ಅಮೆರಿಕನ್ ಧಾರ್ವಿುಕ ಪ್ರಜ್ಞೆ ಮತ್ತು ಸನಾತನ ಧರ್ಮ

Column F
Published on
ಅಮೆರಿಕದ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿದ, ನ್ಯೂಯಾರ್ಕ್ ಟೈಮ್ಸ್​ನ Best seller ಖ್ಯಾತಿಗೊಳಗಾದ, he spiritual child & The Awakened Brain ಪುಸ್ತಕದ ಲೇಖಕಿಯೂ ಆದ ಲೀಸಾ ಮಿಲ್ಲರ್ 2009 ಆಗಸ್ಟ್ 15 ರಂದು News week ವಾರಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು. ಅದರ ಶೀರ್ಷಿಕೆಯೇ ಕುತೂಹಲ ಕೆರಳಿಸುವಂತಿದೆ. ‘ಈಗ ನಾವೆಲ್ಲರೂ ಹಿಂದುಗಳು’ ಎಂಬ ಆ ಲೇಖನದ ಭಾಷಾಂತರವನ್ನು ಇಲ್ಲಿ ಪ್ರಸ್ತುತಪಡಿಸುತ್ತೇನೆ.

ಅಮೆರಿಕಾ ಕ್ರಿಶ್ಚಿಯನ್ ರಾಷ್ಟ್ರವಲ್ಲ, ನಾವು ಕ್ರಿಶ್ಚಿಯನ್ನರು ಸ್ಥಾಪಿಸಿದ ರಾಷ್ಟ್ರದವರು ಎಂಬುದೇನೋ ನಿಜವೆ ಮತ್ತು 2008 ರ ಸಮೀಕ್ಷೆಯ ಪ್ರಕಾರ ಶೇಕಡ 75% ರಷ್ಟು ಜನ ತಮ್ಮನ್ನು ಕ್ರಿಶ್ಚಿಯನ್ ಎಂದು ಪರಿಗಣಿಸುತ್ತಾರೆ. (ಆದರೆ ಅಮೆರಿಕದ ಇತಿಹಾಸದಲ್ಲೇ ಇದು ಕನಿಷ್ಠ ಪ್ರಮಾಣ). ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ವಿಕ್ಕನ್ ರಾಷ್ಟ್ರವೂ ಅಲ್ಲ ಎನ್ನುವುದೂ ಸರಿಯೇ. ವಿಶ್ವದ ಎಲ್ಲೆಡೆ ಇರುವ ಬಿಲಿಯನ್ ಹಿಂದೂಗಳಲ್ಲಿ ಒಂದು ಮಿಲಿಯನ್​ಗಿಂತ ಹೆಚ್ಚು ಜನ ಇಲ್ಲಿ ವಾಸಿಸುತ್ತಾರೆ. ಆದರೆ ಇತ್ತೀಚಿನ ಸಮೀಕ್ಷೆಯ ಪ್ರಕಾರ ನಾವು ದೇವರು-ಆತ್ಮ ಪರಸ್ಪರ ಸಂಬಂಧಗಳು ಮತ್ತು ಶಾಶ್ವತಸತ್ಯ ಇವುಗಳ ಕುರಿತು ಕ್ರಿಶ್ಚಿಯನ್ನರಂತೆ ಭಾವಿಸುವುದು ಕಡಿಮೆಯಾಗಿ ಹೆಚ್ಚು ಹೆಚ್ಚು ಹಿಂದೂಗಳಂತೆ ನಿಧಾನವಾಗಿ ಬದಲಾಗುತ್ತಿದ್ದೇವೆ. ಅತ್ಯಂತ ಪುರಾತನ ಹಿಂದೂ ಗ್ರಂಥವಾದ ಋಗ್ವೇದ ಹೀಗೆ ಹೇಳುತ್ತದೆ, ‘ಸತ್ಯವು ಒಂದೇ, ಆದರೆ ಜ್ಞಾನಿಗಳು ಅದನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ.’ ಸತ್ಯವನ್ನು ಅರಿಯಲು ಅನೇಕ ಮಾರ್ಗಗಳಿವೆ ಎಂದು ಹಿಂದೂ ನಂಬುತ್ತಾನೆ. ಕ್ರಿಸ್ತ ಒಂದು ಮಾರ್ಗವಾದರೆ, ಕುರಾನ್ ಮತ್ತೊಂದು, ಯೋಗ ಮೂರನೆಯದು, ಯಾವುದೂ ಮತ್ತೊಂದಕ್ಕಿಂತ ಶ್ರೇಷ್ಠ ಎಂಬುದಿಲ್ಲ, ಎಲ್ಲವೂ ಒಂದೇ. ಕ್ರಿಶ್ಚಿಯನ್ನರಿಗೆ ಈ ರೀತಿ ಯೋಚಿಸಲು ಕಲಿಸಿಲ್ಲ. ಭಾನುವಾರದ ತರಗತಿಗಳಲ್ಲಿ ‘ತಮ್ಮ ಧರ್ಮ ಸತ್ಯ, ಬೇರೆ ಧರ್ಮಗಳು ಅಸತ್ಯ’ ಎಂದು ಅವರು ಕಲಿಯುತ್ತಾರೆ. ಕ್ರಿಸ್ತ ಹೇಳುತ್ತಾನೆ ‘ನಾನು ಮಾರ್ಗ, ಸತ್ಯ ಮತ್ತು ಜೀವನ ನನ್ನ ಮೂಲಕ: ಹೊರತುಪಡಿಸಿ ಯಾರೂ ತಂದೆಯತ್ತ ಬರುವುದಿಲ್ಲ.’

ಅಮೆರಿಕನ್ನರು ಈಗ ಇದನ್ನು ಒಪ್ಪಿಕೊಳ್ಳುತ್ತಿಲ್ಲ, 2008 ರ ಪ್ಯೂ ಸರ್ವೆ ಪ್ರಕಾರ ‘ನಮಗೆ ಮಾತ್ರ ಮುಕ್ತಿ’ ಎಂದು ಭಾವಿಸುವ ಇವ್ಯಾಂಜಲಿಕಲ್ ಕ್ರಿಶ್ಚಿಯನ್ನರ ಶೇಕಡಾ 39 ರಷ್ಟು ಜನರನ್ನೂ ಒಳಗೊಂಡು ಇಡೀ ಕ್ರಿಶ್ಚಿಯನ್ ಸಮುದಾಯದ ಶೇಕಡ 65 ರಷ್ಟು ಜನ ಭಗವಂತನ ಕಡೆಗೆ ಕರೆದೊಯ್ಯಬಲ್ಲ ಹಲವಾರು ಮಾರ್ಗಗಳಿವೆ ಎಂದು ಭಾವಿಸುತ್ತಾರೆ. ಅಷ್ಟೇ ಅಲ್ಲ ಚರ್ಚ್​ನ ಆಚೆ ಸತ್ಯವನ್ನು ಅರಸುವ ಜನರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. 