

| ಡಾ. ಪ್ರಿಯಾಂಕ ಎಂ.ಜಿ.
ಇದು ಡಿಜಿಟಲ್ ಪೇರೆಂಟಿಂಗ್ ಅಪ್ಲಿಕೇಶನ್. ಆಂಡ್ರಾಯ್್ಡ ಮತ್ತು ಐಒಎಸ್ ಪ್ಲಾಟ್ಫಾಮರ್್ಗಳಲ್ಲಿ ಲಭ್ಯವಿದೆ. ಈ ಕವಚ್ ಅನ್ನು ದೆಹಲಿ ಮೂಲದ ಟೆಕ್ನಾಲಜಿ ಸ್ಟಾರ್ಟ್ ಅಪ್ ಸೆರ್ಟಸ್ ಟೆಕ್ನಾಲಜಿಸ್ ಕಳೆದ ವರ್ಷ ಪ್ರಾರಂಭಿಸಿದೆ. ಇದು ಒಬ್ಬ 10 ವರ್ಷದ ಮಗುವಿನ ತಾಯಿಯಾದ ನೂಪುರ್ ರಘುನಾಥ್ ಅವರ ಐಡಿಯಾ. ತನ್ನ ಮಗನ ಅತಿಯಾದ ಇಂಟರ್ನೆಟ್ ಬ್ರೌಸಿಂಗ್ ಗೀಳನ್ನು ಸಹಿಸಲಾರದೆ ಇದನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಕವಚ್ನಿಂದಾಗಿ ಪೋಷಕರು ತಮ್ಮ ಮಕ್ಕಳು ಯಾವ ಆಪ್ ಬಳಸುತ್ತಿದ್ದಾರೆ? ಯಾವ ನಿರ್ದಿಷ್ಟ ಅಪ್ಲಿಕೇಶನ್ನಲ್ಲಿ ಎಷ್ಟು ಸಮಯ ಕಳೆಯುತ್ತಿದ್ದಾರೆ? ಎಂಬುದರ ಜತೆಗೆ ಯಾವುದೇ ಹೊಸ ಅಪ್ಲಿಕೇಷನ್ ಡೌನ್ಲೋಡ್ ಮಾಡಿದರೂ ಆ ಎಲ್ಲ ಮಾಹಿತಿಯನ್ನೂ ಈ ಕವಚ್ ಮೂಲಕ ತಿಳಿಯಬಹುದು. ಪೋಷಕರು ಕೆಲ ವೆಬ್ಸೈಟ್ ಮತ್ತು ವಯಸ್ಕ ಅಶ್ಲೀಲ ವಿಷಯದ ಆಯ್ಕೆಯನ್ನೂ ನಿರ್ಬಂಧಿಸಬಹುದು. ವೆಬ್ ಸರ್ಫಿಂಗ್ನಲ್ಲಿ ಸಮಯದ ಮಿತಿ ನಿಗದಿ ಮಾಡಬಹುದು. ಅಕಸ್ಮಾತ್ ಮಕ್ಕಳು ಈ ನಿರ್ಬಂಧ ಮೀರಲು ಹೋದರೆ ಪೋಷಕರ ಫೋನಿಗೆ ಸಂದೇಶ ಹೋಗಲಿದೆ. ಅಲ್ಲದೆ ಮಕ್ಕಳಿರುವ ಜಾಗದ ಮಾಹಿತಿಯ ಸಂದೇಶವನ್ನೂ ಜಿಪಿಆರ್ಎಸ್ ಮೂಲಕ ಪಡೆಯಬಹುದು.
ಮೊದಲ ಬಾರಿಗೆ ಪಾಲಕರಾದ ವರಿಗೆಂದೇ ಅಭಿವೃದ್ಧಿ ಪಡಿಸಿರುವ ಆಪ್ ಇದು. ಮಕ್ಕಳ ಆರೈಕೆ, ಮಕ್ಕಳ ಉತ್ಪನ್ನಗಳು, ವೈದ್ಯರ, ಶಾಲೆಗಳ ಬಗ್ಗೆ ಮಾಹಿತಿಯನ್ನು ಬೇರೆ ಪೋಷಕರು ಮಾಡಿರುವ ವಿಮರ್ಶೆಗಳ ಮೂಲಕ ತಿಳಿದುಕೊಳ್ಳಬಹುದು. ಮುಂಬೈ ಮೂಲದ ನಯ್ಯ ಸಾಗ್ಗಿ ಅವರು ಈ ಆನ್ಲೈನ್ ಪ್ಲಾಟ್ಫಾಮ್ರ್ ಅನ್ನು ಪ್ರಾರಂಭಿಸಿದರು.
