ನಿರಂತರ ಮಳೆಗೆ ಕುಸಿದುಬಿದ್ದ ಅಂಗನವಾಡಿ ಕಟ್ಟಡ; ಸ್ವಲ್ಪದರಲ್ಲೇ ಮಕ್ಕಳು ಬಚಾವ್​

centre
Published on

ಕೋಲಾರ‌: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಲಾರ ತಾಲ್ಲೂಕು ವೇಮಗಲ್​ ಹೋಬಳಿ ತಿಪ್ಪೇನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಶಾಲಾ ಕಟ್ಟಡ ಕುಸಿದುಬಿದ್ದಿರುವ ಪ್ರಸಂಗ ನಡೆದಿದೆ. ಪುಟಾಣಿ ಮಕ್ಕಳು ಶಾಲೆ ಮುಗಿಸಿ ಮನೆಗೆ ತೆರಳಿದ್ದರಿಂದಾಗಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

ಶಿಥಿಲಗೊಂಡಿದ್ದ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಛಾವಣಿಯೊಂದಿಗೆ ಕೆಲವು ಗೋಡೆಗಳೂ ಇಂದು ಕುಸಿದಿವೆ. ಶಾಲೆ ಮುಗಿಸಿ 12 ಗಂಟೆಗೆ ಮಕ್ಕಳು ಮನೆಗೆ ವಾಪಸ್ಸಾದ ಹಿನ್ನೆಲೆಯಲ್ಲಿ ಭಾರೀ ಅನಾಹುತ ತಪ್ಪಿದೆ. ಇದೇ ವೇಳೆ ಪಕ್ಕದ ಕಟ್ಟಡದಲ್ಲಿದ್ದ ಏಳನೇ ತರಗತಿ ಮಕ್ಕಳು ಶಾಲಾ ಕೊಠಡಿಯಿಂದ ಹೊರಗೋಡಿ ಬಂದಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ಮತ್ತು ವೇಮಗಲ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net