

ಅನ್ಯೂನಧರ್ವನುಷ್ಠಾನಂ ಪರದ್ರವ್ಯಾಪರಿಗ್ರಹಃ | ಅಸ್ತೇಯಾಖ್ಯಂ ಶೀಲಮಷ್ಟಾಚತ್ವಾರಿಂಶಮುದಾಹೃತಮ್ ||
ಧರ್ಮವನ್ನು ಅರೆಬರೆಯಾಗಿ ಮಾಡದಿರುವುದು, ಬೇರೆಯವರ ಯಾವುದೇ ವಸ್ತುವನ್ನು ಅವರ ಒಪ್ಪಿಗೆಯಿಲ್ಲದೆ ತೆಗೆದುಕೊಳ್ಳದಿರುವುದು ಅಸ್ತೇಯ ಎನ್ನಲಾಗುವ ನಲವತ್ತೆಂಟನೆಯ ಶೀಲ. ಅಸ್ತೇಯವೆಂದರೆ ಕಳ್ಳತನ ಮಾಡದಿರುವುದು. ಕಳ್ಳತನವು ಅಂತರಂಗ-ಬಹಿರಂಗ ಎಂದು ಎರಡು ಪ್ರಕಾರ. ಬೇರೆಯವರ ವಸ್ತುಗಳನ್ನು ಅವರು ಮತ್ತು ಇತರರು ನೋಡದಂತೆ ತೆಗೆದುಕೊಳ್ಳುವುದು ಬಹಿರಂಗ ಕಳ್ಳತನ. ವಿಶ್ವದ ಪ್ರತಿ ವಸ್ತುವೂ ಪರಮಾತ್ಮನದೇ ಇರುವುದರಿಂದ ಅವನಿಗೆ ಅರ್ಪಿಸದೆ ನೇರವಾಗಿ ತಾನೇ ಉಪಯೋಗಿಸುವುದು ಅಂತರಂಗದ ಕಳ್ಳತನ. ಈ ಎರಡೂ ಪ್ರಕಾರದ ಕಳ್ಳತನ ಮಾಡದಿರುವದೇ ಅಸ್ತೇಯ.
| ಚಂದ್ರಜ್ಞಾನಾಗಮ (9.106) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು