ಭಾರತ ಎಂದರೆ ನಾವು ಸದಾ ದಿವ್ಯತೆಯ ಪಾದದಡಿಯಲ್ಲಿ ಇರುವುದನ್ನು ಕಲಿತವರು ಎಂದರ್ಥ. ಇದು ಅಹಂಭಾವದ ಪ್ರದರ್ಶನದ ಸಂಸ್ಕೃತಿಯಲ್ಲ, ಬದಲಾಗಿ ಸ್ವಾಭಾವಿಕವಾಗಿಯೇ ಭಕ್ತಿಯ ಸಂಸ್ಕೃತಿ. ಅದು ದೇವರಿರಲಿ, ಪುರುಷನಿರಲಿ, ಸ್ತ್ರೀ, ಮಗು, ಪ್ರಾಣಿ, ಮರ ಅಥವಾ ಕಲ್ಲೇ ಇರಲಿ; ನಾವು ಎಲ್ಲದಕ್ಕೂ ತಲೆಬಾಗುವುದನ್ನು ಕಲಿತಿದ್ದೇವೆ. ಈ ಒಂದು ಗುಣದಿಂದಲೇ ನಾವು ಶ್ರೇಷ್ಠ ಜೀವಿಗಳನ್ನು ಸೃಷ್ಟಿಸಲು ಸಾಧ್ಯವಾಯಿತು. ದಿವ್ಯತೆಯ ಪಾದದಡಿಯಲ್ಲಿ ಇರುವ ಮೂಲಕವೇ ನಾವು ಕಲಿತೆವು, ವಿಕಸನಗೊಂಡೆವು, ಅರಳಿದೆವು ಮತ್ತು ದೀರ್ಘಕಾಲದವರೆಗೆ ಜಗತ್ತಿನ ಉಳಿದ ಭಾಗಗಳಿಗೆ ಮಾರ್ಗದರ್ಶಕ ದೀಪಗಳಾದೆವು.