ಪೋಷಕರು ತಮ್ಮ ಮಕ್ಕಳ ದೈಹಿಕ ಸುರಕ್ಷತೆ ಮತ್ತು ಶೈಕ್ಷಣಿಕ ಸಾಧನೆಗಳ ಬಗ್ಗೆ ನಿಗಾವಹಿಸಲು ಈ ಆಪ್ ನೆರವಾಗುತ್ತೆ. ತುರ್ತು ಎಚ್ಚರಿಕೆಗಳನ್ನು ಮಕ್ಕಳ ಫೋನಿನಿಂದ 6 ಸಂಪರ್ಕಗಳಿಗೆ ಪಡೆಯಬಹುದು. ಮಗು ಇರುವ ಸ್ಥಳದ ಬಗ್ಗೆ, ವೈದ್ಯರ ಮಾಹಿತಿ, ಫೋನ್ ಬಳಕೆಗೆ ಮಿತಿ ನಿಗದಿ ಪಡಿಸುವ, ಶಾಲಾ ಅಧಿಸೂಚನೆಗಳನ್ನೂ ಪಡೆಯಬಹುದು.
ಇದು ಕ್ಲೌಡ್ ಆಧಾರಿತ ಬ್ರೌಸರ್. ಮಕ್ಕಳು ಸೂಕ್ತವಲ್ಲದ ಪುಟಗಳ ತೆರೆಯುವಿಕೆಯನ್ನ ತಡೆಯಲು ಪ್ರತಿದಿನ 8 ದಶಲಕ್ಷಕ್ಕೂ ಹೆಚ್ಚು ವೆಬ್ಸೈಟ್ಗಳ ಜತೆಗೆ ಒಂದು ಬಿಲಿಯನ್ ವೆಬ್ ಪುಟಗಳನ್ನು ಆಪ್ ಡೆವಲಪರ್ಸ್ ಮಾನಿಟರ್ ಮಾಡುತ್ತಾರೆ. ಪ್ರತಿ ಬಾರಿ ಮಗು ಇಂಟರ್ನೆಟ್ ಬ್ರೌಸ್ ಮಾಡುವಾಗ, ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮಕ್ಕಳ ಫೋನಿನಲ್ಲಿ ಇಡಬೇಕು. ಆಗ ಅದು ಯಾವುದೇ ಅಶ್ಲೀಲ ಸೈಟ್ಗಳನ್ನು ತೆರೆಯದಂತೆ ನಿರ್ಬಂಧಿಸುತ್ತೆ.
ಮಕ್ಕಳು ಟಿವಿ ಮತ್ತು ಟಿವಿ ಯುಟ್ಯೂಬ್ಗಳಲ್ಲಿ ಸರಿಯಾದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರಾ? ಎಂದು ಈ ಆಪ್ ಮೂಲಕ ತಿಳಿಯಬಹುದು. ಇಲ್ಲಿ ಅಶ್ಲೀಲ ಮಾಹಿತಿಯನ್ನು ಪೋಷಕರು ನಿರ್ಬಂಧಿಸಬಹುದು.
ಇದು ಆಲ್ ಇನ್ ಒನ್ ಪೇರೆಂಟಿಂಗ್ ಅಪ್ಲಿಕೇಶನ್. ನಮ್ಮ ಕುಟುಂಬದವರೊಂದಿಗೆ ಖಾಸಗಿ ವಿಚಾರಗಳನ್ನು ಇಲ್ಲಿ ಮಾತನಾಡಬಹುದು. ಇದು ಹಲವಾರು ಸಾಮಾಜಿಕ ಮಾಧ್ಯಮಗಳ ಮಾನಿಟರಿಂಗ್ ಮಾಡುತ್ತದೆ. ಮಕ್ಕಳಿಗೆ ಸೈಬರ್ ಬೆದರಿಕೆಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಹಾಗೆಯೇ ನಮ್ಮ ಮಕ್ಕಳಿರುವ ಸ್ಥಳದ ಮಾಹಿತಿ ಮತ್ತು ಅವರ ಸಾಮಾಜಿಕ ಜಾಲತಾಣಗಳ ಪುಟಗಳ ಮಾಹಿತಿ, ಮುಖ್ಯವಾಗಿ ನಮ್ಮ ಕುಟುಂಬದವರಲ್ಲಿ ಯಾರಾದರೂ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದರೆ ಈ ಆಪ್ ಎಚ್ಚರಿಕೆ ಕೊಡುತ್ತದೆ.
