ಇದು ನೀವು ನಿಮ್ಮ ಮನೆಯಲ್ಲಿ ಹೂಗಿಡವನ್ನು ನೆಟ್ಟಂತೆ. ಬೆಳೆಯುತ್ತಿದ್ದಂತೆ ಕೇವಲ ಎಲೆಗಳು ಮಾತ್ರ ಬರುತ್ತವೆ. ನಿಮ್ಮ ನೆರೆಹೊರೆಯವರು ಬಂದು ಹೇಳುತ್ತಾರೆ & "ಇದರಿಂದ ಏನೂ ಪ್ರಯೋಜನವಿಲ್ಲ. ನೀವು ಹೂಗಳು ಬರುತ್ತವೆ ಎಂದು ಹೇಳಿದ್ದಿರಿ, ಆದರೆ ಎಲೆಗಳು ಮಾತ್ರ ಬರುತ್ತಿವೆ. ಇದನ್ನು ಕಡಿದು ಕಟ್ಟಿಗೆ ಮಾಡೋಣ.' ನೀವು, "ನೋಡೋಣ, ನಾಳೆ ಬೆಳಗ್ಗೆ ಹೂ ಬಿಡಬಹುದು' ಎನ್ನುತ್ತೀರಿ. ಮರುದಿನವೂ ಏನೂ ಆಗಿರುವುದಿಲ್ಲ. ಮತ್ತೆ ನೀವು ಹೇಳುತ್ತೀರಿ "ಇನ್ನೊಂದು ದಿನ ನೋಡೋಣ.' ಮತ್ತೊಂದು ದಿನ, ಮತ್ತೊಂದು ದಿನ... ಹೀಗೆ ಕಾಲ ಕಳೆಯುತ್ತದೆ. ಈ ಮರಕ್ಕೆ ಹೂ ಬಿಡಲು ಎಷ್ಟು ಸಮಯ ಬೇಕು ಎಂಬುದನ್ನು ನೀವು ತಿಳಿಯದಿದ್ದರೆ, ನೀವು ಅದನ್ನು ನೂರಾರು ಬಾರಿ ಕಡಿದುಬಿಡುತ್ತಿದ್ದಿರಿ. ಆದರೆ ನೀವು ಅದನ್ನು ಕಾಳಜಿಯಿಂದ ಪೋಷಿಸುತ್ತ ಹೋದರೆ, ಗಿಡದ ಸೌಂದರ್ಯವು ಅದರ ಎಲೆಗಳು, ನೆರಳು ಅಥವಾ ಸ್ವಲ್ಪ ಆಮ್ಲಜನಕದಲ್ಲಲ್ಲದೆ, ಒಂದು ದಿನ ಅದು ಸಂಪೂರ್ಣವಾಗಿ ಅರಳಿದ ಹೂ ಬಿಟ್ಟಾಗ, ಅತ್ಯದ್ಭುತವಾಗಿ ಸುಂದರವಾಗಿರುವುದು ಎಂದು ನಿಮಗೆ ಅರಿವಾಗುತ್ತದೆ.