

1-9-1992ರಂದು ಸ್ವಯಂ ನಿವೃತ್ತಿ ಪಡೆದಿದ್ದು, ಮೂಲಪಿಂಚಣಿ 14,650 ರೂಪಾಯಿ ಇದೆ. 1-1-2022ಕ್ಕೆ 80 ವರ್ಷ ವಯಸ್ಸು ಪೂರ್ಣಗೊಳ್ಳಲಿದ್ದು, ಮೂಲಪಿಂಚಣಿ ಎಷ್ಟಾಗಬಹುದು? ಅದರಂತೆ 85ನೇ ವಯಸ್ಸಿಗೆ ಮತ್ತು 90ನೇ ವಯಸ್ಸಿಗೆ ಮೂಲ ಪಿಂಚಣಿ ಎಷ್ಟಾಗಲಿದೆ?
| ಗೋಪಾಲ ನೀ. ಕುಲಕರ್ಣಿ, ಹುಬ್ಬಳ್ಳಿ
ದಿನಾಂಕ: 11-1-2019ರ ಸರ್ಕಾರಿ ಆದೇಶ ಸಂಖ್ಯೆ: ಆಇ (ವಿಶೇಷ) 120 ಪಿಇಎ 2018ರ ಪ್ರಕಾರ ಮೂಲ ಪಿಂಚಣಿಯನ್ನು 80 ವರ್ಷವಾದರೆ ಶೇ.20 ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಂದರೆ ನಿಮಗೆ 2,930+14,650 ರೂ., 85ನೇ ವಯಸ್ಸಿಗೆ ಶೇ.30 ಅಂದರೆ 4,395 ರೂ. ಹಾಗೂ 90ನೇ ವಯಸ್ಸಿಗೆ ಶೇ.40 ಅಂದರೆ 5,860 ರೂ. ಹೆಚ್ಚುವರಿ ಪಿಂಚಣಿ ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಬಹುದು.