ಘಮಘಮಿಸುವ ಸೈಡ್ ಡಿಷ್​ಗಳು: ಆಲೂ ಮಸಾಲ ಗ್ರೇವಿ

ALOO
Published on

ಚಪಾತಿ ಪೂರಿ ಹಾಗೂ ದೋಸೆ ರೊಟ್ಟಿ ಇತ್ಯಾದಿ ತಿನಿಸು ಮಾಡಿದಾಗ ಅವುಗಳನ್ನು ಸವಿಯುವುದಕ್ಕಾಗಿ ಕೆಲವೊಂದು ಸೈಡ್​ಡಿಷ್​ಗಳನ್ನು ಹೇಗೆ ತಯಾರಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ 4 ಈರುಳ್ಳಿ 2 ಟೊಮ್ಯಾಟೊ 2 ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮೆಣಸಿನಪುಡಿ ಚಮಚ ಜೀರಿಗೆ ಪುಡಿ 1/2 ಚಮಚ ಅರಿಶಿಣ ಪುಡಿ 1/2 ಚಮಚ ಗರಂ ಮಸಾಲೆ ಪುಡಿ ಉಪ್ಪು ರುಚಿಗೆ ತಕ್ಕಷ್ಟು ಬೆಣ್ಣೆ,  ಕೊತ್ತಂಬರಿ ಸೊಪ್ಪು ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆಯನ್ನು ಕುಕ್ಕರ್​ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಅದರ ಸಿಪ್ಪೆ ತೆಗೆದು ಆಲೂಗಡ್ಡೆಯನ್ನು ನುಣ್ಣಗೆ ಕಿವುಚಿಕೊಳ್ಳಿ.ಈರುಳ್ಳಿ, ಟೊಮ್ಯಾಟೊಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ.ಈಗ ಬಾಣಲೆಯಲ್ಲಿ ಬೆಣ್ಣೆ ಹಾಕಿ ಅದು ಕರಗುತ್ತಲೆ ಅದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ ನಂತರ ಹೆಚ್ಚಿದ ಈರುಳ್ಳಿ ಹಾಕಿ ಫ್ರೖೆ ಮಾಡಿ.

ಈಗ ಟೊಮ್ಯಾಟೊ ಹಾಕಿ ಸ್ವಲ್ಪ ಬಾಡಿಸಿನಂತರ ಉಪ್ಪು ಅರಿಶಿಣ ಮೆಣಸಿನಪುಡಿ ಜೀರಿಗೆ ಪುಡಿ ಗರಂ ಮಸಾಲ ಎಲ್ಲವನ್ನೂ ಹಾಕಿ ಸ್ವಲ್ಪ ಹೊತ್ತು ಫ್ರೖೆ ಮಾಡಿ. ಕೊನೆಯಲ್ಲಿ ಕಿವುಚಿದ ಆಲೂಗಡ್ಡೆ ಹಾಕಿ ಮೊಗಚಿ ಅಗತ್ಯವಿರುವಷ್ಟು ನೀರು ಹಾಕಿ ಕುದಿಸಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

| ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net