ಹಣಕಾಸು, ಕುಟುಂಬ, ಹೆಸರು-ಖ್ಯಾತಿ, ಪ್ರಾಬಲ್ಯ, ಸ್ಥಾನಮಾನ, ಜ್ಞಾನ- ಇವೆಲ್ಲವನ್ನೂ ಶಾಶ್ವತವಾದ ಸಂತೋಷವನ್ನು ಪಡೆಯುವ ಉದ್ದೇಶದಿಂದ ಮನುಷ್ಯ ಪ್ರಯೋಗಿಸಿ ನೋಡಿದ್ದಾನೆ. ಆದರೆ ಈ ಯಾವುದೇ ಪ್ರಯತ್ನಗಳಲ್ಲಿಯೂ ಆತ ಯಶಸ್ವಿಯಾಗಿಲ್ಲ. ಏಕೆಂದರೆ, ನಿಜವಾದ ಸಂತೋಷವು ವ್ಯಕ್ತಿಯ ಸ್ವಂತ ಅಂತಃಪ್ರಜ್ಞೆಯಿಂದ, ಆತ್ಮಾನಂದದಿಂದ, ಆಂತರ್ಯದಿಂದ ಹೊರಹೊಮ್ಮುತ್ತದೆ; ಯಾವುದೇ ಸಂಪತ್ತು, ಅಧಿಕಾರ ಅಥವಾ ಖ್ಯಾತಿಯಿಂದಲ್ಲ.