ಈ ವ್ಯಥೆಗೆ ಕೊನೆಯೆಂದು?; ಆ ಕ್ಷಣ..

Aa kshana
Published on
‘ನಾವು ಬೆಂಗಳೂರಿಗೆ ಬಂದ ನಂತರ ನನಗೆ ಬರಬೇಕಾದ ಬಾಕಿ ಹಣ ಕೊಡಲು ಪಿಂಕಿಗೆ ಕೇಳಿದೆ. ‘ನಿನ್ನ ಮೇಲೆ ಅವಲಂಬಿತರು ಯಾರೂ ಇಲ್ಲ, ನಿನ್ನ ಮಗಳನ್ನು ಯಾರೋ ಸಾಕುತ್ತಿದ್ದಾರೆ. ನಿನ್ನ ಎಲ್ಲಾ ಖರ್ಚನ್ನೂ ನಾನೇ ನೋಡಿಕೊಳ್ಳುತ್ತಿದ್ದೇನೆ, ನಿನಗೇಕೆ ಹಣ ಬೇಕು?’ ಎಂದು ಬಾಯಿ ಮುಚ್ಚಿಸಿದಾಗ ನನಗೆ ಬರಬೇಕಾದ ಹಣ ಬರುವುದಿಲ್ಲವೆಂದು ಚಿಂತೆಗೊಂಡೆ. ಆಗ ನನಗೆ ಪಿಂಕಿಯ ಖಾಸಾ ಸ್ನೇಹಿತೆಯಾಗಿದ್ದು, ಲಖನೌದಲ್ಲಿದ್ದ ರುಕ್ಸಾನ ಎನ್ನುವ ಬಾಂಗ್ಲಾದೇಶೀಯಳ ನೆನಪಾಯಿತು. ಆಕೆಯನ್ನು ಪಿಂಕಿಯ ಮನೆಯಲ್ಲೇ ಭೇಟಿಯಾಗಿದ್ದೆ. ಅವಳ ಮೂಲಕ ಹೇಳಿಸಿದರೆ ಪಿಂಕಿ ಹಣ ಕೊಡಬಹುದೆಂದು ಅವಳಿಗೆ ಕರೆ ಮಾಡಿದೆ. ಆಕೆ ಲಖನೌಗೆ ಬರಹೇಳಿದಳು. ನಾನು ರಜಾ ಪಡೆದು ಹೋದೆ. ನನ್ನ ಮೇಲೆ ಪಿಂಕಿ ಖರ್ಚು ಮಾಡಿರುವ ಹಣ ವಾಪಸ್ಸಾಗುವವರೆಗೂ ನನಗೆ ಸಂಬಳ ಸಿಗುವುದಿಲ್ಲ ಎಂದ ರುಕ್ಸಾನ, ನನ್ನಂತೆ ನೀನೂ ಸ್ವಂತ ಬಿಸಿನೆಸ್ ಪ್ರಾರಂಭಿಸಿ ಅವಳ ಹಣ ಮರಳಿಸು, ನಿನಗೆ ನಾನೇ ಆಶ್ರಯ ಕೊಡುವೆ ಎಂದಳು.
