ್ಯಪಲ್​ಗೆ 200 ರೂ.ವರೆಗೆ ಬೆಲೆ ಬಂದ ಉದಾಹರಣೆ ಇದೆ. ಆದರೆ, ನಾವು ಅತೀ ಕನಿಷ್ಠ ಲೆಕ್ಕಾಚಾರ ಇಟ್ಟುಕೊಂಡು ಕೆ.ಜಿ.ಗೆ 50 ರೂ. ಅಂದರೂ 19 ಟನ್​ 2 ಕ್ವಿಂಟಾಲ್​ಗೆ 9.60 ಲಕ್ಷ ರೂ. ಆದಾಯ ಬರುತ್ತದೆ. ಒಂದು ವೇಳೆ ಗಿಡದಲ್ಲಿ 80 ಕೆ.ಜಿ. ಇಳುವರಿ ಸಿಕ್ಕಿ 100 ರೂ. ದರ ಸಿಕ್ಕರೆ 25 ಟನ್​ 6 ಕ್ವಿಂಟಾಲ್​ ಇಳುವರಿಗೆ 25,60,000 ರೂ. ಆದಾಯ ಸಿಗುತ್ತದೆ. ಕೆ.ಜಿ.ಗೆ 50 ರೂ. ಲೆಕ್ಕಾಚಾರದಲ್ಲೆ ವರ್ಷಕ್ಕೆ 9 ಲ ರೂ. ಅಂದರೆ, ಸೇಬಿನ 40 ವರ್ಷ(50&60ವರ್ಷ ಸೇಬಿನ ಮರದ ಜೀವೀತಾವಧಿಯಾಗಿರುತ್ತದೆ) ಜೀವಿತಾವಧಿಯಲ್ಲಿ 34 ವರ್ಷ ನಿರಂತರ ಇಳುವರಿ ಸಿಗುತ್ತದೆ. ಒಂದು ಎಕರೆಯಲ್ಲಿ 34 ವರ್ಷಕ್ಕೆ 3 ಕೋಟಿ 6 ಲ ರೂ. ಆದಾಯ ಗಳಿಸಬಹುದು. ಹೂಡಿದ ಬಂಡವಾಳ ಕೇವಲ 1 ಲ ರೂ. ಆದರೆ ಗಿಡಗಳ ಜೀವಿತಾವಧಿಯಲ್ಲಿ ಎಕರೆಗೆ ಕನಿಷ್ಠ ಅಂದರೂ 3 ಕೋಟಿ ರೂ. ಪಡೆಯುತ್ತೇವೆ. ಊಹಿಸಿ ನೋಡಿ ಒಮ್ಮೆ ಕಷ್ಟಪಟ್ಟರೆ ಒಂದೆರಡು ತಲೆಮಾರುಗಳೇ ಅತ್ಯುತ್ತಮ ಬದುಕು ಕಾಣುವ ಅವಕಾಶ ಸೇಬಿನ ಕೃಷಿಯಲ್ಲಿದೆಯಲ್ವಾ?

ಸುಡುವ ಬಿಸಿಲಲ್ಲಿ ಸೇಬು ಕೃಷಿ ಹೇಗೆ ಸಾಧ್ಯ?: ನಮ್ಮ ಭಾರತದಲ್ಲಿ 1600 ಸೇಬು ತಳಿಗಳಿವೆ. ಅವೆಲ್ಲವು ಕಾಶ್ಮೀರ, ಶಿಮ್ಲಾ, ಹಿಮಾಚಲಪ್ರದೇಶದಂತಹ ಮಂಜಿನ ಹನಿಗಳ ತಾಣಕ್ಕೆ ಸೂಕ್ತವಾದಂತವು. ಆದರೆ, ಉಳಿದ ಉಷ್ಣವಲಯಕ್ಕಾಗಿಯೇ ನಮ್ಮ ದೇಶದಲ್ಲಿ 3 ಹೊಸ ತಳಿಯ ಅನ್ವೇಷಣೆಯಾಗಿದೆ. ಕಾಡು ಗಿಡಕ್ಕೆ ಸೇಬನ್ನು ಕಸಿ ಮಾಡಿ ಉಷ್ಣವಲಯಗಳಲ್ಲಿ ಸಲೀಸಾಗಿ ಬೆಳೆಯುವಂತೆ ಮಾಡಲಾಗಿದೆ. ಈ ಕಾರಣದಿಂದಲೇ ಇಂದು ಚಿತ್ರದುರ್ಗದಂತಹ ಹೆಚ್ಚು ಬಿಸಿಲಿರುವ ಪ್ರದೇಶದಲ್ಲಿ ನಿಬ್ಬೆರಗಾಗುವ ಆ್ಯಪಲ್​ ಕೃಷಿ ಕ್ರಾಂತಿ ನಡೆದಿದೆ.

ಭಾರತದಲ್ಲಿ ಆ್ಯಪಲ್​ ಕೃಷಿ: ಜಮ್ಮು ಮತ್ತು ಕಾಶ್ಮೀರವು ಭಾರತದಲ್ಲಿ ಅತಿ ಹೆಚ್ಚು ಸೇಬು ಬೆಳೆಯುವ ರಾಜ್ಯವೆಂದು ಗುರುತಿಸಿಕೊಂಡಿದೆ. ಶೇ.60 ಉತ್ಪಾದನೆ ಜಮ್ಮು ಮತ್ತು ಕಾಶ್ಮೀರ ಮಾಡುತ್ತಿದೆ. ಜಮ್ಮುವಿನ ಬರಮುಲ್ಲ ಜಿಲ್ಲೆ ಅತಿ ಹೆಚ್ಚು ಆ್ಯಪಲ್​ ಬೆಳೆಯುವ ಪ್ರದೇಶ. ಜಮ್ಮು ಮತ್ತು ಕಾಶ್ಮೀರದ ನಂತರ ಹಿಮಾಚಲ ಪ್ರದೇಶ, ಉತ್ತರಾಖಂಡ 2 ಮತ್ತು 3ನೇ ಸ್ಥಾನದಲ್ಲಿದೆ. ಜಗತ್ತಿನಲ್ಲಿ ಚೀನಾ ಅತಿ ಹೆಚ್ಚು ಆ್ಯಪಲ್​ ಬೆಳೆಯುವ ರಾಷ್ಟ್ರವೆಂದು ಗುರುತಿಸಿಕೊಂಡಿದೆ. ಯುಎಸ್​ಎ ಎರಡನೇ ಸ್ಥಾನದಲ್ಲಿದ್ದು, ಭಾರತ 5 ನೇ ಸ್ಥಾನದಲ್ಲಿದೆ. ಇದೀಗ ಉಷ್ಟವಲಯದ ಆ್ಯಪಲ್​ ಅತ್ಯದ್ಭುತವಾಗಿ ಭರವಸೆ ಮೂಡಿಸುತ್ತಿರುವುದರಿಂದ ಮುಂದಣ ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಎಲ್ಲೆಲ್ಲೂ ಆ್ಯಪಲ್​ ಕೃಷಿ ವಿಸ್ತಾರವಾದರೆ ಭಾರತ ವಿಶ್ವದ ಮೊದಲನೇ ಸ್ಥಾನದಲ್ಲಿರಲು ಸಾಧ್ಯವಿಲ್ಲವೆ?

ಜಾಗತಿಕ ಮಟ್ಟದಲ್ಲಿ ಆ್ಯಪಲ್​: ಸೇಬು, 78 ಬಿಲಿಯನ್​ ಡಾರ್ಲಸ್​ ಗ್ಲೋಬಲ್​ ಮಾರ್ಕೇಟ್​ ರೇಶ್ಯೂ ಪಡೆದುಕೊಂಡಿದೆ. ಅಂದರೆ ನಮ್ಮ ಭಾರತೀಯ ಕರೆನ್ಸಿ ಪ್ರಕಾರ ಇದು 5 ಲದ 85 ಸಾವಿರ ಕೋಟಿ ರೂ. ನಷ್ಟಾಗುತ್ತದೆ. ಜತೆಗೆ ಪ್ರಪಂಚದಲ್ಲಿ 8 ಕೋಟಿ 72 ಲದ 36 ಸಾವಿರದ 221 ಟನ್​ನಷ್ಟು ಆ್ಯಪಲ್​ ಬೆಳೆಯಲಾಗುತ್ತೆ. ಅದರಲ್ಲಿ ದೊಡ್ಡ ಪಾಲು ಪಡೆದುಕೊಂಡಿರುವ ಚೀನಾ 4 ಕೋಟಿ 24 ಲದ 26 ಸಾವಿರದ 578 ಟನ್​ನಷ್ಟು ಆ್ಯಪಲ್​ ಬೆಳೆಯುತ್ತದೆ. 2 ನೇ ಸ್ಥಾನದಲ್ಲಿರುವ ಯುಎಸ್​ಎ 49 ಲದ 97 ಸಾವಿರದ 680 ಟನ್​ನಷ್ಟು ಉತ್ಪಾದನೆ ಮಾಡುತ್ತಿದೆ. ಈ ಎರಡು ದೇಶಗಳೇ ಪ್ರಪಂಚಕ್ಕೆ ಶೇ.50 ಆ್ಯಪಲ್​ ಪೊಡನ್​ ಮಾಡುತ್ತಿವೆ. ನಮ್ಮ ಭಾರತದಲ್ಲಿ 23 ಲದ 16 ಸಾವಿರ ಟನ್​ನಷ್ಟೇ ಆ್ಯಪಲ್​ ಬೆಳೆಯಲಾಗ್ತಿದೆ. ಹೀಗಾಗಿ ಭಾರತೀಯ ರೈತರಿಗೆ ತುಂಬಾ ದೊಡ್ಡ ಅವಕಾಶವಿದೆ.