2009 ರ News week ಸಮೀಕ್ಷೆಯ ಪ್ರಕಾರ, ಶೇಕಡ 30 ಅಮೆರಿಕನ್ನರು ನಮಗೆ ಯಾವ ಧರ್ಮವೂ ಬೇಡ; ಆದರೆ ಆಧ್ಯಾತ್ಮಿಕತೆ ಮಾತ್ರ ಬೇಕು ಎಂದು ಹೇಳುತ್ತಿದ್ದಾರೆ. ಹೀಗೆ ಹೇಳುತ್ತಿದ್ದವರು 2005 ರಲ್ಲಿ ಶೇಕಡ 24 ರಷ್ಟಿದ್ದರು. ಬಾಸ್ಟನ್ ವಿಶ್ವವಿದ್ಯಾಲಯದ ‘ಧರ್ಮಶಾಸ್ತ್ರ’ ವಿಭಾಗದ ಪೊ›. ಸ್ಟೀಫನ್ ಪೊ›ಥೆರೋ ಪ್ರಸ್ತುತ ಅಮೇರಿಕನ್ ಆಧ್ಯಾತ್ಮಿಕ ಪ್ರವೃತ್ತಿಗೆ ‘The divine -deli- cafeteria ಧರ್ಮ’ ಎಂದು ಕರೆದಿದ್ದು ಅದು ಸಂಪೂರ್ಣವಾಗಿ ಹಿಂದೂಧರ್ಮದಂತೆಯೇ ಇದೆ. ನೀವು ಬೇರೆಬೇರೆ ಧರ್ಮಗಳಿಂದೇನೂ ಆರಿಸಿಕೊಳ್ಳುತ್ತಿಲ್ಲ, ಏಕೆಂದರೆ ಅವೆಲ್ಲವೂ ಒಂದೇ ಆಗಿದೆ ಎನ್ನುತ್ತಾರೆ ಅವರು. ಇಲ್ಲಿ ಸಾಂಪ್ರದಾಯಿಕತೆಯ ಪ್ರಶ್ನೆ ಇಲ್ಲ. ಯಾವುದು ಪ್ರಯೋಜನಕಾರಿಯೋ ಅದೇ ಮುಖ್ಯ. ಯೋಗಮಾರ್ಗ ಫಲಕಾರಿಯಾದರೆ ಒಳ್ಳೆಯದೇ! ರ್ಚಚಿಗೆ ಹೋಗುವುದು ಫಲಕಾರಿಯಾದರೆ ಅದೂ ಸರಿ! ಯೋಗ, ಚರ್ಚು, ಬೌದ್ಧರ ಉಪದೇಶಗಳ ಸಂಯುಕ್ತ ಮಾರ್ಗ ಫಲಕಾರಿಯಾದರೆ ಅದೂ ಸರಿಯೇ! ಎಂದು ಹೇಳುತ್ತಾರೆ.

ಮುಂದಿನ ಪ್ರಶ್ನೆ-ಮರಣೋತ್ತರ ಜೀವನದ ಬಗ್ಗೆ. ಕ್ರಿಶ್ಚಿಯನ್ನರು ಸಾಂಪ್ರದಾಯಿಕವಾಗಿ ದೇಹಗಳು ಮತ್ತು ಜೀವಾತ್ಮ ಬಹುಪವಿತ್ರ ಮತ್ತು ಅವೆರಡೂ ಸೇರಿ ‘ಆತ್ಮ’ವಾಗುತ್ತದೆ ಎಂದು ನಂಬುತ್ತಾರೆ. ಇದು ಪ್ರತ್ಯೇಕಿಸಲ್ಪಟ್ಟು ಪುನರುತ್ಥಾನದ ಕಾಲಕ್ಕೆ ಮತ್ತೆ ಒಂದಾಗುತ್ತವೆ. ಹಿಂದೂಗಳು ಅಂತಹದ್ದನ್ನೆಲ್ಲಾ ನಂಬುವುದಿಲ್ಲ. ಮರಣದ ಕಾಲದಲ್ಲಿ ಶರೀರ ಅಗ್ನಿಗಾಹುತಿಯಾಗುತ್ತದೆ ಮತ್ತು ಜೀವಾತ್ಮ ಹೊರಹೋಗುತ್ತದೆ. ಪುನರ್ಜನ್ಮ ಸಿದ್ಧಾಂತದ ಪ್ರಕಾರ ಈ ಜೀವಾತ್ಮಗಳು ಮತ್ತೆ ಮತ್ತೆ ಬೇರೆಬೇರೆ ದೇಹಗಳಲ್ಲಿ ಭೂಮಿಗೆ ಬರುತ್ತವೆ. ಅಮೆರಿಕನ್ನರು ಹಿಂದುಗಳಂತೆಯೇ ಭಾವಿಸುತ್ತಿರುವ ಇನ್ನೊಂದು ಕ್ಷೇತ್ರವೇ ಇದು. 2008 ರ ಹ್ಯಾಲಿಸ್ ಸಮೀಕ್ಷೆ ಪ್ರಕಾರ ಶೇಕಡ 24 ಅಮೆರಿಕನ್ನರು ಹಿಂದುಗಳಂತೆಯೇ ಭಾವಿಸಲಾರಂಭಿಸಿದ್ದಾರೆ. ಪುನರ್ಜನ್ಮವನ್ನು ನಂಬುತ್ತಿದ್ದಾರೆ ಮತ್ತು ಮರಣಾನಂತರ ಶರೀರಗಳನ್ನು ನಿರ್ಭಿಡೆಯಿಂದ ಹಿಂದುಗಳಂತೆಯೇ ಸುಡುತ್ತಿದ್ದಾರೆ. ಕ್ರಿಮೇಶನ್ ಅಸೋಸಿಯೇಷನ್ ಆಫ್ ಅಮೆರಿಕಾ ಪ್ರಕಾರ 1975 ರಲ್ಲಿ ಶೇಕಡಾ 6 ರಷ್ಟು ಮೃತಶರೀರಗಳನ್ನು ಸುಡುವ ಪ್ರವೃತ್ತಿ ಇಂದು ಶೇಕಡಾ 33 ಕ್ಕಿಂತ ಹೆಚ್ಚಾಗಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಎರಿಕ್ ಡಯಾನ ಅವರು, ಧರ್ಮವಿರುವುದು ಆಧ್ಯಾತ್ಮಿಕ ಉನ್ನತಿಗೆ ಎಂದು ನಾವು ಹೆಚ್ಚು ಹೆಚ್ಚು ಭಾವಿಸಿದಷ್ಟೂ ಪುನರುತ್ಥಾನವನ್ನು ಕುರಿತ ನಂಬಲು ಕಷ್ಟವಾದ ಮತ್ತು ಅನುಭಾವ ಗಮ್ಯವಲ್ಲದ literal Interpretationಗಳಿಗೆ ಕೊಡುತ್ತಿರುವ ಮಹತ್ವವನ್ನು ಕಡಿಮೆಗೊಳಿಸಬೇಕಾಗಿದೆ ಎಂದು ಹೇಳುತ್ತಾರೆ. ಆದ್ದರಿಂದ ಎಲ್ಲರೂ ‘ಓಂ’ ಎನ್ನೋಣ.

ಭಾರತೀಯರಾದ ನಾವು ಪ್ರಪಂಚವೆಲ್ಲಾ ಹಿಂದೂಗಳಾಗಿ ಬಿಡಲಿ ಎಂದು ನೂರು ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡವರೂ ಅಲ್ಲ. ಅದಕ್ಕಾಗಿ ಆಮಿಷಗಳನ್ನೊಡ್ಡಿಯೋ ಹೆದರಿಸಿಯೋ ಬೆದರಿಸಿಯೋ ಪ್ರಯತ್ನಿಸಿದವರೂ ಅಲ್ಲ. ‘ಹೂವು ಅರಳಿದರೆ ದುಂಬಿಗಳು ತಾವಾಗಿಯೇ ಬರುತ್ತವೆ’ ಎಂಬ ಶ್ರೀರಾಮಕೃಷ್ಣರ ತತ್ವವನ್ನು ಅನಾದಿಕಾಲದಿಂದ ನಂಬಿದವರು ನಾವು. ಸ್ವಾಮಿ ವಿವೇಕಾನಂದರು ಇಚ್ಛಿಸಿದ್ದಲ್ಲಿ ಬೃಹತ್ ಪ್ರಮಾಣದ ಮತಾಂತರವನ್ನು ಲೀಲಾಜಾಲವಾಗಿ ಮಾಡಿಬಿಡಬಹುದಿತ್ತು.