ನಾನು ಈ ಬಗ್ಗೆ ಯೋಚಿಸುತ್ತಿರುವಾಗ ಢಾಕಾದಲ್ಲಿ ನಮ್ಮ ನೆರೆಮನೆಯಲ್ಲಿದ್ದ ಹೃದಯ್ ಎನ್ನುವವನು ಕರೆ ಮಾಡಿದ. ಆತನಿಗೆ ನನ್ನ ಫೋನ್ ನಂಬರ್ ಹೇಗೆ ಸಿಕ್ಕಿತೋ ಗೊತ್ತಿಲ್ಲ. ತಾನು ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ ಆತ ನನ್ನೊಡನೆ ತುರ್ತಾಗಿ ಮಾತನಾಡುವುದಿದೆ ಎಂದು ಬೆಂಗಳೂರಿಗೆ ಬರಹೇಳಿದ. ನಾನು ಹಿಂಜರಿದಾಗ ತಾನೇ ವಿಮಾನದ ಟಿಕೆಟ್ ಕಳುಹಿಸಿದ. ನಾನು ಬೆಂಗಳೂರು ತಲುಪಿದಾಗ ವಿಮಾನ ನಿಲ್ದಾಣದಲ್ಲಿಯೇ ಹೃದಯ್ ಎದುರುಗೊಂಡು ಹೋಟೆಲೊಂದಕ್ಕೆ ಕರೆದೊಯ್ದ. ಬಹಳ ವರ್ಷಗಳ ನಂತರ ಭೇಟಿಯಾಗುತ್ತಿದ್ದುದರಿಂದ ಸಾಕಷ್ಟು ಮಾತನಾಡಿದೆವು. ನೀನು ಭಾರತಕ್ಕೆ ಹೇಗೆ ಬಂದೆ, ಇಲ್ಲೇನು ಮಾಡುತ್ತಿರುವೆ ಇವೆಲ್ಲವೂ ನನಗೆ ತಿಳಿದಿದೆ. ನಾನು ನಿನಗೆ ಸಹಾಯ ಮಾಡುವೆ ಎಂದ. ಶಿರಾಜ್ ಎನ್ನುವನನ್ನು ತನ್ನ ಗೆಳೆಯನೆಂದು ಪರಿಚಯಿಸಿ, ನೀನು ಶಿರಾಜ್​ನ ತಂಡದಲ್ಲಿ ವೇಶ್ಯಾವೃತ್ತಿ ಮುಂದುವರಿಸು, ಕೈತುಂಬಾ ಹಣ ಕೊಡಿಸುವೆ ಎಂದ. ಈ ದಂಧೆ ಮಾಡದಿರಲು ನಾನು ತೀರ್ವನಿಸಿರುವೆ, ಎರಡು ತಿಂಗಳ ವೃತ್ತಿ ಮಾಡಿಯೂ ಪಿಂಕಿ ಸಂಬಳವನ್ನೇ ಕೊಡಲಿಲ್ಲ ಎಂದುತ್ತರಿಸಿದೆ. ಒಂದೇ ತಿಂಗಳು ವೇಶ್ಯಾವೃತ್ತಿ ಮುಂದುವರಿಸು, ಶಿರಾಜ್​ನಿಂದ ಸಂಬಳವಲ್ಲದೆ, ಪಿಂಕಿಯ ಬಾಕಿಯನ್ನೂ ಕೊಡಿಸುತ್ತೇನೆ ಎಂದ. ಇದಕ್ಕೊಪ್ಪಿದ ನಾನು ಪಿಂಕಿಯ ಮನೆಯಿಂದ ಓಡಿಹೋಗಿ ಶಿರಾಜ್​ನ ತಂಡಕ್ಕೆ ಸೇರಿದೆ. ಆತ ಹೇಳಿದ ಹೋಟೆಲ್​ನಲ್ಲಿ ಸೆಕ್ಸ್ ಕೆಲಸ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ನನ್ನನ್ನು ಬಂಧಿಸಿ ಮಹಿಳಾ ನಿಲಯಕ್ಕೆ ಕಳುಹಿಸಿದರು. ಶಿರಾಜ್ ನನಗೆ ಜಾಮೀನು ಕೊಡಿಸಿ ಹೈದರಾ ಬಾದ್​ಗೆ ಸೆಕ್ಸ್ ಕೆಲಸಕ್ಕಾಗಿ ಹೋಗಲು ತಿಳಿಸಿದ. ನಾನು ಒಪ್ಪದಿದ್ದಾಗ ಥಳಿಸಿದ. ವಿಧಿಯಿಲ್ಲದೆ ಹೈದರಾಬಾದ್​ಗೆ ಹೋದೆ. ವೇಶ್ಯಾವೃತ್ತಿಯಿಂದ ಮುಕ್ತಳಾಗಬೇಕೆಂದು ನಾನು ಹೈದರಾಬಾದಿನಿಂದಲೇ ಶ್ಯಾಮ್ನ್ನು ಸಂರ್ಪಸಿದೆ. ಆತ ಕಲ್ಲಿಕೋಟೆಗೆ ಬರಹೇಳಿದಾಗ ಅಲ್ಲಿಗೆ ಹೋದೆ. ಶ್ಯಾಮ್ ತನ್ನ ಸ್ನೇಹಿತ ಲಕ್ಷ್ಮಿಲಾಲ್ ಎನ್ನುವವನ ಮೂಲಕ ನನಗೆ ವಾಸಿಸಲು ಮನೆಯೊಂದನ್ನು ಕೊಡಿಸಿ ಒಂದೆರಡು ತಿಂಗಳಲ್ಲೇ ಲಗ್ನವಾಗುವುದಾಗಿ ಹೇಳಿದ.