ಫ್ರೀಡಂ ಆ್ಯಪ್​ನಲ್ಲಿ ಆ್ಯಪಲ್​ ಕೃಷಿ ಕೋರ್ಸ್​: ರೈತಾಪಿ ವರ್ಗದವರ ಆರ್ಥಿಕ ಪ್ರಗತಿ ದೃಷ್ಟಿಯಿಂದ ಇಂಡಿಯನ್​ ಮನಿ ಡಾಟ್​ ಕಾಂ ನ ಫ್ರೀಡಂ ಆ್ಯಪ್​ ಆ್ಯಪಲ್​ ಕೃಷಿ ಕೋರ್ಸ್​ ಅನಾವರಣ ಮಾಡಿದೆ. ಅಸಾಧ್ಯತೆ ಅನ್ನಿಸಿಕೊಂಡ ತಾಣದಲ್ಲೆ ಸಾಧ್ಯತೆಗಳನ್ನು ಹುಡುಕಿ ಆ್ಯಪಲ್​ ಕೃಷಿಯಲ್ಲಿ ಯಶೋಗಾಥೆ ಬರೆದ ಚಿತ್ರದುರ್ಗ ಜಿಲ್ಲೆಯ

ಜ್ಯೋತಿ ಪ್ರಕಾಶ್​ ಈ ಕೋರ್ಸ್​ ಮಾರ್ಗದರ್ಶಕರು.

ಕೋರ್ಸ್​ನಲ್ಲಿ ಏನೇನಿದೆ?

* ಕೋರ್ಸ್​ ಪರಿಚಯ

*ಮಾರ್ಗದರ್ಶಕರ ಪರಿಚಯ

* ಏನಿದು ಆ್ಯಪಲ್​ ಕೃಷಿ?

* ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

* ಅಗತ್ಯಭೂಮಿ, ಮಣ್ಣು ಮತ್ತು ಹವಾಮಾನ

* ಸೇಬು ತಳಿ

* ಭೂಮಿ ಸಿದ್ಧತೆ ಮತ್ತು ನಾಟಿ ಪ್ರಕ್ರಿಯೆ

* ನೀರು, ಗೊಬ್ಬರ ಮತ್ತು ಕಾರ್ಮಿಕರು

* ರೋಗ ನಿಯಂತ್ರಣ

* ಕಟಾವು ಮತ್ತು ಶೇಖರಣೆ

* ಮಾರುಕಟ್ಟೆ ಮತ್ತು ರಫ್ತು

* ಇಳುವರಿ, ಖರ್ಚು ಮತ್ತು ಲಾಭ

* ಸವಾಲು ಮತ್ತು ಕಿವಿಮಾತು.

ಉದ್ಯೋಗಾವಕಾಶ

ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ಇಂಡಿಯನ್​ ಮನಿ ಡಾಟ್​ ಕಾಂನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಗಳು ಈ ನಂಬರಿಗೆ ಮಿಸ್ಡ್​ ಕಾಲ್​ ಮಾಡಿ - ದೂ.ಸಂ.- 02262116777.

ಆನ್​ಲೈನ್​ ಮೇಕಪ್​ ಆರ್ಟಿಸ್ಟ್​ ಕೋರ್ಸ್​ಗೆ ಈಗಲೇ ಸೇರಿ!

ಕನ್ನಡದ ನಟಿ ಮತ್ತು ಸೆಲೆಬ್ರೆಟಿ ಮೇಕಪ್​ ಆರ್ಟಿಸ್ಟ್​ ವೈಭವಿ ಜಗದೀಶ್​ ಅವರು ಇಂಡಿಯನ್​ ಮನಿ ಡಾಟ್​ ಕಾಂನ ಫ್ರೀಡಂ ಆ್ಯಪ್​ ಸಹಯೋಗದಲ್ಲಿ ನಡೆಸುತ್ತಿರುವ ಆನ್​ಲೈನ್​ ಮೇಕಪ್​ ಆರ್ಟಿಸ್ಟ್​ ಕೋರ್ಸ್​ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್​ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9632742525.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net