

| ರಾಜೋ
ಸ್ವಾತಂತ್ರ$್ಯಪೂರ್ವದಲ್ಲಿ ಜನರಿಗೆ ಸಂಸತ ಕಬ್ಬಿಣದ ಕಡಲೆಯಾಗಿದ್ದ ಸಂದರ್ಭದಲ್ಲಿ ಅಂದಿನ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ನೂರಾರು ಸಂಸತ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿದರು. ಅವುಗಳಲ್ಲಿ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿಗಳು 1940ರ ದಶಕದಲ್ಲಿ ಅನುವಾದಿಸಿದ ಅಧ್ಯಾತ್ಮ ರಾಮಾಯಣವೂ ಒಂದು. 1948ರಲ್ಲಿ ಮೂಲಮುದ್ರಣ ಕಂಡ ಈ ಗ್ರಂಥವನ್ನು ಪಟ್ಟಣಗೆರೆ ರಂಗನಾಥ ಶಾಸ್ತ್ರಿ ಮೆಮೊರಿಯಲ್ ಟ್ರಸ್ಟ್ 2020ರಲ್ಲಿ ಮರುಮುದ್ರಿಸಿದೆ. ಆ ಮೂಲಕ ಕಾಲಗರ್ಭದಲ್ಲಿ ಕಣ್ಮರೆಯಾಗುವ ಅಪಾಯವನ್ನು ಎದುರಿಸುತ್ತಿದ್ದ ಅಮೂಲ್ಯಗ್ರಂಥ ಸುಸಜ್ಜಿತ ರೂಪದಲ್ಲಿ ಹೊರಬಂದಂತಾಗಿದೆ. ಅಧ್ಯಾತ್ಮ ರಾಮಾಯಣ ಗ್ರಂಥದಲ್ಲಿ ಶ್ರೀರಾಮಚಂದ್ರನೇ ಅಧ್ಯಾತ್ಮದ ಗುರು. ವಿವಿಧ ಸಂದರ್ಭದಲ್ಲಿ ಅಧ್ಯಾತ್ಮದ ಮುಖೇನ ಲೋಕದ ನೀತಿ ಪಾಠಗಳನ್ನು ಹೇಳುವ ಪ್ರಯತ್ನ ಇದರಲ್ಲಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಸಂಸತ ಸಲಹಾ ಸಮಿತಿ ಸದಸ್ಯ ಮಹಾಮಹೋಪಾಧ್ಯಾಯ ಡಾ. ಎನ್. ರಂಗನಾಥ್ ಅವರ ನಲ್ನುಡಿ ಈ ಗ್ರಂಥದ ಮಹತ್ವವನ್ನು ಸಾರಿ ಹೇಳಿದೆ.
ಅಧ್ಯಾತ್ಮ ರಾಮಾಯಣವು ಬ್ರಹ್ಮಾಂಡಪುರಾಣದ ಭಾಗವಾಗಿದ್ದು ಶಿವ&ಪಾರ್ವತಿಯರ ಸಂವಾದ ರೂಪದಲ್ಲಿರುವ ತಾಂತ್ರಿಕ ಶೈಲಿಯಲ್ಲಿ ನಿರೂಪಿತವಾಗಿರುವ ಕೃತಿಯಾಗಿದೆ. ಒಟ್ಟು 65 ಸರ್ಗಗಳು ಹಾಗೂ 4200 ಶ್ಲೋಕಗಳಿಂದ ಕೂಡಿದ್ದಾಗಿದೆ. ಭಕ್ತಿ ಪಂಥದವರಿಗೆ, ರಾಮಭಕ್ತರಿಗೆ ಈ ಕೃತಿ ಅತ್ಯಂತ ಪ್ರಮುಖವಾದುದಾಗಿದೆ. ವಾಲ್ಮೀಕಿಯ ಬಗೆಗೆ ಇರುವ ಕಥೆ "ಅಯೋಧ್ಯಾಕಾಂಡ', "ಶುಕ ಯುದ್ಧಕಾಂಡ' ಮತ್ತು "ಕಾಲನೇಮಿ ಯುದ್ಧಕಾಂಡ', ರಾವಣನೇ ರಾಮನ ದೈವಿಕಗುಣಗಳನ್ನು ತಿಳಿಸುವುದು ಇತ್ಯಾದಿಗಳು ಇಲ್ಲಿ ಸೇರ್ಪಡೆಯಾಗಿರುವ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲದಿರುವ ವಿಷಯಗಳು ಎಂದು ರಂಗನಾಥ್ ಅವರು ಗುರುತಿಸಿದ್ದಾರೆ. ಅವರು ವಿವರಿಸಿದ ಪ್ರಕಾರ ರಾಮನು ಅಧ್ಯಾತ್ಮ ಗುರುವೆಂದು ವರ್ಣಿತವಾಗಿದ್ದು, ರಾಮನನ್ನು ಕುರಿತಾದ ಕೆಲವು ಭಕ್ತಿಪ್ರಧಾನವಾದ ಸ್ತೋತ್ರಗಳು ಈ ಕೃತಿಗೆ ಮೆರುಗನ್ನು ಕೊಟ್ಟಿವೆ.