ಇಷ್ಟರಲ್ಲಿ ನಾನು ಹೈದರಾಬಾದಿನಿಂದ ಪರಾರಿಯಾಗಿರುವ ಮಾಹಿತಿ ಕೇಳಿದ ಹೃದಯ್ ಗಾಬರಿಗೊಂಡು ಪಿಂಕಿಯನ್ನು ಸಂರ್ಪಸಿದ. ನಾನು ಕಲ್ಲಿಕೋಟೆಯ ವ್ಯಕ್ತಿಯೊಬ್ಬನೊಡನೆ ಸಂಪರ್ಕವಿಟ್ಟುಕೊಂಡಿದ್ದನ್ನು ಆಕೆ ತಿಳಿಸಿದಳು. ಅವರಿಬ್ಬರೂ ಕೂಡಿ ನನ್ನನ್ನು ಹುಡುಕತೊಡಗಿದ್ದರು. ಒಂದು ದಿನ ನಾನು ಮಾಲ್​ಗೆ ಹೋಗಿದ್ದಾಗ ಪಿಂಕಿಯ ತಂಡದ ಒಬ್ಬಳು ಅಲ್ಲಿ ನನ್ನನ್ನು ನೋಡಿ ಯಾರಿಗೋ ಸುದ್ದಿ ಮುಟ್ಟಿಸಿದಳು. ಹತ್ತೇ ನಿಮಿಷಗಳಲ್ಲಿ ಅಲ್ಲಿಗೆ ಬಂದ ನಮ್ಮ ದೇಶದ ಕೆಲವು ಯುವಕರು ನನ್ನನ್ನು ಎತ್ತಿಹಾಕಿಕೊಂಡು ಕಾರಿನಲ್ಲಿ ಬೆಂಗಳೂರಿನ ಪಿಂಕಿಯ ಮನೆಗೆ ಕರೆತಂದರು. ಅಲ್ಲಿ ಪಿಂಕಿ, ಹೃದಯ್ ಅಲ್ಲದೆ 4 ಗಂಡಸರು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದರು. ಎಲ್ಲರೂ ನಮ್ಮ ದೇಶದವರೇ ಆಗಿದ್ದರು. ನಿನ್ನನ್ನು ಬಾಂಗ್ಲಾದೇಶದಿಂದ ಇಲ್ಲಿಗೆ ಕರೆಸಿಕೊಂಡು ನಿನ್ನ ಮೇಲೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ನೀನು ನಮಗೇ ದ್ರೋಹ ಬಗೆದಿರುವೆ. ಒಂದು ವೇಳೆ ನೀನೇ ಸ್ವತಂತ್ರವಾಗಿ ದಂಧೆ ನಡೆಸುವುದಾದರೆ, ಇಲ್ಲ ಲಗ್ನವಾಗುವುದಾದರೆ ನಮ್ಮ ಅಭ್ಯಂತರವಿಲ್ಲ, ಆದರೆ, ನಾವು ಖರ್ಚು ಮಾಡಿರುವ ಮೂರು ಲಕ್ಷ ರೂ. ವಾಪಸ್ ಮಾಡಿ ಹೋಗು ಎಂದರು. ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದಾಗ ಲಟ್ಟಣಗೆಯಿಂದ ಥಳಿಸಿದರು.

