

ಮುಂಬೈ: ಸಿನಿ ಪ್ರಿಯರು ಜಾನ್ವಿ ಕಪೂರ್ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಏನು ಧರಿಸುತ್ತಾರೆ, ಎಲ್ಲಿಗೆ ಹೋಗುತ್ತಾರೆ ಮತ್ತು ಏನು ಸೇವಿಸುತ್ತಾರೆ ಎಂದು ತಿಳಿಯಲು ಬಯಸುತ್ತಾರೆ. ಈ ನಡುವೆ ಇದೀಗ ಜಾನ್ವಿಗೆ ಸಂಬಂಧಿಸಿದ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಅದೇನಪ್ಪಾ ಅಂದ್ರೆ ನಟಿ ಮೊಬೈಲ್ ಸ್ಕ್ರೀನ್ ಮೇಲೆ ಯಾರ ಫೋಟೋವಿದೆ ಎಂಬ ಸತ್ಯ ಈಗ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಜನರು ತಮ್ಮ ಸ್ವಂತ ಫೋಟೋ ಅಥವಾ ಅವರು ಹೆಚ್ಚು ಪ್ರೀತಿಸುವ ವ್ಯಕ್ತಿಯ ಫೋಟೋವನ್ನು ತಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಶೇರ್ ಮಾಡುತ್ತಾರೆ ಅಲ್ಲವೇ, ಇದೀಗ ಜಾನ್ವಿ ಕಪೂರ್ ಯಾರನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುತ್ತಿರಬಹುದು. ಹಾಗಾದ್ರೆ ಅವರ ಜೀವನದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿ ಯಾರು? ಈ ಪ್ರಶ್ನೆಗೆ ಇದೀಗ ಅಭಿಮಾನಿಗಳಿಗೆ ಉತ್ತರ ಸಿಕ್ಕಿದೆ.
ಹೌದು, ನೀವೆಲ್ಲಾ ಜಾನ್ವಿ ಮೊಬೈಲ್ ಸ್ಕ್ರೀನ್ ಮೇಲೆ ರೂಮರ್ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ ಅವರ ಫೋಟೋ ಇರಬಹುದು ಎಂದು ಯೋಚಿಸುತ್ತಿದ್ದರೆ ಅದು ತಪ್ಪು. ಈಗ ಫೋನಿನಲ್ಲಿ ಯಾರ ಫೋಟೋ ಹಾಕಿಕೊಂಡಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿರಬೇಕು ಅಲ್ಲವೇ...
ಇರಿ ಹೇಳುತ್ತೇವೆ. ಇತ್ತೀಚೆಗೆ ಪಾಪರಾಜಿಗಳು ತಮ್ಮ ಕ್ಯಾಮೆರಾದಲ್ಲಿ ಜಾನ್ವಿ ಕಪೂರ್ ಅವರನ್ನು ಸೆರೆಹಿಡಿದಿದ್ದಾರೆ. ಈ ಸಮಯದಲ್ಲಿ ನಟಿ ಕಪ್ಪು ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡರು. ಅವರ ಕೈಯಲ್ಲಿ ಅವರ ಫೋನ್ ಕೂಡ ಕಾಣಿಸಿತು. ಪಾಪರಾಜಿಗಳು ಜಾನ್ವಿ ಅವರ ಫೋನ್ ಜೂಮ್ ಮಾಡಿದಾಗ, ಅವರು ತಮ್ಮ ತಾಯಿ ಅಂದರೆ ಶ್ರೀದೇವಿ ಕಪೂರ್ ಅವರೊಂದಿಗಿನ ಫೋಟೋವನ್ನು ಸ್ಕ್ರೀನ್ ಮೇಲೆ ಇರಿಸಿಕೊಂಡಿರುವುದು ಕಂಡುಬಂದಿದೆ. ಆ ಫೋಟೋದಲ್ಲಿ ಜಾನ್ವಿ ಕೂಡ ಇದ್ದು, ಅದು ಬಾಲ್ಯದ ಫೋಟೋವಾಗಿದೆ. ಇದರಲ್ಲಿ ಅವರು ಭಾರತೀಯ ಉಡುಪಿನಲ್ಲಿ ತಾಯಿಯೊಂದಿಗೆ ಪೋಸ್ ನೀಡಿದ್ದಾರೆ. ಈ ಫೋಟೋದಲ್ಲಿ ತಾಯಿ-ಮಗಳ ಬಾಂಧವ್ಯ ಎದ್ದು ಕಾಣುತ್ತಿದೆ. ಇದನ್ನು ನೋಡಿದರೆ ಜಾನ್ವಿ ತನ್ನ ತಾಯಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ತನ್ನ ತಾಯಿ ಎಲ್ಲಿಯೂ ಹೋಗಿಲ್ಲ, ತನ್ನ ಜೊತೆಯಲ್ಲಿದ್ದಾರೆ ಅಂದುಕೊಳ್ಳಲು ಜಾನ್ವಿ ತನ್ನ ಫೋನ್ ಸ್ಕ್ರೀನ್ ಮೇಲೆ ಶ್ರೀದೇವಿಯ ಫೋಟೋ ಹಾಕಿಕೊಂಡಿರಬಹುದು. ಇದೀಗ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ಸ್ ಪಡೆದುಕೊಂಡಿದೆ. ಇದನ್ನು ನೋಡಿದ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. 'ತಾಯಿಯ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ, ಇದು ತುಂಬಾ ಹೃದಯಸ್ಪರ್ಶಿಯಾಗಿದೆ' ಎಂದು ನೆಟ್ಟಿಗರು ಹೇಳಿದ್ದಾರೆ. ಈ ವಿಡಿಯೋ ನೋಡಿದ ನಂತರ ಬಹುತೇಕರು ಶ್ರೀದೇವಿಯನ್ನು ಪುನಃ ನೆನಪಿಸಿಕೊಳ್ಳುತ್ತಿದ್ದಾರೆ.