ಇದೊಂದು ಜಿಪಿಎಸ್ ಕಾರ್ಡ್. 25 ಗ್ರಾಂ ತೂಕದ ಸಾಧನವಾಗಿದ್ದು, ಇದರಲ್ಲಿ ಎರಡು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬಹುದು. ಇತ್ತೀಚೆಗೆ ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಘಟನೆಯ ನಂತರ ಟೆಲಿಕಾಂ ಉದ್ಯಮಿ ಕೃಷ್ಣೇಂದು ದಾಸ್ಗುಪ್ತ ಅವರು ಈ ಆಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮಕ್ಕಳು ಮೊಬೈಲ್ನಂತೆ ಎಲ್ಲ ಕಡೆಯೂ ಒಯ್ಯಬಹುದು ಅಥವಾ ಶಾಲೆಗಳಲ್ಲಿ ನೀಡುವ ಐಡಿ ಕಾರ್ಡ್ನಂತೆ ಬಳಸಬಹುದು. ಪೋಷಕರು ತಮ್ಮ ಮಕ್ಕಳು ಹೋಗುವ ಎಲ್ಲ ಸ್ಥಳಗಳ ವಿವರ ಪಡೆಯುವ ಜತೆಗೆ ಇದಕ್ಕೆ ಕರೆ ಮಾಡಬಹುದು. ಆದರೆ, ಇದು ರಿಂಗಣಿಸುವುದಿಲ್ಲ, ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸ್ವಯಂಚಾಲಿತವಾಗಿ ಉತ್ತರಿಸ್ಪಡುತ್ತದೆ.
ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಈ ಆಪ್ ಅನ್ನು ಅಭಿವೃದ್ಧಿಪಡಿಸಿದ್ದು, 6,900 ಶಾಲೆಗಳು ಮತ್ತು 2000ಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರ ಡೇಟಾಬೇಸ್ ಹೊಂದಿದೆ. ಈ ಆಪ್ ಮೂಲಕ ನಮ್ಮ ಮಕ್ಕಳ ಸಹಪಾಠಿಗಳ ಪೋಷಕರನ್ನು ಸಂರ್ಪಸಬಹುದು. ಇದನ್ನು ಪೋಷಕರ ಸಾಮಾಜಿಕ ಜಾಲತಾಣ ಎಂದು ಕರೆಯಲಾಗುತ್ತದೆ. ಇದರಲ್ಲಿ ಬೋಧನಾ ಆಯ್ಕೆಗಳ ಬಗ್ಗೆ ತಿಳಿಯಬಹುದು. ಇದರಲ್ಲಿ ಚಾಟ್ ಆಪ್ಶನ್ ಕೂಡ ಇದೆ.
ಈ ಆಪ್ ಭಾರತದ ಎಲ್ಲ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸುವ ಅಪ್ಲಿಕೇಶನ್. ಇದು ಮಕ್ಕಳು, ಶಿಕ್ಷಕರು, ಪೋಷಕರಿಗೆ ಉಪಯುಕ್ತವಾಗಿದೆ.
ಮನೆಗೆ ಅತಿಥಿಗಳು ಬಂದರೆ ಸಾಕು ಮಕ್ಕಳು ಅವರಿಂದ ಫೋನ್ ಕೇಳುತ್ತಾರೆ, ಆಗ ಕಿಡ್ಸ್ ಪ್ಲೇಸ್ ಆಪ್ ಆನ್ ಮಾಡಿ ಕೊಡಬಹುದು. ಇಲ್ಲಿ ಸೂಕ್ಷ್ಮ ಡೇಟಾವನ್ನು ರಕ್ಷಿಸಲು, ಅನಗತ್ಯ ಆಪ್ಗಳ ಮತ್ತು ಅಶ್ಲೀಲ ವಿಷಯವನ್ನು ಲಾಕ್ ಕಿಟ್ ಮೂಲಕ ತಡೆಯಬಹುದು.