ನನ್ನನ್ನು ಸಂಪೂರ್ಣವಾಗಿ ವಿವಸ್ತ್ರಳನ್ನಾಗಿ ಮಾಡಿ ಪಿಂಕಿ ನನ್ನ ಹೊಟ್ಟೆಯ ಮೇಲೆ ಕುಳಿತಳು. ಒಬ್ಬ ನನ್ನ ಬಾಯಿಗೆ ಬಟ್ಟೆ ತುರುಕಿದ. ಒಬ್ಬಳು ನನ್ನ ಕೈಗಳನ್ನು ಬಿಗಿಯಾಗಿ ಹಿಡಿದಳು. ಇನ್ನಿಬ್ಬರು ನನ್ನ ಜನನಾಂಗಕ್ಕೆ ಮದ್ಯದ ಖಾಲಿ ಬಾಟಲ್ ತುರುಕಿ ಪದೇಪದೆ ಅತ್ಯಾಚಾರ ಮಾಡಿದರು. ಉರಿಯುತ್ತಿದ್ದ ಸಿಗರೇಟ್​ನಿಂದ ನನ್ನ ದೇಹವನ್ನು ಸುಟ್ಟರು. ನನ್ನ ಮೊಬೈಲ್​ಫೋನ್ ಮೂಲಕ ಶ್ಯಾಮ್ನ್ನು ಸಂರ್ಪಸಲು ಪ್ರಯತ್ನಿಸಿದರು. ಆತ ಸಿಗದಿದ್ದಾಗ ಅವನ ಸ್ನೇಹಿತ ಲಕ್ಷ್ಮಿಲಾಲ್​ನನ್ನು ಸಂರ್ಪಸಿದರು. ಅವನಿಗೆ ವಾಟ್ಸಪ್ ಮೂಲಕ ತಮ್ಮ ಕೃತ್ಯದ ಲೈವ್ ವಿಡಿಯೋ ತೋರಿಸುತ್ತಾ, ಈಕೆ ನಮಗೆ ಕೊಡಬೇಕಾದ ಹಣ ಕೊಡದೇ ದ್ರೋಹ ಮಾಡಿದ್ದಕ್ಕೆ ಅವಳಿಗೆ ಕೊಡುತ್ತಿರುವ ಶಿಕ್ಷೆಯನ್ನು ನೋಡಿ. ಕೂಡಲೇ ನಮ್ಮ ಗೂಗಲ್ ಪೇ ಅಕೌಂಟಿಗೆ 3 ಲಕ್ಷ ರೂ. ಹಾಕಿದರೆ ಅವಳನ್ನು ಬಿಡುತ್ತೇವೆ ಎಂದರು. ಲಕ್ಮೀಲಾಲ್ ತನ್ನ ಬಳಿ ಒಂದು ಲಕ್ಷ ರೂಪಾಯಿ ಮಾತ್ರ ಇರುವುದಾಗಿ ತಿಳಿಸಿದ. ಆತ ಒಂದು ಲಕ್ಷ ರೂ ಹಾಕಿದ ನಂತರ ನನ್ನ ಮೇಲಿನ ಹಲ್ಲೆ ನಿಲ್ಲಿಸಿದರು. ಏತನ್ಮಧ್ಯೆ ಅಲ್ಲಿದ್ದವರೆಲ್ಲರೂ ತಮ್ಮ ಫೋನುಗಳಲ್ಲಿ ಅತ್ಯಾಚಾರದ ವಿಡಿಯೋಗಳನ್ನು ಮಾಡಿಕೊಂಡಿದ್ದರು. ಆನಂತರ ಇನ್ನೊಂದು ಮನೆಗೆ ಕರೆದುಕೊಂಡು ಹೋಗಿ 5 ದಿನ ಕೂಡಿಹಾಕಿದ್ದರು. ಒಂದು ದಿನ ನಾನು ಕಿಟಕಿಯಿಂದ ಹೊರನೋಡಿದಾಗ ಒಬ್ಬ ಹೆಣ್ಣುಮಗಳು ಕಾಣಿಸಿದಳು. ಅವಳನ್ನು ಕರೆದು, ಬಿಡಿಸಲು ಕೋರಿದೆ. ಆಕೆ ಆ ಮನೆಯ ಮಾಲೀಕನಿಗೆ ಕರೆ ಮಾಡಿದಳು. ಒಂದು ಗಂಟೆಯ ನಂತರ ಹೃದಯ್ ಅಲ್ಲಿಗೆ ಬಂದು ನನ್ನನ್ನು ಬೈದು ಆಟೋದಲ್ಲಿ ಬೇರೊಂದು ಮನೆಗೆ ಕರೆದೊಯ್ದ. ಅಲ್ಲಿ ಕಾವಲಿಗಾಗಿ ಬಾಂಗ್ಲಾ ದೇಶದಿಂದ ಬಂದಿದ್ದ ಯುವತಿಯನ್ನು ಹಾಕಿದ. ವಾರ ಕಳೆದ ನಂತರ ಆಕೆ ನೀರು ತರಲು ಹೊರಗೆ ಹೋದ ಸಮಯ ಸಾಧಿಸಿ ಅಲ್ಲಿಂದ ಪರಾರಿಯಾದೆ. ಅದೃಷ್ಟವಶಾತ್ ನನ್ನ ಬೂಟಿನಲ್ಲಿದ್ದ ಕಾಲುಚೀಲದಲ್ಲಿ 15,000 ರೂಪಾಯಿ ಅಡಗಿಸಿಟ್ಟಿದ್ದೆ. ಆ ಹಣ ಬಳಸಿ ಕಲ್ಲಿಕೋಟೆಗೆ ಹೋಗಿ ಶ್ಯಾಮ್ನ್ನು ಸಂರ್ಪಸಿದೆ. ಆತ ವಾಸಿಸಲು ಒಂದು ರೂಂ ಮಾಡಿಕೊಟ್ಟ.

ಈ ನಡುವೆ ನನ್ನ ಮೇಲಿನ ಅತ್ಯಾಚಾರದ ವಿಡಿಯೋವನ್ನು ಹೃದಯ್ ಮತ್ತಿತರರು ಬಾಂಗ್ಲಾದೇಶದ ತಮ್ಮ ಮಿತ್ರರಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದರು. ಬಾಂಗ್ಲಾದೇಶ ಮಾತ್ರವಲ್ಲದೆ, ಅಸ್ಸಾಂ, ಮತ್ತು ಪಶ್ಚಿಮ ಬಂಗಾಳಗಳಲ್ಲಿಯೂ ವೈರಲ್ ಆಯಿತು. ಅದನ್ನು ನೋಡಿದ ಅಸ್ಸಾಂನ ಪೊಲೀಸ್ ಅಧಿಕಾರಿಯೊಬ್ಬರು ಯಾವ ಮೊಬೈಲ್ ಫೋನಿನಿಂದ ವಿಡಿಯೋ ಮಾಡಲಾಗಿದೆ ಎಂದು ಪತ್ತೆ ಹಚ್ಚಿ ಸದರಿ ಮೊಬೈಲ್ ಫೋನ್ ಬೆಂಗಳೂರಿನಲ್ಲಿದೆ ಎಂದು ಅರಿತರು. ಆ ವಿಡಿಯೋವನ್ನು ಬೆಂಗಳೂರಿನಲ್ಲಿಯೇ ಚಿತ್ರೀಕರಿಸಲಾಗಿದೆ ಎಂದು ಖಚಿತಪಡಿಸಲು ವಿಡಿಯೋವನ್ನು ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ಕಳುಹಿಸಿದರು. ಪೊಲೀಸರು ಕೂಲಂಕಷ ತನಿಖೆ ನಡೆಸಿ ಹೃದಯ್ನನ್ನು ಪತ್ತೆ ಮಾಡಿ ಅವನ ಮೂಲಕ ಉಳಿದೆಲ್ಲರನ್ನೂ ಬಂಧಿಸಿದರು. ಆನಂತರ ಅವರು ಲಕ್ಷ್ಮೀಕಾಂತ್​ನ ಮೊಬೈಲ್ ಪತ್ತೆ ಮಾಡಿ ಕೇರಳಕ್ಕೆ ಬಂದರು. ಪೊಲೀಸರು ಕಲ್ಲಿಕೋಟೆಯಿಂದ ಬೆಂಗಳೂರಿಗೆ ಕರೆತಂದು ನನ್ನ ಹೇಳಿಕೆ ಪಡೆದು ಅತ್ಯಾಚಾರ ಪ್ರಕರಣ ದಾಖಲಿಸಿದರು. ವೈದ್ಯಕೀಯ ಚಿಕಿತ್ಸೆ ಕೊಡಿಸಿ ಉನ್ನತ ಮಟ್ಟದ ತಾಂತ್ರಿಕ ತನಿಖೆ ಮಾಡಿ ಒಂದು ತಿಂಗಳೊಳಗೇ, ನನ್ನ ಮೇಲೆ ಅತ್ಯಾಚಾರ ಮಾಡಿದ 12 ಜನರನ್ನು ಬಂಧಿಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನೂ ಸಲ್ಲಿಸಿದರು. ನನ್ನನ್ನು ಮಹಿಳಾ ಆಶ್ರಯಗೃಹದಲ್ಲಿ ಇಡಲಾಯಿತು. ನ್ಯಾಯಾಧೀಶರು 9 ಜನರಿಗೆ ಜೀವಾವಧಿ ಶಿಕ್ಷೆ ಕೊಟ್ಟರು. ಭಾರತದ ಪೊಲೀಸರಿಗೆ ಹಾಗೂ ನ್ಯಾಯವ್ಯವಸ್ಥೆಗೆ ನಾನು ಋಣಿ. ಇಷ್ಟಾದಾಕ್ಷಣ ನ್ಯಾಯ ದೊರೆಯಿತೇ? ಇಲ್ಲ. ಸಾವಿರಾರು ಬಡ ಬಾಂಗ್ಲಾದೇಶೀಯರನ್ನು ಭಾರತಕ್ಕೆ ಮಾನವ ಕಳ್ಳಸಾಗಾಣಿಕೆ ಮಾಡಿ ಕುಕೃತ್ಯಗಳನ್ನು ನಡೆಸುತ್ತಿದ್ದಾರೆ. ನನ್ನಂತಹ ಅಮಾಯಕ ಹೆಣ್ಣುಮಕ್ಕಳನ್ನು ಅವರಿಚ್ಛೆಗೆ ವಿರುದ್ಧವಾಗಿ ಪಾಪಕೂಪಕ್ಕೆ ತಳ್ಳುತ್ತಿದ್ದಾರೆ. ಭಾರತಕ್ಕೆ ನಾನು ಅನಧಿಕೃತವಾಗಿ ಬಂದ ಕಾರಣ ನನ್ನನ್ನು ಶ್ಯಾಮ್ ಮದುವೆ ಮಾಡಿಕೊಳ್ಳುವುದು ಅಸಾಧ್ಯ ಎಂದು ತಿಳಿದಿದೆ. ಅಲ್ಲದೆ, ಈ ಅಪರಾಧಕ್ಕಾಗಿ ನನ್ನನ್ನು ಜೈಲಿಗೂ ಕಳುಹಿಸಬಹುದು. ನನಗೆ ಮುಂದೇನು ಮಾಡಬೇಕೆಂದು ತೋಚುತ್ತಿಲ್ಲ. ನನ್ನ ದೇಶಕ್ಕೆ ವಾಪಸಾಗಿ ಅಲ್ಲಿ ಮರ್ಯಾದೆಯಿಂದ ಮುಂದಿನ ಜೀವನ ಸಾಗಿಸಬಯಸುತ್ತೇನೆ. ಬಾಂಗ್ಲಾದೇಶದ ಸೋದರಿಯರಿಗೆ ನನ್ನ ಕಥೆ ಹೇಳಿ ಎಚ್ಚರಿಸುತ್ತೇನೆ. ‘ಯಾರು ತಟ್ಟಲು ಧೈರ್ಯ ತೋರುವರೋ ಅವರಿಗೆ ಬಾಗಿಲುಗಳು ತಂತಾನೆ ತೆರೆಯುತ್ತವೆ’ ಎಂದಿದ್ದಾನೆ ಅಮೆರಿಕದ ವಾಗ್ಮಿ ಟೋನಿ ಗ್ಯಾಸ್ಕಿನ್ಸ್. ನಾನು ನಿಮ್ಮೆಲ್ಲರ ಸಹಾಯಕ್ಕಾಗಿ ಬಾಗಿಲನ್ನು ಬಡಿದಿರುವೆ. ಯಾವಾಗ ಬಾಗಿಲು ತೆರೆದು ನಾನು ಬಾಂಗ್ಲಾದೇಶಕ್ಕೆ ವಾಪಸಾಗುವೆನೋ ಎಂದು ಕಾದು ನೋಡುತ್ತಿರುವೆ.’

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net