ಅಮೆರಿಕಾದ ಚರಿತ್ರೆಯನ್ನು ಅವಲೋಕಿಸಿದರೆ ಹಲವಾರು ಕಾರಣಗಳಿಂದ ಬೇಸತ್ತು ತಮ್ಮ ತಮ್ಮ ದೇಶಗಳನ್ನು ಬಿಟ್ಟು ಬಂದ ವಲಸೆಕೋರರು ಅವರು. ತಮ್ಮ ಕನಸಿನ ನಾಡು, ಧರ್ಮ, ಸಂಸ್ಕೃತಿಯನ್ನು ನಿರ್ವಿುಸಿಕೊಂಡು ಸ್ವರ್ಗೀಯ ವಾತಾವರಣದ ಕನಸು ಕಂಡವರು ಅವರು. ಯೂರೋಪಿನ ಧಾರ್ವಿುಕ ಚೌಕಟ್ಟು ಉಸಿರುಗಟ್ಟಿಸಿತ್ತು ಅವರಿಗೆ. ಕೇವಲ ಸ್ನೇಹಮಯಿ, ವೈಜ್ಞಾನಿಕ, ಸ್ವತಂತ್ರವಾತಾವರಣಕ್ಕೆ ಹಾತೊರೆಯುತ್ತಿತ್ತು ಮನ. ರಾಜಕೀಯ ಸ್ವಾತಂತ್ರ್ಯ, ಸಂವಿಧಾನ ರಚನೆ, ರಾಜ್ಯಗಳ ವಿಂಗಡನೆ ಮತ್ತು ಆರ್ಥಿಕ ಸಮೃದ್ಧಿಗಳು ನೆಲೆಗೊಂಡಾಗ ಬೇರೆಲ್ಲಾ ನಾಗರಿಕತೆಗಳಂತೆ ಒಂದು ‘ವಿಶಿಷ್ಟ, ವಿಶಾಲ ವೈಜ್ಞಾನಿಕ ಧರ್ಮಕ್ಕಾಗಿ’ ಹಾತೊರೆಯುವ ಅಮೆರಿಕನ್​ವುನಕ್ಕೆ ಮೊದಲು ಕಂಡಿದ್ದು ಜರ್ಮನಿಯ ಕ್ಯಾಂಟ್, ಷೋಪನಾರ್, ಫ್ರಾನ್ಸ್​ನ ವಾಲ್ಟೇರ್, ಹಾಲೆಂಡ್​ನ ಬೆನೆಡಿಕ್ಟ್ ಸ್ಪೀನೋಜರ ಅತೀಂದ್ರಿಯ ತತ್ವಗಳು. ಆಶ್ಚರ್ಯವೆಂದರೆ ಇವರೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ‘ವೇದಾಂತತತ್ವ’ಗಳನ್ನು ಪ್ರತಿಧ್ವನಿಸಿದವರೇ. ಷೋಪನಾರ್ ಅಂತೂ ಇದನ್ನು ನೇರವಾಗಿಯೇ ಹೇಳುತ್ತಾರೆ. ಇದೇ ಸಂದರ್ಭದಲ್ಲಿ 20 ವರ್ಷಗಳ ಅಂತರದಲ್ಲಿ ಜನ್ಮವೆತ್ತಿದ ಮತ್ತು 30 ವರ್ಷಗಳ ಅಂತರದಲ್ಲಿ ತೀರಿಕೊಂಡ ಮಹಾನ್ ಮುತ್ಸದ್ದಿಗಳಾದ ಎಮರ್ಸನ್, ಥೋರೋ ಮತ್ತು ವಿಟ್ಮನ್ ಯೂರೋಪಿಯನ್ ರ್ತಾಕ ನೆಲೆಗಟ್ಟು ಮತ್ತು ಭಾರತೀಯ ಆಧ್ಯಾತ್ಮಿಕ ವಿಪುಲತೆಯ ಸೌರಭವನ್ನೊಳಗೊಂಡ, ವಿಶಾಲ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸೌಧಗಳನ್ನು ನಿರ್ವಿುಸುವ ಕಾರ್ಯದಲ್ಲಿ ತೊಡಗಿದರು. ಇಲ್ಲಿ ಯೂರೋಪಿಯನ್ ಪ್ರಭಾವಕ್ಕಿಂತ ವೇದಾಂತದ ಪ್ರಭಾವವೇ ಹೆಚ್ಚು. ಎಮರ್ಸನ್​ರ ಬಹುಶ್ರುತ ಕೃತಿ ‘ಬ್ರಹ್ಮ’, ವಿಟ್​ವುನ್​ನ ‘ಛಿಚಡಛಿಠ ಟ್ಛ ಜ್ಟಚಠಠ’ನ ಪ್ರಧಾನ ಪಲ್ಲವಿಯೇ ಅತೀಂದ್ರಿಯ ಅನುಭವ. ಥೋರೋ ಅಂತೂ ನದೀತೀರದಲ್ಲಿ ಕುಟೀರ ಕಟ್ಟಿಕೊಂಡು ‘ಋಷಿ ಜೀವನ’ವನ್ನೇ ಪ್ರಾರಂಭಿಸಿಬಿಟ್ಟರು. ಏಕೆಂದರೆ ಅವರೇ ಹೇಳುತ್ತಿದ್ದಂತೆ ‘ಪ್ರತಿನಿತ್ಯವೂ ಬೆಳಗ್ಗೆ ಭಗವದ್ಗೀತೆಯ ಗಂಗೆಯಿಂದ ತಮ್ಮ ಬುದ್ಧಿಗೆ ಸ್ನಾನ ಮಾಡಿಸುತ್ತಿದ್ದರು.’ ‘ಸತ್ಯ’ ಅತೀತ, ಯಾವ ವರ್ಣನೆಯೂ ಅದನ್ನು ಹಿಡಿಯಲಾರದು ಎಂದು ಪ್ರಚಾರಗೈಯ್ಯುತ್ತಾ ತಮ್ಮ ಆಧ್ಯಾತ್ಮಿಕ - ಸಾಂಸ್ಕೃತಿಕ ಚಳವಳಿಯನ್ನು Transcendentalism (ಅತೀತ ಸಿದ್ಧಾಂತ)ಎಂತಲೇ ಕರೆದರು. ಇದು ವೇದಾಂತದ ‘ನೇತಿ ನೇತಿ’ ಯ ಇನ್ನೊಂದು ರೂಪ ಹಾಗೂ ಆತ್ಮ(ಸತ್ಯ)ನ ನಿರೂಪಣೆ ಉಪನಿಷತ್ತುಗಳಲ್ಲಿ ಇರುವುದೂ ಹೀಗೆಯೇ. ವೇದಗಳು ಹಾಗೂ ಭಗವದ್ಗೀತೆಯ ಆಳ ಸಂಪರ್ಕಕ್ಕೆ ಬಂದ ಎಮರ್ಸನ್ ಅದರಿಂದ ಯಾವ ಮಟ್ಟಕ್ಕೆ ಪ್ರಭಾವಿತರಾದರೆಂದರೆ, ‘Indian civilization had reached the summit of human thought’ ಎಂದು ಘರ್ಜಿಸಿ ‘Nature makes a Brahmin of me presently. Transmigration of soul is not a fable’ ಎಂದುಬಿಟ್ಟರು. ಇಂಥ ಗಹನ ತತ್ವಗಳೆಡೆಗೆ ಇಂಗ್ಲೆಂಡ್ ತಳೆದಿರುವ ಶುಷ್ಕಭಾವವನ್ನು ಕಂಡು ಛೀಮಾರಿ ಹಾಕಿದರು ಕೂಡ. ಇಂತಹ ಎಮರ್ಸನ್ ತೀರಿಕೊಂಡ ಮರುವರ್ಷವೇ ಸ್ವಾಮಿ ವಿವೇಕಾನಂದರು ಅಮೆರಿಕನ್ ನೆಲದಮೇಲೆ ಕಾಲೂರಿದ್ದು ವಿಧಾತನ ಕಾರ್ಯವಿಧಾನವೇ ಸೈ!

