ಗಾಜಾದಲ್ಲಿ ದಾಳಿ ತೀವ್ರ: 40 ಪ್ಯಾಲೆಸ್ತೇನಿಯನ್ನರ ಹತ್ಯೆ

gaja
Published on

ಜೆರುಸಲೆಂ(ಇಸ್ರೇಲ್​): ದಕ್ಷಿಣ ಗಾಜಾದ ರಫಾಹ್ ಮತ್ತು ಉತ್ತರ ಗಾಜಾದ ಜಬಾಲಿಯಾದಲ್ಲಿ ಭಾನುವಾರ ಇಸ್ರೇಲ್​ ನಡೆಸಿದ ದಾಳಿಯಲ್ಲಿ 40 ಪ್ಯಾಲೆಸ್ತೇನಿಯನ್ನರು ಮೃತಪಟ್ಟಿದ್ದಾರೆ.

ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಜೆನಿನ್ ಪಟ್ಟಣದ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಪ್ಯಾಲೆಸ್ತೀನ್ ಸಶಸ್ತ್ರ ಚಳವಳಿಯ ಕಮಾಂಡರ್ ಖಮೈಸೆ ಹತನಾಗಿದ್ದಾನೆ. ಖಮೈಸೆ ವಾಸವಿದ್ದ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

ಉತ್ತರ ಗಾಜಾದ ಕಮಲ್ ಅಡ್ವಾನ್ ಆಸ್ಪತ್ರೆ ಬಳಿಯ ವಸತಿ ಸಂಕೀರ್ಣದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 22 ಜನರು ಮತ್ತು ಜಬಾಲಿಯಾದಲ್ಲಿನ ಅಲ್ ಫಲ್ಲುಜಾ ಪ್ರದೇಶದಲ್ಲಿ ನೀರು ತರಲು ಹೋಗುತಿದ್ದ ಜನರ ಮೇಲೆ ನಡೆದ ಶೆಲ್ ದಾಳಿಯಲ್ಲಿ 8 ಜನರು ಮೃತಪಟ್ಟಿದ್ದಾರೆ. ದಾಳಿ ಉಲ್ಬಣಗೊಂಡಂತೆ, ರಫಾದಿಂದ 6.3 ಮಿಲಿಯನ್ ಮತ್ತು ಉತ್ತರ ಗಾಜಾದಿಂದ 1 ಮಿಲಿಯನ್​ ಜನರು ಪಲಾಯನ ಮಾಡಿದರು.

ಹೌತಿಗಳು ಕ್ಷಿಪಣಿ ದಾಳಿ : ಇದರ ನಡುವೆ ಕೆಂಪು ಸಮುದ್ರದಲ್ಲಿ ಯಮನ್ ಕರಾವಳಿಯಲ್ಲಿ ಪನಾಮ ಧ್ವಜದ ಕಚ್ಚಾ ತೈಲ ಟ್ಯಾಂಕರ್ ಮೇಲೆ ಹೌತಿಗಳು ಕ್ಷಿಪಣಿ ದಾಳಿ ನಡೆಸಿದರು. ಬೋರ್ಡಿನಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ನಂದಿಸಲಾಯಿತು.

ರಫಾ ಮೇಲೆ ಇಸ್ರೇಲ್ ದಾಳಿಯನ್ನು ನಿಲ್ಲಿಸಬೇಕೆಂದು ದಕ್ಷಿಣ ಆಫ್ರಿಕಾವು ಹೇಗ್‌ನಲ್ಲಿರುವ ಯುಎನ್ ನ್ಯಾಯಾಲಯದಲ್ಲಿ ತನ್ನ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಯುಎನ್ ಪ್ಯಾಲೆಸ್ಟೈನ್ ನಿರಾಶ್ರಿತರ ಸಂಸ್ಥೆ (ಯುಎನ್‌ಆರ್‌ಡಬೂ ಎ) ಮೇಲಿನ ನಿಷೇಧವನ್ನು ಆಸ್ಟ್ರಿಯಾ ತೆಗೆದುಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net