ದೇಶದಲ್ಲಿ ವಿಪುಲವಾದ ರಾಮಾಯಣ ಸಾಹಿತ್ಯವಿದ್ದರೂ ಅಧ್ಯಾತ್ಮ ರಾಮಾಯಣಕ್ಕೆ ಸಿಗಬೇಕಾದ ಪ್ರಾಮುಖ್ಯತೆ ದೊರೆಯದಿರುವುದು ದುರದೃಷ್ಟಕರ. ಆಧ್ಯಾತ್ಮ ರಾಮಾಯಣ, ಉತ್ತರ ಭಾರತದಲ್ಲಿ ಹೆಚ್ಚು ಜನಜನಿತವಾಗಿದ್ದು, ರಾಮಭಕ್ತರಲ್ಲಿ ಮಾತ್ರವಲ್ಲದೆ ವೇದಾಂತಿಗಳಲ್ಲೂ ಅದ್ಭುತವಾದ ಮನ್ನಣೆ ಗಳಿಸಿದೆ. ರಾಮನೇ ಪರಬ್ರಹ್ಮ, ಸೀತೆಯೇ ಮಾಯಾಶಕ್ತಿ ಅಥವಾ ಪ್ರಕೃತಿ ಎಂಬುದೇ ಈ ರಾಮಾಯಣದ ಸಾರ ಸರ್ವಸ್ವ. ರಾಮನೇ ಪರಬ್ರಹ್ಮ ಎನ್ನುವುದನ್ನು ಮುನಿಗಳು, ದೇವತೆಗಳು, ಭಕ್ತರೇ ಅಲ್ಲದೇ ರಾವಣನೂ ಪರಿಗಣಿಸಿರುವುದು ಒಂದು ವಿಶೇಷ. "ವಾಲ್ಮೀಕಿ ರಾಮಾಯಣ' ನವರಸಭರಿತವಾಗಿ ಧರ್ಮ ಪ್ರಧಾನವಾಗಿ ಕಂಡುಬಂದರೆ, "ಅಧ್ಯಾತ್ಮರಾಮಾಯಣ' ಆಧ್ಯಾತ್ಮಿಕ ಗ್ರಂಥವೇ ಆಗಿದೆ ಎನ್ನಬಹುದು. ಕರ್ಮಕಾಂಡದ ಸಾರ ವಾಲ್ಮೀಕಿ ರಾಮಾಯಣವಾದರೆ, ಾನಕಾಂಡದ ಸಾರ ಅಧ್ಯಾತ್ಮರಾಮಾಯಣ. ಗ್ರಂಥದ ಪ್ರಥಮ ಭಾಗದಲ್ಲಿ ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡಗಳಿದ್ದರೆ ದ್ವೀತಿಯ ಭಾಗದಲ್ಲಿ ಕಿಷ್ಕಿಂಧಾಕಾಂಡ, ಸುಂದರಕಾಂಡ ಹಾಗೂ ಯುದ್ಧಕಾಂಡಗಳಿವೆ. ತೃತೀಯ ಭಾಗದಲ್ಲಿ ಯುದ್ಧಕಾಂಡ ಮುಂದುವರಿದಿದ್ದು ನಂತರ ಉತ್ತರಕಾಂಡವಿದೆ. ಮಾಹಾತ್ಮ್ಯಾ ಸರ್ಗದಿಂದ ಆರಂಭವಾಗಿ ಉತ್ತರಕಾಂಡದ ಒಂಬತ್ತನೆ ಸರ್ಗದಲ್ಲಿ ರಾಮನು ಪರಮಪದಕ್ಕೆ ಹೋಗುವಲ್ಲಿಯವರೆಗೆ ಗ್ರಂಥ ವ್ಯಾಪಿಸಿದೆ. ಗ್ರಂಥವನ್ನು ಜಯಚಾಮರಾಜ ಒಡೆಯರ್ ಅವರಿಗೆ ಅರ್ಪಿಸಲಾಗಿದೆ.
* ಶ್ರೀಮದಾದಿಕವಿ ವಾಲ್ಮೀಕಿ ವಿರಚಿತ ಶ್ರೀಮದಧ್ಯಾತ್ಮರಾಮಾಯಣಂ
(ಸಂಸತ ಮೂಲ, ಕನ್ನಡ ಅರ್ಥಾನುವಾದ, ವಿವರಣೆಗಳೊಡನೆ)
* ಅನು: ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ
* ಪ್ರ: ಪಟ್ಟಣಗೆರೆ ರಂಗನಾಥ ಶಾಸ್ತ್ರಿ ಕೃಷ್ಣವೇಣಮ್ಮ ಮೆಮೊರಿಯಲ್ ಟ್ರಸ್ಟ್ ಹೆಡತಲೆ ಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ.
ದೂ: 7760291482
* ಪುಟ: 606+28, ಬೆಲೆ: 1200 ರೂ.
ವಿದ್ವಾನ್ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ
ಅಧ್ಯಾತ್ಮ ರಾಮಾಯಣವೆಂಬ ಅಪರೂಪದ ಗ್ರಂಥದ ಅನುವಾದವನ್ನು ಕನ್ನಡನಾಡಿಗೆ ಒದಗಿಸಿ ಕೊಟ್ಟಿರುವವರು ವಿದ್ವಾನ್ ಬೇಲದಕೆರೆ ಸೂರ್ಯನಾರಾಯಣಶಾಸಿಗಳು. ಅವರು ಸಂಸತ ಹಾಗೂ ಕನ್ನಡ ಉಭಯ ಭಾಷಾ ವಿಶಾರದರಾಗಿದ್ದವರು. 25ಕ್ಕೂ ಹೆಚ್ಚು ಸಂಸತ ಗ್ರಂಥಗಳನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ಸನಾತನ ಧರ್ಮಕ್ಕೂ ಕನ್ನಡ ಸಾಹಿತ್ಯಕ್ಕೂ ಕೊಡುಗೆ ಸಲ್ಲಿಸಿದವರು. ಅವರು ಸ್ವರ್ಗಸ್ಥರಾಗಿ ನಾಲ್ಕು ದಶಕ ಕಳೆದರೂ ತಮ್ಮ ಬರಹಗಳ ಮೂಲಕ ಅಮರರಾಗಿದ್ದಾರೆ.