ವಿಶಾಲ, ವೈಜ್ಞಾನಿಕ, ಅನುಭವವೇದ್ಯ ಧರ್ಮಕ್ಕಾಗಿ ಹಾತೊರೆಯುತ್ತಿದ್ದ ಅಮೆರಿಕಾ ಅವುಗಳನ್ನೆಲ್ಲಾ ಯಥೇಚ್ಛವಾಗಿ ಪಡೆಯಿತಷ್ಟೇ ಅಲ್ಲ ಅದರ ಶ್ರೇಷ್ಠ ಪ್ರತಿನಿಧಿ ತಮ್ಮ ಮುಂದೆಯೇ ಇದ್ದಾರೆ ಎಂದು ವಿದ್ವನ್ವಲಯ ಹಾಗೂ ಪ್ರಾಮಾಣಿಕ ಆಧ್ಯಾತ್ಮಿಕ ಪಿಪಾಸುಗಳಿಗೆ ಅರ್ಥವೂ ಆಯಿತು. ಅವರೆಲ್ಲಾ ವಿವೇಕಾನಂದರು ಬದುಕಿರುವವರೆಗೂ ಅವರ ಶ್ರೇಷ್ಠ ಆರಾಧಕರಾದರು ಅಷ್ಟೇ ಅಲ್ಲ ಮುಂದಿನ ವೇದಾಂತ ಸೆಂಟರ್ (ಅಮೆರಿಕ ಹಾಗೂ ಪಶ್ಚಿಮದಲ್ಲಿ ರಾಮಕೃಷ್ಣ ಮಿಷನ್ ಶಾಖೆಗಳನ್ನು ಹೀಗೆ ಕರೆಯುತ್ತಾರೆ)ಗಳ ಬೆಳವಣಿಗೆಗೆ ಹೃತ್ಪೂರ್ವಕವಾಗಿ ಸೇವೆಸಲ್ಲಿಸಿದರು. ಅಮೆರಿಕನ್ ಇತಿಹಾಸಕಾರ ವಿಲ್ ಡ್ಯೂರೆಂಟ್ ಪ್ರಪಂಚದ ಎಲ್ಲ ದೇಶಗಳ ಚರಿತ್ರೆಯನ್ನು ಬರೆದ ಧಾಟಿಯೇ ಬೇರೆ; ಭಾರತದೆಡೆಗಿನ ರೀತಿಯೇ ಬೇರೆ. ಅಲ್ಲಿ ಭಾರತದ ಬಗ್ಗೆ ನೋವು-ಅಭಿಮಾನಗಳ ಮಿಶ್ರಣ ಇದ್ದರೆ ಪಾಶ್ಚಾತ್ಯರ ಬಗ್ಗೆ ಆಕ್ರೋಶ ಮತ್ತು ಛಾಟಿ ಏಟು ಇದೆ. ‘Nothing should shame the modern student of history than his recency and inadequacy of knowledge about India'’ ಅಂತ ಪ್ರಾರಂಭಿಸಿದರೆ ಕೊನೆಗೊಳ್ಳುವುದು ‘This is India that opens up itself before a student who only yesterday thought that civilization is an entirely European thing’ ಎಂದು. ಇದೇ ಹಾದಿಯನ್ನು ತುಳಿದರು ಮುಂದಿನ ತಲೆಮಾರುಗಳು. ಭಾರತ ಅಮೆರಿಕನ್ ಚಿಂತಕರಿಗೆ ಆರಾಧ್ಯದೇವತೆಯಾಯಿತು. ಸುಪ್ರಸಿದ್ಧ ಚಿಂತಕ ಮಾರ್ಕ್ ಟ್ವೈನ್ ‘ಧರ್ಮದ ಪ್ರಶ್ನೆ ಬಂದರೆ ಬೇರೆಲ್ಲಾ ದೇಶಗಳು ದಿವಾಳಿಗಳು; ಭಾರತ ಮಾತ್ರ ಮಿಲಿಯನೇರ್’ ಎಂದು ತಮ್ಮ ಶೈಲಿಯಲ್ಲೇ ಆರಾಧಿಸಿದರು.

ಇದೆಲ್ಲದರ ಪ್ರಭಾವ ಇಂದು ಎದ್ದುಕಾಣುತ್ತಿದೆ- ಅದೇ ನಾನು ಪ್ರಾರಂಭದಲ್ಲಿ ನಿಮ್ಮ ಮುಂದೆ ಇಟ್ಟ ಪೊ›.ಲೀಸಾ ಮುಲ್ಲರ್ ಅವರ ಲೇಖನ. ಆದರೆ ಅವರು ಇದನ್ನು ಬರೆದಿದ್ದು 12 ವರ್ಷಗಳ ಹಿಂದೆ. ಇಂದು ಈ ಅಂಕಿ ಅಂಶಗಳು ಎರಡುಪಟ್ಟಾಗಿದ್ದರೂ ಆಶ್ಚರ್ಯವಿಲ್ಲ. ಅರಳಿದ ಹೂವು ಯಾವ ದುಂಬಿಗೆ ಬೇಡ! ಈ ಹೂವು ನಮ್ಮ ಮನೆಯ ಅಂಗಳದ್ದು ಎನ್ನುವುದೇ ನಮ್ಮ ಹೆಮ್ಮೆ!! ಇದೊಂದು ದೀಪಾವಳಿಯ ಸಿಹಿಯೇ ಸೈ!!!

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net