ಪ್ರಾಣಿಗಳಿಗಾಗಿಯೇ ಬ್ಯೂಟಿ ಪಾರ್ಲರ್

BEUTY
Published on
ಬೆಕ್ಕು, ನಾಯಿ, ಮೊಲ ಸೇರಿದಂತೆ ಸಾಕು ಪ್ರಾಣಿಗಳ ಕೂದನ್ನು ಸುಂದರವಾಗಿ ಮಾಡುವ ನಿಟ್ಟಿನಲ್ಲಿ ಮನುಷ್ಯರಂತೆಯೇ ಅವುಗಳಿಗೂ ಬ್ಯೂಟಿ ಪಾರ್ಲರ್ ಒಂದನ್ನು ದಕ್ಷಿಣ ತೈವಾನ್​ನಲ್ಲಿ ತೆರೆಯಲಾಗಿದೆ.

ಇಲ್ಲಿ ಪ್ರಾಣಿಗಳ ಕೂದಲನ್ನು ಟ್ರಿಮ್ ಮಾಡಿ ಸುಂದರಗೊಳಿಸುವುದು ಮಾತ್ರವಲ್ಲದೇ, ನಿಮ್ಮ ಅಚ್ಚುಮೆಚ್ಚಿನ ಪ್ರಾಣಿಯನ್ನು ನೀವು ಹೇಳಿದಂತೆ ಅಂದಗೊಳಿಸಿಕೊಡಲಾಗುತ್ತದೆ. ಅಷ್ಟೇ ಏಕೆ? ನೀವು ಇಷ್ಟಪಟ್ಟರೆ ಬೆಕ್ಕು, ನಾಯಿಯನ್ನು ಟೆಡ್ಡಿ ಬೇರ್, ಸಿಂಹ, ಹುಲಿ, ಚಿರತೆಯಂತೆಯೂ ಮಾಡಿಕೊಡಲಾಗುತ್ತದೆ. ಈ ಪಾರ್ಲರ್ ಹೆಸರು ಇಗೊಗೊ. 20 ಡಾಲರ್ (ಒಂದೂವರೆ ಸಾವಿರ ರೂ) ನಿಂದ ನಿಮಗೆ ಸೇವೆ ಲಭ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net